ಸ್ಯಾಮ್‌ ಕರನ್‌, ಆರ್ ಅಶ್ವಿನ್ ಇನ್;‌ ಐಪಿಎಲ್‌ 2025ಕ್ಕೆ ಸಿಎಸ್‌ಕೆ ಸಂಭಾವ್ಯ ಆಡುವ ಬಳಗ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಯಾಮ್‌ ಕರನ್‌, ಆರ್ ಅಶ್ವಿನ್ ಇನ್;‌ ಐಪಿಎಲ್‌ 2025ಕ್ಕೆ ಸಿಎಸ್‌ಕೆ ಸಂಭಾವ್ಯ ಆಡುವ ಬಳಗ ಹೀಗಿದೆ

ಸ್ಯಾಮ್‌ ಕರನ್‌, ಆರ್ ಅಶ್ವಿನ್ ಇನ್;‌ ಐಪಿಎಲ್‌ 2025ಕ್ಕೆ ಸಿಎಸ್‌ಕೆ ಸಂಭಾವ್ಯ ಆಡುವ ಬಳಗ ಹೀಗಿದೆ

ವರ್ಷಗಳ ಹಿಂದೆ ಸಿಎಸ್‌ಕೆ ತಂಡದಲ್ಲಿದ್ದ ಕೆಲವು ಆಟಗಾರರು ಮತ್ತೆ ಹಳದಿ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಆರ್‌ ಅಶ್ವಿನ್‌ ಜೊತೆಗೆ ಸ್ಯಾಮ್‌ ಕರನ್‌ ಮತ್ತೆ ತಂಡ ಸೇರಿಕೊಂಡಿದ್ದಾರೆ. ಐಪಿಎಲ್‌ 2024ರ ಆವೃತ್ತಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಸಂಭಾವ್ಯ ಬಲಿಷ್ಠ ಆಡುವ ಬಳಗ ಹೀಗಿದೆ.

ಸ್ಯಾಮ್‌ ಕರನ್‌, ಆರ್ ಅಶ್ವಿನ್ ಇನ್;‌ ಐಪಿಎಲ್‌ 2025ಕ್ಕೆ ಸಿಎಸ್‌ಕೆ ಸಂಭಾವ್ಯ ಆಡುವ ಬಳಗ
ಸ್ಯಾಮ್‌ ಕರನ್‌, ಆರ್ ಅಶ್ವಿನ್ ಇನ್;‌ ಐಪಿಎಲ್‌ 2025ಕ್ಕೆ ಸಿಎಸ್‌ಕೆ ಸಂಭಾವ್ಯ ಆಡುವ ಬಳಗ

ದಾಖಲೆಯ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು, ಐಪಿಎಲ್‌ 2025ರ ಆವೃತ್ತಿಗೂ ಮುನ್ನ ಮತ್ತಷ್ಟು ಬಲಿಷ್ಠ ತಂಡವನ್ನು ಕಟ್ಟಿದೆ. ಕಳೆದ ಬಾರಿ ಪ್ಲೇ ಆಫ್‌ ಪ್ರವೇಶಿಸಲು ಕೊನೆಯ ಕ್ಷಣದಲ್ಲಿ ಎಡವಿದ್ದ ತಂಡ, ಈ ಬಾರಿ ಮತ್ತಷ್ಟು ಹೊಸತನದೊಂದಿಗೆ ಅಬ್ಬರಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಮೆಗಾ ಹರಾಜಿನಲ್ಲಿ ಹೊಸ ಆಟಗಾರರ ಜೊತೆಗೆ, ಈ ಹಿಂದೆ ಹಳದಿ ಜೆರ್ಸಿ ತೊಟ್ಟು ಆಡಿದ್ದ ಕೆಲವು ಆಟಗಾರರನ್ನು ಕೂಡಾ ಫ್ರಾಂಚೈಸಿ ಮತ್ತೆ ಖರೀದಿ ಮಾಡಿದೆ. ಆರಂಭದಿಂದಲೂ ತಂಡದ ಬಲವಾಗಿರುವ ಎಂಎಸ್ ಧೋನಿ ಈ ಬಾರಿಯೂ ಆಡುವುದು ಖಚಿತವಾಗಿದೆ. ಇದೇ ವೇಳೆ ರುತುರಾಜ್ ಗಾಯಕ್ವಾಡ್ ನಾಯಕನಾಗಿ ಮುಂದುವರೆಯಲಿದ್ದಾರೆ.

ಬಹುತೇಕ ಕಳೆದ ಬಾರಿಯ ಜೋಶ್‌ ಈ ಬಾರಿಯೂ ತಂಡದಲ್ಲಿ ಉಳಿಯಲಿದೆ. ಇದರೊಂದಿಗೆ ವರ್ಷಗಳ ಹಿಂದೆ ತಂಡದಲ್ಲಿದ್ದ ಆಟಗಾರರು ಮತ್ತೆ ಯೆಲ್ಲೋ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಆರ್‌ ಅಶ್ವಿನ್‌ ತವರಿನ ಫ್ರಾಂಚೈಸಿ ಪರ ಆಡಲು ಕಾತರರಾಗಿದ್ದಾರೆ. ಡೆವೊನ್ ಕಾನ್ವೇ ಹಾಗೂ ರಚಿನ್ ರವೀಂದ್ರ ಮತ್ತೆ ತಂಡಕ್ಕೆ ಮರಳಿದ್ದು, ಅವರೊಂದಿಗೆ ಇಂಗ್ಲೆಂಡ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ಕೂಡಾ ಸೇರಿಕೊಂಡಿದ್ದಾರೆ.

ಈ ಬಾರಿ ನೂರ್ ಅಹ್ಮದ್, ರಾಹುಲ್ ತ್ರಿಪಾಠಿ, ದೀಪಕ್‌ ಹೂಡಾ ಮೊದಲಾದವರು ತಂಡಕ್ಕೆ ಬಂದಿದ್ದು, ತಂಡವು ಇನ್ನಷ್ಟು ಬಲಿಷ್ಠವಾಗಲಿದೆ. ಹಾಗಿದ್ದರೆ ಈ ಬಾರಿಯ ಐಪಿಎಲ್‌ ಆವೃತ್ತಿಗೆ ತಂಡದ ಬಲಿಷ್ಠ ಆಡುವ ಬಳಗ ಹೇಗಿರಲಿದೆ ಎಂಬುದನ್ನು ನೋಡೋಣ.

ನಾಯಕ ರುತುರಾಜ್‌ ಕಳೆದ ಬಾರಿಯಂತೆ ಡೆವೊನ್ ಕಾನ್ವೇ ಜೊತೆಗೆ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ರಚಿನ್‌ ರವೀಂದ್ರ ಮೂರನೇ ಕ್ರಮಾಂಕದಲ್ಲಿ ಬಂದರೆ, ಈ ಬಾರಿ ರಾಹುಲ್‌ ತ್ರಿಪಾಠಿ ತಂಡಕ್ಕೆ ಬಲ ತುಂಬಲಿದ್ದಾರೆ. ಸ್ಫೋಟಕ ಬ್ಯಾಟರ್‌ಗಳಾಗಿ ದುಬೆ, ಜಡೇಜಾ ಹಾಗೂ ಧೋನಿ ಫಿನಿಶಿಂಗ್‌ ಮಾಡಲಿದ್ದಾರೆ. ಇವರೊಂದಿಗೆ ಸ್ಯಾಮ್‌ ಕರನ್‌ ಮತ್ತು ಅಶ್ವಿನ್‌ ತಂಡದ ಬ್ಯಾಟಿಂಗ್‌ ಆಳ ಹೆಚ್ಚಿಸಲಿದ್ದಾರೆ. ಖಲೀಲ್‌ ಅಹ್ಮದ್‌ ಮತ್ತು ಪತಿರಣ ವೇಗಿಗಳಾಗಿ ಬಲ ತುಂಬಿದರೆ, ಕರನ್‌ ಹೊಸ ಚೆಂಡು ಎಸೆಯುವುದು ಬಹುತೇಕ ಖಚಿತ.

ಸಿಎಸ್‌ಕ ತಂಡದ ಸಂಪೂರ್ಣ ಆಟಗಾರರ ಪಟ್ಟಿ

  • ಬ್ಯಾಟರ್‌ಗಳು: ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ವಂಶ್ ಬೇಡಿ, ಆಂಡ್ರೆ ಸಿದ್ದಾರ್ಥ್, ಶೇಖ್ ರಶೀದ್
  • ವಿಕೆಟ್ ಕೀಪರ್‌ಗಳು: ಎಂಎಸ್ ಧೋನಿ, ಡೆವೊನ್ ಕಾನ್ವೇ
  • ಆಲ್‌ರೌಂಡರ್‌ಗಳು: ಶಿವಂ ದುಬೆ, ರವೀಂದ್ರ ಜಡೇಜಾ, ರಚಿನ್ ರವೀಂದ್ರ, ಆರ್ ಅಶ್ವಿನ್, ದೀಪಕ್ ಹೂಡಾ, ಜೇಮಿ ಓವರ್ಟನ್, ವಿಜಯ್ ಶಂಕರ್, ಸ್ಯಾಮ್ ಕರ್ರಾನ್. ರಾಮಕೃಷ್ಣ ಘೋಷ್
  • ವೇಗದ ಬೌಲರ್‌ಗಳು: ಮಥೀಶ ಪತಿರಣ, ಖಲೀಲ್ ಅಹ್ಮದ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಗುರ್ಜಪ್‌ನೀತ್ ಸಿಂಗ್, ಅಂಶುಲ್ ಕಾಂಬೋಜ್, ಕಮಲೇಶ್ ನಾಗರಕೋಟಿ
  • ಸ್ಪಿನ್ನರ್‌ಗಳು: ನೂರ್ ಅಹ್ಮದ್, ಶ್ರೇಯಸ್ ಗೋಪಾಲ್

ಇದನ್ನೂ ಓದಿ | ಕೃನಾಲ್ ಪಾಂಡ್ಯ ಇನ್, ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್; ಐಪಿಎಲ್ 2025ಕ್ಕೆ ಆರ್​​ಸಿಬಿ ಬಲಿಷ್ಠ ಸಂಭಾವ್ಯ XI

ಸಿಎಸ್‌ಕೆ ಆಡುವ ಬಳಗ

ರುತುರಾಜ್ ಗಾಯಕ್ವಾಡ್ (ಸಿ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್‌ ಕೀಪರ್), ಸ್ಯಾಮ್‌ ಕರನ್‌, ಆರ್ ಅಶ್ವಿನ್, ಖಲೀಲ್ ಅಹ್ಮದ್, ಮಥೀಶ ಪತಿರಣ.

ಇಂಪ್ಯಾಕ್ಟ್‌ ಪ್ಲೇಯರ್: ನೂರ್ ಅಹ್ಮದ್‌, ವಿಜಯ್‌ ಶಂಕರ್‌, ದೀಪಕ್‌ ಹೂಡಾ

Whats_app_banner