ಜೊಕೊವಿಕ್ ಟು ಮೆಡ್ವೆಡೆವ್: ವೃತ್ತಿಜೀವನದಲ್ಲಿ ಅತ್ಯಧಿಕ ಬಹುಮಾನದ ಹಣವನ್ನು ಪಡೆದ ಟಾಪ್-10 ಟೆನಿಸ್ ಆಟಗಾರರು
10 Tennis Players With Highest Career Prize Money: ತಮ್ಮ ವೃತ್ತಿಜೀವನದಲ್ಲಿ ಅತ್ಯಧಿಕ ಬಹುಮಾನದ ಹಣವನ್ನು ಪಡೆದ ಟಾಪ್-10 ಆಟಗಾರರು ಯಾರು ಎಂಬುದರ ನೋಟ ಇಲ್ಲಿದೆ.
ಟೆನಿಸ್ ಲೋಕದಲ್ಲಿ ಲೆಜೆಂಡರಿ ಆಟಗಾರರ ದಂಡೇ ಇದೆ. ಒಬ್ಬರಿಗಿಂತ ಒಬ್ಬರು ಶ್ರೇಷ್ಠ ಆಟಗಾರರು. ನೊವಾಕ್ ಜೊಕೊವಿಕ್‌ನಿಂದ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್ ಮತ್ತು ಸಿಮೋನಾ ಹ್ಯಾಲೆಪ್ವರೆಗೆ ವಿಶ್ವಶ್ರೇಷ್ಠರಿದ್ದು, ತಾ ಮುಂದು, ನಾ ಮುಂದು ಎನ್ನುವಂತೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಪೈಕಿ ತಮ್ಮ ವೃತ್ತಿಜೀವನದಲ್ಲಿ ಅತ್ಯಧಿಕ ಬಹುಮಾನದ ಹಣವನ್ನು ಪಡೆದ ಟಾಪ್-10 ಆಟಗಾರರು ಯಾರು ಎಂಬುದರ ನೋಟ ಇಲ್ಲಿದೆ.
10. ಡೇನಿಯಲ್ ಮೆಡ್ವೆಡೆವ್: ಎಟಿಪಿ ಮಾಸ್ಟರ್ಸ್ ಇಂಡಿಯನ್ ವೆಲ್ಸ್ 2024 ಈವೆಂಟ್‌ನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ವಿಶ್ವದ ನಂ. 4 ರಷ್ಯಾದ ಡೇನಿಯಲ್ ಮೆಡ್ವೆಡೆವ್ ಇಲ್ಲಿಯವರೆಗೆ ಸುಮಾರು 40 ಮಿಲಿಯನ್ ಡಾಲರ್ ಬಹುಮಾನ ಗಳಿಸಿದ್ದಾರೆ.
9. ಸಿಮೋನಾ ಹ್ಯಾಲೆಪ್: ಡ್ರಗ್ಸ್ ನಿಷೇಧದ ನಂತರ ಡಬ್ಲ್ಯುಟಿಎ ಪ್ರವಾಸಕ್ಕೆ ಮರಳುತ್ತಿರುವ ವಿಶ್ವದ ಮಾಜಿ ನಂ. 1 ಮಹಿಳಾ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಇಲ್ಲಿಯವರೆಗೆ ಬಹುಮಾನದ ಮೊತ್ತದಲ್ಲಿ 40.2 ಮಿಲಿಯನ್ ಡಾಲರ್ ಸಂಗ್ರಹಿಸಿದ್ದಾರೆ.
8. ಅಲೆಕ್ಸಾಂಡರ್ ಜ್ವೆರೆವ್: ವಿಶ್ವದ ನಂ. 5 ಶ್ರೇಯಾಂಕದ ಜರ್ಮನಿಯ ಸ್ಟಾರ್ ಟೆನಿಸ್ ಅಲೆಕ್ಸಾಂಡರ್ ಜ್ವೆರೆವ್ ಅವರು ಈವರೆಗೆ 40.2 ಮಿಲಿಯನ್ ಡಾಲರ್ ಬಹುಮಾನವನ್ನು ಗಳಿಸಿದ್ದಾರೆ. ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.
7. ವೀನಸ್ ವಿಲಿಯಮ್ಸ್: ಏಳು ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಅವರು 42.6 ಮಿಲಿಯನ್ ಡಾಲರ್ ಅನ್ನು ಬಹುಮಾನವಾಗಿ ಗಳಿಸಿದ್ದಾರೆ.
6. ಪೀಟ್ ಸಾಂಪ್ರಾಸ್: ಮಾಜಿ ವಿಶ್ವ ನಂ. 1 ಮತ್ತು 14 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಪೀಟ್ ಸಾಂಪ್ರಾಸ್ ಅವರು 43.2 ಮಿಲಿಯನ್ ಡಾಲರ್ ಬಹುಮಾನದ ಮೊತ್ತದೊಂದಿಗೆ ನಿವೃತ್ತರಾದರು.
5. ಆಂಡಿ ಮುರ್ರೆ: ಮಾಜಿ ವಿಶ್ವ ನಂ. 1 ಮತ್ತು ವಿಂಬಲ್ಡನ್ ಚಾಂಪಿಯನ್ ಸ್ಕಾಟ್ಲೆಂಡ್‌ನ ಆಂಡಿ ಮುರ್ರೆ ಅವರು ಈ ವರ್ಷದ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ. 64.4 ಮಿಲಿಯನ್ ಡಾಲರ್ ಬಹುಮಾನದ ಮೊತ್ತವನ್ನು ಸಂಗ್ರಹಿಸಿದ್ದಾರೆ.
4. ಸೆರೆನಾ ವಿಲಿಯಮ್ಸ್: ಟೆನಿಸ್ ದಂತಕಥೆ ಸೆರೆನಾ ವಿಲಿಯಮ್ಸ್ ಅವರು 94.8 ಮಿಲಿಯನ್ ಡಾಲರ್ ಅನ್ನು ಬಹುಮಾನವಾಗಿ ಪಡೆದಿದ್ದಾರೆ. ಆ ಮೂಲಕ ಹೆಚ್ಚು ಗಳಿಸಿದ ಮಹಿಳಾ ಟೆನಿಸ್ ಆಟಗಾರ್ತಿ ಎಂಬ ದಾಖಲೆಗೆ ಒಳಗಾಗಿದ್ದಾರೆ. ಅಲ್ಲದೆ, ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.
3. ರೋಜರ್ ಫೆಡರರ್: 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಅವರು 130.5 ಮಿಲಿಯನ್ ಡಾಲರ್ ಬಹುಮಾನದ ಹಣ ಗಳಿಸಿದ್ದಾರೆ. ಸದ್ಯ ನಿವೃತ್ತರಾಗಿರುವ ಫೆಡರರ್, ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
2. ರಾಫೆಲ್ ನಡಾಲ್: ಸ್ಪ್ಯಾನಿಷ್ ಟೆನಿಸ್ ಪಟು ರಾಫೆಲ್ ನಡಾಲ್ ಅವರು 2ನೇ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಸದ್ಯ ಅವರು ಹೆಚ್ಚು ಬಹುಮಾನ ಮೊತ್ತ ಗಳಿಸಿದ ವಿಶ್ವದ 2ನೇ ಟೆನಿಸ್ ಆಟಗಾರ. 134.6 ಮಿಲಿಯನ್ ಡಾಲರ್ ಬಹುಮಾನವಾಗಿ ಗಳಿಸಿದ್ದಾರೆ.
1. ನೊವಾಕ್ ಜೊಕೊವಿಕ್: ವಿಶ್ವದ ನಂ. 1 ಟೆನಿಸ್ ಆಟಗಾರ ಮತ್ತು 24 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ನೊವಾಕ್ ಜೊಕೊವಿಕ್ ಅವರು ಅತ್ಯಧಿಕ ಬಹುಮಾನದ ಹಣ ಗೆದ್ದ ದಾಖಲೆ ಬರೆದಿದ್ದಾರೆ. ಅವರು 181.6 ಮಿಲಿಯನ್ ಡಾಲರ್ ಗಳಿಸಿದ್ದಾರೆ.