ಕನ್ನಡ ಸುದ್ದಿ  /  ಕ್ರೀಡೆ  /  ಫುಟ್ಬಾಲ್‌ ಆಡೋ ಆಸಕ್ತಿಯೇ ಕುಂದಿದೆ ಎಂದು ಗಳಗಳನೆ ಅತ್ತ ಬ್ರೆಜಿಲ್ ಆಟಗಾರ; ವರ್ಣಭೇದ ನೀತಿಗೆ ಕೊನೆ ಎಂದು?

ಫುಟ್ಬಾಲ್‌ ಆಡೋ ಆಸಕ್ತಿಯೇ ಕುಂದಿದೆ ಎಂದು ಗಳಗಳನೆ ಅತ್ತ ಬ್ರೆಜಿಲ್ ಆಟಗಾರ; ವರ್ಣಭೇದ ನೀತಿಗೆ ಕೊನೆ ಎಂದು?

Vinicius Junior: ಸ್ಪೇನ್ ವಿರುದ್ಧದ ಸ್ನೇಹಪರ ಪಂದ್ಯಕ್ಕೂ ಮುನ್ನ ಬ್ರೆಜಿಲ್ ಫುಟ್ಬಾಲ್‌ ಆಟಗಾರ ವಿನೀಸಿಯಸ್ ಜೂನಿಯರ್ ಹೇಳಿದ ಮಾತುಗಳು ಫುಟ್ಬಾಲ್‌ ಅಭಿಮಾನಿಗಳು ತಲೆ ತಗ್ಗಿಸುವಂತೆ ಮಾಡಿದೆ. ವರ್ಣಭೇದ ನೀತಿಯಿಂದಾಗಿ ಮಾನಸಿಕವಾಗಿ ಕುಗ್ಗಿದ ಆಟಗಾರರಲ್ಲಿ ವಿನೀಸಿಯಸ್ ಕೂಡಾ ಒಬ್ಬರು.

ಫುಟ್ಬಾಲ್‌ ಆಡೋ ಆಸಕ್ತಿಯೇ ಕುಂದಿದೆ ಎಂದು ಗಳಗಳನೆ ಅತ್ತ ಬ್ರೆಜಿಲ್ ಆಟಗಾರ
ಫುಟ್ಬಾಲ್‌ ಆಡೋ ಆಸಕ್ತಿಯೇ ಕುಂದಿದೆ ಎಂದು ಗಳಗಳನೆ ಅತ್ತ ಬ್ರೆಜಿಲ್ ಆಟಗಾರ (AP)

ಜನಸಾಮಾನ್ಯರು ಮಾತ್ರವಲ್ಲ. ಖ್ಯಾತ ಫುಟ್ಬಾಲ್‌ ಆಟಗಾರನೊಬ್ಬ ವರ್ಣಭೇದ ನೀತಿಯಿಂದ ಮಾನಸಿಕವಾಗಿ ಕುಗ್ಗಬಲ್ಲ ಎಂಬುದನ್ನು ನೀವು ನಂಬಲೇಬೇಕು. ಬ್ರೆಜಿಲ್‌ನ ಖ್ಯಾತ ಫುಟ್ಬಾಲ್‌ ಆಟಗಾರ ವಿನೀಸಿಯಸ್ ಜೂನಿಯರ್ (Vinicius Junior), ಫುಟ್ಬಾಲ್‌ ಆಡುವ ತನ್ನ ಆಸಕ್ತಿಯೇ ಕುಂದಿ ಹೋಗಿದೆ ಎಂದು ಗಳಗಳನೇ ಕಣ್ಣೀರು ಸುರಿಸುವ ದೃಶ್ಯ, ಜಾಗತಿಕ ಕ್ರೀಡಾಲೋಕವನ್ನೇ ತಲೆತಗ್ಗಿಸುವಂತೆ ಮಾಡಿದೆ. ತನ್ನನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆಯ ಘಟನೆಗಳು ಹೆಚ್ಚುತ್ತಿರುವುದರಿಂದ, ಮುಂದೆ ಫುಟ್ಬಾಲ್ ಆಡಬೇಕೆಂಬ ಬಯಕೆ ಕಡಿಮೆಯಾಗುತ್ತಿದೆ ಎಂದು ಹೇಳಿರುವುದು ಆಧುನಿಕ ಜಗತ್ತಿನ ಸವರ್ಣೀಯ ಜನರಿಗೆ ನಾಚಿಕೆಗೇಡಿನ ಸಂಗತಿ.

ಟ್ರೆಂಡಿಂಗ್​ ಸುದ್ದಿ

ಯಾವುದೇ ಕ್ರೀಡೆಯ ಅಭಿಮಾನಿಗಳಾದರೂ, ಆಟಗಾರನೊಬ್ಬನನ್ನು ಆತನ ಕಳಪೆ ಆಟದ ಕಾರಣಕ್ಕೆ ಟೀಕಿಸುವುದು ಸಾಮಾನ್ಯ. ಇಂಥಹ ಟೀಕೆಗಳನ್ನು ಪ್ರಬುದ್ಧ ಆಟಗಾರ ಕೂಡಾ ಸ್ವೀಕರಿಸುತ್ತಾನೆ. ಆದರೆ, ವೈಯಕ್ತಿಕ ವಿಚಾರಗಳಿಗಾಗಿ ಟೀಕಿಸುವುದು ಸಲ್ಲದು. ಫುಟ್ಬಾಲ್‌ ಕ್ರೀಡೆಗೆ ಅಭಿಮಾನಿಗಳ ಸಮುದ್ರವೇ ಇದೆ. ಜಾಗತಿಕವಾಗಿ ವಿಶ್ವಕಪ್‌, ಕ್ಲಬ್‌ ಪಂದ್ಯಗಳು ನಡೆಯುತ್ತಿರುತ್ತವೆ. ಈ ನಡುವೆ, ಆಟಗಾರನನ್ನು ಆತನ ಬಣ್ಣದ ಆಧಾರದಲ್ಲಿ ಟೀಕಿಸುವುದು, ಹೀಗಳೆಯುವುದು ರೋಗಗ್ರಸ್ತತೆ ಅಲ್ಲದೆ ಬೇರೇನೂ ಅಲ್ಲ. ಫುಟ್ಬಾಲ್‌ನ ಪ್ರತಿಭಾವಂತ ಆಟಗಾರನೊಬ್ಬ ಅಭಿಮಾನಿಗಳ ಟೀಕೆಗೆ ಮಾನಸಿಕವಾಗಿ ಕುಗ್ಗಿರುವುದು ಖೇದಕರ.

ರಿಯಲ್ ಮ್ಯಾಡ್ರಿಡ್ ಪರ ಆಡುವ ಬ್ರೆಜಿಲ್‌ ದೇಶ ಆಟಗಾರ, ಇತ್ತೀಚಿನ ವರ್ಷಗಳಲ್ಲಿ ಅನೇಕ ಸಂದರ್ಭಗಳಲ್ಲಿ ಎದುರಾಳಿ ತಂಡದ ಅಭಿಮಾನಿಗಳಿಂದ ತಮ್ಮ ದೇಹದ ಬಣ್ಣದಿಂದಾಗಿ ನಿಂದನೆಗೆ ಒಳಗಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ವೆಲೆನ್ಸಿಯಾದಲ್ಲಿ ನಡೆದ ಒಂದು ಘಟನೆ ಜಾಗತಿಕವಾಗಿ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ | 150ನೇ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ಸುನಿಲ್‌ ಛೆಟ್ರಿ;‌ ವಿಶೇಷ ಮೈಲಿಗಲ್ಲು ವೇಳೆ ಎಐಎಫ್ಎಫ್ ಸನ್ಮಾನ

ವರ್ಣಭೇದ ನೀತಿಯ ಬಗ್ಗೆ ಬಹಿರಂಗವಾಗಿ ಜಗತ್ತು ಏನೇ ಹೇಳಿದರೂ, ಜನರ ನಿಲುವುಗಳು ಎಷ್ಟೇ ಉದಾರ ಹಾಗೂ ಪ್ರಬುಧವಾಗಿದ್ದರೂ, ಕ್ಷುಲ್ಲಕ ಮನಸ್ಥಿತಿಯ ಅಭಿಮಾನಿಗಳ ಬಳಗ ಈಗಲೂ ಇದೆ ಎಂಬುದು ಸತ್ಯ. ಕಳೆದ ಕೆಲವು ವರ್ಷಗಳಲ್ಲಿ ಬ್ರೆಜಿಲ್ ಮತ್ತು ರಿಯಲ್ ಮ್ಯಾಡ್ರಿಡ್ ಆಟಗಾರ ವಿನೀಸಿಯಸ್ ಜೂನಿಯರ್ ಅನುಭವಿಸಿದ ಜನಾಂಗೀಯ ನಿಂದನೆ ಇದಕ್ಕೆ ಕೈಗನ್ನಡಿ. ಖ್ಯಾತ ಫುಟ್ಬಾಲ್ ಕ್ಲಬ್ಬ್‌ಗಳು, ಯುಇಎಫ್ಎ ಮತ್ತು ಫಿಫಾ ಕೂಡಾ ಇಂಥಾ ವಿಷಯದ ಬಗ್ಗೆ ಎಷ್ಟೇ ಸೂಕ್ಷ್ಮವಾಗಿದ್ದರೂ, ಅಭಿಮಾನಿಗಳಿಗೆ ಈ ಕುರಿತು ಅರಿವು ಮೂಡಿಸುವುದು ಇನ್ನೂ ಸಾಧ್ಯವಾಗಿಲ್ಲ. ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಅಭಿಯಾನಗಳನ್ನು ನಡೆಸಿದ್ದರೂ, ಎಲ್ಲವೂ ನೀರಲ್ಲಿ ಹೋಮ ಮಾಡಿದಷ್ಟೇ ವ್ಯರ್ಥ ಪ್ರಯತ್ನವಾಗಿದೆ.

ಸ್ಯಾಂಟಿಯಾಗೊದಲ್ಲಿ ಸ್ಪೇನ್ ದೇಶದ ವಿರುದ್ಧ ಬ್ರೆಜಿಲ್‌ ಫುಟ್ಬಾಲ್‌ ತಂಡದ ಸ್ನೇಹಪರ ಪಂದ್ಯಕ್ಕೂ ಮುನ್ನ ವಿನೀಸಿಯಸ್ ಜೂನಿಯರ್, ಮಾಧ್ಯಮದ ಮುಂದೆ ಬಂದರು. ಮಾರ್ಚ್‌ 25ರ ಸೋಮವಾರ ಜೂನಿಯರ್‌ ಹೇಳಿದ ಮಾತುಗಳು ನಿಜಕ್ಕೂ ಆಧುನಿಕ ಜಗತ್ತು ತಲೆ ತಗ್ಗಿಸುವಂತಿದೆ. ಜಗತ್ಪ್ರಸಿದ್ಧ ಫುಟ್ಬಾಲ್ ಆಟಗಾರರು ಕೂಡಾ, ಸವ‌ರ್ಣೀಯರ ವರ್ಣಭೇದ ನೀತಿಯಿಂದ ಎಷ್ಟು ಕುಗ್ಗುತ್ತಾರೆ ಎಂಬುದನ್ನು ತೋರಿಸಿದೆ. ವರ್ಣಭೇದ ನೀತಿಯಿಂದಾಗಿ ಆಟದಲ್ಲಿ ಮುಂದುವರೆಯಲು ತುಂಬಾ ಕಷ್ಟವಾಗುತ್ತಿದೆ ಎಂದು 23 ವರ್ಷದ ಆಟಗಾರ ಭಾರವಾದ ಮನಸ್ಸಿನಿಂದ ಹೇಳಿದ್ದಾರೆ.

ದಂಡ, ನಿಷೇಧ ಶೆಕ್ಷೆ ಬಳಿಕವೂ ಪುನರಾವರ್ತನೆ

ಚರ್ಮದ ಬಣ್ಣವು ತುಸು ಕಪ್ಪಗಿದ್ದರೆ, ಅಂಥಾ ಆಟಗಾರರು ಈಗಲೂ ಒಂದಲ್ಲಾ ಒಂದು ರೀತಿಯಲ್ಲಿ ವರ್ಣಭೇದ ನೀತಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಯುರೋಪ್‌ನಲ್ಲಿ ಫುಟ್ಬಾಲ್ ಪಂದ್ಯಗಳ ಸಮಯದಲ್ಲಿ, ವಿಶೇಷವಾಗಿ ಆಫ್ರಿಕನ್ ಮತ್ತು ಲ್ಯಾಟಿನ್ ಅಮೆರಿಕ ಮೂಲದ ಆಟಗಾರರನ್ನು ಇನ್ನೂ ಜನಾಂಗೀಯವಾಗಿ ನಿಂದಿಸಲಾಗುತ್ತಿದೆ. ಇದಕ್ಕೆ ವಿನೀಷಿಯಸ್ ಜೂನಿಯರ್ ಕೂಡಾ ಬಲಿಯಾಗಿದ್ದಾರೆ. ಕಳೆದ ಜನವರಿಯಲ್ಲಿ, ತರಬೇತಿ ಮೈದಾನದ ಬಳಿ ವಿನೀಸಿಯಸ್ ಅವರ ಪ್ರತಿಕೃತಿಯನ್ನು ನೇತುಹಾಕಿದ್ದಕ್ಕಾಗಿ ನಾಲ್ವರಿಗೆ ದಂಡ ಹಾಗೂ ಎರಡು ವರ್ಷಗಳ ಕಾಲ ಕ್ರೀಡಾಂಗಣಕ್ಕೆ ಬರುವುದಕ್ಕೆ ನಿಷೇಧ ವಿಧಿಸಲಾಯಿತು. ಆ ಬಳಿಕ ಮೇ ತಿಂಗಳಲ್ಲಿ ವೆಲೆನ್ಸಿಯಾದಲ್ಲಿ ಆಟಗಾರನ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪದ ಮೇಲೆ ಮೂವರಿಗೆ ದಂಡ ವಿಧಿಸಿ ಒಂದು ವರ್ಷ ನಿಷೇಧ ಹೇರಲಾಗಿತ್ತು. ಆದರೆ, ಕೆಲವು ಮಾನಸಿಕ ರೋಗಗ್ರಸ್ತ ಜನರ ಮನಸ್ಥಿತಿಗೆ ಮದ್ದು ಸಿಕ್ಕಿಲ್ಲ.

ಫಿಫಾ ಹಾಗೂ ಫುಟ್ಬಾಲ್‌ ಕ್ಲಬ್‌ಗಳು, ವರ್ಣಭೇದ ನೀತಿ ಅಳಿಸಿ ಹಾಕಲು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಅಭಿಮಾನಿಗಳು ಇನ್ನಷ್ಟು ಪ್ರಬುದ್ಧರಾಗಬೇಕಿದೆ.

ವಿಭಾಗ