logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆದಿತ್ಯ ಮಂಗಳ ರಾಜಯೋಗ; ನಿಮ್ಮದು ಈ ರಾಶಿಯಾಗಿದ್ದರೆ ಮುಂಬರಲಿದೆ ನಿಮ್ಮ ಪಾಲಿನ ಸುವರ್ಣ ದಿನಗಳು

ಆದಿತ್ಯ ಮಂಗಳ ರಾಜಯೋಗ; ನಿಮ್ಮದು ಈ ರಾಶಿಯಾಗಿದ್ದರೆ ಮುಂಬರಲಿದೆ ನಿಮ್ಮ ಪಾಲಿನ ಸುವರ್ಣ ದಿನಗಳು

HT Kannada Desk HT Kannada

Dec 28, 2023 11:44 AM IST

google News

ಆದಿತ್ಯ ಮಂಗಳ ರಾಜಯೋಗ. (HT File Photo)

    • Aditya Mangala Rajayoga: ಸೂರ್ಯನು ಇದಾಗಲೇ ಧನು ರಾಶಿಯಲ್ಲಿ ಚಲಿಸುತ್ತಿದ್ದಾನೆ. ಇದೀಗ ಮಂಗಳನೂ ಸಹ ಅದೇ ರಾಶಿಗೆ ಪ್ರವೇಶಿಸುವುದರಿಂದ ಪ್ರಬಲವಾದ ಆದಿತ್ಯ ಮಂಗಳ ರಾಜಯೋಗವು ರೂಪುಗೊಳ್ಳಲಿದೆ. ಇದೇ ಕಾರಣದಿಂದಾಗಿ ಈ ರಾಶಿಯ ಜನರು ಉತ್ತಮ ಯೋಗವನ್ನು ಪಡೆಯಲಿದ್ದಾರೆ.
ಆದಿತ್ಯ ಮಂಗಳ ರಾಜಯೋಗ. (HT File Photo)
ಆದಿತ್ಯ ಮಂಗಳ ರಾಜಯೋಗ. (HT File Photo)

ಗ್ರಹಗಳ ಅಧಿಪತಿಯಾದ ಮಂಗಳನು 2023 ರ ಕೊನೆಯ ದಿನಗಳಲ್ಲಿ, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತಾನೆ. ಡಿಸೆಂಬರ್ 27 ರಂದು ಮಂಗಳನು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶಿಸಿರುತ್ತಾನೆ. ಜ್ಯೋತಿಷ್ಯಶಾಸ್ತ್ರದಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಸೂರ್ಯನು ಡಿಸೆಂಬರ್ 16 ರಿಂದ ಧನು ರಾಶಿಯಲ್ಲಿ ಚಲಿಸುತ್ತಿದ್ದಾನೆ. ಇದೀಗ ಮಂಗಳ ಗ್ರಹ ಕೂಡ ಧನು ರಾಶಿಗೆ ಪ್ರವೇಶಿಸುತ್ತಿರುವುದರಿಂದ ಅದ್ಭುತವಾದ ಆದಿತ್ಯ ಮಂಗಳ ರಾಜಯೋಗವನ್ನು ಸೃಷ್ಟಿಸಿದೆ. ಈ ರಾಜಯೋಗದಿಂದಾಗಿ ಕೆಲವು ರಾಶಿಯವರು ಒಳ್ಳೆಯ ಫಲಿತಾಂಶಗಳನ್ನು ಮತ್ತು ಇತರ ಕೆಲವು ರಾಶಿಯವರು ಕೆಟ್ಟ ಫಲಿತಾಂಶಗಳನ್ನು ಪಡೆಯಲಿವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮಂಗಳ ಗ್ರಹವು ಎಲ್ಲಾ ಗ್ರಹಗಳ ಅಧಿಪತಿಯಾಗಿರುತ್ತಾನೆ ಹಾಗೂ ಧೈರ್ಯ, ಆತ್ಮವಿಶ್ವಾಸ, ಪರಾಕ್ರಮ, ಶಕ್ತಿ ಮತ್ತು ಶೌರ್ಯವನ್ನು ಸಂಕೇತಿಸುತ್ತದೆ. ಧನು ರಾಶಿಯಲ್ಲಿ ಮಂಗಳ ಗ್ರಹದ ಸಂಚಾರವು ಕೆಲವು ರಾಶಿಯ ಜನರಿಗೆ ಸಂತೋಷವನ್ನು ತರಲಿದೆ. ಕೆಲಸದಲ್ಲಿನ ಅಡಚಣೆಗಳು ನಿವಾರಣೆಯಾಗುತ್ತವೆ. ಮಂಗಳ ಗ್ರಹವು ಧನು ರಾಶಿಗೆ ಪ್ರವೇಶಿಸುವುದರ ಮೂಲಕ ಉಂಟಾದ ಆದಿತ್ಯ ಮಂಗಳ ರಾಜಯೋಗವು ಯಾವ ರಾಶಿಯವರಿಗೆ ಲಾಭವನ್ನು ತರಲಿದೆ ಇಲ್ಲಿದೆ ಓದಿ.

ಇದನ್ನೂ ಓದಿ: Jupiter Transit: ಗುರುವಿನ ಸ್ಥಾನಪಲ್ಲಟ; ಇನ್ನೆರಡು ದಿನಗಳಲ್ಲಿ ಈ ಕೆಲವು ರಾಶಿಯವರ ಜೀವನದಲ್ಲಿ ಉಂಟಾಗಲಿದೆ ಭಾರಿ ಬದಲಾವಣೆ

ಮೇಷ ರಾಶಿ

ನಿಮಗೆ ಬರಬೇಕಾಗಿದ್ದ ಬಾಕಿ ಹಣವನ್ನು ಮರಳಿ ಪಡೆಯುವಿರಿ. ವಹಿವಾಟಿಗೆ ಸಂಬಂಧಿಸಿದ ಪ್ರಕರಣಗಳು ಬಗೆಹರಿಯುವುದು. ಕೈಗೆತ್ತಿಕೊಂಡ ಪ್ರತಿಯೊಂದು ಕೆಲಸದಲ್ಲೂ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಕಲೆಯಲ್ಲಿ ಆಸಕ್ತಿ ಹೆಚ್ಚುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಸಮಯ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ಅವರು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ಆರ್ಥಿಕ ಲಾಭ ಸಾಧ್ಯ. ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.

ಮಿಥುನ ರಾಶಿ

ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಯೋಗವಿದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ತುಂಬಾ ಒಳ್ಳೆಯದನ್ನು ಮಾಡಲಿದೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಕೆಲಸ ಮಾಡುವವರಿಗೆ ಬಡ್ತಿ ದೊರೆಯುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳು ದೊರೆಯಲಿವೆ. ಸಂಪತ್ತು ಹೆಚ್ಚುತ್ತದೆ.

ಸಿಂಹ ರಾಶಿ

ಕಚೇರಿಯಲ್ಲಿ ಉತ್ತಮ ವಾತಾವರಣವಿದ್ದು, ಅಲ್ಲಿ ಕೆಲಸವನ್ನು ಯಾವುದೇ ತೊಂದರೆಗಳಲ್ಲಿದೆ ಮಾಡಿಕೊಂಡು ಹೋಗುತ್ತೀರಿ. ಆದಿತ್ಯ ಮಂಗಳ ರಾಜಯೋಗದಿಂದಾಗಿ ಇತರರ ಬಳಿ ಉಳಿದಿರುವ ನಿಮ್ಮ ಹಣವನ್ನು ನೀವು ಪಡೆಯುತ್ತೀರಿ. ಆರೋಗ್ಯಕರ ದಿನಗಳು ನಿಮ್ಮದಾಗಲಿದೆ. ದೀರ್ಘಕಾಲದ ಕಾಯಿಲೆಗಳು ನಿವಾರಣೆಯಾಗುತ್ತದೆ. ಆದಾಯದ ವಿಷಯದಲ್ಲಿ, ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿರುತ್ತದೆ. ಕುಟುಂಬ ಸಮೇತ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಅವಕಾಶವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ವ್ಯಾಪಾರದಲ್ಲಿ ಲಾಭವಿದೆ. ಅಲ್ಲದೆ ವೆಚ್ಚವೂ ಹೆಚ್ಚಾಗಲಿದೆ.

ಧನು ರಾಶಿ

ಆದಿತ್ಯ ಮಂಗಳ ರಾಜಯೋಗವು ಧನು ರಾಶಿಯವರಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ವ್ಯಾಪಾರ ವಿಸ್ತರಣೆಗೆ ಇದು ಸೂಕ್ತ ಸಮಯ. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗುತ್ತೀರಿ ಮತ್ತು ಸಂತೋಷದ ಸಮಯವನ್ನು ಕಳೆಯುತ್ತೀರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂತಾನದ ವಿಷಯದಲ್ಲಿಒಳ್ಳೆಯ ಸುದ್ದಿ ಸಿಗಲಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ