Raghuveer Daughter: ಮದುವೆಯಾಗಿ ಚೆನ್ನೈನಲ್ಲಿ ನೆಲೆಸಿದ್ದಾರೆ ದುರಂತ ನಾಯಕ ರಘುವೀರ್-ಸಿಂಧು ದಂಪತಿ ಮೊದಲ ಪುತ್ರಿ..ಫೋಟೋ ಗ್ಯಾಲರಿ
ಜೀವನದಲ್ಲಿ ಸಾಧನೆ ಮಾಡಬೇಕು. ಹಣ ಹೆಸರು ಮಾಡಬೇಕು ಎಂದು ಎಲ್ಲರೂ ಕನಸು ಕಾಣುತ್ತಾರೆ. ಕೆಲವರು ಅಂದುಕೊಂಡಂತೆ ಸಾಧಿಸಿದರೆ, ಕೆಲವರ ಕನಸು ಕನಸಾಗೇ ಉಳಿಯುತ್ತದೆ. ಇದೇ ನೋವಿನಲ್ಲಿ ಎಷ್ಟೋ ಮಂದಿ ದುರಂತ ಅಂತ್ಯ ಕಂಡಿದ್ದಾರೆ.
(1 / 13)
ಚಿತ್ರರಂಗದ ಮಂದಿ ಕೂಡಾ ಇದಕ್ಕೆ ಹೊರತಲ್ಲ. ಕನ್ನಡ ಚಿತ್ರರಂಗದಲ್ಲಿ ಅನೇಕ ನಾಯಕ-ನಾಯಕಿಯರು ದುರಂತ ಅಂತ್ಯ ಕಂಡಿದ್ದಾರೆ. ಅವರಲ್ಲಿ ರಘುವೀರ್ ಕೂಡಾ ಒಬ್ಬರು. (PC: Shrea Ashwin and Aswin Raam Instagram )
(2 / 13)
ರಘುವೀರ್ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದವರು. ಇಂಜಿನಿಯರಿಂಗ್ ಮಾಡುತ್ತಿದ್ದ ರಘುವೀರ್ ಅವರಿಗೆ ಇದ್ದಕ್ಕಿದ್ದಂತೆ ಬಣ್ಣದ ಲೋಕ ಸೆಳೆದಿದೆ. ಮಗನ ಆಸೆಯನ್ನು ಬೇಡ ಅನ್ನದೆ ತಂದೆ, ಮಗನಿಗೆ ಪ್ರೋತ್ಸಾಹ ನೀಡಿದ್ದಾರೆ. ಅದರಂತೆ 'ಅಜಯ್ ವಿಜಯ್' ಚಿತ್ರದ ಮೂಲಕ ರಘುವೀರ್ ಚಿತ್ರರಂಗಕ್ಕೆ ಬಂದರು. ಆದರೆ ಆ ಚಿತ್ರ ಅಂದುಕೊಂಡಂತೆ ಯಶಸ್ಸು ಸಾಧಿಸಲಿಲ್ಲ.
(3 / 13)
ನಂತರ ರಘುವೀರ್ 'ಚೈತ್ರದ ಪ್ರೇಮಾಂಜಲಿ' ಚಿತ್ರದಲ್ಲಿ ನಟಿಸಿದರು. ರಘುವೀರ್ ಅವರನ್ನು ನೋಡಿ ಎಲ್ಲರೂ ಕಾಲೆಳೆದಿದ್ದರು. ಆದರೆ ಯಾರೂ ಊಹಿಸದ ಮಟ್ಟಕ್ಕೆ ಈ ಸಿನಿಮಾ ತೆರೆ ಕಂಡಿತ್ತು. ಇದೇ ಖುಷಿಯಲ್ಲಿ ಅವರು ತಮಿಳಿನ ಸಿಂಧು ಜೊತೆ ಶೃಂಗಾರ ಕಾವ್ಯ ಚಿತ್ರದಲ್ಲಿ ನಟಿಸಿದರು. ನಂತರ ಈ ಜೋಡಿ ಪ್ರೀತಿಸಿ ಮದುವೆಯಾದರು.
(4 / 13)
1992 ರಲ್ಲಿ ಸಿಂಧು ಅವರನ್ನು ಮದುವೆಯಾಗಿದ್ದ ರಘುವೀರ್ ತಂದೆಗೆ ಇಷ್ಟವಿರಲಿಲ್ಲ. ತಂದೆ ಮಗನ ನಡುವೆ ಮನಸ್ತಾಪ ಉಂಟಾಯ್ತು. ಅವರು ಮುಂದೆ ನಟಿಸಿದ ಸಿನಿಮಾಗಳು ಕೂಡಾ ಯಶಸ್ಸು ಕಾಣಲಿಲ್ಲ. ಈ ದಂಪತಿಗೆ 1994ರಲ್ಲಿ ಹೆಣ್ಣು ಮಗು ಜನಿಸಿತು. ಆ ಮಗುವಿಗೆ ಖುಷಿ ಎಂದು ಹೆಸರಿಟ್ಟರು. ಮೊದಲಿನಿಂದಲೂ ಉಸಿರಾಟದ ಸಮಸ್ಯೆ ಇದ್ದ ಸಿಂಧು 2003ರಲ್ಲಿ ನಿಧನರಾದರು. ರಘುವೀರ್ ಅವರನ್ನು ಬಿಟ್ಟು ಸಿಂಧು ಮಗಳ ಜೊತೆ ಚೆನ್ನೈನಲ್ಲಿ ನೆಲೆಸಿದ್ದರು ಎಂಬ ಸುದ್ದಿ ಇದೆ. ಆದರೆ ಇದರ ಬಗ್ಗೆ ನಿಖರ ಮಾಹಿತಿ ಇಲ್ಲ.
(5 / 13)
ಸಿಂಧು ನಿಧನದ ನಂತರ ರಘುವೀರ್, ತಂದೆಯ ಮನವಿಯಂತೆ ಗೌರಿ ಎಂಬುವರನ್ನು ಎರಡನೆ ಮದುವೆಯಾದರು. ಈ ದಂಪತಿಗೆ ಮೋಕ್ಷ ಎಂಬ ಮಗಳಿದ್ದಾರೆ. ಆದರೆ 2014 ರಲ್ಲಿ ರಘುವೀರ್ ಹೃದಯಾಘಾತದಿಂದ ನಿಧನರಾದರು. ತಾಯಿ ನಿಧನರಾದಾಗ ಅಜ್ಜಿ ತಾತನ ಜೊತೆ ಚೆನ್ನೈನಲ್ಲಿ ನೆಲೆಸಿದ್ದ ಅವರ ಮೊದಲ ಪುತ್ರಿ ಶ್ರೇಯಾ, ಆಗ್ಗಾಗ್ಗೆ ರಘುವೀರ್ ನೋಡಲು ಬರುತ್ತಿದ್ದರು.
(6 / 13)
ಶ್ರೇಯಾ, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಅಜ್ಜಿ ತಾತನ ಸಹಾಯದಿಂದ ಆಕೆ ಸಿಹಿ ತಿಂಡಿಯ ಉದ್ಯಮವನ್ನೂ ಆರಂಭಿಸಿ ಯಶಸ್ಸು ಗಳಿಸಿದ್ದರು.
(7 / 13)
ಶ್ರೇಯಾ 2015 ರಲ್ಲಿ ತಾವು ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಅಶ್ವಿನ್ ರಾಮ್ ಅವರನ್ನು ಮದುವೆಯಾದರು. ಈ ಮದುವೆಗೆ ಕ್ಯಾತ ಕಾಲಿವುಡ್ ಸೆಲೆಬ್ರಿಟಿಗಳು ಬಂದು ಹಾರೈಸಿದ್ದರು.
(8 / 13)
ಅಶ್ವಿನ್ ರಾಮ್ ತಂದೆ ಜೀವ ರವಿ, ಕಾಲಿವುಡ್‌ನಲ್ಲಿ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದಾರೆ. ಅಶ್ವಿನ್ ಕೂಡಾ ತಮಿಳಿನಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
(9 / 13)
ಅಶ್ವಿನ್ ರಾಮ್ ಮಗುವಾಗಿದ್ದಾಗ ತೆಗೆದ ಫೋಟೋ. ಈ ಚಿತ್ರದಲ್ಲಿ ಸಿಂಧು ( ಬಿಳಿ ಬಣ್ಣದ ಸೀರೆ ಧರಿಸಿರುವವರು) ಅವರನ್ನು ಕಾಣಬಹುದು. ಸಿಂಧು ಕುಟುಂಬ ಹಾಗೂ ಅಶ್ವಿನ್ ರಾಮ್ ಕುಟುಂಬ ಬಹಳ ಆತ್ಮೀಯರು.
(10 / 13)
ಶ್ರೇಯಾ ಹಾಗೂ ಅಶ್ವಿನ್ ದಂಪತಿಗೆ ಒಂದು ಗಂಡು ಮಗುವಿದೆ. ತಂದೆ ತಾಯಿಯನ್ನು ಕಳೆದುಕೊಂಡ ಶ್ರೇಯಾ ಈಗ ಪತಿ, ಮಗು ಹಾಗೂ ಕುಟುಂಬದೊಂದಿಗೆ ಚೆನ್ನೈನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
(11 / 13)
ಶ್ರೇಯಾ ಹಾಗೂ ಅಶ್ವಿನ್ ತಮ್ಮ ಮಗನಿಗೆ ಅಯಾನ್ ಎಂದು ಹೆಸರಿಟ್ಟಿದ್ದಾರೆ. ತಮ್ಮ ಫ್ಯಾಮಿಲಿ ಫೋಟೋಗಳನ್ನು ಶ್ರೇಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(12 / 13)
ಸ್ಯಾಂಡಲ್‌ವುಡ್ ನಿರ್ದೇಶಕ ರಘುರಾಮ್, ಲಾಕ್‌ಡೌನ್ ಸಮಯದಲ್ಲಿ ಶ್ರೇಯಾ ಅವರಿಗೆ ಕರೆ ಮಾಡಿ ಮಾತನಾಡಿಸಿ, ಆ ಆಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದುವರೆಗೂ ರಘುವೀರ್ ಅವರಿಗೆ ಹೀಗೆ ಒಬ್ಬ ಮಗಳಿದ್ದಾಳೆ ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ.
ಇತರ ಗ್ಯಾಲರಿಗಳು