ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

Drone Prathap Arrest: ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಬ್ಲಾಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕನ್ನಡ ಬಿಗ್​ ಬಾಸ್-10ರ ಸ್ಪರ್ಧಿ ಡ್ರೋನ್ ಪ್ರತಾಪ್​ರನ್ನು ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ.

ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ
ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

ತುಮಕೂರು: ಕನ್ನಡ ಬಿಗ್​ ಬಾಸ್-10ರ ಸ್ಪರ್ಧಿ ಡ್ರೋನ್ ಪ್ರತಾಪ್ (Drone Prathap) ರನ್ನು ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ. ಡ್ರೋನ್ ಮೂಲಕ ವಿವಾದ ಸೃಷ್ಟಿಸಿದ್ದ ಮತ್ತು ಬಿಗ್​ ಬಾಸ್ ಶೋ ಮೂಲಕ ಕರ್ನಾಟಕ ಜನರ ಪ್ರೀತಿ ಸಂಪಾದಿಸಿದ್ದ ಪ್ರತಾಪ್, ಬಂಧನಕ್ಕೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಬ್ಲಾಸ್ಟ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತಾಪ್​ನನ್ನು ಅರೆಸ್ಟ್ ಮಾಡಲಾಗಿದೆ.

ಪ್ರಕರಣದ ವಿವರ ಹೀಗಿದೆ…

ಡ್ರೋನ್ ಪ್ರತಾಪ್ ಇತ್ತೀಚೆಗೆ ನೀರಿನಲ್ಲಿ ಬ್ಲಾಸ್ಟ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಸೋಡಿಯಂ ತುಂಬಿದ್ದ ಕವರ್​ ಅನ್ನು ಕೃಷಿ ಹೊಂಡಕ್ಕೆ ಎಸೆದ ತಕ್ಷಣ ಸ್ಫೋಟವಾಗಿದ್ದನ್ನು ನಾವು ಕಾಣಬಹುದು. ಸೋಡಿಯಂ ಎಸೆದ ತಕ್ಷಣವೇ ಬೆಂಕಿ ದೊಡ್ಡ ಮಟ್ಟದಲ್ಲಿ ಚಿಮ್ಮಿದೆ. ಸಿನಿಮಾಗಳಲ್ಲಿ ಬ್ಲಾಸ್ಟ್ ಆದ ದೃಶ್ಯಗಳಂತೆಯೇ ಇತ್ತು. ಬ್ಲಾಸ್ಟ್​ ಆದ ತಕ್ಷಣವೇ ಜೋರಾಗಿ ಕಿರುಚುತ್ತಾ ತುಂಬಾ ಖುಷಿಪಟ್ಟ ಡ್ರೋನ್ ಪ್ರತಾಪ್, ನೋಡ್ಬೋದು ನೀವು ಫುಲ್ ಬ್ಲಾಸ್ಟ್ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.

ಬ್ಲಾಸ್ಟ್ ಮಾಡಿದ್ದರ ವಿರುದ್ಧ ಕಿಡಿಕಾರಿದ ಪರಿಸರವಾದಿಗಳು, ಕ್ರಮಕ್ಕೆ ಆಗ್ರಹಿಸಿದ್ದರು. ಮುಂದಿನ ದಿನಗಳಲ್ಲಿ ಈತ ಜನಗಳ ಮೇಲೆ ಪ್ರಯೋಗ ಮಾಡಿದರೂ ಅಚ್ಚರಿ ಇಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು. ಈ ರೀತಿ ವಿಡಿಯೋ ಹಂಚಿಕೆ ಮಾಡಿಕೊಳ್ಳುವ ಮೂಲಕ ಕಿಡಿಗೇಡಿಗಳು ವಿವಿಧ ಕೃತ್ಯಗಳಿಗೆ ಬಳಸುವ ಸಾಧ್ಯತೆ ಇದೆ ಎಂದು ಪರಿಸರವಾದಿ ವಿಜಯ್ ನಿಶಾಂತ್ ಆಕ್ರೋಶ ವ್ಯಕ್ತಪಡಿಸಿದ್ದರು. ಅದರಂತೆ, ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸೆಕ್ಷನ್ 288, ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

Whats_app_banner