Pooja Hegde Birthday: ದೈವಭಕ್ತೆ, ಸಮಾಜ ಸೇವಕಿ; ಉಡುಪಿ ಹುಡುಗಿ ಪೂಜಾ ಹೆಗ್ಡೆ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲದ ವಿಚಾರಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pooja Hegde Birthday: ದೈವಭಕ್ತೆ, ಸಮಾಜ ಸೇವಕಿ; ಉಡುಪಿ ಹುಡುಗಿ ಪೂಜಾ ಹೆಗ್ಡೆ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲದ ವಿಚಾರಗಳಿವು

Pooja Hegde Birthday: ದೈವಭಕ್ತೆ, ಸಮಾಜ ಸೇವಕಿ; ಉಡುಪಿ ಹುಡುಗಿ ಪೂಜಾ ಹೆಗ್ಡೆ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲದ ವಿಚಾರಗಳಿವು

ಟಾಲಿವುಡ್‌ ಬ್ಯೂಟಿ ಪೂಜಾ ಹೆಗ್ಡೆಗೆ ಇಂದು ಜನ್ಮದಿನದ ಸಂಭ್ರಮ. ಉಡುಪಿ ಚೆಲುವೆ ಪೂಜಾ ಹೆಗ್ಡೆ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ಧಾರೆ. 

ಪೂಜಾ ಹೆಗ್ಡೆ, ಕುಟುಂಬವರೊಂದಿಗೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪೂಜಾ ಹೆಗ್ಡೆ ಬಾಲಿವುಡ್‌, ಕಾಲಿವುಡ್‌ ಹಾಗೂ ಟಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. 
icon

(1 / 12)

ಪೂಜಾ ಹೆಗ್ಡೆ, ಕುಟುಂಬವರೊಂದಿಗೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪೂಜಾ ಹೆಗ್ಡೆ ಬಾಲಿವುಡ್‌, ಕಾಲಿವುಡ್‌ ಹಾಗೂ ಟಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. (PC: Pooja Hegde Social Media)

ಪೂಜಾ ಹೆಗ್ಡೆ ತಂದೆ ತಾಯಿ ಉಡುಪಿಯ ಬಂಟ್‌ ಕುಟುಂಬಕ್ಕೆ ಸೇರಿದವರು. ತಂದೆ ಮಂಜುನಾಥ್‌ ಹೆಗ್ಡೆ, ತಾಯಿ ಲತಾ ಹೆಗ್ಡೆ. 
icon

(2 / 12)

ಪೂಜಾಗೆ ರಿಷಬ್‌ ಹೆಗ್ಡೆ ಎಂಬ ಅಣ್ಣ ಇದ್ದು, ಆತ ಆರ್ಥೋಪೆಡಿಕ್‌ ಸರ್ಜನ್‌ ಆಗಿ ಕೆಲಸ ಮಾಡುತ್ತಿದ್ದಾರೆ. 
icon

(3 / 12)

2009 ರಲ್ಲಿ ಪೂಜಾ ಹೆಗ್ಡೆ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಮಿಸ್‌ ಇಂಡಿಯಾ ಟ್ಯಾಲೆಂಟೆಡ್‌ 2009 ಗೌರವಕ್ಕೆ ಪಾತ್ರರಾಗಿದ್ದರೂ ಮೊದಲ ಸುತ್ತಿನ ಸ್ಪರ್ಧೆಯಿಂದ ಹೊರ ಬಿದ್ದಿದ್ದರು. 
icon

(4 / 12)

2010 ರಲ್ಲಿ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಈ ಚೆಲುವೆ ಸೆಕೆಂಡ್‌ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. 
icon

(5 / 12)

ಪೂಜಾ ಹೆಗ್ಡೆ 2021 ರಲ್ಲಿ ಇನ್‌ಸ್ಟಾಗ್ರಾಮ್‌ನ  ಪೋರ್ಬ್ಸ್‌ ಇಂಡಿಯಾದ ಅತ್ಯಂತ ಪ್ರಭಾವಶಾಲಿ ಸೆಲೆಬ್ರಿಟಿಗಳಲ್ಲಿ 7ನೇ ಸ್ಥಾನ ಪಡೆದಿದ್ದರು. 
icon

(6 / 12)

ಟೈಮ್ಸ್‌ನ ಮೋಸ್ಟ್ ಡಿಸೈರಬಲ್ ವುಮನ್ ಲಿಸ್ಟ್‌ನಲ್ಲಿ ಪೂಜಾ ಹೆಗ್ಡೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ
icon

(7 / 12)

ಮೊಹೆಂಜೊದಾರೋ ನಟಿ ಪೂಜಾ ಹೆಗ್ಡೆ ದೈವ ಭಕ್ತೆ ಕೂಡಾ. ಮನೆಯಲ್ಲಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಪೂಜಾ ಮಿಸ್‌ ಮಾಡುವುದಿಲ್ಲ. ಕರ್ನಾಟಕಕ್ಕೆ ಬಂದರೂ ಆಕೆ ತಪ್ಪದೆ ತಮ್ಮ ಊರಿನ ದೇವಸ್ಥಾನಗಳಿಗೆ ಭೇಟಿ ನೀಡದೆ ಹೋಗುವುದಿಲ್ಲ. 
icon

(8 / 12)

All About Love ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಪೂಜಾ ಹೆಗ್ಡೆ ಅದರ ಮೂಲಕ ಅಶಕ್ತರಿಗೆ ವೈದ್ಯಕೀಯ ಹಾಗೂ ಆರ್ಥಿಕ ಸಹಾಯ ಮಾಡುತ್ತಾ ಬಂದಿದ್ದಾರೆ. 
icon

(9 / 12)

ಇವಿಷ್ಟೇ ಅಲ್ಲ ಆಕೆ ಭೋಜನಪ್ರಿಯೆ ಕೂಡಾ ಹೌದು. ತನಗಿಷ್ಟವಾದ ತಿಂಡಿಗಳನ್ನು ತಿನ್ನುವ ಪೂಜಾ ಅದಕ್ಕೆ ತಕ್ಕಂತೆ ವರ್ಕೌಟ್‌ ಮಾಡ್ತಾರಂತೆ. 
icon

(10 / 12)

ಇಂಗ್ಲೀಷ್, ಹಿಂದಿ, ಮರಾಠಿ ಭಾಷೆಗಳನ್ನು ಸರಾಗವಾಗಿ ಮಾತನಾಡುವ ಪೂಜಾ ಈಗ ತುಳು ಕೂಡ ಕಲಿತಿದ್ಧಾರೆ. ಆದರೆ ಕನ್ನಡ ಮಾತನಾಡಲು ಬರುವುದಿಲ್ಲ. 
icon

(11 / 12)

ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಪೂಜಾ ಹೆಗ್ಡೆ ಕೊನೆಯದಾಗಿ ಸಲ್ಮಾನ್‌ ಖಾನ್‌ ಜೊತೆ 'ಕಿಸಿ ಕಾ ಭಾಯ್‌ ಕಿಸಿ ಕಾ ಜಾನ್‌' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಹೊಸ ಸಿನಿಮಾ ಅನೌನ್ಸ್‌ ಮಾಡಿಲ್ಲ. ಮಹೇಶ್‌ ಬಾಬು ಜೊತೆ 'ಗುಂಟೂರು ಕಾರಂ' ಸಿನಿಮಾಗೆ ಆಯ್ಕೆ ಆಗಿದ್ದರೂ ನಂತರ ಚಿತ್ರತಂಡ ಪೂಜಾ ಬದಲಿಗೆ ಶ್ರೀಲೀಲಾ ಆಯ್ಕೆ ಮಾಡಿಕೊಂಡಿದೆ. 
icon

(12 / 12)

ಇತರ ಗ್ಯಾಲರಿಗಳು