logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Women Horoscope: ಸ್ತ್ರೀ ವಾರ ಭವಿಷ್ಯ; ಹೆಣ್ಣು ಸಂಸಾರದ ಕಣ್ಣು, ಈ ಎರಡೂ ರಾಶಿಯವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ

Weekly Women Horoscope: ಸ್ತ್ರೀ ವಾರ ಭವಿಷ್ಯ; ಹೆಣ್ಣು ಸಂಸಾರದ ಕಣ್ಣು, ಈ ಎರಡೂ ರಾಶಿಯವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ

HT Kannada Desk HT Kannada

Jun 02, 2023 05:45 AM IST

google News

ಸ್ತ್ರೀ ವಾರ ಭವಿಷ್ಯ

  • ಶುಕ್ರವಾರ, ಲಕ್ಷ್ಮಿಯ ವಾರ. ಮಹಿಳೆಯರನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಹೆಣ್ಣಾದವಳು ಮನಸ್ಸು ಮಾಡಿದರೆ ಜಗತ್ತನ್ನೇ ಆಳಬಲ್ಲಳು. ಇಂಥಹ ಸ್ತ್ರೀಶಕ್ತಿಗೆ ಗೌರವ ಪೂರ್ವಕ ಜೋತಿಷ್ಯವೇ ಈ ದ್ವಾದಶ ಸ್ತ್ರೀ ವಾರಭವಿಷ್ಯ ಜೂನ್‌ 2 ರಿಂದ 8ವರೆಗೆ ಸ್ತ್ರೀ ಭವಿಷ್ಯ ಹೇಗಿರಲಿದೆ ನೋಡೋಣ. ಖ್ಯಾತ ಜ್ಯೋತಿಷಿ ಹೆಚ್‌ ಸತೀಶ್‌ ಈ ಜೋತಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ.

ಸ್ತ್ರೀ ವಾರ ಭವಿಷ್ಯ
ಸ್ತ್ರೀ ವಾರ ಭವಿಷ್ಯ (PC: Freepik.com)

ಮೇಷ

ಹಣದ ತೊಂದರೆ ಬಾರದು. ಕುಟುಂಬದ ಜವಾಬ್ದಾರಿ ಹೆಚ್ಚಿನದಾಗಿರುತ್ತದೆ. ವಿನಾಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆತು ಅಧಿಕಾರಿಗಳ ಪ್ರಶಂಸೆ ಗಳಿಸುವಿರಿ. ಹಣದ ಬಗ್ಗೆ ಅತಿಯಾಸೆ ಇರುವುದಿಲ್ಲ. ಅಲಂಕಾರದ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕೌಟುಂಬಿಕ ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ.

ತಾಜಾ ಫೋಟೊಗಳು

ಉದ್ಯೋಗದಲ್ಲಿ ಭಡ್ತಿ ಪಡೆಯಲಿದ್ದೀರಿ, ಅತಿಯಾದ ಖರ್ಚಿನಿಂದಾಗಿ ಮಾನಸಿಕ ಕಿರಿಕಿರಿ; ನಾಳಿನ ದಿನಭವಿಷ್ಯ

Dec 04, 2024 04:56 PM

ನಾಳಿನ ದಿನ ಭವಿಷ್ಯ: ಸಂಗಾತಿಯೊಂದಿಗೆ ವಾದಗಳನ್ನು ತಪ್ಪಿಸಿ, ಶೈಕ್ಷಣಿಕ ಕೆಲಸದ ಸವಾಲುಗಳನ್ನು ನಿವಾರಿಸಲು ಪ್ರಯತ್ನಿಸುತ್ತೀರಿ

Dec 03, 2024 04:12 PM

ಲಕ್ಷ್ಮಿ ಅನುಗ್ರಹ: ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಈ ರಾಶಿಯವರು ಬೆಳೆಯುತ್ತಾರೆ, ಹಣದ ಜೊತೆಗೆ ಸಂತೋಷವು ಇರುತ್ತೆ

Dec 03, 2024 09:02 AM

ನಾಳಿನ ದಿನ ಭವಿಷ್ಯ: ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು, ಸಣ್ಣ ಪ್ರವಾಸಗಳು ಹೆಚ್ಚಿನ ಆನಂದವನ್ನು ನೀಡುತ್ತವೆ

Dec 02, 2024 03:50 PM

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

ವೃಷಭ

ಸ್ಥಿರವಾದ ಮನಸ್ಥಿತಿಯಿಂದ ಜೀವನದಲ್ಲಿನ ಕಷ್ಟ ನಷ್ಟಗಳನ್ನು ಗೆಲ್ಲುವಿರಿ. ಚಿಕ್ಕ ಪುಟ್ಟ ವಿಚಾರಗಳಿಗೂ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆದಾಯದಲ್ಲಿ ಯಾವುದೇ ತೊಂದರೆ ಉಂಟಾಗದು. ಕುಟುಂಬದ ಸದಸ್ಯರ ಸಹಾಯದಿಂದ ಕಡಿಮೆ ಬಂಡವಾಳದಲ್ಲಿ ವಾಣಿಜ್ಯ ಸಂಸ್ಥೆಯನ್ನು ಆರಂಭಿಸುವಿರಿ. ತವರು ಮನೆಗೆ ಸಹಾಯ ಮಾಡುವಿರಿ. ಸಂತಾನ ಲಾಭವಿದೆ. ನೆಮ್ಮದಿಯ ವಾತಾವರಣ ಇರುತ್ತದೆ.

ಮಿಥುನ

ಮುಖ್ಯವಾದ ಕೆಲಸವೊಂದನ್ನು ಅನಿವಾರ್ಯವಾಗಿ ಮುಂದೂಡುವಿರಿ. ಅಧಿಕವಾದ ಕಾರ್ಯ ಒತ್ತಡ ಇರುತ್ತದೆ. ಜವಾಬ್ದಾರಿಯೂ ಹೆಚ್ಚುತ್ತದೆ. ತೆಗೆದುಕೊಳ್ಳುವ ನಿರ್ಧಾರಗಳನ್ನು ಬದಲಿಸದಿರಿ. ಆದಾಯ ಮತ್ತು ಖರ್ಚು ಸರಿಸಮನಾಗಿ ಇರುತ್ತದೆ. ಮೌನದಿಂದ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡು ಹಿಡಿಯುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ.

ಕಟಕ

ಚುರುಕುತನ ಎಲ್ಲಾ ವಿಚಾರದಲ್ಲಿಯೂ ಗೆಲುವನ್ನು ನೀಡುತ್ತದೆ. ಶಾಂತಿ ನೆಮ್ಮದಿಯ ಜೀವನ ನಡೆಸುವಿರಿ. ದಂಪತಿಗಳ ನಡುವೆ ಅನ್ಯೋನ್ಯತೆ ಇರುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ಮನರಂಜನೆಗಾಗಿ ಕುಟುಂಬದ ಸದಸ್ಯರ ಜೊತೆಯಲ್ಲಿ ಪ್ರವಾಸಕ್ಕೆ ತೆರಳುವಿರಿ. ಶೀತದ ತೊಂದರೆ ಇರುತ್ತದೆ. ಮಕ್ಕಳ ಭವಿಷ್ಯತ್ತಿಗಾಗಿ ಸ್ಟಾಕ್ ಮತ್ತು ಷೇರಿನಲ್ಲಿ ಹಣವನ್ನು ವಿನಿಯೋಗಿಸುವಿರಿ.

ಸಿಂಹ

ದಿಟ್ಟತನದಿಂದ ಜೀವನದಲ್ಲಿ ಮುಂದುವರಿಯುವಿರಿ. ಸಮಾಜ ಸೇವೆಯಲ್ಲಿ ಗುರುತಿಸಿಕೊಳ್ಳುವಿರಿ. ಗಣ್ಯವ್ಯಕ್ತಿಗಳ ಸಹಕಾರ ಇರುತ್ತದೆ. ಉದ್ಯೋಗದಲ್ಲಿ ಅಧಿಕಾರಿಯಾಗಿ ಬಡ್ತಿ ದೊರೆಯುತ್ತದೆ. ಕುಟುಂಬದ ಉನ್ನತಿಗೆ ಕಾರಣರಾಗುವಿರಿ. ದಂಪತಿಗಳಲ್ಲಿ ಪ್ರೀತಿ ವಿಶ್ವಾಸ ಇರುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಯಶಸ್ಸನ್ನು ಗಳಿಸುವಿರಿ. ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವ ಸಾಧ್ಯತೆಗಳಿವೆ.

ಕನ್ಯಾ

ತಪ್ಪು ಒಪ್ಪುಗಳನ್ನು ತಿಳಿಯದೆ ಎಲ್ಲರನ್ನೂ ಟೀಕಿಸುವಿರಿ. ಯಾವುದೇ ವಿಚಾರದಲ್ಲಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ದೀರ್ಘ ಪ್ರವಾಸದ ಯೋಚನೆ ಕೈಬಿಡಿ. ವಾಹನವನ್ನು ಕೊಳ್ಳುವ ಯೋಜನೆ ರೂಪಿಸುವಿರಿ. ವಾಸ ಸ್ಥಳ ಬದಲಾಯಿಸುವಿರಿ.

ತುಲಾ

ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಪತಿಯ ಸಹಕಾರದಿಂದ ಹೊಸ ಉದ್ಯಮ ಆರಂಭಿಸುವಿರಿ. ಜೀವನದಲ್ಲಿ ಯಾವುದೇ ತೊಂದರೆ ಕಾಣದು. ಆದಾಯವೂ ಹೆಚ್ಚುತ್ತದೆ. ಮಕ್ಕಳಿಗಾಗಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಪ್ರಸಾದನ ಸಾಮಗ್ರಿಗಳ ಮಾರಾಟದಲ್ಲಿ ಲಾಭವಿದೆ. ಕಷ್ಟ ಪಡದೆ ಹಣವನ್ನು ಸಂಪಾದಿಸುವ ದಾರಿ ಹುಡುಕುವಿರಿ. ಯೋಗ ಪ್ರಾಣಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ.

ವೃಶ್ಚಿಕ

ಮುಂಗೋಪದಿಂದ ಸಹಬಾಳ್ವೆ ಸಾಧ್ಯವಾಗುವುದಿಲ್ಲ. ಹಠದ ಗುಣ ಕುಟುಂಬದ ಬೇಸರಕ್ಕೆ ಕಾರಣವಾಗುತ್ತದೆ. ಮಾನಸಿಕ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಉದ್ಯೋಗದಲ್ಲಿ ತೊಂದರೆ ಇರುವುದಿಲ್ಲ. ಪಶುಸಂಗೋಪನೆಯಲ್ಲಿ ಆಸಕ್ತಿ ಇರುತ್ತದೆ. ಬೇಸರ ಕಳೆಯಲು ತವರುಮನೆಗೆ ತೆರಳುವಿರಿ. ಮಕ್ಕಳಿಗೆ ಉಷ್ಣವಾಯುವಿನ ದೋಷ ಉಂಟಾಗುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ತೊಂದರೆ ಇರುತ್ತದೆ.

ಧನಸ್ಸು

ಬದಲಾಗದ ತೀರ್ಮಾನಗಳ ಕಾರಣ ಕೆಲಸ ಕಾರ್ಯಾಗಳಲ್ಲಿ ಜಯ ಗಳಿಸುವಿರಿ. ರಾಜಕೀಯ ಕ್ಷೇತ್ರದಲ್ಲಿ ಗುರುತರ ಹೊಣೆ ದೊರೆಯುತ್ತದೆ. ಅವಿರತ ಪ್ರಯತ್ನದಿಂದ ಆದಾಯದಲ್ಲಿ ವೃದ್ಧಿ ಕಂಡುಬರುತ್ತದೆ. ಸಂಗೀತ ನಾಟ್ಯದ ತರಬೇತಿ ನೀಡುವವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ತರಬೇತಿ ನೀಡುವವರಿಗೆ ಸರ್ಕಾರದ ಸಹಾಯ ಸಹಕಾರ ದೊರೆಯುತ್ತದೆ.

ಮಕರ

ಗೆಲ್ಲುವವರೆಗೂ ಪ್ರಯತ್ನ ನಿಲ್ಲಿಸುವುದಿಲ್ಲ. ಬೇಸರ ಬರುವಷ್ಟು ಮಾತನಾಡುವಿರಿ. ಕಷ್ಟ ಜೀವಿಗಳು. ತಾಂತ್ರಿಕ ಪರಿಣತಿ ಪಡೆದವರು ವಿದೇಶಕ್ಕೆ ತೆರಳುವ ಅವಕಾಶ ಪಡೆಯುತ್ತಾರೆ. ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಸ್ವಂತ ಪರಿಶ್ರಮದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಮಾತು ಕಡಿಮೆ ಮಾಡಿದರೆ ವಿವಾದ ಉಂಟಾಗದು. ಹಣ್ಣಿನ ವ್ಯಾಪಾರದಲ್ಲಿ ಉತ್ತಮ ಆದಾಯವನ್ನು ಗಳಿಸುವಿರಿ.

ಕುಂಭ

ಹೆಚ್ಚು ಮಾತನಾಡದೆ ಕೆಲಸ ಕಾರ್ಯಗಳನ್ನು ಸಂಪೂರ್ಣಗೊಳಿಸುವಿರಿ. ತಡವಾದರೂ ಹಣದ ಗಳಿಕೆಯಲ್ಲಿ ಉನ್ನತ ಸ್ಥಾನ ಗಳಿಸುವಿರಿ. ಹಾರ್ಮೋನಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಕೇವಲ ವ್ಯಾಯಾಮದಿಂದ ಆರೋಗ್ಯವನ್ನು ಸರಿಪಡಿಸಿಕೊಳ್ಳಬಲ್ಲಿರಿ. ಕಿರಿಯ ಸೋದರಿಯ ವಿವಾಹಕ್ಕೆ ನೆರವಾಗುವಿರಿ. ಉದ್ಯೋಗ ಒಳ್ಳೆಯದು. ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.

ಮೀನ

ಮಾತಿನಲ್ಲಿ ಮೋಡಿ ಮಾಡುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕುಟುಂಬಕ್ಕೆ ಸೇರಿದ ವ್ಯಾಪಾರ ವ್ಯವಹಾರದ ಪೂರ್ಣ ಜವಾಬ್ದಾರಿ ದೊರೆಯುತ್ತದೆ. ಉದ್ಯೋಗವನ್ನು ಇಚ್ಚಿಸದ ನೀವು ಸ್ವಂತ ವ್ಯಾಪಾರ ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಭೂವಿವಾದವೊಂದನ್ನು ಎದುರಿಸಬೇಕಾಗುತ್ತದೆ. ಅವಿವಾಹಿತರಿಗೆ ವಿವಾಹವಾಗುತ್ತದೆ. ಹಣದ ತೊಂದರೆ ಇರುವುದಿಲ್ಲ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ