logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Palmistry: ಹಸ್ತದಿಂದ ತಿಳಿಯಬಹುದು ಭವಿಷ್ಯ; ಅಗಲವಾದ ಹಸ್ತ, ಮೃದು, ಒರಟು ಹಸ್ತದವರ ವ್ಯಕ್ತಿತ್ವ ಹೇಗಿರುತ್ತದೆ ನೋಡಿ

Palmistry: ಹಸ್ತದಿಂದ ತಿಳಿಯಬಹುದು ಭವಿಷ್ಯ; ಅಗಲವಾದ ಹಸ್ತ, ಮೃದು, ಒರಟು ಹಸ್ತದವರ ವ್ಯಕ್ತಿತ್ವ ಹೇಗಿರುತ್ತದೆ ನೋಡಿ

HT Kannada Desk HT Kannada

Oct 12, 2023 07:30 AM IST

google News

ಹಸ್ತದಿಂದ ತಿಳಿಯಬಹುದು ಭವಿಷ್ಯ

    • ಜ್ಯೋತಿಷ್ಯದಲ್ಲಿ ವೈದಿಕ ಜ್ಯೋತಿಷ್ಯದಷ್ಟೇ ಪರಿಪಕ್ವವಾದ ಶಾಸ್ತ್ರ ಹಸ್ತಸಾಮುದ್ರಿಕೆ. ಹಸ್ತಸಾಮುದ್ರಿಕೆಯಲ್ಲಿ ಉಗುರಿನಿಂದ ಹಿಡಿದು ಪಾದದವರೆಗೂ ಒಬ್ಬ ವ್ಯಕ್ತಿಯ ಮನಸ್ಸು ಸ್ವಭಾವ ಮತ್ತು ಆತನ ಭವಿಷ್ಯವನ್ನು ತಿಳಿಸುತ್ತದೆ. ಬರಹ: ಜ್ಯೋತಿಷಿ ಎಚ್‌. ಸತೀಶ್‌ 
ಹಸ್ತದಿಂದ ತಿಳಿಯಬಹುದು ಭವಿಷ್ಯ
ಹಸ್ತದಿಂದ ತಿಳಿಯಬಹುದು ಭವಿಷ್ಯ

ಹಸ್ತಸಾಮುದ್ರಿಕೆಗೆ ಜ್ಯೋತಿಷ್ಯಶಾಸ್ತ್ರದಲ್ಲಿ ವಿಶೇಷ ಪ್ರಾಧಾನ್ಯವಿದೆ. ಇದನ್ನು ನಿಖರ ಜ್ಯೋತಿಷ್ಯ ಎಂದು ಪರಿಗಣಿಸಲಾಗುತ್ತದೆ. ಹಸ್ತಸಾಮುದ್ರಿಕೆಯು ನಮ್ಮ ಭವಿಷ್ಯ ಮಾತ್ರವಲ್ಲ, ವ್ಯಕ್ತಿತ್ವವನ್ನೂ ತಿಳಿಸುತ್ತದೆ. ಇಂದಿನ ಲೇಖನಗಳಲ್ಲಿ ಅಗಲವಾದ ಹಸ್ತ, ಚಿಕ್ಕ ಹಸ್ತ, ಮೃದುವಾದ ಹಸ್ತ, ಒರಟಾದ ಹಸ್ತದವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು, ಸಣ್ಣ ಪ್ರವಾಸಗಳು ಹೆಚ್ಚಿನ ಆನಂದವನ್ನು ನೀಡುತ್ತವೆ

Dec 02, 2024 03:50 PM

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ದೊಡ್ಡದಾದ ಹಸ್ತ

ಯಾವುದೇ ವ್ಯಕ್ತಿಯ ಹಸ್ತವು ದೊಡ್ಡದಾಗಿದ್ದಲ್ಲಿ ಅವರಿಗೆ ತಮ್ಮ ಬಗ್ಗೆ ಹೆಚ್ಚಿನ ಅಭಿಮಾನ ವಿರುತ್ತದೆ. ತಾವೇ ದೊಡ್ಡವರು, ತಾವು ಮಾಡುವ ಕೆಲಸ ಕಾರ್ಯಗಳೆಲ್ಲವೂ ಸರಿ ಎಂಬ ಭಾವನೆ ಇರುತ್ತದೆ. ಯಾರ ಮಾತನ್ನು ಕೇಳದೆ ಕೇವಲ ಸ್ವಂತ ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ. ಸಮಾಜದಲ್ಲಿ ಗೌರವ ಸ್ಥಾನಮಾನ ಲಭ್ಯವಾಗುತ್ತದೆ. ಇವರ ವಂಶದ ಪೂರ್ವಜರು ಸಮಾಜದ ನಾಯಕತ್ವವನ್ನು ವಹಿಸಿರುತ್ತಾರೆ. ಹಣದ ಬಗ್ಗೆ ಯೋಚನೆ ಇಲ್ಲದೆ ಸದಾ ಕಾಲವೂ ಸಂತೋಷದಿಂದಲೇ ಜೀವನ ನಡೆಸುತ್ತಾರೆ. ಬುದ್ಧಿವಂತಿಕೆಯ ನಿರ್ಧಾರಗಳು ಮತ್ತು ನಯವಾದ ಮಾತುಕತೆ ಜೀವನಕ್ಕೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ದೂರದ ಸ್ಥಳಗಳಿಗೆ ಪ್ರವಾಸ ಮಾಡುವುದು ಬಲು ಇಷ್ಟ. ಆಕರ್ಷಕವಾದ ವಸ್ತುಗಳನ್ನು ಮಾತ್ರ ಕೊಳ್ಳುತ್ತಾರೆ. ಇವರಲ್ಲಿ ವಿಶೇಷವಾದಂತಹ ಪ್ರತಿಭೆ ಇರುತ್ತದೆ. ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡುತ್ತಾರೆ.

ಸಣ್ಣ ಹಸ್ತ ಹೊಂದಿರುವುದು

ಚಿಕ್ಕ ಹಸ್ತ ಹೊಂದಿರುವವರ ಹಸ್ತವು ವಿಶೇಷ ಗುಣವನ್ನು ಸೂಚಿಸುತ್ತವೆ. ಇವರಲ್ಲಿ ದುಡುಕಿನ ಗುಣವಿರುವುದಿಲ್ಲ. ಅನಾವಶ್ಯಕವಾಗಿ ಸಿಡುಕುವುದಿಲ್ಲ. ಸ್ವಯಂಪ್ರೇರಿತರಾಗಿ ಕೆಲಸ ಮಾಡುವುದಿಲ್ಲ. ಅತಿ ಸರಳ ಮಟ್ಟದ ಕೆಲಸ ಕಾರ್ಯವಾದರೂ ಹೆಚ್ಚಿನ ಯೋಚಿಸಿ ಕೆಲಸ ಮಾಡುವುದು ಇವರ ವಿಶೇಷತೆ. ಇದರಿಂದಾಗಿ ಸಾಮಾನ್ಯವಾಗಿ ಯಾವುದೇ ತೊಂದರೆ ಉಂಟಾಗದು. ಯಾರ ತಪ್ಪನ್ನು ತೋರ್ಪಡಿಸದೆ ಕ್ಷಮಾ ಗುಣದಿಂದ ತಾಳ್ಮೆಯಿಂದ ವರ್ತಿಸುತ್ತಾರೆ. ಅತಿ ಆಸೆ ಇರುವುದಿಲ್ಲ. ಆದರೆ ಸ್ವಂತ ಮನೆ, ಸ್ವಂತ ವಾಹನಗಳು ಇವರ ಮುಖ್ಯ ಗುರಿಯಾಗಿರುತ್ತದೆ. ಸುಖವಾದ ಜೀವನವನ್ನು ಬಯಸುತ್ತಾರೆ. ಹಿತಕಾರವಾದ ನಿದ್ದೆ ಬೇಕೆನಿಸುತ್ತದೆ. ರುಚಿಕರವಾದ ಭೋಜನವನ್ನು ಇಷ್ಟಪಡುತ್ತಾರೆ. ಅತಿಯಾಗಿ ತಿನ್ನುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಎದುರಾಗುತ್ತದೆ. ದೊರೆಯದ ಸ್ಥಾನಮಾನವನ್ನು ಬುದ್ದಿವಂತಿಕೆಯಿಂದ ಗಳಿಸುತ್ತಾರೆ. ಒಮ್ಮೆ ತೀರ್ಮಾನಿಸಿದರೆ ಇವರಿಗೆ ಯಾವುದು ಅಸಾಧ್ಯವಲ್ಲ.

ಮಧ್ಯಮ ಹಸ್ತ

ದೊಡ್ಡ ಪ್ರಮಾಣದ ಮತ್ತು ಚಿಕ್ಕ ಪ್ರಮಾಣದ ಹಸ್ತಗಳ ನಡುವಿನ ಹಸ್ತವೇ ಸಾಮಾನ್ಯ ಹಸ್ತ. ಸಾಮಾನ್ಯವಾಗಿ ಇವರು ಜೀವನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮನೆಯಲ್ಲಿರುವ ಬುದ್ಧಿಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಿಲ್ಲ. ಸಿಕ್ಕಪುಟ್ಟ ವಿಚಾರಗಳಿಗೂ ಬೇರೆಯವರನ್ನು ಆಶ್ರಯಿಸುವಿರಿ. ಅತಿಯಾದ ಆಸೆ ಇರುವುದಿಲ್ಲ. ಹೆಚ್ಚಿನ ಪ್ರಯತ್ನ ಪಡದೆ ದೊರೆಯುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಅವಶ್ಯಕತೆ ಇದ್ದಷ್ಟು ಹಣವನ್ನು ಸಂಪಾದಿಸುವಿರಿ. ಹೆಚ್ಚಿನ ಆಸೆ ಇರದು. ಹಣವನ್ನು ಉಳಿಸುವ ಯೋಚನೆ ಮಾಡುವುದಿಲ್ಲ. ಸಂಸಾರದಲ್ಲಿನ ತೊಂದರೆಗಳನ್ನು ಸುಲಭವಾಗಿ ಎದುರಿಸಬಲ್ಲರು. ಇವರಿರುವ ಕಡೆ ವಾದ ವಿವಾದ ಜಗಳ ಕದನಗಳು ಇರುವುದಿಲ್ಲ. ಹೆಚ್ಚಿನ ಸ್ನೇಹಿತರು ಮತ್ತು ಬಂಧು ಬಳಗದವರು ಇವರ ಬಾಂಧವ್ಯವನ್ನು ಬಯಸಿ ಬರುತ್ತಾರೆ. ಇವರನ್ನು ಅಜಾತಶತ್ರು ಎಂದು ಕರೆಯಬಹುದು.

ಮೃದುವಾದ ಹಸ್ತ

ಇವರಿಗೆ ತಾಳ್ಮೆ ಹೆಚ್ಚು. ಯಾರನ್ನೂ ಆಶ್ರಯಿಸದೆ ತಮಗೆ ಇಷ್ಟವೆನಿಸುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ತಾವಾಗಿಯೇ ಬೇರೆಯವರ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುತ್ತಾರೆ. ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುತ್ತಾರೆ. ಕಷ್ಟದಲ್ಲಿ ಇರುವ ಜನರಿಗೆ ತಾವಾಗಿಯೇ ಸಹಾಯ ಮಾಡುತ್ತಾರೆ. ವಿರೋಧಿಗಳು ಇರುತ್ತಾರೆ. ಆಧುನಿಕ ಜ್ಞಾನದ ಬಗ್ಗೆ ಸತತವಾಗಿ ಹೆಚ್ಚಿನ ಅಧ್ಯಯನ ನಡೆಸುತ್ತಾರೆ. ಕೇಳುಗರಿಗೆ ಬೇಸರ ಬರುವಷ್ಟು ಮಾತನಾಡುತ್ತಾರೆ.

ಒರಟಾದ ಹಸ್ತ

ಮುಟ್ಟಿದರೆ ಗಟ್ಟಿತನ ಇರುವ ಹಸ್ತದವರು ಕಷ್ಟದಿಂದ ಜೀವನದಲ್ಲಿ ಮುಂದೆ ಬಂದಿರುತ್ತಾರೆ. ಹಣಕಾಸಿನ ವಿಚಾರದಲ್ಲಿ ಸಂತೃಪ್ತಿ ಇರುವುದಿಲ್ಲ. ಆದಾಯಕ್ಕೆ ತಕ್ಕಂತಹ ಖರ್ಚು ವೆಚ್ಚಗಳು ಇರುತ್ತವೆ. ಯೋಚನೆ ಮಾಡದೆ ಕೆಲಸ ಕಾರ್ಯಗಳಲ್ಲಿ ತೊಡಗುವ ಕಾರಣ ತೊಂದರೆ ಎದುರಾಗಬಹುದು. ಯಾರನ್ನೂ ಲೆಕ್ಕಿಸುವುದಿಲ್ಲ. ಜೀವನದ ಆಗುಹೋಗುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ .ಆದರೆ ಕುಟುಂಬವನ್ನು ಶಾಂತ ಚಿತ್ತರಾಗಿ ಮುಂದೆ ನಡೆಸುತ್ತಾರೆ. ಕುಟುಂಬದ ಸದಸ್ಯರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವರು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ