ಮಾಂಟೆ ಕಾರ್ಲೊ ಮಾಸ್ಟರ್ಸ್ ಸೆಮಿಫೈನಲ್: 6ನೇ ಪ್ರಯತ್ನದಲ್ಲಿ ವಿಶ್ವದ ನಂಬರ್ 1 ಆಟಗಾರ ಜೊಕೊವಿಕ್ ಸೋಲಿಸಿದ ಕ್ಯಾಸ್ಪರ್ ರುಡ್
- Casper Ruud: ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯಾಸ್ಪರ್ ರುಡ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ವಿಶೇಷ ಗೆಲುವನ್ನು ದೀರ್ಘಕಾಲ ನೆನಪಿಸಿಕೊಳ್ಳಲಿದ್ದೇನೆ ಎಂದು ಪಂದ್ಯದ ಬಳಿಕ ರುಡ್ ಹೇಳಿದ್ದಾರೆ.

(1 / 6)
ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಪರ್ ರುಡ್, ಅಗ್ರ ಶ್ರೇಯಾಂಕಿತ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ್ದಾರೆ. ಮೂರು ಸೆಟ್‌ವರೆಗೆ ಸಾಗಿದ ಪಂದ್ಯವು ಕೊನೆಗೆ 6-4, 1-6, 6-4ರಲ್ಲಿ ಅಂತ್ಯವಾಯ್ತು. ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ರುಡ್, “ನಾನು ಈ ದಿನವನ್ನು ದೀರ್ಘಕಾಲ ನೆನಪಿಸಿಕೊಳ್ಳಲಿದ್ದೇನೆ” ಎಂದು ಹೇಳಿದ್ದಾರೆ.(AFP)
(2 / 6)
ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಜೊಕೊವಿಕ್ ವಿರುದ್ಧದ ಸೋಲಿಗೆ ಕ್ಯಾಸ್ಪರ್ ರುಡ್ ಸೇಡು ತೀರಿಸಿಕೊಂಡರು. ಕ್ಯಾಸ್ಪರ್ ರುಡ್ ಈಗ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಸೆಣಸಲಿದ್ದಾರೆ.(REUTERS)
(3 / 6)
ಜೊಕೊವಿಕ್ ವಿರುದ್ಧ ಈವರೆಗೆ ಆಡಿದ್ದ ಎಲ್ಲಾ ಐದು ಪಂದ್ಯಗಳಲ್ಲಿ ಸೋತಿದ್ದ ರುಡ್ ಚಾಣಾಕ್ಷ ಆಟದೊಂದಿಗೆ ಜಯಭೇರಿ ಬಾರಿಸಿದರು. ಐತಿಹಾಸಿಕ ಗೆಲುವು ಕಂಡರೂ, ಶಾಂತವಾಗಿ ವಿಜಯವನ್ನು ಆಚರಿಸಿದರು.(REUTERS)
(4 / 6)
ವಿಶ್ವದ ನಂಬರ್ ವನ್ ಆಟಗಾರನನ್ನು ಸೋಲಿಸುವುದು ನಾನು ಎಂದಿಗೂ ಮಾಡದ ಕೆಲಸ ಎಂದು ರುಡ್ ಪಂದ್ಯದ ನಂತರ ಸಂದರ್ಶನವೊಂದರಲ್ಲಿ ಹೇಳಿದರು.(AFP)
(5 / 6)
ನೊವಾಕ್ ಜೊಕೊವಿಕ್ ಪಾಲಿಗೆ 2024 ಉತ್ತಮವಾಗಿ ಸಾಗುತ್ತಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. “ಈ ಪಂದ್ಯದಿಂದ ಖಂಡಿತವಾಗಿಯೂ ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. ಕಳೆದ 15 ವರ್ಷಗಳಿಗೆ ಹೋಲಿಸಿದರೆ, ಇದು ಉತ್ತಮ ಋತುವಲ್ಲ” ಎಂದು ಜೊಕೊವಿಕ್ ಹೇಳಿದ್ದಾರೆ.(REUTERS)
ಇತರ ಗ್ಯಾಲರಿಗಳು