ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ಗೂ ಮುನ್ನ ಭಾರತ ತಂಡಕ್ಕೆ ಮತ್ತೆ ಆಘಾತ; 2ನೇ ಪಂದ್ಯಕ್ಕೂ ಈ ಸ್ಟಾರ್ ಆಟಗಾರ ಅಲಭ್ಯ?
- India vs Australia Pink Ball Test: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ದೊಡ್ಡ ಆಘಾತವೊಂದು ಎದುರಾಗಿದೆ. ಎರಡನೇ ಪಂದ್ಯಕ್ಕೂ ಈ ಸ್ಟಾರ್ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
- India vs Australia Pink Ball Test: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ದೊಡ್ಡ ಆಘಾತವೊಂದು ಎದುರಾಗಿದೆ. ಎರಡನೇ ಪಂದ್ಯಕ್ಕೂ ಈ ಸ್ಟಾರ್ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
(1 / 9)
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯಭೇರಿ ಬಾರಿಸಿತು. ಪರ್ತ್ನ ಆಪ್ಟಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಟೆಸ್ಟ್ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ.
(2 / 9)
ಅಡಿಲೇಡ್ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ತಂಡವನ್ನು ಸೇರ್ಪಡೆಯಾಗಿದ್ದು ಭಾರತಕ್ಕೆ ಆನೆ ಬಲ ಬಂದಂತಾಗಿದೆ. ಆದರೆ, ಪಿಂಕ್ ಬಾಲ್ ಟೆಸ್ಟ್ಗೂ ಮುನ್ನ ಶುಭ್ಮನ್ ಗಿಲ್ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.
(3 / 9)
ಅಡಿಲೇಡ್ ಟೆಸ್ಟ್ಗೆ 2 ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಭಾರತ ಯೋಜನೆ ರೂಪಿಸುತ್ತಿದ್ದರೆ, ಆಸ್ಟ್ರೇಲಿಯಾ ಪುಟಿದೇಳುವ ವಿಶ್ವಾಸದಲ್ಲಿದೆ. ಇದರ ನಡುವೆ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ 2ನೇ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಎಂದು ವರದಿಯಾಗಿದೆ.
(4 / 9)
ಪರ್ತ್ ಟೆಸ್ಟ್ಗೂ ಮುನ್ನ ಅಭ್ಯಾಸ ಪಂದ್ಯದ ವೇಳೆ ಶುಭ್ಮನ್ ಗಿಲ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಅದಕ್ಕಾಗಿಯೇ ಅವರು ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಆದರೆ 2ನೇ ಟೆಸ್ಟ್ಗೆ ಚೇತರಿಕೆಯಾಗುವ ವಿಶ್ವಾಸ ಇತ್ತು. ಇದೀಗ ನಿರಾಸೆಯಾಗಿದೆ.
(5 / 9)
ಅಡಿಲೇಡ್ ಟೆಸ್ಟ್ಗೂ ಮುನ್ನ ನಡೆಯುವ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಶುಭ್ಮನ್ ಗಿಲ್ ಭಾಗವಹಿಸುತ್ತಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಅಡಿಲೇಡ್ ಟೆಸ್ಟ್ಗೂ ಮುನ್ನ ಅನುಮಾನ ವ್ಯಕ್ತವಾಗಿದೆ.
(6 / 9)
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, 'ಗಾಯದ ನಂತರ, ವೈದ್ಯರು ಶುಭ್ಮನ್ಗೆ 10 ರಿಂದ 14 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಇದೀಗ ನವೆಂಬರ್ 30ರಿಂದ ಆರಂಭವಾಗುವ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ. ಇದು 2ನೇ ಟೆಸ್ಟ್ಗೆ ಅವರ ಭಾಗವಹಿಸುವಿಕೆ ಅನುಮಾನ ಹುಟ್ಟು ಹಾಕಿದೆ.
(7 / 9)
ಪಂದ್ಯಕ್ಕೂ ಮುನ್ನ ಐದಾರು ದಿನಗಳ ಬಳಿಕ ಗಾಯದ ಸ್ಥಿತಿಯ ಬಗ್ಗೆ ಸಂಪೂರ್ಣ ಚಿತ್ರಣ ಸಿಗಲಿದೆ. ಏಕೆಂದರೆ ಗಾಯಗೊಂಡು ಒಂದು ವಾರ ಆಗಿದೆ. ಆದರೆ ವೈದ್ಯರ ಪ್ರಕಾರ 10 ರಿಂದ 14 ದಿನಗಳ ವಿಶ್ರಾಂತಿ ಬೇಕಿದೆ. ಹೀಗಾಗಿ ಇನ್ನೂ ಐದಾರು ದಿನಗಳ ಬಳಿಕ ಸ್ಪಷ್ಟತೆ ಸಿಗಲಿದೆ. ಒಂದು ವೇಳೆ ಗುಣಮುಖರಾದರೂ ಅವರಿಗೆ ಅತ್ಯುತ್ತಮ ಅಭ್ಯಾಸದ ಅಗತ್ಯ ಇದೆ.(HT_PRINT)
(8 / 9)
ಪರ್ತ್ ಟೆಸ್ಟ್ನಿಂದ ಹೊರಬಿದ್ದಿದ್ದ ಶುಭ್ಮನ್ ಗಿಲ್ ಬದಲಿಗೆ ಕನ್ನಡಿಗ ದೇವದತ್ ಪಡಿಕ್ಕಲ್ಗೆ ಅವಕಾಶ ನೀಡಲಾಗಿತ್ತು. ಆದರೆ, ಪಡಿಕ್ಕಲ್ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳನ್ನು ನಿರಾಶೆಗೊಳಿಸಿದರು. ಒಂದು ವೇಳೆ ಶುಭ್ಮನ್ ಗಿಲ್ ಅಲಭ್ಯರಾದರೆ ದೇವದತ್ ಪಡಿಕ್ಕಲ್ಗೆ ಮತ್ತೊಂದು ಅವಕಾಶ ನೀಡಲಾಗುತ್ತದೆಯೇ ಅಥವಾ ಬೇರೆ ಆಟಗಾರರಿಗೆ ಅವಕಾಶ ನೀಡಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.(PTI)
ಇತರ ಗ್ಯಾಲರಿಗಳು