ಮನಸ್ಸನ್ನು ಬಡಿದೆಬ್ಬಿಸಿ ಬದುಕಿಗೆ ಶಕ್ತಿ ತುಂಬಬಲ್ಲ 10 ವಿವೇಕ ವಾಣಿ; ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು
ಬಹುಪಾಲು ಯುವಜನರ ಆದರ್ಶ ಸ್ವಾಮಿ ವಿವೇಕಾನಂದ. ಸಂಕಷ್ಟಗಳನ್ನು ಎದುರಿಸುತ್ತ ಮುದುಡಿದ ಮನಸ್ಸನ್ನು ಬಡಿದೆಬ್ಬಿಸಿ ಬದುಕಿಗೆ ಶಕ್ತಿ ತುಂಬಬಲ್ಲ ಶಕ್ತಿ ಸ್ವಾಮಿ ವಿವೇಕಾನಂದ ಮಾತುಗಳಲ್ಲಿದೆ. ಅಂತಹ ಮಾತುಗಳ ಪೈಕಿ ಆಯ್ದ 10 ವಿವೇಕ ವಾಣಿಗಳು ಇಲ್ಲಿವೆ.
(1 / 10)
ನಮ್ಮ ಹಣೆಬರಹವನ್ನು ನಿರ್ಧರಿಸುವವರು ನಾವೇ. ಅದಕ್ಕಾಗಿ ಯಾರನ್ನೂ ದೂರಬಾರದು ಅಥವಾ ಶ್ಲಾಘಿಸಬಾರದು. - ಸ್ವಾಮಿ ವಿವೇಕಾನಂದ
(2 / 10)
ಸಾಧ್ಯವೇ ಇಲ್ಲ ಎಂದರೆ ಏನನ್ನೂ ಸಾಧಿಸಲಾಗದು. ಪ್ರಯತ್ನದಿಂದ ನಷ್ಟವೇನಿದೆ? ಗೆದ್ದರೆ ಸಂತೋಷ ಸಿಗುವುದು, ಸೋತರೆ ಅನುಭವ ಖಚಿತ. - ಸ್ವಾಮಿ ವಿವೇಕಾನಂದ.
(3 / 10)
ಮನಸ್ಸನ್ನು ಶಕ್ತಿಯತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವಂಥದ್ದು. - ಸ್ವಾಮಿ ವಿವೇಕಾನಂದ.
(5 / 10)
ವಿಸ್ತಾರವಾಗುತ್ತ ಹೋಗುವುದು ಜೀವನ. ಸಂಕುಚಿತವಾಗುತ್ತ ಸಾಗುವುದೇ ಸಾವು. ಪ್ರೀತಿಯೇ ಜೀವನ, ದ್ವೇಷವೇ ಸಾವು. - ಸ್ವಾಮಿ ವಿವೇಕಾನಂದ
(6 / 10)
ಜೀವ ನಮ್ಮ ಮಾತನ್ನು ಕೇಳುವುದಿಲ್ಲ. ಯಾವಾಗ ಬೇಕಾದರೂ ಹೋಗಬಹುದು. ಆದರೆ ಜೀವನ ನಮ್ಮ ಮಾತನ್ನು ಕೇಳುವ ಕಾರಣ, ಹೇಗೆ ಬೇಕಾದರೂ ಅದನ್ನು ರೂಪಿಸಿಕೊಳ್ಳಬಹುದು. - ಸ್ವಾಮಿ ವಿವೇಕಾನಂದ
(7 / 10)
ಜಗತ್ತು ಒಂದು ದೊಡ್ಡ ವ್ಯಾಯಾಮ ಶಾಲೆ. ಇಲ್ಲಿ ನಾವು ಬರುವುದೇ ನಮ್ಮನ್ನು ಬಲಪಡಿಸುವುದಕ್ಕಾಗಿ. - ಸ್ವಾಮಿ ವಿವೇಕಾನಂದ
(8 / 10)
ಶಿಕ್ಷಣ ಎಂಬುದು ಮನುಷ್ಯನೊಳಗೆ ಹುದುಗಿದ್ದ ಪರಿಪೂರ್ಣತೆಯನ್ನು ಅಭಿವ್ಯಕ್ತಿಗೊಳಿಸುವ ಪ್ರಯತ್ನ. - ಸ್ವಾಮಿ ವಿವೇಕಾನಂದ
(9 / 10)
ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಕಡೆಗೆ ಕರೆದೊಯ್ಯುವುದೇ ಗುರು. - ಸ್ವಾಮಿ ವಿವೇಕಾನಂದ.
ಇತರ ಗ್ಯಾಲರಿಗಳು