ಶ್ರೀಜೇಶ್ ನಿವೃತ್ತಿ ಕುರಿತು ನರೇಂದ್ರ ಮೋದಿ ಹೇಳಿದ್ದಿಷ್ಟು; ಹಾಕಿ ತಂಡದ ಬಗ್ಗೆ ಪ್ರಧಾನಿ ಮಾತು
- ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಅಮೋಘ ಸಾಧನೆ ಮಾಡಿರುವ ಭಾರತೀಯ ಹಾಕಿ ತಂಡದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ನವದೆಹಲಿಯಲ್ಲಿ ಪ್ರಧಾನಿ ನಿವಾಸದಲ್ಲೇ ನಡೆದ ಮಾತುಕತೆಯಲ್ಲಿ ನಮೋ ಆಟಗಾರರ ಕಾಲೆಳೆದಿದ್ದಾರೆ. ಪಿಆರ್ ಶ್ರೀಜೇಶ್ ನಿವೃತ್ತಿ ಕುರಿತು ಮಾತನಾಡಿದ ಅವರು, ತಂಡದ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.