ಹ್ಯಾಟ್ರಿಕ್‌ ಮೆಡಲ್‌ನತ್ತ ಮನು ಭಾಕರ್;‌ 25 ಮೀಟರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಫೈನಲ್‌ಗೆ ಲಗ್ಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹ್ಯಾಟ್ರಿಕ್‌ ಮೆಡಲ್‌ನತ್ತ ಮನು ಭಾಕರ್;‌ 25 ಮೀಟರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಫೈನಲ್‌ಗೆ ಲಗ್ಗೆ

ಹ್ಯಾಟ್ರಿಕ್‌ ಮೆಡಲ್‌ನತ್ತ ಮನು ಭಾಕರ್;‌ 25 ಮೀಟರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಫೈನಲ್‌ಗೆ ಲಗ್ಗೆ

  • Manu Bhaker Paris Olympics: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್‌ ಮೆಡಲ್‌ ಸಾಧನೆ ಮಾಡಲು ಮನು ಭಾಕರ್‌ ಕೇವಲ ಒಂದು ಹೆಜ್ಜೆ ಹಿಂದಿದ್ದಾರೆ. ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಎರಡು ಮೆಡಲ್‌ ಗೆದ್ದಿರುವ ಕಂಚಿನ ಹುಡುಗಿ ಮನು, ಮಹಿಳೆಯರ 25 ಮೀಟರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಪದಕ ಗೆಲ್ಲುವ ಗುರಿ ಹೊಂದಿರುವ ಮನು ಭಾಕರ್ 25 ಮೀಟರ್ ಪಿಸ್ತೂಲ್‌ನಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದಾರೆ.
icon

(1 / 6)

ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಪದಕ ಗೆಲ್ಲುವ ಗುರಿ ಹೊಂದಿರುವ ಮನು ಭಾಕರ್ 25 ಮೀಟರ್ ಪಿಸ್ತೂಲ್‌ನಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದಾರೆ.(ANI)

ನಾಳೆ ಫೈನಲ್‌ ಸುತ್ತು ನಡೆಯಲಿದ್ದು, ಇಲ್ಲಿ ಅಗ್ರ ಮೂರು ಸ್ಥಾನ ಪಡೆದರೆ ಮನು ಸತತ ಮೂರನೇ ಪದಕದ ಸಾಧನೆ ಮಾಡಲಿದ್ದಾರೆ. ಅದರೊಂದಿಗೆ ಇತಿಹಾಸ ಬರೆಯಲು ಮನು ಸಜ್ಜಾಗಿದ್ದಾರೆ.
icon

(2 / 6)

ನಾಳೆ ಫೈನಲ್‌ ಸುತ್ತು ನಡೆಯಲಿದ್ದು, ಇಲ್ಲಿ ಅಗ್ರ ಮೂರು ಸ್ಥಾನ ಪಡೆದರೆ ಮನು ಸತತ ಮೂರನೇ ಪದಕದ ಸಾಧನೆ ಮಾಡಲಿದ್ದಾರೆ. ಅದರೊಂದಿಗೆ ಇತಿಹಾಸ ಬರೆಯಲು ಮನು ಸಜ್ಜಾಗಿದ್ದಾರೆ.(Sachin Tendular-X)

ಈಗಾಗಲೇ ಮನು 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 22 ವರ್ಷದ ಶೂಟರ್, 'ನಿಖರ' ಸುತ್ತಿನಲ್ಲಿ ಬರೋಬ್ಬರಿ 294 ಅಂಕಗಳನ್ನು ಗಳಿಸಿದರು. ಕ್ಷಿಪ್ರ ಸುತ್ತಿನಲ್ಲಿ 296 ಅಂಕ ಗಳಿಸುವುದರೊಂದಿಗೆ ಒಟ್ಟು 590 ಅಂಕಗಳನ್ನು ಗಳಿಸಿದರು.
icon

(3 / 6)

ಈಗಾಗಲೇ ಮನು 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 22 ವರ್ಷದ ಶೂಟರ್, 'ನಿಖರ' ಸುತ್ತಿನಲ್ಲಿ ಬರೋಬ್ಬರಿ 294 ಅಂಕಗಳನ್ನು ಗಳಿಸಿದರು. ಕ್ಷಿಪ್ರ ಸುತ್ತಿನಲ್ಲಿ 296 ಅಂಕ ಗಳಿಸುವುದರೊಂದಿಗೆ ಒಟ್ಟು 590 ಅಂಕಗಳನ್ನು ಗಳಿಸಿದರು.(PTI)

ಹಂಗೇರಿಯ ವೆರೋನಿಕಾ ಮೇಜರ್ 592 (294 ಮತ್ತು 298) ಅಂಕಗಳನ್ನು ಗಳಿಸಿ ಒಲಿಂಪಿಕ್ ದಾಖಲೆಯನ್ನು ನಿರ್ಮಿಸಿದರು. ಇದರೊಂದಿಗೆ ಕೇವಲ 2 ಅಂಕಗಳಿಂದ ಮನು ಒಲಿಂಪಿಕ್‌ ದಾಖಲೆಯಿಂದ ಹಿಂದುಳಿದರು. ಅಲ್ಲದೆ ಅಗ್ರಸ್ಥಾನ ಕಳೆದುಕೊಂಡರು. ಆದರೆ, ಫೈನಲ್‌ನಲ್ಲಿ ಮತ್ತೆ ದಾಖಲೆ ನಿರ್ಮಿಸುವ ಅವಕಾಶ ಮನು ಅವರಿಗೆ ಇದೆ.
icon

(4 / 6)

ಹಂಗೇರಿಯ ವೆರೋನಿಕಾ ಮೇಜರ್ 592 (294 ಮತ್ತು 298) ಅಂಕಗಳನ್ನು ಗಳಿಸಿ ಒಲಿಂಪಿಕ್ ದಾಖಲೆಯನ್ನು ನಿರ್ಮಿಸಿದರು. ಇದರೊಂದಿಗೆ ಕೇವಲ 2 ಅಂಕಗಳಿಂದ ಮನು ಒಲಿಂಪಿಕ್‌ ದಾಖಲೆಯಿಂದ ಹಿಂದುಳಿದರು. ಅಲ್ಲದೆ ಅಗ್ರಸ್ಥಾನ ಕಳೆದುಕೊಂಡರು. ಆದರೆ, ಫೈನಲ್‌ನಲ್ಲಿ ಮತ್ತೆ ದಾಖಲೆ ನಿರ್ಮಿಸುವ ಅವಕಾಶ ಮನು ಅವರಿಗೆ ಇದೆ.(AFP)

ಶೂಟಿಂಗ್‌ನಲ್ಲಿ ಭಾರತ ಈವರೆಗೆ ಎಲ್ಲಾ ಮೂರು ಪದಕಗಳನ್ನು ಗೆದ್ದಿದೆ. ಮನು ಎರಡು ಮತ್ತು ಸ್ವಪ್ನಿಲ್ ಕುಸಲೆ ಗುರುವಾರ 50 ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದರು.
icon

(5 / 6)

ಶೂಟಿಂಗ್‌ನಲ್ಲಿ ಭಾರತ ಈವರೆಗೆ ಎಲ್ಲಾ ಮೂರು ಪದಕಗಳನ್ನು ಗೆದ್ದಿದೆ. ಮನು ಎರಡು ಮತ್ತು ಸ್ವಪ್ನಿಲ್ ಕುಸಲೆ ಗುರುವಾರ 50 ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದರು.(AFP)

ನಾಳೆ ನಡೆಯಲಿರುವ ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್‌ನಲ್ಲಿ ಮನು ಕಣಕ್ಕಿಳಿಯಲಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ಫೈನಲ್‌ ಪಂದ್ಯ ನಡೆಯಲಿದೆ.
icon

(6 / 6)

ನಾಳೆ ನಡೆಯಲಿರುವ ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್‌ನಲ್ಲಿ ಮನು ಕಣಕ್ಕಿಳಿಯಲಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ಫೈನಲ್‌ ಪಂದ್ಯ ನಡೆಯಲಿದೆ.(AP)


ಇತರ ಗ್ಯಾಲರಿಗಳು