Christmas Rangoli: ಕ್ರಿಸ್‌ಮಸ್‌ಗೆ ವಿಶೇಷವಾದ ರಂಗೋಲಿ ಬಿಡಿಸಬೇಕು ಅಂದ್ಕೊಂಡ್ ಇದ್ದೀರಾ; ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ಗಮನಿಸಿ
ಕ್ರಿಸ್‌ಮಸ್ ಅನ್ನು ವಿಶೇಷವಾಗಿಸಲು ಮನೆ ಮುಂದೆ ಕ್ರಿಸ್‌ಮಸ್ ಟ್ರೀ ಅಲಂಕಾರ ಮಾಡುವುದು, ಗೋದಲಿ ನಿರ್ಮಿಸುವುದು, ದೀಪ ಮೇಣದ ಬತ್ತಿಗಳನ್ನು ಬೆಳಗಿಸುವುದು ನೋಡುತ್ತಿರುತ್ತೀರಿ. ಈ ಬಾರಿ ನೀವು ವಿಶೇಷವಾಗಿ ಕ್ರಿಸ್‌ಮಸ್‌ಗೆಂದೇ ರಂಗೋಲಿಗಳನ್ನು ಬಿಡಿಸಬಹುದು. ಇಲ್ಲಿ ಒಂದಿಷ್ಟು ರಂಗೋಲಿ ಚಿತ್ತಾರಗಳಿದ್ದು, ಈ ಡಿಸೈನ್ಸ್ ನಿಮಗೆ ಇಷ್ಟವಾಗಬಹುದು ಗಮನಿಸಿ.
(1 / 8)
ಪ್ರಪಂಚದಾದ್ಯಂತ ಜನರು ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಮಕ್ಕಳು ತಮ್ಮ ಪ್ರೀತಿಯ ಸಾಂತಾಕ್ಲಾಸ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಡಿಸೆಂಬರ್ 25 ಏಸುಕ್ರಿಸ್ತ ಜನ್ಮದಿನ, ಇದನ್ನು ಕ್ರಿಸ್‌ಮಸ್ ಎಂದು ಆಚರಿಸಲಾಗುತ್ತದೆ. ಕ್ರಿಸ್‌ಮಸ್ ಸಮಯದಲ್ಲಿ ಜನರು ತಮ್ಮ ಮನೆಯ ಮುಂದೆ ದೀಪಗಳು, ಕ್ರಿಸ್‌ಮಸ್ ಟ್ರೀ, ಗೋದಲಿ, ಕ್ರಿಸ್‌ಮಸ್ ಬೆಲ್, ಮೇಣದಬತ್ತಿಗಳಿಂದ ಅಲಂಕಾರ ಮಾಡುತ್ತಾರೆ. ನೀವು ಕ್ರಿಸ್‌ಮಸ್ ಸಂಭ್ರಮ ಹೆಚ್ಚಿಸಲು ಮನೆ ಮುಂದೆ ಈ ರಂಗೋಲಿ ಚಿತ್ತಾರಗಳನ್ನು ಮೂಡಿಸಬಹುದು.
(2 / 8)
ಮನೆಯ ಅಂಗಳದಲ್ಲಿ ಈ ರಂಗೋಲಿ ವಿನ್ಯಾಸ ತುಂಬಾ ಸುಂದರವಾಗಿ ಕಾಣಿಸುತ್ತದೆ. ಇದನ್ನು ಬಿಡಿಸುವುದು ಸುಲಭ. ಕ್ರಿಸ್ಮಸ್ ಪಾರ್ಟಿಯಲ್ಲಿ ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಲು ಈ ರಂಗೋಲಿ ವಿನ್ಯಾಸವು ಪರಿಪೂರ್ಣವಾಗಿರುತ್ತದೆ
(3 / 8)
ಸಂತಾ ಚಿತ್ತಾರವಿರುವ ಈ ರಂಗೋಲಿ ವಿನ್ಯಾಸ ಮಕ್ಕಳನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಕ್ರಿಸ್ಮಸ್ ದಿನದಂದು ನೀವು ಈ ರಂಗೋಲಿ ವಿನ್ಯಾಸವನ್ನು ಮಾಡಬಹುದು ಮತ್ತು ಮಕ್ಕಳನ್ನು ಕೂಡ ರಂಗೋಲಿ ಬಿಡಿಸಲು ಸೇರಿಸಿಕೊಳ್ಳಬಹುದು. ಇದು ಕ್ರಿಸ್‌ಮಸ್‌ಗೆ ವಿಶೇಷವಾಗಿ ಕಾಣಿಸುತ್ತದೆ.
(4 / 8)
ಕ್ರಿಸ್ಮಸ್ ಪಾರ್ಟಿಗಾಗಿ ಸ್ನೇಹಿತರನ್ನು ಮನೆಗೆ ಆಹ್ವಾನಿಸುತ್ತಿದ್ದರೆ, ಅತಿಥಿಗಳನ್ನು ಸ್ವಾಗತಿಸಲು ಈ ರಂಗೋಲಿ ವಿನ್ಯಾಸವನ್ನು ಮನೆಯ ಬಾಗಿಲ ಬಳಿ ಅಥವಾ ಅಂಗಳದಲ್ಲಿ ಬಿಡಿಸಬಹುದು. ಇದು ಕೂಡ ಸುಂದರವಾಗಿ, ಸುಲಭವಾಗಿ ಬಿಡಿಸಬಹುದಾದ ಚಿತ್ತಾರವಾಗಿದೆ.
(5 / 8)
ಈ ಕ್ರಿಸ್ಮಸ್ ಜಿಂಗಲ್ ಬೆಲ್ ರಂಗೋಲಿ ವಿನ್ಯಾಸವು ನಿಮ್ಮ ಮನೆಗೆ ಬರುವ ಸಂತೋಷ ಮತ್ತು ಉತ್ಸಾಹದ ಸಂಕೇತವಾಗಿದೆ. ನಿಮ್ಮ ಮನೆಯ ಅಂಗಳದಲ್ಲಿ ಈ ರಂಗೋಲಿ ವಿನ್ಯಾಸವನ್ನು ಮಾಡುವ ಮೂಲಕ ನಿಮ್ಮ ಮನೆಗೆ ಸಂತೋಷವನ್ನು ಆಹ್ವಾನಿಸಬಹುದು. ಇದು ತುಂಬಾನೇ ಸರಳವಾದ ರಂಗೋಲಿ ವಿನ್ಯಾಸವಾಗಿದೆ.
(6 / 8)
ನೀವು ಕ್ರಿಸ್‌ಮಸ್‌ಗಾಗಿ ಸುಲಭವಾದ ಐಸ್‌ಮ್ಯಾನ್ ರಂಗೋಲಿ ವಿನ್ಯಾಸಗಳನ್ನು ಹುಡುಕುತ್ತಿದ್ದರೆ ನಿಮ್ಮ ಹುಡುಕಾಟ ಮುಗಿದಿರಬಹುದು. ಹೌದು, ಈ ರಂಗೋಲಿ ವಿನ್ಯಾಸವು ಎಷ್ಟು ಸುಂದರವಾಗಿದೆಯೋ, ಅದನ್ನು ಬಿಡಿಸುವುದು ಕೂಡ ಅಷ್ಟೇ ಸುಲಭ.
(7 / 8)
ಕ್ರಿಸ್ಮಸ್ ಟ್ರೀ ಇಲ್ಲದೇ ಕ್ರಿಸ್ಮಸ್ ಹಬ್ಬವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ರಂಗೋಲಿಯಲ್ಲಿ ಈ ಹಬ್ಬದ ಸಂತೋಷವನ್ನು ಚಿತ್ರಿಸಲು, ಈ ಸುಂದರವಾದ ಕ್ರಿಸ್ಮಸ್ ಟ್ರೀಯನ್ನು ರಂಗೋಲಿ ವಿನ್ಯಾಸದಲ್ಲಿ ಅರಳಿಸಿ. ಇದು ನೋಡಲು ಕೂಡ ಸಖತ್ ಡಿಫ್ರೆಂಟ್ ಆಗಿ ಕಾಣುತ್ತದೆ.
ಇತರ ಗ್ಯಾಲರಿಗಳು