Latest tamil nadu Photos

ಬಹುಭಾಷಾ ನಟ ಅರ್ಜುನ್‌ ಸರ್ಜಾರ ಪುತ್ರಿ ಐಶ್ವರ್ಯಾ. ಇವರಿಗೆ ಇತ್ತೀಚೆಗೆ ತಮಿಳು ನಟ ಉಮಾಪತಿ ರಾಮಯ್ಯರ ಜತೆ ಎಂಗೇಜ್‌ಮೆಂಟ್‌ ನಡೆದಿತ್ತು. ಇವರಿಬ್ಬರದ್ದು ಲವ್‌ ಸ್ಟೋರಿ. ಈ ಪ್ರೇಮಕಥೆಗೆ ಎರಡೂ ಕುಟುಂಬ ಸಮ್ಮತಿ ನೀಡಿ ನಿಶ್ಚಿತಾರ್ಥ ಮಾಡಿದ್ದರು. ಇಂದು ಇವರ ವಿವಾಹ ಕಾರ್ಯಕ್ರಮ ನಡೆದಿದೆ.

Aishwarya Arjun: ಅರ್ಜುನ್‌ ಸರ್ಜಾ ಮಗಳು ಐಶ್ವರ್ಯಾ ಅರ್ಜುನ್‌ ಶುಭ ವಿವಾಹದ ಫೋಟೋಗಳು ವೈರಲ್‌, ನೀವೂ ನೋಡಿ ಮದುವೆ ಆಲ್ಬಂ

Tuesday, June 11, 2024

19 ನೇ ಶತಮಾನದ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾರತದ ಆಧ್ಯಾತ್ಮಿಕ ಖ್ಯಾತಿಯನ್ನು ಜಗತ್ತಿಗೆ ಕೊಂಡೊಯ್ದರು. ಮಹಾನ್ ಸನ್ಯಾಸಿಯ ಗೌರವಾರ್ಥವಾಗಿ 1970 ರಲ್ಲಿ ಸ್ಮಾರಕವನ್ನು ಕನ್ಯಾಕುಮಾರಿಯಲ್ಲಿ ನಿರ್ಮಿಸಲಾಯಿತು. ಇಲ್ಲಿಯೇ ಮೋದಿ ಅವರು ಧ್ಯಾನಸ್ಥರಾಗಲು ಹೊರಟ ಕ್ಷಣ.

Modi Meditation:ವಿವೇಕಾನಂದರಂತೆಯೇ ಉಡುಪು ಧರಿಸಿದ ಪ್ರಧಾನಿ , ಕನ್ಯಾಕುಮಾರಿಯಲ್ಲಿ ಹೇಗಿದೆ ಮೋದಿ ಧ್ಯಾನ photos

Friday, May 31, 2024

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು. ಇಬ್ಬರೂ ಕಾಂಗ್ರೆಸಿಗರಾಗಿದ್ದು, ಸ್ಟಾರ್ ಚಂದ್ರು (ಎಡಚಿತ್ರ) ಮಂಡ್ಯ ಲೋಕಸಭಾ ಕ್ಷೇತ್ರದಿಂದ, ಡಿಕೆ ಸುರೇಶ್ (ಬಲಚಿತ್ರ) ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನು ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ವಿವರ ಗಮನಿಸೋಣ.

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು, ನಂಬರ್ 1 ಸ್ಥಾನದಲ್ಲಿ ಆಂಧ್ರದ ಪೆಮ್ಮಸಾನಿ

Friday, May 31, 2024

ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ಮಹಾರಾಜ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಂಕಿ ಟಾಯ್ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿಥಿಲನ್ ಸಾಮಿನಾಥನ್ ಮಹಾರಾಜ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ವಿಜಯ್‌ ಸೇತುಪತಿಯ ಮಹಾರಾಜ ಚಿತ್ರದ ಟ್ರೇಲರ್‌ ಚಿಂದಿ ಗುರೂ! ಮತ್ತೊಂದು ಮಾಸ್ಟರ್‌ಪೀಸ್‌ ಜತೆಗೆ ಬರ್ತಿದ್ದಾರೆ ಮಕ್ಕಳ್‌ ಸೇಲ್ವನ್‌

Thursday, May 30, 2024

ತಮಿಳುನಾಡಿನ ಕಾಂಚೀಪುರಂನಲ್ಲಿರುವ ಪ್ರಸಿದ್ದ ವರದರಾಜ ಪೆರುಮಾಳ್ ದೇವಸ್ಥಾನದ ಜಾತ್ರಾಮಹೋತ್ಸವ ಭಾನುವಾರ ನಡೆಯಿತು. ಭಕ್ತರ ಸಂಭ್ರಮ ಸಡಗರದ ಕ್ಷಣಗಳ ಚಿತ್ರನೋಟ.

ಕಾಂಚೀಪುರಂ ವರದರಾಜ ದೇವಸ್ಥಾನದಲ್ಲಿ ವೈಕಾಸಿ ಬ್ರಹ್ಮೋತ್ಸವ; ವಾರ್ಷಿಕ ರಥೋತ್ಸವದ ಸಂಭ್ರಮ, ಸಡಗರ- ಫೋಟೋಸ್

Sunday, May 26, 2024

ಕಾಲಿವುಡ್‌ನಲ್ಲಿ ಕಳೆದ ತಿಂಗಳಷ್ಟೇ ಬಿಡುಗಡೆ ಆಗಿದ್ದ ರತ್ನಂ ಸಿನಿಮಾ ಇದೀಗ ಒಟಿಟಿಗೆ ಬರಲು ರೆಡಿಯಾಗಿದೆ. ಆಕ್ಷನ್ ಎಂಟರ್‌ಟೈನರ್ ಶೈಲಿಯ ಈ ಸಿನಿಮಾದಲ್ಲಿ ವಿಶಾಲ್‌ ನಾಯಕನಾಗಿ ನಟಿಸಿದರೆ, ಹರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

OTT News: ವಿಶಾಲ್‌ ನಟನೆಯ ತಮಿಳಿನ ರತ್ನಂ ಸಿನಿಮಾ ಒಟಿಟಿಗೆ ಬರಲು ರೆಡಿ; ಎಲ್ಲಿ, ಯಾವಾಗ ವೀಕ್ಷಣೆ? ಹೀಗಿದೆ ಮಾಹಿತಿ

Wednesday, May 22, 2024

ಕನ್ನಡದಲ್ಲಿ ಗಡಿಬಿಡಿ ಗಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ತಮಿಳು, ತೆಲುಗು ನಟಿ, ಪ್ರಸ್ತುತ ರಾಜಕಾರಣಿಯಾಗಿರುವ ಆರ್‌ಕೆ ರೋಜಾ ಇಂದು ತಮಿಳುನಾಡಿನ ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇವರು ವೈಎಸ್‌ಆರ್‌ಸಿಪಿ ಪಕ್ಷದ ವತಿಯಿಂದ ಚಿತ್ತೂರು ನಗರಿಯಲ್ಲಿ ಸ್ಪರ್ಧಿಸಿದ್ದಾರೆ.

ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಆರ್‌ಕೆ ರೋಜಾ ಭೇಟಿ; ಚಿತ್ತೂರು ನಗರಿಯಲ್ಲಿ ಗೆಲುವಿಗೆ ಪ್ರಾರ್ಥಿಸಿದ ಗಡಿಬಿಡಿ ಗಂಡ ನಟಿ

Monday, May 20, 2024

ಡೆನಿಯಲ್‌ ಬಾಲಾಜಿ ಅವರಿಗೆ ಶುಕ್ರವಾರ (ಮಾ. 29) ರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೆನ್ನೈನ ಕೊಟ್ಟಿಕಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Daniel Balaji Death: ಯಶ್‌ ಜತೆ ‘ಕಿರಾತಕ’ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದ ಡೇನಿಯಲ್‌ ಬಾಲಾಜಿ ನಿಧನ PHOTOS

Saturday, March 30, 2024

ಮಿತಿಗಿಂತಲೂ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಜಯಲಲಿತಾ ವಿರುದ್ದ ಮೊಕದ್ದಮೆ ದಾಖಲಾಗಿತ್ತು.ಬೆಂಗಳೂರಿನ ವಿಶೇಷ ನ್ಯಾಯಾಲಯವು 2014,ರಲ್ಲಿ ಜಯಲಲಿತಾಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಸಿಎಂ ಹುದ್ದೆ ತೊರೆದು. ಜೈಲಿನಲ್ಲಿದ್ದೇ ಹೋರಾಟ ಮಾಡಿ ಮತ್ತೆ ಸಿಎಂ ಸ್ಥಾನಕ್ಕೆ ಜಯಲಲಿತಾ ಬಂದಿದ್ದರು.

ಜೈಲು ಸೇರಿದ ಭಾರತದ 7 ರಾಜ್ಯಗಳ ಸಿಎಂ, ಮಾಜಿ ಸಿಎಂಗಳು, ಯಾರು ಇದ್ದಾರೆ ಇಲ್ಲಿದೆ ಪಟ್ಟಿ photos

Tuesday, March 26, 2024

ತಮಿಳುನಾಡು ಪ್ರೀಮಿಯರ್ ಲೀಗ್​​​ ಹರಾಜಿನಲ್ಲಿ ತಿರುಪುರ್ ತಮಿಳನ್ನರು ತಂಡವು ಸ್ಪಿನ್ನರ್ ಸಾಯಿ ಕಿಶೋರ್ ಅವರನ್ನು 22 ಲಕ್ಷ ರೂಪಾಯಿಗೆ ಖರೀದಿಸಿತು. ಆ ಮೂಲಕ ಈ ವರ್ಷದ ಹರಾಜಿನಲ್ಲಿ ಅತ್ಯಂತ ದುಬಾರಿ ಕ್ರಿಕೆಟಿಗ ಎಂಬ ಪಟ್ಟಿಯಲ್ಲಿ ಜಂಟಿ ಸ್ಥಾನ ಪಡೆದಿದ್ದಾರೆ. 27ರ ಹರೆಯದ ಎಡಗೈ ಸ್ಪಿನ್ನರ್ ಇದುವರೆಗೆ 57 ಟಿ20 ಪಂದ್ಯಗಳಲ್ಲಿ 63 ವಿಕೆಟ್ ಪಡೆದಿದ್ದಾರೆ.

ಟಿಎನ್​ಪಿಎಲ್​ ಹರಾಜಿನಲ್ಲಿ ನಟರಾಜನ್​ಗಿಂತ ಸಾಯಿ ಕಿಶೋರ್ ಬಲು ದುಬಾರಿ; ಅಧಿಕ ಮೊತ್ತಕ್ಕೆ ಸೇಲಾದ ಟಾಪ್-5 ಆಟಗಾರರು

Thursday, February 8, 2024

ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ದೂರ ಉಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ದಿನೇಶ್​ ಕಾರ್ತಿಕ್ ಅವರ ಬಹುದಿನ ಕಸನು ನನಸಾಗಿದೆ.

ದೀರ್ಘಕಾಲದ ಹೊಸ ಮನೆಯ ಕನಸು ನನಸು; ಹಾಲುಕ್ಕಿಸಿ ಗೃಹಪ್ರವೇಶ ಮಾಡಿದ ದಿನೇಶ್-ದೀಪಿಕಾ ದಂಪತಿ

Monday, January 29, 2024

ಮೇಲ್‌ಮರವತ್ತೂರು ಆದಿಶಕ್ತಿ ಪೀಠಕ್ಕೆ ಸಿದ್ಧರ ಪೀಠ ಅಥವಾ ಸಿದ್ಧರ ಪೀಡಂ ಎಂದೂ ಕರೆಯುತ್ತಾರೆ. ಆ ದೇವಾಲಯಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ.  ಈ ದೇವಾಲಯವು ಬೆಂಗಳೂರಿನಿಂದ 304 ಕಿಲೋಮೀಟರ್‌ ದೂರದಲ್ಲಿದೆ. ಇಲ್ಲಿನ ಆದಿಪರಾಶಕ್ತಿಗೆ ಮಾಲೆ ಧರಿಸಿ, ದೇವಿ ಸನ್ನಿಧಾನಕ್ಕೆ ಭೇಟಿ ನೀಡುವುದರಿಂದ ಸಕಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಈ ದೇವಸ್ಥಾನ ಇತಿಹಾಸ ಹಾಗೂ ಇಲ್ಲಿನ ಪವಾಡಗಳ ಬಗ್ಗೆ ತಿಳಿಯಿರಿ.

ಮೇಲ್‌ಮರವತ್ತೂರು ಓಂಶಕ್ತಿ ಪೀಠಕ್ಕಿದೆ 2 ಸಾವಿರ ವರ್ಷಗಳ ಇತಿಹಾಸ; ಆದಿಪರಾಶಕ್ತಿ ಇಲ್ಲಿ ನೆಲೆಯಾದ ಅಚ್ಚರಿಯ ಕಥೆಯಿದು

Saturday, January 27, 2024

ಯಾಶಿಕಾ ಆನಂದ್‌  ಅವರು ತಮಿಳು ಸಿನಿಮಾಗಳಲ್ಲಿ ಮತ್ತು ಟೆಲಿವಿಷನ್‌ ಶೋಗಳ ಮೂಲಕ ಜನಪ್ರಿಯತೆ ಪಡೆದಿದ್ದರು. ಹಿಂದೊಮ್ಮೆ ಮೀ ಟು ಅಭಿಯಾನದಲ್ಲೂ ಪಾಲ್ಗೊಂಡಿದ್ದರು. ನಿರ್ದೇಶಕರೊಬ್ಬರಿಂದ ತನಗಾದ ತೊಂದರೆಯ ಕುರಿತು ಹೇಳಿಕೊಂಡಿದ್ದರು.

Yashika Aannand: ಬಿಗಿ ಉಡುಗೆ ತೊಟ್ಟು ಬೆಂಕಿ ನೋಟ ಬೀರಿದ ಬಿಗ್‌ಬಾಸ್‌ ಬೆಡಗಿ, ಬಘೀರ ನಟಿ ಯಾಶಿಕಾ ಆನಂದ್‌ ಚಿತ್ರಲಹರಿ

Thursday, January 25, 2024

ಶ್ರೀರಂಗಂ ರಂಗನಾಥ ದೇವಾಲಯವು 7 ಸುತ್ತಿನ ಪ್ರಹಾರಗಳು, 21 ಅದ್ಭುತ ಗೋಪುರಗಳು, 39 ಭವ್ಯವಾದ ಮಂಟಗಳನ್ನು ಹೊಂದಿದೆ. ಭಾರತದ ಅತ್ಯಂತ ಪ್ರಸಿದ್ಧ ರಾಜಗೋಪುರ ಹೊಂದಿರುವ ದೇವಾಲಯವೂ ಇದಾಗಿದೆ.

ತಮಿಳುನಾಡಿನ ಶ್ರೀರಂಗಂ ರಂಗನಾಥ ದೇವಾಲಯದ ಕುತೂಹಲಕಾರಿ ಸಂಗತಿಗಳಿವು

Sunday, January 21, 2024

ತಮಿಳುನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗಿದ್ದು, ತೂತುಕುಡಿ ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡಿದ್ದವು. ಮೊಣಕಾಲುದ್ದ ನೀರಿನಲ್ಲಿಲ್ಲೇ ಜನರು ರಸ್ತೆ ದಾಟಲು ಪರದಾಡಿದರು.

Tamil Nadu Rain: ಭಾರಿ ಮಳೆಯಿಂದ ತತ್ತರಿಸಿದ ತಮಿಳುನಾಡು; ಮನೆ, ರಸ್ತೆಗಳು ಜಲಾವೃತ್ತ; ಮುಂದುವರಿದ ರಕ್ಷಣಾ ಕಾರ್ಯ

Friday, December 22, 2023

ಇದು ತಮಿಳುನಾಡಿನ ತೂತ್ತುಕುಡಿಯಲ್ಲಿ ಮಳೆಯಿಂದ ತುಂಬಿರುವ ನೀರಿನ ವೈಮಾನಿಕ ನೋಟ. ಇಡೀ ನಗರವೇ ನೀರಿಗೆ ಮುಳುಗಿ ಹೋಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Tamil Nadu Rains: ತಮಿಳುನಾಡು ಮಳೆ: ಜಲಪ್ರಳಯ ನಲುಗಿದ ಜನ, ರಕ್ಷಣೆಗ ಸೇನಾ ಕಾರ್ಯಾಚರಣೆ

Tuesday, December 19, 2023

ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ರೈಲ್ವೆ ಮಾರ್ಗವೇ ಕುಸಿದು ಹೋಗಿ ರೈಲು ಸಂಚಾರ ವ್ಯತ್ಯಯವಾಗಿದೆ.

TamilNadu Rains: ಮಳೆಯಲ್ಲಿ ಮುಳುಗಿತು ದಕ್ಷಿಣ ತಮಿಳುನಾಡು, ಕುಂಭದ್ರೋಣ ಮಳೆಗೆ ಬೆಚ್ಚಿದ ಜನ: ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಹೀಗಿದೆ ಅವಾಂತರ

Monday, December 18, 2023

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಟ್ಟಣ ಒಂದರಲ್ಲಿ ಭಾನುವಾರ ಭಾರೀ ಮಳೆ ಸುರಿದು ಮನೆಯ ಪಕ್ಕದಲ್ಲೇ ಹೊಳೆ ರೀತಿ ನೀರು ಹರಿಯುತ್ತಿದೆ. ಈ ಭಾಗದಲ್ಲಿ ಇನ್ನೂ ಒಂದು ವಾರ ಮಳೆ ಇರುವ ಮಾಹಿತಿ ನೀಡಲಾಗಿದೆ.

TN Heavy Rains: ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರೀ ಮಳೆ: ತುಂಬಿ ಹರಿಯುತ್ತಿರುವ ಜಲಪಾತಗಳು, ಹೀಗಿದೆ ಮಳೆ ನೋಟ

Sunday, December 17, 2023

ಚೆನ್ನೈನಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ಜನ ಹೈರಾಣವಾಗಿದ್ದಾರೆ. ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನಗರ ನಿಧಾನವಾಗಿ ಯಥಾಸ್ಥಿತಿಗೆ ಬರುತ್ತಿದೆ.

Chennai: ಚೆನ್ನೈನಲ್ಲಿ ತಗ್ಗಿದ ಮಳೆ, ಪ್ರವಾಹ ಪರಿಸ್ಥಿತಿ; ರಕ್ಷಣಾ ಕಾರ್ಯಾಚರಣೆ ಚುರುಕು, ಯಥಾಸ್ಥಿತಿಗೆ ಮರಳುತ್ತಿರುವ ನಗರ; ಫೋಟೊಸ್

Thursday, December 7, 2023

ಚೆನ್ನೈನ ಪ್ರವಾಹ ಪರಿಸ್ಥಿತಿಯ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಆಂಬ್ಯುಲೆನ್ಸ್ ಬರಲು ಸಾಧ್ಯವಾಗದ ಕಾರಣ ವೃದ್ಧೆಯೊಬ್ಬರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸ್ಥಳೀಯರು ನೆರವಾದರು. ವಿವಿಧ ಪ್ರಕರಣಗಳಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಮಳೆ ನಿಂತರೂ ತಗ್ಗದ ಪ್ರವಾಹ ಪರಿಸ್ಥಿತಿ; ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತಕ್ಕೆ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ, ಜನ ಹೈರಾಣ

Tuesday, December 5, 2023