ಜೈಲಿಗೆ ಹೋಗೋಕೆ ಇಷ್ಟವಿಲ್ಲ ದೂರು ವಾಪಸ್‌ ತಗೋ ಪ್ಲೀಸ್‌, ಭಾಗ್ಯಾಗೆ ಮನವಿ ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಜೈಲಿಗೆ ಹೋಗೋಕೆ ಇಷ್ಟವಿಲ್ಲ ದೂರು ವಾಪಸ್‌ ತಗೋ ಪ್ಲೀಸ್‌, ಭಾಗ್ಯಾಗೆ ಮನವಿ ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಜೈಲಿಗೆ ಹೋಗೋಕೆ ಇಷ್ಟವಿಲ್ಲ ದೂರು ವಾಪಸ್‌ ತಗೋ ಪ್ಲೀಸ್‌, ಭಾಗ್ಯಾಗೆ ಮನವಿ ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 19ರ ಎಪಿಸೋಡ್‌ನಲ್ಲಿ ಪೊಲೀಸರು ತಾಂಡವ್‌ನನ್ನು ಎಳೆದೊಯ್ಯುವಾಗ ತಾಂಡವ್‌ ಬಿಟ್ಟುಬಿಡುವಂತೆ ಮನವಿ ಮಾಡುತ್ತಾನೆ. ದಯವಿಟ್ಟು ದೂರು ವಾಪಸ್‌ ತೆಗೆದುಕೋ , ನನಗೆ ಜೈಲಿಗೆ ಹೋಗಲು ಇಷ್ಟವಿಲ್ಲ ಎಂದು ತಾಂಡವ್‌, ಭಾಗ್ಯಾ ಬಳಿ ಮನವಿ ಮಾಡುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 19ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 19ರ ಎಪಿಸೋಡ್‌ (PC: Jio Cinema)

Bhagyalakshmi Serial: ಮಕ್ಕಳು ಖುಷಿಯಾಗಿರಬೇಕು ಎಂಬ ಉದ್ದೇಶದಿಂದ ಭಾಗ್ಯಾ ಮತ್ತೆ ಮನೆಗೆ ಹೋಗಲು ನಿರ್ಧರಿಸಿ ತಾಂಡವ್‌-ಶ್ರೇಷ್ಠಾ ಮದುವೆಯನ್ನು ನಿಲ್ಲಿಸಿದ್ದಾಳೆ. ಎಲ್ಲರೂ ಮನೆಗೆ ವಾಪಸ್‌ ಬಂದಿದ್ದಾರೆ. ಭಾಗ್ಯಾ ತಾಂಡವ್‌ ಹಾಗೂ ಶ್ರೇಷ್ಠಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಎಲ್ಲವೂ ಮುಗಿಯಿತು ಇನ್ನು ನಾವು ಮದುವೆ ಆಗಿ ಖುಷಿಯಾಗಿರಬೇಕು ಎಂದುಕೊಂಡಿದ್ದ ಇಬ್ಬರಿಗೂ ಭಾಗ್ಯಾ ಶಾಕ್‌ ನೀಡಿದ್ದಾಳೆ.

ಭಾಗ್ಯಾ ಮೇಲೆ ಹಲ್ಲೆ ಮಾಡಿದ ತಾಂಡವ್‌

ಭಾಗ್ಯಾಳನ್ನು ಮೇಲೆ ಕರೆದೊಯ್ಯುವ ತಾಂಡವ್‌, ಡಿವೋರ್ಸ್‌ ಕೊಟ್ಟ ಮೇಲೆ ಮತ್ತೆ ಏಕೆ ಬಂದು ಒಕ್ಕರಿಸಿಕೊಂಡಿದ್ದೀಯ, ನಿನ್ನ ಜೊತೆ ಇದ್ದೂ ಇದ್ದೂ ನನ್ನ ಜೀವನ ನಾಯಿ ಪಾಡಾಗಿತ್ತು. ನೀನು ಹೋದೆ ಎಂದು ನಾನು ಖುಷಿಯಾಗಿದ್ದೀನಿ, ನನ್ನ ಸ್ವಂತ ಜೀವನವನ್ನು ನಾನು ನಡೆಸಬೇಕು, ಇವತ್ತು ನಾನು ಏನೇ ಆದರೂ ಶ್ರೇಷ್ಠಾಳನ್ನು ಮದುವೆ ಆಗೇ ತೀರುತ್ತೇನೆ ಎಂದು ದರ್ಪದಿಂದ ಮಾತನಾಡುತ್ತಾನೆ. ನೀವು ಮದುವೆ ಆಗಲು ನಾನು ಒಪ್ಪಬೇಕಲ್ಲ, ಕೋರ್ಟ್‌ ನಮ್ಮಿಬ್ಬರನ್ನು ದೂರ ಮಾಡಿಲ್ಲ, ನೀವು ಮತ್ತೊಂದು ಮದುವೆ ಆಗಬಾರದು ಎಂಬ ಕಾರಣಕ್ಕೆ ನಾನು ಪೊಲೀಸರನ್ನು ಕರೆ ತಂದಿದ್ದು ಎನ್ನುತ್ತಾಳೆ. ತಾಂಡವ್‌ ಕೋಪದಿಂದ ಭಾಗ್ಯಾ ಮೇಲೆ ಹಲ್ಲೆ ಮಾಡುತ್ತಾನೆ, ನನ್ನ ಶ್ರೇಷ್ಠಾ ಮದುವೆಯನ್ನು ಯಾರು ತಡೆಯುತ್ತಾರೋ ನೋಡುತ್ತೇನೆ ಎಂದು ಅರಚುತ್ತಾನೆ.

ಅಷ್ಟರಲ್ಲಿ ಇನ್ಸ್‌ಪೆಕ್ಟರ್‌ ಅಲ್ಲಿಗೆ ಬರುತ್ತಾರೆ, ನಾನು ನಿಮ್ಮ ಮದುವೆ ತಡೆಯುತ್ತೇನೆ, ಹೆಂಡತಿ ಮೇಲೆ ಕೈ ಮಾಡಲು ನಿನಗೆ ಎಷ್ಟು ಧೈರ್ಯವಿರಬೇಕು. ಭಾಗ್ಯಾ, ಎರಡನೆ ಮದುವೆ ಆಗುತ್ತಿರುವುದಲ್ಲದೆ, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಕಂಪ್ಲೇಂಟ್‌ ಕೊಡು, ಇವನನ್ನು ನಾನು ವಿಚಾರಿಸಿಕೊಳ್ಳುತ್ತೇನೆ ಎಂದು ಇನ್ಸ್‌ಪೆಕ್ಟರ್‌ ಹೇಳುತ್ತಾರೆ. ಧರ್ಮರಾಜ್‌ ಮಾತನಾಡಿ ನಾನು ಕಂಪ್ಲೇಂಟ್‌ ಕೊಡುತ್ತೇನೆ ಎನ್ನುತ್ತಾನೆ, ಕುಸುಮಾ ಕೂಡಾ , ಹೌದು ನಾನೂ ಕಂಪ್ಲೇಂಟ್‌ ಕೊಡುವೆ, ನನ್ನ ಸೊಸೆ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಕ್ಕೆ ಹಾಕಿದ್ದಾನೆ, ಅದನ್ನು ತಡೆಯಲು ಹೋಗಿದ್ದಕ್ಕೆ ನಮ್ಮನ್ನೂ ಮನೆಯಿಂದ ಹೊರ ಕಳಿಸಿದ್ದಾನೆ ಎನ್ನುತ್ತಾರೆ. ಅಪ್ಪ-ಅಮ್ಮನ ಮಾತು ಕೇಳಿ ತಾಂಡವ್‌ ಶಾಕ್‌ ಆಗುತ್ತಾನೆ.

ಕಂಪ್ಲೇಂಟ್‌ ವಾಪಸ್‌ ಪಡೆಯುವಂತೆ ಭಾಗ್ಯಾ ಬಳಿ ತಾಂಡವ್‌ ಮನವಿ

ಪೊಲೀಸರು ತಾಂಡವ್‌ನನ್ನು ಹಿಡಿದು ಹೊರಗೆ ಕರೆದೊಯ್ಯಲು ಪ್ರಯತ್ನಿಸುತ್ತಾರೆ. ತಾಂಡವ್‌ಗೆ ಮರ್ಯಾದೆ ಪ್ರಶ್ನೆ ಎದುರಾಗುತ್ತದೆ. ಒಂದು ವೇಳೆ ನಾನು ಜೈಲಿಗೆ ಹೋದರೆ ನನ್ನ ಕೆಲಸ ಹೋಗುತ್ತದೆ, ಮಾನ ಮರ್ಯಾದೆ ಹೋಗುತ್ತದೆ. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಪೊಲೀಸರ ಬಳಿ ಮನವಿ ಮಾಡುತ್ತಾನೆ. ದಯವಿಟ್ಟು ನನ್ನ ಬಿಟ್ಟುಬಿಡಿ ಎನ್ನುತ್ತಾನೆ, ಭಾಗ್ಯಾ ನಿನ್ನ ಮೇಲೆ ಕಂಪ್ಲೇಂಟ್‌ ಕೊಟ್ಟಿದ್ದಾಳೆ. ಅವಳು ದೂರು ವಾಪಸ್‌ ಪಡೆದರೆ ಖಂಡಿತ ನಿನ್ನನ್ನು ಬಿಡುತ್ತೇವೆ, ನಾವು ಹೊರಗೆ ಇರುತ್ತೇವೆ, ಬೇಗ ನಿನ್ನ ಹೆಂಡತಿ ಜೊತೆ ಮಾತನಾಡು ಎಂದು ಎಲ್ಲರೂ ಅಲ್ಲಿಂದ ಹೋಗುತ್ತಾರೆ.

ಭಾಗ್ಯಾ ದಯವಿಟ್ಟು ಕಂಪ್ಲೇಂಟ್‌ ವಾಪಸ್‌ ತೆಗೆದುಕೋ, ನಿಮ್ಮ ಅಮ್ಮ ಅರೆಸ್ಟ್‌ ಆದಾಗ ನೀನು ಕೇಳಿದ ಕೂಡಲೇ ನಾನು ಒಪ್ಪಿಕೊಂಡೆ, ಈಗ ದೂರು ವಾಪಸ್‌ ತಗೋ ಎನ್ನುತ್ತಾನೆ. ಭಾವ, ನೀವು ಅಕ್ಕ ಮನವಿ ಮಾಡಿದ ಕೂಡಲೇ ಕಂಪ್ಲೇಂಟ್‌ ವಾಪಸ್‌ ಪಡೆದ್ರಾ, ಅದೇನೋ ಕಂಡಿಷನ್‌ ಮಾಡಿದಂತೆ ಇತ್ತು ಎಂದು ಪೂಜಾ ಹೇಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ತಾಂಡವ್‌ ಎದುರಿಗಿದ್ದ ಸೋಫಾ ಮೇಲೆ ಬಂದು ಕಾಲಿನ ಮೇಲೆ ಕಾಲು ಹಾಕಿ ಗತ್ತಿನಿಂದ ಕೂರುತ್ತಾಳೆ. ಅವಳನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ದೂರು ವಾಪಸ್‌ ಪಡೆಯುತ್ತೇನೆ, ಆದರೆ ಕೆಲವು ಕಂಡಿಷನ್‌ಗಳಿವೆ, ಅದಕ್ಕೆ ಒಪ್ಪಿದರೆ ಮಾತ್ರ ನೀವು ಹೇಳಿದಂತೆ ಕೇಳುತ್ತೇನೆ ಎನ್ನುತ್ತಾಳೆ.

ಕಂಪ್ಲೇಂಟ್‌ ವಾಪಸ್‌ ಪಡೆಯೋಕೆ ಭಾಗ್ಯಾ, ತಾಂಡವ್‌ ಎದುರು ಏನು ಷರತ್ತು ವಿಧಿಸುತ್ತಾಳೆ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner