‘ಎಲೆಕ್ಷನ್‌ ಪ್ರಚಾರಕ್ಕೆ ನನ್ನನ್ನ ಯಾರೂ ಕರೆಯಲ್ಲ, ಯಾಕೆಂದ್ರೆ ಅವರಿಗೆ ನನ್ನ ಜಾತಿ ಅಡ್ಡ ಬರುತ್ತೆ’; ರವಿಚಂದ್ರನ್-sandalwood news crazystar ravichandran talks about an interesting aspect of the loka sabha election 2024 campaign mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಎಲೆಕ್ಷನ್‌ ಪ್ರಚಾರಕ್ಕೆ ನನ್ನನ್ನ ಯಾರೂ ಕರೆಯಲ್ಲ, ಯಾಕೆಂದ್ರೆ ಅವರಿಗೆ ನನ್ನ ಜಾತಿ ಅಡ್ಡ ಬರುತ್ತೆ’; ರವಿಚಂದ್ರನ್

‘ಎಲೆಕ್ಷನ್‌ ಪ್ರಚಾರಕ್ಕೆ ನನ್ನನ್ನ ಯಾರೂ ಕರೆಯಲ್ಲ, ಯಾಕೆಂದ್ರೆ ಅವರಿಗೆ ನನ್ನ ಜಾತಿ ಅಡ್ಡ ಬರುತ್ತೆ’; ರವಿಚಂದ್ರನ್

ಇತ್ತೀಚೆಗಷ್ಟೇ ತಪಸ್ಸಿ ಹೆಸರಿನ ಸಿನಿಮಾ ಮುಹೂರ್ತ ಮುಗಿಸಿಕೊಂಡಿದೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ರವಿಚಂದ್ರನ್‌ ನಟಿಸಲಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುತ್ತ, ರಾಜಕೀಯ ಪ್ರಚಾರದ ಬಗ್ಗೆಯೂ ಅವರು ಮಾತನಾಡಿದ್ದಾರೆ.

‘ಎಲೆಕ್ಷನ್‌ ಪ್ರಚಾರಕ್ಕೆ ನನ್ನನ್ನ ಯಾರೂ ಕರೆಯಲ್ಲ, ಯಾಕೆಂದ್ರೆ ಅವರಿಗೆ ನನ್ನ ಜಾತಿ ಅಡ್ಡ ಬರುತ್ತೆ’; ರವಿಚಂದ್ರನ್
‘ಎಲೆಕ್ಷನ್‌ ಪ್ರಚಾರಕ್ಕೆ ನನ್ನನ್ನ ಯಾರೂ ಕರೆಯಲ್ಲ, ಯಾಕೆಂದ್ರೆ ಅವರಿಗೆ ನನ್ನ ಜಾತಿ ಅಡ್ಡ ಬರುತ್ತೆ’; ರವಿಚಂದ್ರನ್

Ravichandran: ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್‌ ರವಿಚಂದ್ರನ್‌ ಆಗಾಗ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಪ್ರೇಮಲೋಕ 2 ಚಿತ್ರದ ಬಗ್ಗೆ ಸುಳಿವು ನೀಡಿ, ಆ ಚಿತ್ರದ ತಯಾರಿಯಲ್ಲಿದ್ದೇನೆ ಎಂದೂ ಹೇಳಿಕೊಂಡಿದ್ದರು. ಸಿನಿಮಾ ನಟನೆಯ ಜತೆಗೆ ಡ್ರಾಮಾ ಜೂನಿಯರ್ಸ್‌ ರಿಯಾಲಿಟಿ ಶೋದಲ್ಲೂ ತೀರ್ಪುಗಾರರಾಗಿದ್ದಾರೆ. ಸಿನಿಮಾದ ಜತೆಗೆ ಅನಿಸಿದ್ದನ್ನು ನೇರವಾಗಿ, ಮುಖಕ್ಕೆ ಹೊಡೆದಂತೆ ಹೇಳುತ್ತಾರೆ ರವಿಚಂದ್ರನ್.‌ ಇದೀಗ ಲೋಕಸಭಾ ಚುನಾವಣೆ ಘೋಷಣೆ ಆಗಿದೆ. ನೀವು ಪ್ರಚಾರ ಕಣಕ್ಕೆ ಇಳಿಯುತ್ತೀರಾ ಎಂಬ ಪ್ರಶ್ನೆಯೂ ಅವರ ಬಳಿ ತೇಲಿಬಂದಿದೆ. ಇದಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರಿಸಿದ್ದಾರೆ ಕ್ರೇಜಿಸ್ಟಾರ್.‌

ಭಾರತದಲ್ಲೀಗ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಒಟ್ಟು ಏಳು ಹಂತಗಳಲ್ಲಿ ಈ ಸಲ ಚುನಾವಣೆಗಳು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಆ ಪೈಕಿ ಕರ್ನಾಟಕದಲ್ಲಿ ಈ ಸಲ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್‌ 26ರಂದು ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಮೇ 7ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಉತ್ತರ ಕರ್ನಾಟಕದ ಭಾಗದ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಜೂ. 04ರಂದು ಫಲಿತಾಂಶ ಹೊರಬೀಳಲಿದೆ. ಈಗ ಇದೇ ಚುನಾವಣೆ ಬಗ್ಗೆ ನಟ ರವಿಚಂದ್ರನ್‌ ಮಾತನಾಡಿದ್ದಾರೆ.

ಪ್ರಚಾರಕ್ಕೆ ನನ್ನನ್ನು ಯಾರೂ ಕರೆಯಲ್ಲ..

ಇತ್ತೀಚೆಗಷ್ಟೇ ತಪಸ್ಸಿ ಹೆಸರಿನ ಸಿನಿಮಾ ಮುಹೂರ್ತ ಮುಗಿಸಿಕೊಂಡಿದೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ರವಿಚಂದ್ರನ್‌ ನಟಿಸಲಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುತ್ತ, ರಾಜಕೀಯ ಪ್ರಚಾರದ ಬಗ್ಗೆಯೂ ಅವರಿಗೆ ಪ್ರಶ್ನೆಯೊಂದು ಎದುರಾಗಿದೆ. ಅದಕ್ಕೆ ಉತ್ತರಿಸಿದ ಅವರು, "ಈ ವರೆಗೂ ನನಗೆ ಚುನಾವಣೆ ಪ್ರಚಾರಕ್ಕೆ ಯಾರೂ ಕರೆದಿಲ್ಲ. ನನಗನಿಸಿದ ಮಟ್ಟಿಗೆ ಅದಕ್ಕೆ ನನ್ನ ಜಾತಿ ಅಡ್ಡ ಬರಬಹುದು ಅಂತ ನನಗೆ ಅನಿಸುತ್ತೆ. ಅದು ನನಗೆ ಅಷ್ಟಾಗಿ ಗೊತ್ತಿಲ್ಲ. ಈ ನಡುವೆ ನನ್ನ ಆಪ್ತರು ಕರೆದರೆ, ಅತ್ತ ಕಡೆಯಿಂದ ಫೋನ್‌ ಬಂದರೆ, ನಾನು ಖಂಡಿತ ಪ್ರಚಾರಕ್ಕೆ ಹೋಗುತ್ತೇನೆ" ಎಂದಿದ್ದಾರೆ ರವಿಚಂದ್ರನ್.‌

ನನಗೆ ವ್ಯಕ್ತಿ ಬೇಕು, ಪಕ್ಷ ಅಲ್ಲ..

ನಟ ರವಿಚಂದ್ರನ್‌ ಈ ವರೆಗೂ ರಾಜಕೀಯದಲ್ಲಿ ಗುರುತಿಸಿಕೊಂಡಿಲ್ಲ. ಈ ಹಿಂದೆಯೇ ಕೆಲವು ರಾಜಕೀಯ ಪಕ್ಷಗಳಿಂದ ಅವರಿಗೆ ಬುಲಾವ್‌ ಬಂದರೂ, ಅವರಿಂದ ಗ್ರೀನ್‌ ಸಿಗ್ನಲ್‌ ಸಿಗಲಿಲ್ಲ. ಅದರಂತೆ, ರವಿಚಂದ್ರನ್ ಪ್ರಕಾರ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯವಂತೆ. "ನಾನು ಪ್ರಚಾರಕ್ಕೆ ಹೋಗುತ್ತೇನೆ. ಆದರೆ, ಯಾವ ಪಕ್ಷಗಳ ಜತೆಗೂ ನಾನು ಗುರುತಿಸಿಕೊಳ್ಳುವುದಿಲ್ಲ. ಏಕೆಂದರೆ, ಒಂದು ರೀತಿ ನನ್ನದು ಕಾಮನ್‌ ಪಾರ್ಟಿ. ಪಕ್ಷದ ಪ್ರಚಾರದ ಬದಲು, ವ್ಯಕ್ತಿಯ ಪರವಾಗಿ ಪ್ರಚಾರ ಮಾಡುವೆ" ಎಂದಿದ್ದಾರೆ ರವಿಚಂದ್ರನ್.

ಚುನಾವಣಾ ಪ್ರಚಾರ ಕಣದಲ್ಲಿ ತಾರಾವಳಿ

ಚುನಾವಣೆಗಳು ಬಂತೆಂದರೆ ರಾಜಕೀಯ ನಾಯಕರ ಕಣ್ಣು ಸಿನಿಮಾ ನಟರ ಮೇಲೆ ಬೀಳುತ್ತದೆ. ಸ್ಟಾರ್‌ ನಟ, ನಟಿಯರನ್ನು ಕರೆತಂದು ಮತ ಸೆಳೆಯುವ ತಂತ್ರ ರೂಪಿಸಲಾಗುತ್ತದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಕನ್ನಡದ ಸಾಕಷ್ಟು ಜನಪ್ರಿಯ ತಾರೆಯರು, ತಮ್ಮಿಷ್ಟದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಚುನಾವಣಾ ರಣಕಣದಲ್ಲಿ ಕ್ಯಾಂಪೇನ್‌ ಮಾಡಿದ್ದರು. ಅದಕ್ಕೂ ಹಿಂದೆ ಮಂಡ್ಯದ ಚುನಾವಣೆಯಲ್ಲಿ ದರ್ಶನ್‌ ಮತ್ತು ಯಶ್‌ ಒಟ್ಟಿಗೆ ಸುಮಲತಾ ಅಂಬರೀಶ್‌ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಧ್ರುವ ಸರ್ಜಾ ಜತೆಗೆ ಕೆಡಿ ಸಿನಿಮಾದಲ್ಲಿ ರವಿಚಂದ್ರನ್‌ ನಟಿಸುತ್ತಿದ್ದಾರೆ. ಇದರ ಜತೆಗೆ ಪ್ರೇಮಲೋಕ ಸಿನಿಮಾ ನಿರ್ದೇಶನದ ಕೆಲಸದಲ್ಲಿಯೂ ಬಿಜಿಯಾಗಿದ್ದಾರೆ.

mysore-dasara_Entry_Point