ಮುಡಾ ಹಗರಣ, ಸಿಎಂ ಬದಲಾವಣೆ ಚರ್ಚೆ ಮಧ್ಯೆ ಮೊದಲ ಬಾರಿಗೆ ಮುಖ್ಯಮಂತ್ರಿ-ಗವರ್ನರ್ ಭೇಟಿ; ಈ ಮುಖಾಮುಖಿಯ ಗುಟ್ಟೇನು?
- Siddaramaiah: ಮುಡಾ ಹಗರಣದ ಗುದ್ದಾಟ, ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮಧ್ಯೆ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಭೇಟಿಯಾಗಿದ್ದು, ಅಚ್ಚರಿ ಮೂಡಿಸಿದ್ದಾರೆ.
- Siddaramaiah: ಮುಡಾ ಹಗರಣದ ಗುದ್ದಾಟ, ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮಧ್ಯೆ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಭೇಟಿಯಾಗಿದ್ದು, ಅಚ್ಚರಿ ಮೂಡಿಸಿದ್ದಾರೆ.
(1 / 9)
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ಬಳಿಕ ಮೊದಲ ಬಾರಿಗೆ ಸಿಎಂ ಮತ್ತು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮುಖಾಮುಖಿಯಾಗಿದ್ದಾರೆ.
(2 / 9)
ಆದರೆ, ಸಿಎಂ ಮತ್ತು ಗವರ್ನರ್ ಭೇಟಿಯಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಗವರ್ನರ್ಗೆ ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಬಂದಿದ್ದಾರೆ ಎಂಬ ಚರ್ಚೆಗಳು ಎದ್ದಿವೆ.
(3 / 9)
ಅಲ್ಲದೆ, ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿಗಳ ಮಧ್ಯೆ ರಾಜ್ಯಪಾಲರನ್ನು ಭೇಟಿಯಾಗಿದ್ದು ಅಚ್ಚರಿ ಮೂಡಿಸಿತ್ತು. ಬಹುಶಃ ರಾಜೀನಾಮೆ ನೀಡಲೆಂದೇ ಗವರ್ನರ್ ಭೇಟಿಯಾದ್ರಾ ಎಂಬ ಪ್ರಶ್ನೆ ಎದ್ದಿತ್ತು.
(4 / 9)
ಆದರೆ ಭೇಟಿಯ ವಿಚಾರವೇ ಬೇರೆ. ಕರ್ನಾಟಕಕ್ಕೆ ಭೇಟಿ ನೀಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹ್ಮದ್ ಮೊಯಿಝು ಅವರಿಗೆ ರಾಜಭವನದಲ್ಲಿ ಏರ್ಪಡಿಸಿದ್ದ ಔತಣ ಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯಪಾಲರು ಆಹ್ವಾನಿಸಿದ್ದರು.
(5 / 9)
ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಅಂದಿನಿಂದ ಸಿಎಂ, ಗವರ್ನರ್ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಆದರೆ ಇಂದಿನ ಭೇಟಿ ಎಲ್ಲವನ್ನು ಮರೆತು ಆತ್ಮೀಯತೆಯಿಂದ ವ್ಯವಹರಿಸಿದ್ದು ಕಂಡು ಬಂತು.
(6 / 9)
ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಮಸ್ಕಾರ ಮಾಡಿದರು. ಅಲ್ಲದೆ, ಪರಸ್ಪರ ಕೈಕುಲುಕಿದರು. ಇನ್ನೂ ಸಿಎಂ ಜೊತೆ ಗವರ್ನರ್ ಕೂಡ ನಗು ನಗುತ್ತಾ ಮಾತಾಡಿದರು. ಈ ಚಿತ್ರಗಳು ನೆಟ್ಸ್ನಲ್ಲಿ ಸಖತ್ ವೈರಲ್ ಆಗುತ್ತಿವೆ.
(7 / 9)
ಔತಣ ಕೂಟದ ನಂತರ ಮಾಲ್ಡೀವ್ಸ್ ಅಧ್ಯಕ್ಷರೊಂದಿಗೆ ಫೋಟೋ ಶೂಟ್‌ನಲ್ಲಿ ಸಿದ್ದರಾಮಯ್ಯ ಹಾಗೂ ಥಾವರ್ ಚಂದ್ ಗೆಹ್ಲೋಟ್ ಪಕ್ಕಪಕ್ಕದಲ್ಲೇ ಕೂತುಕೊಂಡಿದ್ದು ವಿಶೇಷ. ಈ ವೇಳೆ ಉನ್ನತ ಶಿಕ್ಷಣ ಸಚಿವ ಸುಧಾಕರ್, ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜ್ ಮತ್ತು ಅಧಿಕಾರಿಗಳು ಇದ್ದರು.
(8 / 9)
ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಾಸಿಕ್ಯೂಷನ್ಗೆ ಗವರ್ನರ್ ಅನುಮತಿ ನೀಡಿದ್ದರು. ಆದರೆ ಸಿಎಂ, ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಕೂಡ ಗವರ್ನರ್ ಆದೇಶವನ್ನು ಎತ್ತಿಹಿಡಿದಿತ್ತು.
ಇತರ ಗ್ಯಾಲರಿಗಳು