Brain Teaser: ಈ ಮೂವರಲ್ಲಿ ಕಲ್ಲಂಗಡಿ ಹೊಟ್ಟೆಯಲ್ಲಿ ಇರಿಸಿಕೊಂಡು ಗರ್ಭಿಣಿಯಂತೆ ನಾಟಕವಾಡುತ್ತಿರುವುದು ಯಾರು, ಥಟ್ಟಂತ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಮೂವರಲ್ಲಿ ಕಲ್ಲಂಗಡಿ ಹೊಟ್ಟೆಯಲ್ಲಿ ಇರಿಸಿಕೊಂಡು ಗರ್ಭಿಣಿಯಂತೆ ನಾಟಕವಾಡುತ್ತಿರುವುದು ಯಾರು, ಥಟ್ಟಂತ ಉತ್ತರ ಹೇಳಿ

Brain Teaser: ಈ ಮೂವರಲ್ಲಿ ಕಲ್ಲಂಗಡಿ ಹೊಟ್ಟೆಯಲ್ಲಿ ಇರಿಸಿಕೊಂಡು ಗರ್ಭಿಣಿಯಂತೆ ನಾಟಕವಾಡುತ್ತಿರುವುದು ಯಾರು, ಥಟ್ಟಂತ ಉತ್ತರ ಹೇಳಿ

ಬ್ರೈನ್ ಟೀಸರ್‌ಗಳು ಒಂಥರಾ ಮಜಾ ಇರೋದು ಮಾತ್ರವಲ್ಲ, ಇವು ಮೆದುಳಿಗೆ ಹುಳ ಬಿಡೋದು ಖಂಡಿತ. ಇಂದಿನ ಬ್ರೈನ್ ಟೀಸರ್‌ನಲ್ಲಿ ಮೂವರು ಗರ್ಭಿಣಿಯರಿದ್ದಾರೆ. ಇವರಲ್ಲಿ ಒಬ್ಬಾಕೆ ಹೊಟ್ಟೆಯ ಬಳಿ ಕಲ್ಲಂಗಡಿ ಇರಿಸಿಕೊಂಡು ಗರ್ಭಿಣಿಯಂತೆ ನಾಟಕವಾಡುತ್ತಿದ್ದಾಳೆ. ಆಕೆ ಯಾರು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಆ‍ಪ್ಟಿಕಲ್ ಇಲ್ಯೂಷನ್ ಬ್ರೈನ್ ಟೀಸರ್‌ಗಳು ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದಕ್ಕೆ ಉತ್ತರ ಕಂಡುಹಿಡಿಯಲು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಈ ಬ್ರೈನ್ ಟೀಸರ್‌ಗಳಲ್ಲಿ ಇರುವ ಟ್ವಿಸ್ಟ್ ನಮಗೆ ಚಾಲೆಂಜ್ ಮಾಡುತ್ತದೆ. ಆದರೂ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿದಾಗ ಏನೋ ಒಂಥರಾ ಸಾಧನೆ ಮಾಡಿದ ಫೀಲ್ ಬರುವುದು ಸುಳ್ಳಲ್ಲ.

ಇಂದಿನ ಬ್ರೈನ್ ಟೀಸರ್‌ನಲ್ಲಿ ನೀವು ಮೋಸಗಾತಿ ಯಾರೆಂದು ಕಂಡುಹಿಡಿಯಬೇಕು. ಯಾಕೆಂದರೆ ಇಲ್ಲಿರುವುದು 3 ಜನ ಗರ್ಭಿಣಿಯರ ಚಿತ್ರ. ಇವರಲ್ಲಿ 2 ಮಾತ್ರ ನಿಜವಾಗಿ ಗರ್ಭಿಣಿಯರು. ಇನ್ನೊಬ್ಬಳು ಹೊಟ್ಟೆಯಲ್ಲಿ ಕಲ್ಲಂಗಡಿ ಇರಿಸಿಕೊಂಡು ಗರ್ಭಿಣಿ ಎಂದು ಬಿಂಬಿಸುತ್ತಿದ್ದಾಳೆ. ಸೂಪರ್‌ ಮಾರ್ಕೆಟ್‌ನಲ್ಲಿ ಖರೀದಿಯಲ್ಲಿ ತೊಡಗಿರುವ ಈ ಮೂವರು ಮಹಿಳೆಯರಲ್ಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಇರಿಸಿಕೊಂಡವರು ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು.

ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ನೀವು ಚಿತ್ರವನ್ನು ಸರಿಯಾಗಿ ಗಮನಿಸಬೇಕು. ಇಲ್ಲಿರುವ ಮೂವರು ಮಹಿಳೆಯರ ಜೊತೆಗೆ ಅವರ ಮುಂದಿರುವ ಟ್ರಾಲಿ ಗಾಡಿಯನ್ನೂ ಗಮನಿಸಬೇಕು.

ಈ ಬ್ರೈನ್ ಟೀಸರ್‌ಗೆ ನೀವು 15 ಸೆಕೆಂಡ್ ಒಳಗೆ ಉತ್ತರ ಹೇಳಿದ್ರೆ ನಿಮ್ಮಷ್ಟು ಬುದ್ಧಿವಂತರು ಯಾರಿಲ್ಲ ಎಂದರ್ಥ. ನಿಮ್ಮ ಐಕ್ಯೂ ಲೆವೆಲ್ ಹೈ ಇದ್ದರಷ್ಟೇ ನೀವು ಈ ಬ್ರೈನ್ ಟೀಸರ್‌ಗೆ 15 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಬ್ರೈನ್ ಟೀಸರ್‌ಗೆ ಉತ್ತರ ಇಲ್ಲಿದೆ

ಈ ಬ್ರೈನ್ ಟೀಸರ್‌ಗೆ ಉತ್ತರ ಮೊದಲ ಮಹಿಳೆ. ಮೂವರಲ್ಲಿ ಮೊದಲ ಮಹಿಳೆ ಗರ್ಭಿಣಿಯಾಗಿಲ್ಲ, ಅವಳು ತನ್ನ ಹೊಟ್ಟೆಯಲ್ಲಿ ಕಲ್ಲಂಗಡಿ ಇರಿಸಿಕೊಂಡಿದ್ದಾರೆ. ಯಾಕೆಂದರೆ ಅವಳು ತನ್ನ ಟ್ರಾಲಿಯಲ್ಲಿ ಗರ್ಭಿಣಿಯರಿಗೆ ಬೇಕಾಗಿರುವ ಯಾವ ವಸ್ತುವನ್ನೂ ಖರೀದಿಸಿಲ್ಲ. ಬದಲಾಗಿ ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳನ್ನೇ ಖರೀದಿಸಿದ್ದಾಳೆ. ಆ ಮೂಲಕ ಅವಳು ಗರ್ಭಿಣಿಯಲ್ಲ ಎಂಬುದನ್ನು ಸಾಬೀತು ಪಡಿಸಬಹುದಾಗಿದೆ.

ನೋಡಿದ್ರಲ್ಲ ಇಂತಹ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ನಮ್ಮ ಮೆದುಳು ಚುರುಕಾಗಿರುವ ಜೊತೆಗೆ ನಾವು ಸಾಕಷ್ಟು ಬುದ್ಧ ಉಪಯೋಗಿಸಬೇಕಾಗುತ್ತದೆ. ನಮ್ಮ ಗಮನಶಕ್ತಿಯೂ ಹೆಚ್ಚಿರಬೇಕು.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: 66ರ ನಡುವೆ ಒಂದೇ ಒಂದು ಕಡೆ 69 ಇದೆ, ಅದು ಎಲ್ಲಿದೆ? 6 ಸೆಕೆಂಡ್‌ನಲ್ಲಿ ಹೇಳಿ; ನಿಮ್ಮ ಕಣ್ಣಿಗೊಂದು ಚಾಲೆಂಜ್‌

ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ರಾಶಿ 66 ಅನ್ನು ಬರೆಯಲಾಗಿದೆ. ಈ 66ರ ನಡುವೆ ಒಂದೇ ಒಂದು ಕಡೆ 69 ಅಡಗಿದೆ. ಅದು ಎಲ್ಲಿದೆ ಎಂದು ಕೇವಲ 6 ಸೆಕೆಂಡ್ ಒಳಗೆ ನೀವು ಕಂಡುಹಿಡಿಯಬೇಕು. ನಿಮ್ಮ ಕಣ್ಣು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ, ನಿಮಗೊಂದು ಹೊಸ ಚಾಲೆಂಜ್‌.

Brain Teaser: ಈ ಚಿತ್ರದಲ್ಲಿ 8 ಎಲ್ಲಿದೆ, 10 ಸೆಕೆಂಡ್ ಒಳಗೆ ಹುಡುಕಿ; ನಿಮ್ಮ ಕಣ್ಣಿಗೊಂದು ಸವಾಲ್

‘&‘ ಚಿಹ್ನೆಗಳಿಂದ ತುಂಬಿರುವ ಈ ಬ್ರೈನ್ ಟೀಸರ್ ಚಿತ್ರದಲ್ಲಿ ಒಂದೇ ಒಂದು ಕಡೆ 8 ಇದೆ. ಅದು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು, ಅದು ಕೇವಲ 10 ಸೆಕೆಂಡ್ ಒಳಗೆ. ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಇದ್ದರೆ ಈ ಪ್ರಶ್ನೆಗೆ ಉತ್ತರ ಹೇಳಲು ಪ್ರಯತ್ನಿಸಿ.

Whats_app_banner