ವಿರಾಟ್ ಭಾರತಕ್ಕೆ ಬಂದೇ ಇಲ್ಲ, ಕೌಟುಂಬಿಕ ತುರ್ತು ಸ್ಥಿತಿ ಇರಲಿಲ್ಲ; ಮೊದಲ ಟೆಸ್ಟ್ ಆಡಲಿದ್ದಾರೆ ಕೊಹ್ಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರಾಟ್ ಭಾರತಕ್ಕೆ ಬಂದೇ ಇಲ್ಲ, ಕೌಟುಂಬಿಕ ತುರ್ತು ಸ್ಥಿತಿ ಇರಲಿಲ್ಲ; ಮೊದಲ ಟೆಸ್ಟ್ ಆಡಲಿದ್ದಾರೆ ಕೊಹ್ಲಿ

ವಿರಾಟ್ ಭಾರತಕ್ಕೆ ಬಂದೇ ಇಲ್ಲ, ಕೌಟುಂಬಿಕ ತುರ್ತು ಸ್ಥಿತಿ ಇರಲಿಲ್ಲ; ಮೊದಲ ಟೆಸ್ಟ್ ಆಡಲಿದ್ದಾರೆ ಕೊಹ್ಲಿ

  • ದಕ್ಷಿಣ ಆಫ್ರಿಕಾ ತಲುಪಿದ ಬಳಿಕ ವಿರಾಟ್ ಮತ್ತೆ ಲಂಡನ್‌ಗೆ ಹಾರಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಅವರು ಮುಂಚೆಯೇ ತಿಳಿಸಿದ್ದರು. ಅದಕ್ಕೆ ಮಂಡಳಿಯೂ ಅನುಮತಿ ನೀಡಿತ್ತು. ಅದಕ್ಕಾಗಿಯೇ ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಆಡಿಲ್ಲ. ಸದ್ಯ ಮತ್ತೆ ಅವರು ಟೆಸ್ಟ್‌ ತಂಡ ಸೇರಿಕೊಂಡಿದ್ದು, ಸರಣಿಯಲ್ಲಿ ಆಡಲಿದ್ದಾರೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ, ವಿರಾಟ್ ಕೊಹ್ಲಿ ಕೌಟುಂಬಿಕ ತುರ್ತುಸ್ಥಿತಿಯಿಂದಾಗಿ ಮನೆಗೆ ಮರಳಿದ್ದಾರೆ ಎಂದು ವರದಿಯಾಗಿತ್ತು. ಅಭ್ಯಾಸ ಪಂದ್ಯವನ್ನೂ ಬಿಟ್ಟು ಕೊಹ್ಲಿ ತವರಿಗೆ ವಾಪಾಸಾಗಿದ್ದ ಕುರಿತು ಕ್ರಿಕ್‌ಬಜ್‌ ವರದಿ ಮಾಡಿತ್ತು. ಈ ನಡುವೆ ಸದ್ಯ ಅವರು ಭಾನುವಾರ ಭಾರತ ತಂಡವನ್ನು ಸೇರಿಕೊಂಡಿದ್ದು, ಅಭ್ಯಾಸ ಅವಧಿಯಲ್ಲಿ ಕಾಣಿಸಿಕೊಂಡಿದ್ದಾರೆ.
icon

(1 / 6)

ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ, ವಿರಾಟ್ ಕೊಹ್ಲಿ ಕೌಟುಂಬಿಕ ತುರ್ತುಸ್ಥಿತಿಯಿಂದಾಗಿ ಮನೆಗೆ ಮರಳಿದ್ದಾರೆ ಎಂದು ವರದಿಯಾಗಿತ್ತು. ಅಭ್ಯಾಸ ಪಂದ್ಯವನ್ನೂ ಬಿಟ್ಟು ಕೊಹ್ಲಿ ತವರಿಗೆ ವಾಪಾಸಾಗಿದ್ದ ಕುರಿತು ಕ್ರಿಕ್‌ಬಜ್‌ ವರದಿ ಮಾಡಿತ್ತು. ಈ ನಡುವೆ ಸದ್ಯ ಅವರು ಭಾನುವಾರ ಭಾರತ ತಂಡವನ್ನು ಸೇರಿಕೊಂಡಿದ್ದು, ಅಭ್ಯಾಸ ಅವಧಿಯಲ್ಲಿ ಕಾಣಿಸಿಕೊಂಡಿದ್ದಾರೆ.(PTI)

ಸದ್ಯ ಹೊಸ ವರದಿಯ ಪ್ರಕಾರ, ಕೊಹ್ಲಿ ನಿಜವಾಗಿಯೂ ವಿರಾಮ ತೆಗೆದುಕೊಂಡು ಭಾರತಕ್ಕೆ ಮರಲಿರಲಿಲ್ಲ, ಅವರು ಲಂಡನ್‌ಗೆ ಪ್ರಯಾಣಿಸಿದ್ದರು ಎಂದು ವರದಿ ಹೇಳಿದೆ. ನ್ಯೂಸ್ 18 ಪ್ರಕಾರ, ಬಿಸಿಸಿಐ ಮತ್ತು ಭಾರತೀಯ ತಂಡದ ಮ್ಯಾನೇಜ್‌ಮೆಂಟ್‌ಗೆ, ಲಂಡನ್‌ ಪ್ರವಾಸ ಕುರಿತು ಕೊಹ್ಲಿ ಹೇಳಿದ್ದರು.
icon

(2 / 6)

ಸದ್ಯ ಹೊಸ ವರದಿಯ ಪ್ರಕಾರ, ಕೊಹ್ಲಿ ನಿಜವಾಗಿಯೂ ವಿರಾಮ ತೆಗೆದುಕೊಂಡು ಭಾರತಕ್ಕೆ ಮರಲಿರಲಿಲ್ಲ, ಅವರು ಲಂಡನ್‌ಗೆ ಪ್ರಯಾಣಿಸಿದ್ದರು ಎಂದು ವರದಿ ಹೇಳಿದೆ. ನ್ಯೂಸ್ 18 ಪ್ರಕಾರ, ಬಿಸಿಸಿಐ ಮತ್ತು ಭಾರತೀಯ ತಂಡದ ಮ್ಯಾನೇಜ್‌ಮೆಂಟ್‌ಗೆ, ಲಂಡನ್‌ ಪ್ರವಾಸ ಕುರಿತು ಕೊಹ್ಲಿ ಹೇಳಿದ್ದರು.(PTI)

ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್ 18ಗೆ ಹೇಳಿಕೆ ನೀಡಿದ್ದಾರೆ. “ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯ ಆಡುವುದಿಲ್ಲ ಎಂಬುದು ಸರಿಯಾಗಿದೆ. ತಂಡದ ಮ್ಯಾನೇಜ್‌ಮೆಂಟ್‌ಗೆ ಅವರ ಯೋಜನೆಗಳು ಮತ್ತು ವೇಳಾಪಟ್ಟಿಯ ಬಗ್ಗೆ ಮೊದಲೇ ತಿಳಿದಿತ್ತು. ಅವರು ರಾತ್ರೋರಾತ್ರಿ ಅಥವಾ ಕುಟುಂಬದ ತುರ್ತುಸ್ಥಿತಿಯಿಂದಾಗಿ ತವರಿಗೆ ಮರಳಿದ ಯಾವುದೇ ನಿದರ್ಶನಗಳಿಲ್ಲ. ಆಟಗಾರ ವಿರಾಟ್ ಕೊಹ್ಲಿ. ಅವರು ಎಲ್ಲವನ್ನೂ ಬಹಳ ಯೋಜಿತ ರೀತಿಯಲ್ಲಿ ಮಾಡುತ್ತಾರೆ. ಅವರ ಲಂಡನ್ ಪ್ರವಾಸವನ್ನು ಬಹಳ ಮುಂಚಿತವಾಗಿ ತಿಳಿಸಿದ್ದರು. ಅದರಂತೆ ಎಲ್ಲವನ್ನೂ ಯೋಜಿಸಲಾಗಿತ್ತು," ಎಂದು ತಿಳಿಸಿದ್ದಾರೆ.
icon

(3 / 6)

ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್ 18ಗೆ ಹೇಳಿಕೆ ನೀಡಿದ್ದಾರೆ. “ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯ ಆಡುವುದಿಲ್ಲ ಎಂಬುದು ಸರಿಯಾಗಿದೆ. ತಂಡದ ಮ್ಯಾನೇಜ್‌ಮೆಂಟ್‌ಗೆ ಅವರ ಯೋಜನೆಗಳು ಮತ್ತು ವೇಳಾಪಟ್ಟಿಯ ಬಗ್ಗೆ ಮೊದಲೇ ತಿಳಿದಿತ್ತು. ಅವರು ರಾತ್ರೋರಾತ್ರಿ ಅಥವಾ ಕುಟುಂಬದ ತುರ್ತುಸ್ಥಿತಿಯಿಂದಾಗಿ ತವರಿಗೆ ಮರಳಿದ ಯಾವುದೇ ನಿದರ್ಶನಗಳಿಲ್ಲ. ಆಟಗಾರ ವಿರಾಟ್ ಕೊಹ್ಲಿ. ಅವರು ಎಲ್ಲವನ್ನೂ ಬಹಳ ಯೋಜಿತ ರೀತಿಯಲ್ಲಿ ಮಾಡುತ್ತಾರೆ. ಅವರ ಲಂಡನ್ ಪ್ರವಾಸವನ್ನು ಬಹಳ ಮುಂಚಿತವಾಗಿ ತಿಳಿಸಿದ್ದರು. ಅದರಂತೆ ಎಲ್ಲವನ್ನೂ ಯೋಜಿಸಲಾಗಿತ್ತು," ಎಂದು ತಿಳಿಸಿದ್ದಾರೆ.(PTI)

ಡಿಸೆಂಬರ್ 15ರಂದು ಕೊಹ್ಲಿ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲಿಂದ ಡಿಸೆಂಬರ್ 19ರಂದು ಲಂಡನ್‌ಗೆ ಹಾರುವ ಮೊದಲು ಅವರು 3-4 ದಿನಗಳ ಕಾಲ ತರಬೇತಿ ಅವಧಿಗಳಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಲಂಡನ್‌ನಲ್ಲಿದ್ದ ಅವರು ಇದೀಗ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ.
icon

(4 / 6)

ಡಿಸೆಂಬರ್ 15ರಂದು ಕೊಹ್ಲಿ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲಿಂದ ಡಿಸೆಂಬರ್ 19ರಂದು ಲಂಡನ್‌ಗೆ ಹಾರುವ ಮೊದಲು ಅವರು 3-4 ದಿನಗಳ ಕಾಲ ತರಬೇತಿ ಅವಧಿಗಳಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಲಂಡನ್‌ನಲ್ಲಿದ್ದ ಅವರು ಇದೀಗ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ.(PTI)

ಕೊಹ್ಲಿ ಭಾನುವಾರ ದಕ್ಷಿಣ ಆಫ್ರಿಕಾದಲ್ಲಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಅಲ್ಲದೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಭಾರತ ಭಾನುವಾರ ಸುದೀರ್ಘ ತರಬೇತಿ ಅವಧಿಯಲ್ಲಿ ಪಾಲ್ಗೊಂಡಿದೆ.
icon

(5 / 6)

ಕೊಹ್ಲಿ ಭಾನುವಾರ ದಕ್ಷಿಣ ಆಫ್ರಿಕಾದಲ್ಲಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಅಲ್ಲದೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಭಾರತ ಭಾನುವಾರ ಸುದೀರ್ಘ ತರಬೇತಿ ಅವಧಿಯಲ್ಲಿ ಪಾಲ್ಗೊಂಡಿದೆ.(PTI)

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಜನವರಿ 3ರಂದು ನ್ಯೂಲ್ಯಾಂಡ್ಸ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆಡಲಿದೆ. ಅದಕ್ಕೂ ಮೊದಲು ಅವರು ಡಿಸೆಂಬರ್ 31ರಿಂದ ಕೇಪ್ ಟೌನ್‌ನಲ್ಲಿ ತರಬೇತಿ ಶಿಬಿರ ಪ್ರಾರಂಭಿಸುತ್ತಾರೆ.
icon

(6 / 6)

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಜನವರಿ 3ರಂದು ನ್ಯೂಲ್ಯಾಂಡ್ಸ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆಡಲಿದೆ. ಅದಕ್ಕೂ ಮೊದಲು ಅವರು ಡಿಸೆಂಬರ್ 31ರಿಂದ ಕೇಪ್ ಟೌನ್‌ನಲ್ಲಿ ತರಬೇತಿ ಶಿಬಿರ ಪ್ರಾರಂಭಿಸುತ್ತಾರೆ.(PTI)


ಇತರ ಗ್ಯಾಲರಿಗಳು