ಇಂದು ಪಿತೃಪಕ್ಷ ಕೊನೆಯ ದಿನದ ಆಚರಣೆ; ದೇಶಾದ್ಯಂತ ನದಿ ತೀರಗಳಲ್ಲಿ ಪಿತೃಗಳಿಗೆ ತರ್ಪಣ ಅರ್ಪಿಸಿದ ಜನರು
ಕೆಲವು ದಿನಗಳಿಂದ ದೇಶದ ವಿವಿಧ ಕಡೆ ಪಿತೃ ಪಕ್ಷದ ಪೂಜೆ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ಕೆಲವೆಡೆ ಪೂರ್ವಜರ ಫೋಟೋಗೆ ಎಡೆ ಇಟ್ಟು, ಸಂಬಂಧಿಕರನ್ನು ಊಟಕ್ಕೆ ಆಹ್ವಾನಿಸಲಾಗುತ್ತಿದೆ. ಕೆಲವೆಡೆ ನದಿ ತೀರಗಳಿಗೆ ತೆರಳಿ ಪೂಜೆ, ಪಿಂಡ ಪ್ರದಾನ ಮಾಡಲಾಗುತ್ತಿದೆ. ಕೊಲ್ಕತ್ತಾ, ಮುಂಬೈ, ತಿರುಚಿ, ಬಾಬುಘಾಟ್, ರಾಮೇಶ್ವರಂ ಸೇರಿದಂತೆ ವಿವಿಧ ಕಡೆ ಪುಣ್ಯಸ್ನಾನವೂ ನಡೆಯುತ್ತಿದೆ. ನಿಧನರಾದ ಹಿರಿಯರನ್ನು ನೆನೆದ ಕುಟುಂಬಸ್ಥರು ಪೂಜಾ ವಿಧಿವಿಧಾನ ನೆರವೇರಿಸುತ್ತಿದ್ದಾರೆ. ಸೆಪ್ಟೆಂಬರ್ 17 ರಿಂದ ಪಿತೃಪಕ್ಷ ಆರಂಭವಾಗಿದ್ದು ಅಕ್ಟೋಬರ್ 2 ರಂದು ಕೊನೆಗೊಳ್ಳಲಿದೆ.