ಭೂಮಿಯ ಮೇಲೆ ಕಾಗೆಗಳೇ ಇಲ್ಲದಂತಾದರೆ ಏನಾಗಬಹುದು? ಇಲ್ಲಿವೆ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳು
- ಕಾಗೆಗಳು ಭೂಮಿ ಮೇಲೆ ಇಲ್ಲದೇ ಇದ್ದರೆ ಏನಾಗುತ್ತಿತ್ತು? ಅಥವಾ ಇನ್ನು ಮುಂದಿನ ದಿನದಲ್ಲಿ ಇಲ್ಲದಂತಾದರೆ ಏನಾಗುತ್ತದೆ? ಎಂದು ಯೋಚನೆ ಮಾಡಿದ್ದೀರಾ? ನಿಮ್ಮ ಕುತೂಹಲದ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
- ಕಾಗೆಗಳು ಭೂಮಿ ಮೇಲೆ ಇಲ್ಲದೇ ಇದ್ದರೆ ಏನಾಗುತ್ತಿತ್ತು? ಅಥವಾ ಇನ್ನು ಮುಂದಿನ ದಿನದಲ್ಲಿ ಇಲ್ಲದಂತಾದರೆ ಏನಾಗುತ್ತದೆ? ಎಂದು ಯೋಚನೆ ಮಾಡಿದ್ದೀರಾ? ನಿಮ್ಮ ಕುತೂಹಲದ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
(1 / 8)
ಕಾಗೆ ಮಾತ್ರವಲ್ಲ ಎಲ್ಲಾ ಪಕ್ಷಿಗಳೂ ನಿಸರ್ಗದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಪಕ್ಷಿಗಳು ಬೀಜ ಪ್ರಸರಣ ಮಾಡುವಲ್ಲಿ ಬಹುದೊಡ್ಡ ಪಾತ್ರ ಹೊಂದಿವೆ.
(2 / 8)
ಮಾನವ ಕಾಡನ್ನು ನಾಶ ಮಾಡುತ್ತಿರುವುದು ಪಕ್ಷಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಮನುಷ್ಯರಂತೆ ಪ್ರಾಣಿ, ಪಕ್ಷಿಗಳೂ ತಮ್ಮ ಆಹಾರ ಹಾಗೂ ಬದುಕುವ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿವೆ.
(3 / 8)
ಕಾಗೆಗಳು ಈ ಭೂಮಿಯಿಂದ ನಾಶವಾದರೆ ಕಸ ಮತ್ತು ಸಾವಯವ ತ್ಯಾಜ್ಯಗಳು ಹೆಚ್ಚಾಗುತ್ತದೆ. ಕಾಗೆಗಳು ಸತ್ತ ಪ್ರಾಣಿಗಳು ಹಾಗೂ ನೈಸರ್ಗಿಕ ತ್ಯಾಜ್ಯವನ್ನೇ ತಿಂದು ಬದುಕುತ್ತಿವೆ.
(4 / 8)
ಇನ್ನು ಕೃಷಿ ಭೂಮಿಗಳಲ್ಲಿ ಕಾಗೆಗಳ ಪಾತ್ರ ಮುಖ್ಯವಾದದ್ದು. ಕಾಗೆಗಳು ಬೆಳೆನಾಶ ಮಾಡುವ ಹುಳ, ಹುಪ್ಪಟೆಗಳನ್ನು ತಿಂದು ಸಮತೋಲನ ಕಾಪಾಡುತ್ತವೆ.
(5 / 8)
ಕಾಗೆಗಳು ಇಲ್ಲವಾದರೆ ಕೀಟಬಾಧೆ ಉಂಟಾಗಿ ಆಹಾರದ ಕೊರತೆ ಉಂಟಾಗಲಿದೆ ಎಂದು ಊಹಿಸಬಹುದು. ಇನ್ನು ಕಾಗೆಗಳ ಜೊತೆಗೆ ಧಾರ್ಮಿಕ ನಂಬಿಕೆಗಳು ಹೆಣೆದುಕೊಂಡಿವೆ.
(6 / 8)
ಕಾಗೆಗಳು ಇಲ್ಲವಾದರೆ ಮನುಷ್ಯನ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಬರಬಹುದು. ಕಾಗೆಗಳು ಇಲ್ಲವಾದರೆ ತುಂಬಾ ಬದಲಾವಣೆಗಳು ಆಗದಿದ್ದರೂ ಕೆಲವು ಬದಲಾವಣೆಗಳು ಖಂಡಿತ ಆಗುತ್ತದೆ.
(7 / 8)
ಗಮನಿಸಿ: ಈ ಲೇಖನವು ಅಂತರ್ಜಾಲಗಳಲ್ಲಿ ಸಿಕ್ಕ ಮಾಹಿತಿಯನ್ನು ಬಳಸಿಕೊಂಡು ಬರೆಯಲಾಗಿದೆ. ಇದಕ್ಕೆ ಯಾವುದೇ ನಿಖರ ದಾಖಲೆಗಳಿಲ್ಲ.
ಇತರ ಗ್ಯಾಲರಿಗಳು