Swamiji Tiger Safari: ನಾಗರಹೊಳೆಗೆ ಸಫಾರಿಗೆ ಬಂದ ತುಮಕೂರು ಸಿದ್ದಗಂಗಾ ಮಠಾಧೀಶರಿಗೆ ಬೃಹತ್ ಹುಲಿ ದರ್ಶನ: ಹೇಗಿತ್ತು ಆ ಕ್ಷಣ
- Siddaganga mut swamiji Safari: ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಶ್ರೀಗಳು ನಾಗರಹೊಳೆ ಅರಣ್ಯದಲ್ಲಿ ಸಫಾರಿ ಹೋಗಿ ಹುಲಿ ಕಂಡು ಪುಳಿಕಿತರಾದರು. ಆ ಕ್ಷಣ ಹೀಗಿತ್ತು.
- Siddaganga mut swamiji Safari: ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಶ್ರೀಗಳು ನಾಗರಹೊಳೆ ಅರಣ್ಯದಲ್ಲಿ ಸಫಾರಿ ಹೋಗಿ ಹುಲಿ ಕಂಡು ಪುಳಿಕಿತರಾದರು. ಆ ಕ್ಷಣ ಹೀಗಿತ್ತು.
(1 / 9)
ಅಕ್ಷರ ಹಾಗೂ ಅನ್ನ ದಾಸೋಹದ ಮೂಲಕ ವಿಖ್ಯಾತಿ ಪಡೆದಿರುವ ತುಮಕೂರು ಸಿದ್ದಗಂಗಾ ಸ್ವಾಮೀಜಿ ಅವರು ಹಸಿರು ಮನಸಿಗರಾಗಿ ಕಾಡು ಸುತ್ತಿದರು.
(2 / 9)
ಹಸಿರು ಪ್ರದೇಶ ಕಂಡರೆ ಎಂತವನರ ಮನಸು ತಣಿಯುವಂತದ್ದು. ಅದರಲ್ಲೂ ಅರಣ್ಯಕ್ಕೆ ಬಂದರೆ ಹೇಗಿರಬೇಡ. ಅಂತಹ ಅನುಭೂತಿಯನ್ನು ಅನುಭವಿಸಿದರು ಶ್ರೀ ಸಿದ್ದಲಿಂಗ ಸ್ವಾಮೀಜಿ.
(3 / 9)
ಮೈಸೂರು ಜಿಲ್ಲೆಯ ಪ್ರವಾಸದಲ್ಲಿದ್ದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಕಾಡು ನೋಡುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಅವರಿಗೆ ಸಫಾರಿ ವ್ಯವಸ್ಥೆಯನ್ನು ಮಾಡಲಾಯಿತು.
(4 / 9)
ಭಾರತದಲ್ಲೇ ಅತಿ ಹೆಚ್ಚು ಹುಲಿಗಳ ಪ್ರಮಾಣ ಹಾಗೂ ವನ್ಯಜೀವಿಗಳನ್ನು ಹೊಂದಿರುವ ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಅಂತರಸಂತೆ ಅರಣ್ಯ ವಲಯದಲ್ಲಿ ಸ್ವಾಮೀಜಿ ಅವರ ಸಫಾರಿ ಶುರುವಾಯಿತು.
(6 / 9)
ಕಾಡಿನಲ್ಲಿ ಸ್ವಲ್ಪವೇ ದೂರ ಹೋದರೆ ರಸ್ತೆಯಲ್ಲಿಯೇ ಭಾರೀ ಗಾತ್ರದ ಹುಲಿ ಮಲಗಿದೆ. ಇದನ್ನು ಕಂಡ ತಕ್ಷಣ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪುಳಕಿತರಾದರು. ಹತ್ತಿರದಿಂದ ಹುಲಿ ಕಂಡು ಅಬ್ಬಾ ಎಂದು ಉದ್ಘರಿಸಿದರು.
(8 / 9)
ಸಾಮಾನ್ಯವಾಗಿ ಕಾಡಿನಲ್ಲಿ ಹೊರಟವರಿಗೆ ಹುಲಿ ದರ್ಶನ ಕಡಿಮೆ. ಸಫಾರಿಯ ನೇತೃತ್ವವನ್ನು ವಹಿಸಿದ್ದ ಅಂತರಸಂತೆ ಆರ್‌ಎಫ್ ಒ ಸಿದ್ದರಾಜು ಅವರು ಸ್ವಾಮೀಜಿಗಳಿಗೆ ಹುಲಿ ದರ್ಶನ ಮಾಡಿಸುವಲ್ಲಿ ಯಶಸ್ವಿಯಾದರು.
ಇತರ ಗ್ಯಾಲರಿಗಳು