Chanakya Niti: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ, ಇಲ್ಲದಿದ್ದರೆ ಎಂದಿಗೂ ಗೌರವ ಸಿಗುವುದಿಲ್ಲ ನೆನಪಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ, ಇಲ್ಲದಿದ್ದರೆ ಎಂದಿಗೂ ಗೌರವ ಸಿಗುವುದಿಲ್ಲ ನೆನಪಿರಲಿ

Chanakya Niti: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ, ಇಲ್ಲದಿದ್ದರೆ ಎಂದಿಗೂ ಗೌರವ ಸಿಗುವುದಿಲ್ಲ ನೆನಪಿರಲಿ

ಚಾಣಕ್ಯರ ನೀತಿಗಳು ಪ್ರತಿಯೊಬ್ಬರ ಬದುಕಿಗೂ ಪಾಠವಾಗುವಂತಿವೆ. ಅವರು ತೋರಿದ ಹಾದಿಯಲ್ಲಿ ನಡೆದರೆ ಖಂಡಿತ ಸೋಲು ಬಾಧಿಸುವುದಿಲ್ಲ. ಚಾಣಕ್ಯರ ಪ್ರಕಾರ ನಾವು ಈ ಕೆಲವು ಅಭ್ಯಾಸಗಳನ್ನು ಹೊಂದಿರಲೇಬಾರದು. ಇದರಿಂದ ನಮಗೆ ಎಲ್ಲಿಯೂ ಗೌರವ ಸಿಗಲು ಸಾಧ್ಯವಿಲ್ಲ. ಅಂತಹ ಅಭ್ಯಾಸಗಳು ಯಾವುವು ನೋಡಿ.

ಚಾಣಾಕ್ಯ ನೀತಿ
ಚಾಣಾಕ್ಯ ನೀತಿ

ಆಚಾರ್ಯ ಚಾಣಕ್ಯರನ್ನು ಆ ಕಾಲದ ಮಹಾನ್‌ ಬುದ್ಧಿವಂತ ಮತ್ತು ವಿದ್ವಾಂಸ ಎಂದು ಕರೆಯಲಾಗುತ್ತದೆ. ಅವರು ಬದುಕಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ತಮ್ಮ ಚಾಣಕ್ಯ ನೀತಿ ಪುಸ್ತಕದಲ್ಲಿ ಬರೆದಿದ್ದಾರೆ. ಇವರು ತೋರಿದ ಮಾರ್ಗದಲ್ಲಿ ಸಾಗಿದರೆ ಯಶಸ್ಸು ನಮ್ಮದಾಗುವುದು ಖಂಡಿತ. ಸಮೃದ್ಧ ಮತ್ತು ಸಂತೋಷದ ಜೀವನವನ್ನು ನಡೆಸಲು ಚಾಣಕ್ಯರ ನೀತಿಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ.

ಅಂತೆಯೇ ಚಾಣಕ್ಯರು ಹೇಳಿದ ಕೆಲವು ಮಾತುಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಬದುಕಿನಲ್ಲಿ ಸೋಲಾಗುವುದು ಖಚಿತ. ಚಾಣಕ್ಯರ ಮಾತುಗಳನ್ನು ಕಡೆಗಣಿಸಿದರೆ ಪರಿಸ್ಥಿತಿ ಪ್ರತಿಕೂಲವಾಗಬಹುದು. ಚಾಣಕ್ಯರ ಪ್ರಕಾರ ನಾವು ಈ ಕೆಲವು ಅಭ್ಯಾಸಗಳನ್ನು ಹೊಂದಿರಬಾರದು. ಇದರಿಂದ ನಮಗೆ ಎಂದೆಂದಿಗೂ ಗೌರವ ಸಿಗಲು ಸಾಧ್ಯವಿಲ್ಲ. ನಿಮ್ಮಲ್ಲೂ ಈ ಅಭ್ಯಾಸಗಳಿದ್ದರೆ ಇಂದೇ ಬದಲಾಗಿ.

ಸುಳ್ಳು ಹೇಳುವ ಅಭ್ಯಾಸ

ಚಾಣಕ್ಯ ನೀತಿಯ ಪ್ರಕಾರ ನಾವು ಎಂದಿಗೂ ಸುಳ್ಳು ಹೇಳಬಾರದು. ಸುಳ್ಳಿನ ಮೇಲೆ ಕೋಟೆ ಕಟ್ಟಿ ಬದುಕುವ ಜನರಿಗೆ ಎಂದಿಗೂ ಗೌರವ ಸಿಗುವುದಿಲ್ಲ. ಒಮ್ಮೆ ಅವರು ಹೇಳುವುದು ಸುಳ್ಳು ಎಂದು ತಿಳಿದರೆ ಯಾರೂ ಅಂಥವರಿಗೆ ಗೌರವ ನೀಡುವುದಿಲ್ಲ. ಎಲ್ಲಾ ಕೆಲಸಗಳನ್ನು ಸುಳ್ಳು ಹೇಳಿ ಸಾಧಿಸಿಕೊಳ್ಳುವ ವ್ಯಕ್ತಿಗಳಿಗೆ ಯಾರೂ ಬೆಲೆ ಕೊಡುವುದಿಲ್ಲ. ಅಂಥವರನ್ನು ಜನರು ದ್ವೇಷಿಸಲು ಆರಂಭ ಮಾಡುತ್ತಾರೆ. ಇಂಥವರು ಒಮ್ಮೆ ಗೌರವ ಕಳೆದುಕೊಂಡರೆ ಮತ್ತೆ ಎಂದಿಗೂ ಗೌರವ ಸಂಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಸುಳ್ಳು ಹೇಳುವ ಅಭ್ಯಾಸ ಎಂದಿಗೂ ಸಲ್ಲ ಎಂದು ಚಾಣಕ್ಯ ಹೇಳುತ್ತಾರೆ.

ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವ ಅಭ್ಯಾಸ

ಚಾಣಕ್ಯ ನೀತಿಯ ಪ್ರಕಾರ, ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವ ಹಾಗೂ ಬೇರೆಯವರ ಬಗ್ಗೆ ಹೇಳಿದ್ದನ್ನು ಕೇಳಿಸಿಕೊಂಡು ಖುಷಿಪಡುವ ವ್ಯಕ್ತಿ ನೀವಾಗಿದ್ದರೆ ಖಂಡಿತ ನೀವು ಈ ಅಭ್ಯಾಸವನ್ನು ಬದಲಿಸಿಕೊಳ್ಳಬೇಕು. ಬೇರೆಯವರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವ ಅಥವಾ ಹಿಂದಿನಿಂದ ಮಾತನಾಡುವ ಜನರಿಗೆ ಎಂದಿಗೂ ಗೌರವ ಸಿಗುವುದಿಲ್ಲ. ಅಂತಹ ಜನರ ಬುದ್ಧಿ ಒಮ್ಮೆ ತಿಳಿದರೆ ಅವರಿಂದ ದೂರಾಗಲು ಬಯಸುತ್ತಾರೆ. ಅಲ್ಲದೇ ನಿಮ್ಮದು ಇಂತಹ ಬುದ್ಧಿ ಎಂದು ತಿಳಿದರೆ ಜನರು ನಿಮ್ಮನ್ನು ದ್ವೇಷಿಸಲು ಶುರು ಮಾಡುತ್ತಾರೆ.

ಉತ್ಪ್ರೇಕ್ಷೆ ಮಾಡುವುದು

ಉತ್ಪ್ರೇಕ್ಷೆ ಮಾಡುವುದು ಎಂದರೆ ತಮ್ಮನ್ನು ತಾವು ಹೊಗಳಿಕೊಳ್ಳುವುದು. ‌‌‌ನಾನೇ ಪರಮಾತ್ಮ, ನಾನೇ ಮಹಾತ್ಮ ಎಂದು ಕೊಚ್ಚಿಕೊಳ್ಳುವುದು. ಅಂತಹ ಜನರು ತಾವೇ ಶ್ರೇಷ್ಠ ಎಂದು ತಿಳಿದು ಅಹಂಕಾರದಲ್ಲಿ ಮೆರೆಯುತ್ತಾರೆ. ಆದರೆ ಒಮ್ಮೆ ಅವರ ಬುದ್ಧಿ ತಿಳಿದರೆ ಖಂಡಿತ ಯಾರೂ ಅವರ ಸಹವಾಸಕ್ಕೆ ಹೋಗುವುದಿಲ್ಲ, ಮಾತ್ರವಲ್ಲ ಅಂತಹವರು ನಗೆಪಾಟಲಿಗೆ ಗುರಿಯಾಗುತ್ತಾರೆ. ಅಂತಹ ವ್ಯಕ್ತಿಗಳಿಗೆ ಸಮಾಜದಲ್ಲಿ ಎಂದಿಗೂ ಬೆಲೆ ಸಿಗುವುದಿಲ್ಲ. ಹಾಗಾಗಿ ಉತ್ಪ್ರೇಕ್ಷೆಯ ಗುಣಗಳಿಂದಲೂ ನಾವು ದೂರವಿರಬೇಕು.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

Whats_app_banner