ರೋಯಿಂಗ್‌ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಬಲರಾಜ್ ಪನ್ವಾರ್
- Balraj Panwar: ದಕ್ಷಿಣ ಕೊರಿಯಾದಲ್ಲಿ ನಡೆದ 2024 ರ ಏಷ್ಯಾ ಮತ್ತು ಓಷಿಯಾನಿಯಾ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ, ರೋಯಿಂಗ್ ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಭಾರತದ ಬಲರಾಜ್ ಪನ್ವಾರ್ ಮೂರನೇ ಸ್ಥಾನ ಪಡೆದರು. ಇದರೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡರು.

(1 / 6)
ದಕ್ಷಿಣ ಕೊರಿಯಾದ ಚುಂಗ್ಜುನಲ್ಲಿ ನಡೆದ 2024ರ ಏಷ್ಯನ್-ಓಷಿಯಾನಿಯನ್ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್ ಅರ್ಹತಾ ಸುತ್ತುಗಳ ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಬಲರಾಜ್ ಪನ್ವಾರ್ ಮೂರನೇ ಸ್ಥಾನ ಪಡೆದರು. ಇದರೊಂದಿಗೆ ಈ ಬಾರಿಯ ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
(2 / 6)
ಪುರುಷರ ಸಿಂಗಲ್ಸ್ ಸ್ಕಲ್ಸ್ (ಎಂ 1 ಎಕ್ಸ್) ಸ್ಪರ್ಧೆಯಲ್ಲಿ 7:01.27 ನಿಮಿಷಗಳ ಸಮಯದೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.
(3 / 6)
25 ವರ್ಷದ ಪನ್ವಾರ್, ಕಳೆದ ವರ್ಷ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಸ್ವಲ್ಪವೇ ಅಂತರದಿಂದ ಕಂಚಿನ ಪದಕವನ್ನು ಕಳೆದುಕೊಂಡಿದ್ದರು. ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
(5 / 6)
ಕಜಕಿಸ್ತಾನದ ವ್ಲಾಡಿಸ್ಲಾವ್ ಯಾಕೊವ್ಲೆವ್ 6:59.46 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಇಂಡೋನೇಷ್ಯಾದ ಮೆಮೊ 6:59.74 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಪ್ಯಾರಿಸ್ 2024ರ ಒಲಿಂಪಿಕ್ಸ್ ಕೋಟಾದಲ್ಲಿ ಅಗ್ರ ಐದರಲ್ಲಿ ಸ್ಥಾನ ಪಡೆದ ಬಲರಾಜ್ ಪನ್ವಾರ್ 7:01.27 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ನಡುವೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಅರವಿಂದ್ ಸಿಂಗ್ ಮತ್ತು ಉಜ್ವಲ್ ಕುಮಾರ್ ಪುರುಷರ ಡಬಲ್ ಸ್ಕಲ್ಸ್ (ಎಲ್ಎಂ 2 ಎಕ್ಸ್) ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಈ ವಿಭಾಗದಲ್ಲಿ ಅಗ್ರ ಎರಡು ಸ್ಥಾನ ಪಡೆದವರು ಮಾತ್ರ ಪ್ಯಾರಿಸ್ 2024ಕ್ಕೆ ಅರ್ಹತೆ ಪಡೆದರು.
ಇತರ ಗ್ಯಾಲರಿಗಳು