ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ರೆಡಿ, ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರನ್ನು ಬರಮಾಡಿದೆವು, ಮತ್ತೆ ನೀವು ಅಂತಿದೆ ಸಕ್ಕರೆ ನಾಡು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ರೆಡಿ, ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರನ್ನು ಬರಮಾಡಿದೆವು, ಮತ್ತೆ ನೀವು ಅಂತಿದೆ ಸಕ್ಕರೆ ನಾಡು

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ರೆಡಿ, ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರನ್ನು ಬರಮಾಡಿದೆವು, ಮತ್ತೆ ನೀವು ಅಂತಿದೆ ಸಕ್ಕರೆ ನಾಡು

Kannada Sahitya Sammelana: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಇನ್ನು ಕೆಲವೇ ಗಂಟೆಗಳು ಬಾಕಿ. ಗುರುವಾರ (ಡಿಸೆಂಬರ್ 19) ಮಂಡ್ಯ ತಲುಪಿದ ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡದ್ದಾಗಿದೆ. ಮತ್ತೆ ನೀವು ಯಾವಾಗ ಅಂತಿದೆ ಸಕ್ಕರೆ ನಾಡು, ಇಲ್ಲಿವೆ ಆಕರ್ಷಕ ಫೋಟೋಸ್‌.

Kannada Sahitya Sammelana: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೆಲವೇ ಗಂಟೆ ಬಾಕಿದ್ದು, ಮಂಡ್ಯದೆಲ್ಲಡೆ ಈಗಾಗಲೇ ಹಬ್ಬದ ವಾತಾವರಣ ಮೂಡಿದೆ. ಈ ನಡುವೆ ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರು ಮಂಡ್ಯಕ್ಕೆ ಗುರುವಾರ (ಡಿಸೆಂಬರ್ 19) ಸಂಜೆಯೇ ತಲುಪಿದ್ದು, ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ.
icon

(1 / 9)

Kannada Sahitya Sammelana: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೆಲವೇ ಗಂಟೆ ಬಾಕಿದ್ದು, ಮಂಡ್ಯದೆಲ್ಲಡೆ ಈಗಾಗಲೇ ಹಬ್ಬದ ವಾತಾವರಣ ಮೂಡಿದೆ. ಈ ನಡುವೆ ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರು ಮಂಡ್ಯಕ್ಕೆ ಗುರುವಾರ (ಡಿಸೆಂಬರ್ 19) ಸಂಜೆಯೇ ತಲುಪಿದ್ದು, ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ.(ABKSSmandya2024)

ಮಂಡ್ಯದಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ ಅವರು ಗುರುವಾರ ಸಂಜೆ ಮಂಡ್ಯಕ್ಕೆ ಆಗಮಿಸಿದರು. ಅವರನ್ನು ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಆತ್ಮೀಯವಾಗಿ ಬರ ಮಾಡಿಕೊಂಡರು.
icon

(2 / 9)

ಮಂಡ್ಯದಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ ಅವರು ಗುರುವಾರ ಸಂಜೆ ಮಂಡ್ಯಕ್ಕೆ ಆಗಮಿಸಿದರು. ಅವರನ್ನು ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಆತ್ಮೀಯವಾಗಿ ಬರ ಮಾಡಿಕೊಂಡರು.(ABKSSmandya2024)

ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸ್ಕೌಟ್ ಮತ್ತು ಗೈಡ್ಸ್‌ ತಂಡ ಕೂಡ ಸ್ವಾಗತಿಸಿತು. ಈ ವೇಳೆ ಜಾನಪದ ಕಲಾತಂಡಗಳು, ಗಾರುಡಿ ಗೊಂಬೆಗಳು ಮೆರವಣಿಗೆ ಮೂಲಕ ಸಾಗಿ ಆಕರ್ಷಣೆ ಹೆಚ್ಚಿಸಿದವು.
icon

(3 / 9)

ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸ್ಕೌಟ್ ಮತ್ತು ಗೈಡ್ಸ್‌ ತಂಡ ಕೂಡ ಸ್ವಾಗತಿಸಿತು. ಈ ವೇಳೆ ಜಾನಪದ ಕಲಾತಂಡಗಳು, ಗಾರುಡಿ ಗೊಂಬೆಗಳು ಮೆರವಣಿಗೆ ಮೂಲಕ ಸಾಗಿ ಆಕರ್ಷಣೆ ಹೆಚ್ಚಿಸಿದವು.(ABKSSmandya2024)

ಮಂಡ್ಯದಲ್ಲಿ ಸಮ್ಮೇಳನ ವಸತಿಗೆ ಆಗಮಿಸಿದ ಸರ್ವಾಧ್ಯಕ್ಷ ಗೊ ರು ಚನ್ನಬಸಪ್ಪ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮತ್ತು ಇತರರು ಜತೆಗಿದ್ದರು. 
icon

(4 / 9)

ಮಂಡ್ಯದಲ್ಲಿ ಸಮ್ಮೇಳನ ವಸತಿಗೆ ಆಗಮಿಸಿದ ಸರ್ವಾಧ್ಯಕ್ಷ ಗೊ ರು ಚನ್ನಬಸಪ್ಪ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮತ್ತು ಇತರರು ಜತೆಗಿದ್ದರು. (ABKSSmandya2024)

ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡುತ್ತ, ಮಂಡ್ಯದಲ್ಲಿ ಕನ್ನಡ ಭಾಷೆ ಅನ್ಯ ಭಾಷೆಯ ಪ್ರಭಾವಕ್ಕೆ ಒಳಗಾಗಿಲ್ಲ. ಇದು ಕನ್ನಡದ ತವರು. ಈ ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಖುಷಿ ತಂದಿದೆ. ಆದರೆ ಕನ್ನಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಬಗ್ಗೆ ಚಿಂತನೆ ಆಗಬೇಕು. ಆಧುನಿಕತೆಯ ಪ್ರಭಾವ ಕನ್ನಡದ ಮೇಲಿನ ಅಭಿಮಾನ ಕಡಿಮೆಯಾಗಲು ಕಾರಣ ಎಂದು ಅವರು ಅಭಿಪ್ರಾಯ ಪಟ್ಟರು.
icon

(5 / 9)

ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡುತ್ತ, ಮಂಡ್ಯದಲ್ಲಿ ಕನ್ನಡ ಭಾಷೆ ಅನ್ಯ ಭಾಷೆಯ ಪ್ರಭಾವಕ್ಕೆ ಒಳಗಾಗಿಲ್ಲ. ಇದು ಕನ್ನಡದ ತವರು. ಈ ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಖುಷಿ ತಂದಿದೆ. ಆದರೆ ಕನ್ನಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಬಗ್ಗೆ ಚಿಂತನೆ ಆಗಬೇಕು. ಆಧುನಿಕತೆಯ ಪ್ರಭಾವ ಕನ್ನಡದ ಮೇಲಿನ ಅಭಿಮಾನ ಕಡಿಮೆಯಾಗಲು ಕಾರಣ ಎಂದು ಅವರು ಅಭಿಪ್ರಾಯ ಪಟ್ಟರು.(ABKSSmandya2024)

ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸಿಂಗರಿಸಲ್ಪಟ್ಟ ಮಂಡ್ಯ ನಗರ ರಾತ್ರಿ ಲೈಟಿಂಗ್‌ನಲ್ಲಿ ಪ್ರಕಾಶಮಾನವಾಗಿ ಬೆಳಗಿ ಕಣ್ಮನ ಸೆಳೆಯುತ್ತಿದೆ.
icon

(6 / 9)

ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸಿಂಗರಿಸಲ್ಪಟ್ಟ ಮಂಡ್ಯ ನಗರ ರಾತ್ರಿ ಲೈಟಿಂಗ್‌ನಲ್ಲಿ ಪ್ರಕಾಶಮಾನವಾಗಿ ಬೆಳಗಿ ಕಣ್ಮನ ಸೆಳೆಯುತ್ತಿದೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಕನ್ನಡ ಕಂಪು ಮಾತ್ರವಲ್ಲ ಸ್ಥಳೀಯ ಸಂಸ್ಕೃತಿಯ ಪರಿಚಯವೂ ಆಗಲಿದೆ. ಎತ್ತಿನ ಗಾಡಿ ಸವಾರಿ ಅನುಭವವನ್ನೂ ಪಡೆಯಬಹುದು. ಸಚಿವ ಚಲುವರಾಯ ಸ್ವಾಮಿ ಅವರು ತಯಾರಿ ಗಮನಿಸಿದರು.
icon

(7 / 9)

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಕನ್ನಡ ಕಂಪು ಮಾತ್ರವಲ್ಲ ಸ್ಥಳೀಯ ಸಂಸ್ಕೃತಿಯ ಪರಿಚಯವೂ ಆಗಲಿದೆ. ಎತ್ತಿನ ಗಾಡಿ ಸವಾರಿ ಅನುಭವವನ್ನೂ ಪಡೆಯಬಹುದು. ಸಚಿವ ಚಲುವರಾಯ ಸ್ವಾಮಿ ಅವರು ತಯಾರಿ ಗಮನಿಸಿದರು.(ABKSSmandya2024)

ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳದಲ್ಲಿ ದೀಪಾಲಂಕಾರದೊಂದಿಗೆ ಕನ್ನಡದ ನಕ್ಷೆ ಮತ್ತು ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಪಟಗಳು ಗಮನಸೆಳೆದವು.
icon

(8 / 9)

ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳದಲ್ಲಿ ದೀಪಾಲಂಕಾರದೊಂದಿಗೆ ಕನ್ನಡದ ನಕ್ಷೆ ಮತ್ತು ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಪಟಗಳು ಗಮನಸೆಳೆದವು.(ABKSSmandya2024)

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಯಂ ಸೇವಕರಿಗೆ ಅಂತಿಮ ಹಂತದ ಸೂಚನೆಗಳನ್ನು ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ನೀಡಿದರು.
icon

(9 / 9)

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಯಂ ಸೇವಕರಿಗೆ ಅಂತಿಮ ಹಂತದ ಸೂಚನೆಗಳನ್ನು ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ನೀಡಿದರು.(ABKSSmandya2024)


ಇತರ ಗ್ಯಾಲರಿಗಳು