ಐಫೋನ್ ಎಸ್‌ಇ 4 ದರ: ಭಾರತದಲ್ಲಿ ಆಪಲ್‌ನ ಮಧ್ಯಮ ಶ್ರೇಣಿಯ ಹೊಸ ಐಫೋನ್ ಬೆಲೆ ಎಷ್ಟಿರಲಿದೆ?
ಸಾಮಾನ್ಯ ಐಫೋನ್‌ಗಳಿಗಿಂತ ಕೊಂಚ ಕಡಿಮೆ ದರದ ಐಫೋನ್ ಆಗಮಿಸಲು ಎಲ್ಲರೂ ಕಾಯುತ್ತಿದ್ದಾರೆ. ಐಫೋನ್ ಎಸ್‌ಇ 4 ದರ ಎಷ್ಟಿರಬಹುದು? ಭಾರತಕ್ಕೆ ಯಾವಾಗ ಆಗಮಿಸಬಹುದು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
(1 / 5)
ಆಪಲ್ ಗ್ಲೋಟೈಮ್ ಈವೆಂಟ್ 2024 ರಲ್ಲಿ ಹೊಸ ಐಫೋನ್ 16 ಸರಣಿಯನ್ನು ಬಿಡುಗಡೆ ಮಾಡಿದ ನಂತರ ಐಫೋನ್ ಎಸ್ಇ 4 ಈಗ ಹೆಚ್ಚು ನಿರೀಕ್ಷಿತ ಐಫೋನ್ ಮಾದರಿಗಳಲ್ಲಿ ಒಂದಾಗಿದೆ. ಐಫೋನ್ ಎಸ್ಇ ಮಾದರಿಯು ಈಗ ಬಹಳ ಸಮಯದಿಂದ ನವೀಕರಣಗೊಳ್ಳಬೇಕಾಗಿದೆ. ಐಫೋನ್ ಎಸ್ಇ 4 2022 ರಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 3 ರ ಉತ್ತರಾಧಿಕಾರಿಯಾಗಲಿದೆ.(AppleTrack)
(2 / 5)
ಐಫೋನ್ ಎಸ್ಇ 4 ಬಿಡುಗಡೆಯಾದ ಬಳಿಕ ಆಪಲ್ ಸ್ಟೋರ್‌ನಲ್ಲಿ ಆಪಲ್‌ನ ಅತ್ಯಂತ ಕಡಿಮೆ ದರದ ಫೋನ್ ಆಗಿ ಹೊರಹೊಮ್ಮಲಿದೆ. ಐಫೋನ್ ಎಸ್ಇ 3 ಭಾರತದಲ್ಲಿ 43,900 ರೂಪಾಯಿ ಆರಂಭಿಕ ದರದಲ್ಲಿ ಬಿಡುಗಡೆಯಾಗಿತ್ತು. ಐಫೋನ್ ಎಸ್‌ಇ4 ಕೂಡ ಇದೇ ದರ ಹೊಂದಿರಲಿದೆ ಎಂದು ವರದಿಗಳು ತಿಳಿಸಿವೆ. ಇದರ ದರ 50 ಸಾವಿರ ರೂಪಾಯಿಗಿಂತ ಕಡಿಮೆ ಇರುವ ನಿರೀಕ್ಷೆಯಿದೆ.
(3 / 5)
ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ (ವಿವಿಧ ವರದಿಗಳ ಆಧರಿತ) ಐಫೋನ್ ಎಸ್ಇ 4ನಲ್ಲಿ ಹೊಸ ಫೀಚರ್‌ಗಳು ಇರಲಿವೆ. ವಿಶೇಷವಾಗಿ ಆಪಲ್ ಇಂಟಲಿಜೆನ್ಸ್ ಇರಲಿದೆ. ಸುಮಾರು 45 ಸಾವಿರ ರೂಪಾಯಿ ದರದಲ್ಲಿ ಎಐ ತಂತ್ರಜ್ಞಾನವೂ ಇದರಲ್ಲಿದೆ.(Ming-Chi Kuo)
(4 / 5)
ಐಫೋನ್ ಎಸ್ಇ 4ನಲ್ಲಿ ಯುಎಸ್‌ಬಿ-ಸಿ ಪೋರ್ಟ್ ಮತ್ತು ಆಕ್ಷನ್ ಬಟನ್ ಕೂಡ ಇರಲಿದೆಯಂತೆ. ಅಂದ್ರೆ ಐಫೋನ್ 16ನ ಫೀಚರ್ ಇದರಲ್ಲಿ ಇರಲಿದೆ. ಫೇಸ್ ಐಡಿ, ಒಎಲ್ಇಡಿ ಡಿಸ್ಪ್ಲೇ ಮತ್ತು ಹೋಮ್ ಬಟನ್ ತೆಗೆದಯಹಾಕುವ ಆಲ್ ಸ್ಕ್ರೀನ್ ಫೀಚರ್ ಹೊಂದಿರಲಿದೆ ಎನ್ನಲಾಗುತ್ತಿದೆ. ಇದರಿಂದ ಸ್ಕ್ರೀನ್ ಗಾತ್ರ 6.06 ಇಂಚಿಗೆ ಹೆಚ್ಚಲಿದೆ. (X.com/MajinBuOfficial)
(5 / 5)
ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ ರಾಮ್ ಅಗತ್ಯವಿದೆ.ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ ರಾಮ್ ಅನ್ನು ಸಹ ಪಡೆಯುತ್ತದೆ. ಹೊಸ ವಿನ್ಯಾಸ, ಶಕ್ತಿಯುತ ಚಿಪ್ಸೆಟ್, ಒಎಲ್ಇಡಿ ಡಿಸ್ಪ್ಲೇ ಮತ್ತು ಸುಧಾರಿತ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ ಮುಂಬರುವ ಐಫೋನ್ ಎಸ್ಇ 4 ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.(IceUniverse)
ಇತರ ಗ್ಯಾಲರಿಗಳು