ಐದು ಬಾರಿ ವಿಶ್ವಕಪ್ ಸೆಮಿಫೈನಲ್ ಆಡಿದರೂ ಒಮ್ಮೆಯೂ ಫೈನಲ್ ತಲುಪದ ದಕ್ಷಿಣ ಆಫ್ರಿಕಾ
- South Africa World Cup: ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾಗೆ ಮತ್ತೊಮ್ಮೆ ನಿರಾಶೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ 2023ರ ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಐದನೇ ಬಾರಿಗೆ ಹರಿಣಗಳ ಬಳಗ ಸೆಮೀಸ್‌ನಲ್ಲಿ ನಿರ್ಗಮಿಸಿದೆ.
- South Africa World Cup: ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾಗೆ ಮತ್ತೊಮ್ಮೆ ನಿರಾಶೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ 2023ರ ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಐದನೇ ಬಾರಿಗೆ ಹರಿಣಗಳ ಬಳಗ ಸೆಮೀಸ್‌ನಲ್ಲಿ ನಿರ್ಗಮಿಸಿದೆ.
(1 / 6)
ನವೆಂಬರ್ 16ರಂದು ನಡೆದ ಏಕದಿನ ವಿಶ್ವಕಪ್ 2023ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳಿಂದ ಸೋತಿತು. ಆ ಮೂಲಕ ಟೂರ್ನಿಯಿಂದ ನಿರ್ಗಮಿಸಲಾಯಿತು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ ಇದುವರೆಗೂ ಫೈನಲ್ ತಲುಪಿಲ್ಲ ಎಂಬುದು ವಿಪರ್ಯಾಸ. ಐದು ಬಾರಿ ಸೆಮಿಫೈನಲ್ ತಲುಪಿದರೂ, ನಾಲ್ಕು ಬಾರಿ ಸೋತು, ಒಂದು ಪಂದ್ಯ ಟೈ ಆಗಿದೆ. (AFP)
(2 / 6)
1992ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 19 ರನ್‌ಗಳಿಂದ ಸೋತಿತ್ತು. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ದುರದೃಷ್ಟವಶಾತ್ ಹರಿಣಗಳು ಸೋಲನುಭವಿಸಿದರು.(Twitter)
(3 / 6)
1999 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ರೋಚಕ ಹೋರಾಟ ನಡೆಯಿತು. ಉಭಯ ತಂಡಗಳು 213 ರನ್ ಗಳಿಸಿದವು. ಹೀಗಾಗಿ ಪಂದ್ಯವು ಟೈನಲ್ಲಿ ಅಂತ್ಯವಾಯ್ತು. ಆದರೆ, ಸೂಪರ್-6 ನೆಟ್ ರನ್ ರೇಟ್ ಆಧಾರದಲ್ಲಿ ದಕ್ಷಿಣ ಆಫ್ರಿಕಾ ಸೋಲಬೇಕಾಯ್ತು. ನೆಟ್ ರನ್ ರೇಟ್ ಹೆಚ್ಚಿದ್ದ ಕಾರಣ ಆಸೀಸ್ ಫೈನಲ್ ಲಗ್ಗೆ ಹಾಕಿತು.(Twitter)
(4 / 6)
2007ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿಯೂ, ದಕ್ಷಿಣ ಆಫ್ರಿಕಾವನ್ನು ಆಸ್ಟ್ರೇಲಿಯಾ ಏಳು ವಿಕೆಟ್‌ಗಳಿಂದ ಸೋಲಿಸಿತು. ಸತತ ಮೂರನೇ ಬಾರಿ ನಿರಾಶೆ ಅನುಭವಿಸಿತು.(AFP)
(5 / 6)
2015ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮತ್ತೆ ನಾಲ್ಕು ವಿಕೆಟ್‌ಗಳಿಂದ ಹರಿಣಗಳ ಬಳಗ ಸೋತಿತು. ರೋಚಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಒಂದು ಎಸೆತ ಬಾಕಿ ಇರುವಂತೆಯೇ ಜಯ ಸಾಧಿಸಿತು. ಆದರೆ, ಕಿವೀಸ್ ಕೂಡಾ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿತು.(HT Photo)
ಇತರ ಗ್ಯಾಲರಿಗಳು