ಕುಡಿದು ಬಂದು ಮನೆಯಲ್ಲಿ ರಂಪಾಟ ಮಾಡುವ ತಾಂಡವ್‌ ಹಾರಾಟಕ್ಕೆ ಬ್ರೇಕ್‌ ಹಾಕ್ತಾಳಾ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕುಡಿದು ಬಂದು ಮನೆಯಲ್ಲಿ ರಂಪಾಟ ಮಾಡುವ ತಾಂಡವ್‌ ಹಾರಾಟಕ್ಕೆ ಬ್ರೇಕ್‌ ಹಾಕ್ತಾಳಾ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ

ಕುಡಿದು ಬಂದು ಮನೆಯಲ್ಲಿ ರಂಪಾಟ ಮಾಡುವ ತಾಂಡವ್‌ ಹಾರಾಟಕ್ಕೆ ಬ್ರೇಕ್‌ ಹಾಕ್ತಾಳಾ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 23ರ ಎಪಿಸೋಡ್‌ನಲ್ಲಿ ತಾಂಡವ್‌ ಕುಡಿದು ತೂರಾಡುತ್ತಲೇ ಮನೆಗೆ ಬರುತ್ತಾನೆ. ಅವನ ಅವಾಂತರ ಕಂಡು ನೆರೆಹೊರೆಯವರು ಕೋಪಗೊಳ್ಳುತ್ತಾರೆ. ಭಾಗ್ಯಾ ಊಟ ಬಡಿಸಲಿಲ್ಲ ಎಂಬ ಕೋಪಕ್ಕೆ ತಾಂಡವ್‌ ಮನೆಯಲ್ಲಿನ ಸಾಮಾನುಗಳನ್ನು ಒಡೆಯುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 23ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 23ರ ಎಪಿಸೋಡ್‌ (PC: Jio Cinema)

Bhagyalakshmi Serial: ಒಂದು ಕಡೆ ಮದುವೆ ನಿಂತಿದೆ, ಮತ್ತೊಂದು ಕಡೆ ಭಾಗ್ಯಾ ಬದಲಾಗಿದ್ದು ನನ್ನನ್ನು ಎದುರಿಸುತ್ತಿದ್ದಾಳೆ, ಪೊಲೀಸರಿಗೆ ಬೇರೆ ದೂರು ನೀಡಿದ್ದಾಳೆ ಎಂಬ ಕೋಪಕ್ಕೆ ತಾಂಡವ್‌ ಬಾರ್‌ಗೆ ಹೋಗಿ ಡ್ರಿಂಕ್ಸ್‌ ಮಾಡಲು ಆರಂಭಿಸುತ್ತಾನೆ. ಅಲ್ಲಿದ್ದವರೂ ತಾಂಡವ್‌ಗೆ ಜೊತೆಯಾಗುತ್ತಾರೆ. ಹೆಂಡಿಗೆ ಎದುರಾಡುವ ಧೈರ್ಯ ಯಾರಿಗೂ ಇಲ್ಲ, ಆದ್ದರಿಂದ ನಾನು ಕುಡಿಯುತ್ತಿದ್ದೇನೆ ಎಂದು ತಾಂಡವ್‌ ಹೇಳಿಕೊಳ್ಳುತ್ತಾನೆ.

ತೂರಾಡುತ್ತಲೇ ಮನೆಗೆ ಬಂದು ಬಾಗಿಲು ತಟ್ಟಿದ ತಾಂಡವ್‌

ನನಗೆ ಈಗ ಧೈರ್ಯ ಬಂದಿದೆ ಮನೆಗೆ ಹೋಗಿ ಅವಳಿಗೆ ಬುದ್ಧಿ ಕಲಿಸುತ್ತೇನೆ, ಅವಳನ್ನು ಮನೆಯಿಂದ ಹೊರ ಹಾಕುತ್ತೇನೆ ಎಂದು ತಾಂಡವ್‌ ಗೊಣಗುತ್ತಾನೆ. ಅಷ್ಟರಲ್ಲಿ ಅವನಿಗೆ ಶ್ರೇಷ್ಠಾ ಕರೆ ಮಾಡುತ್ತಾಳೆ. ಪದೇ ಪದೆ ಕಾಲ್‌ ಮಾಡುತ್ತಿರುವುದಕ್ಕೆ ಫ್ರಸ್ಟೇಟ್‌ ಆದ ತಾಂಡವ್‌ ಫೋನ್‌ ರಿಸೀವ್‌ ಮಾಡುತ್ತಾನೆ. ನಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಅಂತ ಕೇಳೋಕಾದರೂ ನೀನು ಫೋನ್‌ ಮಾಡಲಿಲ್ಲ ಅಂತ ಶ್ರೇಷ್ಠಾ ಕೇಳುತ್ತಾಳೆ. ನನಗೆ ನಿನ್ನ ಫೋನ್‌ ರಿಸೀವ್‌ ಮಾಡುವುದೇ ಕೆಲಸಾನಾ? ನನ್ನಿಷ್ಟ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ತಾಂಡವ್‌ ಉತ್ತರಿಸುತ್ತಾನೆ, ತಾಂಡವ್‌ ಡ್ರಿಂಕ್ಸ್‌ ಮಾಡಿರುವುದು ಶ್ರೇಷ್ಠಾಗೆ ಗೊತ್ತಾಗುತ್ತದೆ. ಶ್ರೇಷ್ಠಾ ಮಾತನ್ನು ಪೂರ್ತಿ ಕೇಳಿಸಿಕೊಳ್ಳದೆ ತಾಂಡವ್‌ ಪೋನ್‌ ಡಿಸ್ಕನೆಕ್ಟ್‌ ಮಾಡುತ್ತಾನೆ.

ತಾಂಡವ್‌ ಕುಡಿದು ತೂರಾಡುತ್ತಲೇ ಮನೆಗೆ ಬರುತ್ತಾನೆ. ಬಹಳ ಹೊತ್ತಾದರೂ ಅಳಿಯ ಮನೆಗೆ ಬರದಿರುವುದನ್ನು ಕಂಡು ಸುನಂದಾ ಗಾಬರಿಯಾಗುತ್ತಾಳೆ. ಒಮ್ಮೆ ಅಳಿಯಂದಿರಿಗೆ ಫೋನ್‌ ಮಾಡಿ ಎಲ್ಲಿದ್ದೀರ ಅಂತ ಕೇಳು, ಎಲ್ಲವೂ ಸರಿ ಆಗುತ್ತಿದೆ, ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡಬೇಡ ಎಂದು ಸುನಂದಾ ಮಗಳಿಗೆ ಬುದ್ಧಿ ಹೇಳುತ್ತಾಳೆ. ಅದರೆ ಭಾಗ್ಯಾ ಅಮ್ಮನ ಮಾತನ್ನು ಒಪ್ಪುವುದಿಲ್ಲ. ಅಷ್ಟರಲ್ಲಿ ತಾಂಡವ್‌ ಅರಚಾಟ ಕೇಳುತ್ತದೆ. ಮನೆಗೆ ಬಂದ ತಾಂಡವ್‌ ಜೋರಾಗಿ ಬಾಗಿಲು ಬಡಿಯುತ್ತಾನೆ. ಅವನು ಗಲಾಟೆ ಮಾಡುವುದನ್ನು ಕೇಳಿಸಿಕೊಂಡು ಅಕ್ಕಪಕ್ಕದವರು ಕೂಡಾ ಎದ್ದು ಬರುತ್ತಾರೆ. ನೀವೆಲ್ಲಾ ಭಾರತದ ಸಿಸಿ ಟಿವಿಗಳು, ಪಕ್ಕದ ಮನೆಯಲ್ಲಿ ಏನಾಗುತ್ತಿದೆ ಎಂದು ಯಾವಾಗಲೂ ಕಣ್ಣಿರುತ್ತೀರಿ, ನಿಮ್ಮ ಪಾಡಿಗೆ ನೀವು ಹೋಗಿ ಎಂದು ತಾಂಡವ್‌ ಗದರುತ್ತಾನೆ. ಇನ್ನೂ ನಾವು ಏನು ನೋಡಬೇಕೋ ಎಂದು ಗೊಣಗುತ್ತಾ ಎಲ್ಲರೂ ಅಲ್ಲಿಂದ ಹೋಗುತ್ತಾರೆ. ಅಷ್ಟರಲ್ಲಿ ಭಾಗ್ಯಾ, ಬಾಗಿಲು ತೆಗೆಯುತ್ತಾಳೆ.

ಭಾಗ್ಯಾ ಮೇಲಿನ ಕೋಪಕ್ಕೆ ಮನೆಯ ಸಾಮಗ್ರಿಗಳನ್ನು ಒಡೆದ ತಾಂಡವ್‌

ತಾಂಡವ್‌ ಡ್ರಿಂಕ್ಸ್‌ ಮಾಡಿ ಬಂದಿರುವುದು ಕಂಡು ಎಲ್ಲರೂ ಶಾಕ್‌ ಆಗುತ್ತಾರೆ. ತಾಂಡವ್‌ ಒಳಗೆ ಬಂದು ನನಗೆ ಹಸಿವಾಗುತ್ತಿದೆ ಊಟ ಬಡಿಸು ಎಂದು ಭಾಗ್ಯಾಗೆ ಹೇಳುತ್ತಾನೆ. ಆದರೆ ಭಾಗ್ಯಾ ನಾನು ಬಡಿಸುವುದಿಲ್ಲ, ಹೊತ್ತಿಲ್ಲದ ಹೊತ್ತಿಗೆ ಬಂದು ಊಟ ಬಡಿಸು ಎಂದರೆ ಸಾಧ್ಯವಿಲ್ಲ ಎನ್ನುತ್ತಾಳೆ. ಸರಿ ನಾನೇ ಬಡಿಸಿಕೊಳ್ಳುತ್ತೇನೆ ಎಂದು ತಾಂಡವ್‌ ಅಡುಗೆ ಮನೆಗೆ ಹೋಗಿ ನೋಡಿದರೆ ಅಲ್ಲಿ ಏನೂ ಇರುವುದಿಲ್ಲ, ನಾನು ಏನೂ ಮಾಡಿಲ್ಲ, ಈ ಮನೆಯವರಿಗೆ ಮಾತ್ರ ಅಡುಗೆ ಮಾಡು ಅಂತ ಅತ್ತೆ ಹೇಳಿದ್ದಾರೆ. ನೀವು ಈ ಮನೆಗೆ ಸಂಬಂಧಿಸಿದವರಲ್ಲ ಅದಕ್ಕೆ ಮಾಡಿಲ್ಲ ಎಂದು ಭಾಗ್ಯಾ ಹೇಳುತ್ತಾಳೆ. ಭಾಗ್ಯಾ ಮಾತುಗಳಿಂದ ಕೋಪಗೊಂಡ ತಾಂಡವ್‌, ಮನೆಯಲ್ಲಿರುವ ಸಾಮಗ್ರಿಗಳನ್ನು ಒಡೆಯುತ್ತಾನೆ. ಭಾಗ್ಯಾ ಕೋಪದಿಂದ ಅವನ ಕೈ ಹಿಡಿಯುತ್ತಾಳೆ.

ರಂಪಾಟ ಮಾಡುತ್ತಿರುವ ತಾಂಡವ್‌ ಹಾರಾಟಕ್ಕೆ ಕುಸುಮಾ, ಭಾಗ್ಯಾ ಬ್ರೇಕ್‌ ಹಾಕುತ್ತಾರಾ? ಮುಂದಿನ ಎಪಿಸೋಡ್‌ನಲ್ಲಿ ನೋಡಬೇಕು.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner