ಪ್ರೋಟೀನ್ ಪೌಡರ್‌ಗೆ ಅಂತ ಹಣದ ಜೊತೆಗೆ ಆರೋಗ್ಯ ಹಾಳು ಮಾಡ್ಕೊಬೇಡಿ, ಮನೇಲೆ ಸುಲಭವಾಗಿ ರೆಡಿ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರೋಟೀನ್ ಪೌಡರ್‌ಗೆ ಅಂತ ಹಣದ ಜೊತೆಗೆ ಆರೋಗ್ಯ ಹಾಳು ಮಾಡ್ಕೊಬೇಡಿ, ಮನೇಲೆ ಸುಲಭವಾಗಿ ರೆಡಿ ಮಾಡಿ

ಪ್ರೋಟೀನ್ ಪೌಡರ್‌ಗೆ ಅಂತ ಹಣದ ಜೊತೆಗೆ ಆರೋಗ್ಯ ಹಾಳು ಮಾಡ್ಕೊಬೇಡಿ, ಮನೇಲೆ ಸುಲಭವಾಗಿ ರೆಡಿ ಮಾಡಿ

ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರ್ಯಾಂಡ್‌ಗಳ ಪ್ರೋಟೀನ್ ಪೌಡರ್ ಲಭ್ಯ ಇವೆ. ಆದರೆ ಸ್ವಲ್ಪ ದುಬಾರಿ, ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಿಲ್ಲ. ಹಾಗಾಗಿ, ಪ್ರೋಟೀನ್ ಪೌಡರ್‌ಗೆ ಅಂತ ಹಣದ ಜೊತೆಗೆ ಆರೋಗ್ಯ ಹಾಳು ಮಾಡ್ಕೊಬೇಡಿ, ಮನೇಲೆ ಸುಲಭವಾಗಿ ರೆಡಿ ಮಾಡಿ. ಅದಕ್ಕೆ ಸಿಂಪಲ್ ರೆಸಿಪಿ ಇಲ್ಲಿದೆ. ನೀವೇ ಮಾಡಬಹುದು ನೋಡಿ.

ಎಲ್ಲವೂ ಬೇಗ ಆಗಬೇಕು ಎನ್ನುವಂತಹ ವೇಗದ ದುನಿಯಾದಲ್ಲಿ ಶರೀರಕ್ಕೆ ಅಗತ್ಯ ಪೌಷ್ಟಿಕಾಂಶ ಒದಗಿಸುವುದೇ ದೊಡ್ಡ ಸವಾಲು. ಇದಕ್ಕೆ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರ್ಯಾಂಡ್‌ಗಳ ಪ್ರೋಟೀನ್ ಪೌಡರ್‌ಗಳು ಲಭ್ಯ ಇವೆ. ಆದರೆ ಮನೆಯಲ್ಲೇ ಇದನ್ನು ತಯಾರಿಸಿ ಉಪಯೋಗಿಸಿದರೆ ಜೇಬಿಗಷ್ಟೇ ಅಲ್ಲ ಆರೋಗ್ಯಕ್ಕೂ ಕ್ಷೇಮ. ನಿಮಗೆ ಬೇಕಾದಂತೆ ನಿಮ್ಮ ಜೀವನಶೈಲಿಗೆ ಅನುಗುಣವಾದ ಸುವಾಸನೆಯುಕ್ತ ಪೌಷ್ಟಿಕಾಂಶದ ಪುಡಿ (ಪ್ರೋಟೀನ್‌ ಪೌಡರ್) ನೀವೇ ತಯಾರಿಸಿ. ಇಲ್ಲಿದೆ ಸುಲಭ ರೆಸಿಪಿ.
icon

(1 / 8)

ಬೇಕಾಗುವ ಸಾಮಗ್ರಿಗಳು: 1 ಕಪ್ ಬಾದಾಮಿ, 2 ಟೀಸ್ಪೂನ್ ಚಿಯಾ ಸೀಡ್ಸ್‌, ½ ಕಪ್ ವಾಲ್ನಟ್, ½ ಕಪ್ ಓಟ್ಸ್, 2 ಟೀಸ್ಪೂನ್ ಕುಂಬಳಕಾಯಿ ಬೀಜ ಮತ್ತು ಕರಬೂಜದ ಬೀಜ, ½ ಕಪ್ ಹಾಲಿನ ಪುಡಿ 2 ಟೀಸ್ಪೂನ್ ಸೂರ್ಯಕಾಂತಿ ಬೀಜ. 
icon

(2 / 8)

ಬಾದಾಮಿಯನ್ನು ಬಾಣಲೆಯಲ್ಲಿ ಹಾಕಿ ಅದರ ಪರಿಮಳ ಹೊರಸೂಸುವ ತನಕ ಹುರಿಯಬೇಕು.
icon

(3 / 8)

ಬಾದಾಮಿಯನ್ನು ಬಾಣಲೆಯಲ್ಲಿ ಹಾಕಿ ಅದರ ಪರಿಮಳ ಹೊರಸೂಸುವ ತನಕ ಹುರಿಯಬೇಕು.

ಅದೇ ಪ್ಯಾನ್‌ನಲ್ಲಿ ಸೂರ್ಯಕಾಂತಿ, ಕುಂಬಳಕಾಯಿ ಮತ್ತು ಕರಬೂಜದ ಬೀಜಗಳನ್ನು ಹುರಿಯಿರಿ
icon

(4 / 8)

ಅದಾಗಿ, ಓಟ್ಸ್ ಮತ್ತು ಚಿಯಾ ಬೀಜಗಳನ್ನು ಹುರಿಯಬೇಕು. ಎಲ್ಲವನ್ನೂ ತಣಿಯಲು ಬಿಡಿ. ಎಲ್ಲವೂ ತಣ್ಣಗಾದ ನಂತರ, ಬ್ಲೆಂಡರ್‌ಗೆ ಹಾಕಿ.
icon

(5 / 8)

ಅದಾಗಿ, ಓಟ್ಸ್ ಮತ್ತು ಚಿಯಾ ಬೀಜಗಳನ್ನು ಹುರಿಯಬೇಕು. ಎಲ್ಲವನ್ನೂ ತಣಿಯಲು ಬಿಡಿ. ಎಲ್ಲವೂ ತಣ್ಣಗಾದ ನಂತರ, ಬ್ಲೆಂಡರ್‌ಗೆ ಹಾಕಿ.(ಸಾಂಕೇತಿಕ ಚಿತ್ರ- Pexels)

ಹಾಲಿನ ಪುಡಿ, ಗೋಡಂಬಿ, ಪಿಸ್ತಾ ಮತ್ತು ಉಳಿದ ಪದಾರ್ಥಗಳನ್ನು ಗ್ರೈಂಡರ್‌ಗೆ ಸೇರಿಸಿ. ಒಂದು ಜರಡಿ ಮೂಲಕ ಪುಡಿಯನ್ನು ಜಾಳಿಸಿ. 
icon

(6 / 8)

ಈಗ ಪೌಷ್ಟಿಕಾಂಶದ ಪುಡಿ (ಪ್ರೋಟೀನ್ ಪೌಡರ್) ಸಿದ್ಧವಾಗಿದೆ. ನಂತರ ಪಾನೀಯವನ್ನು ತಯಾರಿಸುವಾಗ, ಒಂದು ಕಪ್ ಬಿಸಿ ಅಥವಾ ತಣ್ಣಗಿನ ಹಾಲು ಮತ್ತು ಒಂದು ಚಮಚ ಪ್ರೋಟೀನ್ ಪುಡಿಯನ್ನು ಮಿಕ್ಸ್ ಮಾಡಿ ಕುಡಿಯ ಬಹುದು. ಇತರರಿಗೂ ಕುಡಿಯಲು ಕೊಡಬಹುದು.
icon

(7 / 8)

ಮನೆಯಲ್ಲೇ ಪ್ರೋಟೀನ್ ಪೌಡರ್ ಮಾಡುವುದರ ಲಾಭ ಏನಪ್ಪಾ ಅಂದ್ರೆ, ರೆಡಿಮೇಡ್ ಸಿಗುವ ಪೌಡರ್‌ನಲ್ಲಿ ಸಕ್ಕರೆ ಮತ್ತು ಕೃತಕ ಪದಾರ್ಥಗಳನ್ನು ಸೇರಿಸಲಾಗಿರುತ್ತದೆ. ಮನೆಯಲ್ಲಿ ಮಾಡುವಾಗ ಅದನ್ನು ಸೇರಿಸುವುದಿಲ್ಲ. ಹೀಗಾಗಿ ಇದು ಆರೋಗ್ಯಕ್ಕೆ ಉತ್ತಮ. 
icon

(8 / 8)

ಮನೆಯಲ್ಲೇ ಪ್ರೋಟೀನ್ ಪೌಡರ್ ಮಾಡುವುದರ ಲಾಭ ಏನಪ್ಪಾ ಅಂದ್ರೆ, ರೆಡಿಮೇಡ್ ಸಿಗುವ ಪೌಡರ್‌ನಲ್ಲಿ ಸಕ್ಕರೆ ಮತ್ತು ಕೃತಕ ಪದಾರ್ಥಗಳನ್ನು ಸೇರಿಸಲಾಗಿರುತ್ತದೆ. ಮನೆಯಲ್ಲಿ ಮಾಡುವಾಗ ಅದನ್ನು ಸೇರಿಸುವುದಿಲ್ಲ. ಹೀಗಾಗಿ ಇದು ಆರೋಗ್ಯಕ್ಕೆ ಉತ್ತಮ. (ಸಾಂಕೇತಿಕ ಚಿತ್ರ- Pexels)

ಇತರ ಗ್ಯಾಲರಿಗಳು