Vacation tips: ರಜೆಯ ಮಜಾ ಆನಂದಿಸಿ, ಅರ್ಥಪೂರ್ಣವಾಗಿ ರಜೆಯನ್ನು ಆನಂದಿಸುವುದು ಹೇಗೆ, ರಜೆ ವ್ಯರ್ಥ ಮಾಡುವವರಿಗೆ ಇಲ್ಲಿದೆ ಟಿಪ್ಸ್
- Ways to take a real vacation: ಸ್ವಾತಂತ್ರ್ಯ ದಿನಾಚರಣೆ ಮಂಗಳವಾರ. ಸೋಮವಾರ ಒಂದು ರಜೆ ಹಾಕಿ ಎಲ್ಲಾದರೂ ಟ್ರಿಪ್ ಹೊರಟ್ರಾ. ಅಥವಾ ಶನಿವಾರ, ಭಾನುವಾರ ರಜಾ ದಿನಕ್ಕೆ ಏನೂ ಪ್ಲಾನ್ ಇಲ್ವಾ, ನಿಮಗೆ ಸರಿಯಾಗಿ ರಜಾ ದಿನವನ್ನು ಬಳಸಿಕೊಳ್ಳಲು ತಿಳಿದಿಲ್ಲವೇ. ರಜೆಯ ಮಜಾ ಹೆಚ್ಚಿಸಲು ಇಲ್ಲೊಂದಿಷ್ಟು ಸಲಹೆಗಳಿವೆ.

(1 / 6)
ರಜಾ ದಿನದಂದು ಆಫೀಸ್ ವಿಷಯದಿಂದ ಸಂಪೂರ್ಣ ವಿಮುಖವಾಗುವುದು ಅತ್ಯುತ್ತಮ ದಾರಿ. ನಿಮ್ಮ ಮನಸ್ಸು ಫ್ರೆಶ್ ಆಗಿರಲಿ. "ರಜೆ ದಿನದಂದು ಆಫೀಸ್ ವಿಷಯಗಳನ್ನು ಫೋನ್‌ನಲ್ಲಿ ನೋಡುತ್ತ ಇರಬೇಡಿ. ಸಂಪೂರ್ಣವಾಗಿ ಕಂಪ್ಯೂಟರ್, ಫೋನ್‌ನಿಂದ ವಿಮುಖವಾಗಿ ಮನಸ್ಸಿಗೆ ನೆಮ್ಮದಿ ನೀಡಿʼ ಎಂದು ಥೆರಪಿಸ್ಟ್ ತೇರಿ ಕೊಲ್ ಹೇಳಿದ್ದಾರೆ.(Unsplash)
(2 / 6)
ರಜಾ ದಿನದಂದು ಅತ್ಯಧಿಕ ಸ್ಥಳ ವೀಕ್ಷಣೆ ಮಾಡುವ ಶೆಡ್ಯೂಲ್ ಮಾಡಬೇಡಿ. ಹೆಚ್ಚು ರಶ್ ಇರುವಲ್ಲಿಗೆ ಹೋಗಬೇಡಿ. ಹಾಯಾಗಿ ಕಳೆಯಲು ಸಾಧ್ಯವಿರುವ ಸ್ಥಳಗಳಿಗೆ ಭೇಟಿ ನೀಡಿ. ನಿಮ್ಮ ವೊಕೆಷನ್ ಅರ್ಥಪೂರ್ಣವಾಗಿರಲಿ.(Unsplash)
(3 / 6)
ಕೆಲಸಕ್ಕೂ ವೈಯಕ್ತಿಕ ಬದುಕಿಗೂ ಸೂಕ್ತವಾದ ಬೌಂಡರಿ ಹಾಕಿಕೊಳ್ಳಬೇಕು. ರಜಾ ದಿನದಂದು ಆಫೀಸ್ ಮೆಸೆಜ್, ಇಮೇಲ್‌ನಿಂದ ದೂರ ಇರಬೇಕು. ಪ್ರವಾಸದ ಸಮಯದಲ್ಲಿ ಆಫೀಸ್ ಚಿಂತೆ ಇರಬಾರದು.(Unsplash)
(4 / 6)
ಟ್ರಿಪ್‌ಗೆ ಹೋದಾಗ ಫೋನ್ ಅನ್ನು ಏರೋಪ್ಲೇನ್ ಮೋಡ್‌ನಲ್ಲಿ ಇಡಬಹುದು. ಅಥವಾ ಫೋನ್ ನೋಡುವುದನ್ನು ಕಡಿಮೆ ಮಾಡಿ. ಇದರಿಂದ ನಿಸರ್ಗವನ್ನು ಸರಿಯಾಗಿ ಎಂಜಾಯ್ ಮಾಡಲು ನಿಮಗೆ ಸಾಧ್ಯವಾಗಲಿದೆ.(Unsplash)
(5 / 6)
ಆಫೀಸ್ ಕೆಲಸದ ಸಮಯದಲ್ಲಿ ಏನೇಲ್ಲ ಕಳೆದುಕೊಂಡಿರುವಿರೋ ಅದನ್ನು ರಜಾ ದಿನದಲ್ಲಿ ಪಡೆಯಿರಿ. ಅಂದರೆ, ಅತ್ಯುತ್ತಮ ನಿದ್ದೆ, ಪ್ರಯಾಣ ಇತ್ಯಾದಿ ಮಾಡಿ.(Unsplash)
ಇತರ ಗ್ಯಾಲರಿಗಳು