ನೀರಜ್ ಚೋಪ್ರಾ-ಮನು ಭಾಕರ್ ಮದುವೆ ಆಗ್ತಾರಾ? ಸ್ಪಷ್ಟನೆ ಕೊಟ್ರು ಶೂಟರ್‌ ತಂದೆ ರಾಮ್ ಕಿಶನ್-sports news manu bhaker father ram kishan clears marriage rumor of his daughter and neeraj chopra paris olympics jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀರಜ್ ಚೋಪ್ರಾ-ಮನು ಭಾಕರ್ ಮದುವೆ ಆಗ್ತಾರಾ? ಸ್ಪಷ್ಟನೆ ಕೊಟ್ರು ಶೂಟರ್‌ ತಂದೆ ರಾಮ್ ಕಿಶನ್

ನೀರಜ್ ಚೋಪ್ರಾ-ಮನು ಭಾಕರ್ ಮದುವೆ ಆಗ್ತಾರಾ? ಸ್ಪಷ್ಟನೆ ಕೊಟ್ರು ಶೂಟರ್‌ ತಂದೆ ರಾಮ್ ಕಿಶನ್

  • ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಶೂಟರ್ ಮನು ಭಾಕರ್, ದೇಶದೆಲ್ಲೆಡೆ ಜನಪ್ರಿಯತೆ ಗಳಿಸಿದ್ದಾರೆ. ಇದೇ ವೇಳೆ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್‌ ಚೋಪ್ರಾ ಕೂಡಾ ಭಾರತದಲ್ಲೇ ವರ್ಷಗಳ ಹಿಂದೆಯೇ ಮನೆ ಮಾತಾಗಿದ್ದಾರೆ. ಇದೀಗ ಈ ಇಬ್ಬರು ಸ್ಟಾರ್ ಆಟಗಾರರು ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಹಾಗೂ ನೀರಜ್ ಚೋಪ್ರಾ ಭೇಟಿಯಾದ ವಿಡಿಯೊ, ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದೆ. ಇಬ್ಬರೂ ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ಇದಾಗಿದ್ದು, ಮನು ತಾಯಿ ಸುಮೇಧಾ ಅವರು ನೀರಜ್ ಕೈಯನ್ನು ಹಿಡಿದುಕೊಂಡು ಮಾತನಾಡಿದ್ದಾರೆ. ಅಲ್ಲದೆ ನೀರಜ್‌ ಕೈ ಹಿಡಿದು ತಮ್ಮ ತಲೆಯ ಮೇಲೆ ಇರಿಸಿಕೊಂಡು ಪ್ರಮಾಣ ಮಾಡಿಸಿದಂಥಾ ದೃಶ್ಯ ಇದಾಗಿದೆ.
icon

(1 / 9)

ಈ ವಿಡಿಯೋ ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ. ಇಲ್ಲಿ ಮದುವೆ ಮಾತುಕತೆ ನಡೀತಿದೆ ಎಂದು ಎಕ್ಸ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. 
icon

(2 / 9)

ಇಷ್ಟೇ ಅಲ್ಲದೆ ಮನು ಹಾಗೂ ನೀರಜ್‌ ಕೂಡಾ ಪರಸ್ಪರ ಮಾತನಾಡಿರುವ ವಿಡಿಯೋ ಕೂಡಾ ಕಾಣಿಸಿಕೊಂಡಿದೆ. ಇಬ್ಬರು ಕ್ರೀಡಾಪಟುಗಳು ಒಬ್ಬರಿಗೊಬ್ಬರು ಮಾತನಾಡುತ್ತಿದ್ದರೂ, ಕಣ್ಣು ನೋಡಿಕೊಂಡು ಮಾತನಾಡುತ್ತಿಲ್ಲ. ಇಬ್ಬರ ನಡುವೆ ಒಂದು ಕಂಪನವಿದೆವಿದೆ. ಹೀಗಾಗಿ ಅವರಿಂದ ಮುಖ ನೋಡಿ ಮಾತನಾಡಲು ಆಗುತ್ತಿಲ್ಲ ಎಂಬ ಅಭಿಪ್ರಾಯ ನೆಟ್ಟಿಗರದ್ದು. 
icon

(3 / 9)

ಸಾಮಾಜಿಕ ಮಾಧ್ಯಮ ಸೇರಿದಂತೆ ಮಾಧ್ಯಮಗಳಲ್ಲೂ ಮನು ಹಾಗೂ ನೀರಜ್‌ ಮದುವೆ ಚರ್ಚೆಗಳು ನಡೆಯುತ್ತಿದ್ದಂತೆಯೇ, ಮನು ಭಾಕರ್ ಅವರ ತಂದೆ ರಾಮ್ ಕಿಶನ್ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ನಡುವಿನ ಮದುವೆ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ.
icon

(4 / 9)

ಮನು ಇನ್ನೂ ಚಿಕ್ಕವಳು. ಹೀಗಾಗಿ ಈಗ ಅವಳ ಮದುವೆಯ ಬಗ್ಗೆ ಯೋಚಿಸುತ್ತಿಲ್ಲ ಎಂದು ತಂದೆ ಹೇಳಿದ್ದಾರೆ. ಸುದ್ದಿಸಂಸ್ಥೆ ದೈನಿಕ್ ಭಾಸ್ಕರ್ ಜೊತೆ ಮಾತನಾಡಿದ ಅವರು, "ಮನು ಇನ್ನೂ ಚಿಕ್ಕವಳು. ಅವಳಿಗೆ ಇನ್ನೂ ಮದುವೆಯ ವಯಸ್ಸಾಗಿಲ್ಲ. ಈಗ ಮದುವೆ ಕುರಿತು ನಾವು ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ.
icon

(5 / 9)

ತಮ್ಮ ಪತ್ನಿ ಮತ್ತು ನೀರಜ್ ಚೋಪ್ರಾ ಅವರು ಆತ್ಮೀಯವಾಗಿ ಮಾತನಾಡುತ್ತಿರುವ ವೈರಲ್ ವೀಡಿಯೊ ಕುರಿತು ಪ್ರತಿಕ್ರಿಯಿಸಿದ ರಾಮ್ ಕಿಶನ್, ಮನುವಿನ ತಾಯಿ ನೀರಜ್ ಅವರನ್ನು ತನ್ನ ಮಗನಂತೆ ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ.
icon

(6 / 9)

ಇದೇ ವೇಳೆ ಮದುವೆ ಕುರಿತ ಗಾಳಿ ಸುದ್ದಿಬಗ್ಗೆ ನೀರಜ್ ಚೋಪ್ರಾ ಅವರ ಚಿಕ್ಕಪ್ಪ ಕೂಡಾ ಮಾತನಾಡಿದ್ದಾರೆ. ನೀರಜ್ ಪದಕ ತಂದಾಗ ಇಡೀ ದೇಶಕ್ಕೆ ಅದರ ಬಗ್ಗೆ ತಿಳಿಯಿತು. ಅದೇ ರೀತಿ ಆತ ಮದುವೆಯಾದಾಗ ಕೂಡಾ ಎಲ್ಲರಿಗೂ ತಿಳಿಯುತ್ತದೆ ಎಂದು ಸರಳವಾಗಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
icon

(7 / 9)

ನೀರಜ್ ಚೋಪ್ರಾ ಇಬ್ಬರೂ ಹರಿಯಾಣ ಮೂಲದವರು. ನೀರಜ್ ಅಥ್ಲೆಟಿಕ್ಸ್ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
icon

(8 / 9)

ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದರು. ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
icon

(9 / 9)

ಇತರ ಗ್ಯಾಲರಿಗಳು