logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Aries Horoscope 2023: ನೀವು ಮೇಷ ರಾಶಿಯವರಾ? ಹೊಸವರ್ಷ ಆರೋಗ್ಯ, ಉದ್ಯೋಗ, ಲವ್‌ಲೈಫ್‌ ಹೇಗಿರಲಿದೆ? ಗ್ರಹಗತಿಗಳ ಪರಿಣಾಮ ಏನು?

Aries horoscope 2023: ನೀವು ಮೇಷ ರಾಶಿಯವರಾ? ಹೊಸವರ್ಷ ಆರೋಗ್ಯ, ಉದ್ಯೋಗ, ಲವ್‌ಲೈಫ್‌ ಹೇಗಿರಲಿದೆ? ಗ್ರಹಗತಿಗಳ ಪರಿಣಾಮ ಏನು?

HT Kannada Desk HT Kannada

Dec 24, 2022 06:54 AM IST

google News

ಮೇಷ ರಾಶಿ - ವಾರ್ಷಿಕ ರಾಶಿಫಲ 2023

  • Aries horoscope 2023: ಹೊಸ ಕ್ಯಾಲೆಂಡರ್‌ ವರ್ಷವನ್ನು ಬರಮಾಡುವ ಸಂಭ್ರಮ. ನೀವು ಮೇಷ ರಾಶಿಯವರಾ? ಹೊಸ ವರ್ಷ ಆರೋಗ್ಯ, ಉದ್ಯೋಗ, ಲವ್‌ಲೈಫ್‌, ಆರ್ಥಿಕ ಪರಿಸ್ಥಿತಿ ಹೇಗಿರಲಿದೆ? ವರ್ಷದ ಗ್ರಹಗತಿಗಳ ಪರಿಣಾಮ ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ಗಮನಿಸಿ. 

ಮೇಷ ರಾಶಿ - ವಾರ್ಷಿಕ ರಾಶಿಫಲ 2023
ಮೇಷ ರಾಶಿ - ವಾರ್ಷಿಕ ರಾಶಿಫಲ 2023

ಮೇಷ ರಾಶಿಯವರಿಗೆ 2023 ರ ವರ್ಷವು ಜೀವನದಲ್ಲಿ ಸಂತೋಷವನ್ನೇ ಉಡುಗೊರೆಯನ್ನಾಗಿ ತರಲಿದೆ. ಮಂಗಳವು ಮೇಷ ರಾಶಿಯ ಆಡಳಿತ ಗ್ರಹವಾಗಿದ್ದು, ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮೇಷ ರಾಶಿಯವರಿಗೆ ಹೊಸ ವರ್ಷ 2023 ಮಂಗಳಕರವಾಗಿರುತ್ತದೆ. ದೇವಗುರು ಗುರುವು ಏಪ್ರಿಲ್ 22 ರಂದು ನಿಮ್ಮ ಲಗ್ನ ಮನೆಯಲ್ಲಿ ಮೇಷ ರಾಶಿಯಲ್ಲಿ ಸಾಗುತ್ತಾನೆ. ರಾಹುವು ಮೀನ ಮತ್ತು ಕೇತು ಕನ್ಯಾದಲ್ಲಿ ಸಾಗಲಿದ್ದಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು, ಸಣ್ಣ ಪ್ರವಾಸಗಳು ಹೆಚ್ಚಿನ ಆನಂದವನ್ನು ನೀಡುತ್ತವೆ

Dec 02, 2024 03:50 PM

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಮೇಲ್ನೋಟಕ್ಕೆ ಹೇಳುವುದಾದರೆ, ವರ್ಷದ ಆರಂಭದಲ್ಲಿ, ಮೇಷ ರಾಶಿಯವರು ಅದೃಷ್ಟವನ್ನು ಪಡೆಯುತ್ತಾರೆ. ರಾಜಕೀಯ ಸಂಪರ್ಕ ಹೊಂದಿರುವ ಜನರು ಪ್ರಯೋಜನಗಳನ್ನು ಪಡೆಯುತ್ತಾರೆ. ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ. ಫ್ಯಾಷನ್ ಅಥವಾ ಗ್ಲಾಮರ್ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಪ್ರಯೋಜನಗಳಿವೆ. ಮೇಷ ರಾಶಿಯವರಿಗೆ 2023 ರಲ್ಲಿ ಗ್ರಹಗಳು ಮತ್ತು ರಾಶಿಗಳ ಸ್ಥಿತಿ ಹೇಗಿರುತ್ತದೆ. ಇಲ್ಲಿದೆ ಮೇಷ ರಾಶಿಯವರ 2023ರ ವರ್ಷ ಭವಿಷ್ಯ -

ಆರ್ಥಿಕ ಸ್ಥಿತಿ-

ಮೇಷ ರಾಶಿಯ ಜನರು ಶನಿ ಸಂಚಾರದಿಂದ ಆರ್ಥಿಕವಾಗಿ ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಗ್ಯೂ, 2023 ರಲ್ಲಿ ನೀವು ಶತ್ರುಗಳನ್ನು ಎದುರಿಸಬೇಕಾಗುತ್ತದೆ. ಎಚ್ಚರಿಕೆ ಅಗತ್ಯ. ನಿಮ್ಮ ಮಾತನ್ನು ನಿಯಂತ್ರಿಸಿ. ಗಾಸಿಪ್ ನಿಯಂತ್ರಿಸುವ ಅಗತ್ಯವಿದೆ.

ಉದ್ಯೋಗ ಮತ್ತು ವ್ಯಾಪಾರ

ವ್ಯಾಪಾರಕ್ಕೆ ವೇಗ ಸಿಗಲಿದೆ. ಈ ಅವಧಿಯಲ್ಲಿ, ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯಲಿದ್ದೀರಿ. ಉದ್ಯೋಗಸ್ಥರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.

ಲವ್‌ ಲೈಫ್‌

ಮೇಷ ರಾಶಿಯವರ ಪ್ರೇಮ ಜೀವನ ಉತ್ತಮವಾಗಿರುತ್ತದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು. ಹೊಸ ವರ್ಷ 2023 ರಲ್ಲಿ ನಿಮ್ಮ ಸಂಬಂಧಗಳನ್ನು ಬಲಪಡಿಸಲು ನೀವು ಪ್ರಯತ್ನಿಸಬೇಕು. ಈ ವರ್ಷದಲ್ಲಿ ನೀವು ಶಾಂತಿಯನ್ನು ಕಂಡುಕೊಳ್ಳಲಿ. ವರ್ಷದ ಕೊನೆಯಲ್ಲಿ ನಿಮ್ಮ ನಡವಳಿಕೆ ಕಾರಣದಿಂದಾಗಿ, ಸಂಬಂಧದಲ್ಲಿ ಕಸಿವಿಸಿ ಉಂಟಾಗಬಹುದು. ಎಚ್ಚರವಹಿಸಿ.

ಆರೋಗ್ಯ

ಆರೋಗ್ಯದ ವಿಷಯದಲ್ಲಿ, ಮೇಷ ರಾಶಿಯವರಿಗೆ 2023 ವರ್ಷವು ಕಷ್ಟಕರವಾಗಿರುತ್ತದೆ. ಈ ವರ್ಷ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದರ ಅಗತ್ಯ ಇದೆ ಕೂಡ. ಆಹಾರ ಮತ್ತು ಪಾನೀಯದ ವಿಚಾರದಲ್ಲ ಹೆಚ್ಚಿನ ಗಮನ ಕೊಡುವುದು ಮುಖ್ಯ.

(ಇಲ್ಲಿ ನೀಡಿರುವ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ಕೇವಲ ಪ್ರಾಥಮಿಕ ಮಾಹಿತಿಗಾಗಿ ಈ ಮಾಹಿತಿ ಒದಗಿಸಲಾಗಿದೆ. ರಾಶಿಫಲಗಳು ವೈಯಕ್ತಿಕ ಜಾತಕವನ್ನು ಅವಲಂಬಿಸಿದೆ. ಆದ್ದರಿಂದ ಅವುಗಳನ್ನು ಅನ್ವಯಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)

ಗಮನಿಸಬಹುದಾದ ಇತರೆ ವಿಚಾರಗಳು

Mangal Rashi Parivartan 2023: ಹೊಸ ವರ್ಷ ವೃತ್ತಿರಂಗದಲ್ಲಿ ಈ ರಾಶಿಯವರಿಗೆ ಅಪಾರ ಯಶಸ್ಸು ಸಿಗಲಿದೆ; ನಿಮ್ಮ ರಾಶಿಯೂ ಇದೆಯಾ ಚೆಕ್‌ ಮಾಡಿ!

Mangal Gochar 2023, Mangal Rashi Parivartan: ಮಂಗಳದೇವನು 2023ರ ಹೊಸ ವರ್ಷದಲ್ಲಿ ಒಂದು ರಾಶಿ ಬಿಟ್ಟು ಇನ್ನೊಂದನ್ನು ಪ್ರವೇಶಿಸುತ್ತಿದ್ದಾನೆ. ಮಂಗಳನ ಈ ಸಂಚಾರವು ಕೆಲವು ರಾಶಿಚಕ್ರದವರಿಗೆ ಮಂಗಳಕರ ಪರಿಣಾಮ ಉಂಟುಮಾಡುತ್ತದೆ. ಮಂಗಳ ಗೋಚರ ಅಥವಾ ಮಂಗಳ ರಾಶಿಪರಿವರ್ತನೆಯಿಂದ ಯಾವ ರಾಶಿಯವರಿಗೆ ಲಾಭ, ಯಾವ ರಾಶಿಯವರಿಗೆ ನಷ್ಟ ಇಲ್ಲಿದೆ ಮಾಹಿತಿ.ಕ್ಲಿಕ್‌ ಮಾಡಿ.

Ketu Transit 2023: ಈ ಸಲ ರಾಹು ಅಲ್ಲ, ಕೇತು ಸಂಚಾರದ ಪರಿಣಾಮ! ಹೊಸ ವರ್ಷ 4 ರಾಶಿಯವರಿಗೆ ಪ್ರಯೋಜನ! ನಿಮ್ಮ ರಾಶಿಯೂ ಇದೆಯೇ?

Ketu Transit 2023:ಹೊಸ ವರ್ಷದ ಆರಂಭದಲ್ಲಿ ಕೇತು ರಾಶಿಯನ್ನು ಬದಲಾಯಿಸುತ್ತಾನೆ. ಇದು 4 ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಅವು ಯಾವುವು ಎಂದು ನೋಡೋಣ. ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ.

Purnima 2023: 12 ತಿಂಗಳು 13 ಹುಣ್ಣಿಮೆ; ಹೊಸ ವರ್ಷದಲ್ಲೇಕೆ ಹೀಗೆ?

Purnima 2023: ಮುಂದಿನ ವರ್ಷ ತಿಂಗಳು ಹನ್ನೆರಡೇ ಇದ್ದರೂ ಹುಣ್ಣಿಮೆ ಮಾತ್ರ 13 ಯಾಕೆ? ಹೊಸ ವರ್ಷದ ಹುಣ್ಣಿಮೆಗಳ ಪೂರ್ಣ ಪಟ್ಟಿಗೆ ಇಲ್ಲಿ ಕ್ಲಿಕ್‌ ಮಾಡಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ