logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಹೋರಾ ಎಂದರೇನು? ಇದರ ಪ್ರಕಾರ ನಿಮ್ಮ ಕೆಲಸ ಪ್ರಾರಂಭಿಸಿ, ಜೀವನ ಸುಲಭವಾಗುವುದು

ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಹೋರಾ ಎಂದರೇನು? ಇದರ ಪ್ರಕಾರ ನಿಮ್ಮ ಕೆಲಸ ಪ್ರಾರಂಭಿಸಿ, ಜೀವನ ಸುಲಭವಾಗುವುದು

HT Kannada Desk HT Kannada

Jul 26, 2024 03:12 PM IST

google News

ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಹೋರೆ ಎಂದರೇನು? ಇದರ ಪ್ರಕಾರ ನಿಮ್ಮ ಕೆಲಸ ಪ್ರಾರಂಭಿಸಿ, ಜೀವನ ಸುಲಭವಾಗುವುದು

    • ಜ್ಯೋತಿಷ್ಯ ಶಾಸ್ತ್ರದಲ್ಲಿ ಸಮಯ ಬಹಳ ಮುಖ್ಯವಾದದ್ದು. ಗ್ರಹ, ನಕ್ಷತ್ರಗಳ ಚಲನೆಯು ಸಮಯದ ಲೆಕ್ಕಾಚಾರವನ್ನೇ ಅವಲಂಬಿಸಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ದಿನವನ್ನು ಹೋರಾಗಳನ್ನಾಗಿ ಮಾಡಲಾಗಿದೆ. ಈ ಸಮಯದಲ್ಲಿ ಕೈಗೊಳ್ಳುವ ಕೆಲಸಗಳು ಉತ್ತಮ ಫಲ ನೀಡುತ್ತವೆ, ಜೀವನ ಸುಖಮಯದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. (ಬರಹ: ಎಚ್‌.ಸತೀಶ್)
ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಹೋರೆ ಎಂದರೇನು? ಇದರ ಪ್ರಕಾರ ನಿಮ್ಮ ಕೆಲಸ ಪ್ರಾರಂಭಿಸಿ, ಜೀವನ ಸುಲಭವಾಗುವುದು
ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಹೋರೆ ಎಂದರೇನು? ಇದರ ಪ್ರಕಾರ ನಿಮ್ಮ ಕೆಲಸ ಪ್ರಾರಂಭಿಸಿ, ಜೀವನ ಸುಲಭವಾಗುವುದು

ಒಂದು ದಿನವನ್ನು 24 ಹೋರಾಗಳನ್ನಾಗಿ ಮಾಡುತ್ತೇವೆ. ಆದರೆ ಇದರಲ್ಲಿ ರಾಹು ಮತ್ತು ಕೇತುಗಳ ಪರಿಗಣನೆ ಇರುವುದಿಲ್ಲ. ಉಳಿದ ಏಳು ಗ್ರಹಗಳು ಹಗಲು ಮತ್ತು ರಾತ್ರಿಯ ವೇಳೆ ಒಂದು ಗಂಟೆಗೆ ಒಮ್ಮೆ ಬದಲಾಗುತ್ತದೆ. ಈ ಲೆಕ್ಕಾಚಾರವು ಸೂರ್ಯೋದಯವನ್ನು ಆಧರಿಸಿದೆ. ಪ್ರಸಕ್ತ ನಡೆಯುತ್ತಿರುವ ಹೋರಾವನ್ನು ತಿಳಿಯಲು ಚಿಕ್ಕದಾದ ಶ್ಲೋಕವಿದೆ. “ಅರ್ಕ ಶುಕ್ರ ಬುಧ ಚಂದ್ರ ಮಂದಜೀವ ಧರಾಸುತ”. ಅರ್ಕ ಎಂದರೆ ಸೂರ್ಯ. ಮಂದಜೀವ ಎಂದರೆ ಶನಿ. ಧರಾಸುತ ಎಂದರೆ ಕುಜ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಉದಾಹರಣೆಗೆ ಜುಲೈ 28 ಭಾನುವಾರವಾಗುತ್ತದೆ. ಅಂದಿನ ಸೂರ್ಯೋದಯವು 6.08 ಆಗುತ್ತದೆ. ಮೇಲಿನ ಶ್ಲೋಕದ ಪ್ರಕಾರ ಆರಂಭದಲ್ಲಿ ರವಿಹೋರಾ ಇರುತ್ತದೆ. ಅಂದರೆ ರವಿಹೋರಾ 7.08 ರವರೆಗೂ ಇರುತ್ತದೆ. ಆನಂತರ ಶುಕ್ರಹೋರಾ ಆರಂಭವಾಗಿ 8.08 ರವರೆಗೂ ಇರುತ್ತದೆ. ಆನಂತರ ಶ್ಲೋಕದ ಅನ್ವಯ ಹೋರಾಗಳು ಬದಲಾಗುತ್ತವೆ. ಇದರ ಅನ್ವಯ

ರವಿಯ ಹೋರಾ 6.08 ರಿಂದ 07.08

ಶುಕ್ರ ಹೋರಾ 07.08 ರಿಂದ 08.08

ಬುಧಹೋರಾ 08.08 ರಿಂದ 09.08

ಚಂದ್ರ ಹೋರಾ 09.08 ರಿಂದ 10.08

ಹೀಗೆ ಮುಂದುವರೆಯುತ್ತದೆ

ರವಿ ಹೋರಾದಲ್ಲಿ ಕುಟುಂಬದ ಹಿರಿಯರಿಗೆ ಸಂಬಂಧಿಸಿದ ಅಥವಾ ಕಾನೂನಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಆರಂಭಿಸಿದರೆ ಸುಲಭವಾಗಿ ಜಯ ಲಭಿಸುತ್ತದೆ. ಹೃದಯ ಸಂಬಂಧಿತ ತೊಂದರೆ ಇದ್ದವರು ಈ ವೇಳೆಯಲ್ಲಿ ಔಷಧಿಯನ್ನು ಸೇವಿಸಬಹುದಾಗಿದೆ. ಕುಟುಂಬದ ಹಿರಿಯರು ಮಾಡುತ್ತಿದ್ದ ವ್ಯಾಪಾರ ವ್ಯವಹಾರವನ್ನು ಈ ಹೋರಾದಲ್ಲಿ ಆರಂಭಿಸಿದರೆ ಯಶಸ್ಸು ಸಿಗುತ್ತದೆ.

ಚಂದ್ರನ ಹೋರಾದಲ್ಲಿ ಪ್ರವಾಸದ ಬಗ್ಗೆ ಚಿಂತನೆ ಮಾಡಬಹುದು. ಈ ಹೋರಾದಲ್ಲಿ ಪ್ರವಾಸಕ್ಕೆ ತೆರಳಿದರೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಈ ಹೋರಾದಲ್ಲಿ ಯಾರಿಂದಲೂ ಮೋಸ ಹೋಗುವುದಿಲ್ಲ. ಒಂದು ವೇಳೆ ಕುಟುಂಬದಲ್ಲಿ ಅನಾವಶ್ಯಕ ಮನಸ್ತಾಪಗಳು ಇದ್ದಲ್ಲಿ ಈ ಹೋರಾದಲ್ಲಿ ಸುಖ ಸಂತೋಷ ಮರಳುತ್ತದೆ. ಕಲಾವಿದರಿಗೆ ಮತ್ತು ಕ್ರೀಡಾಪಟುಗಳಿಗೆ ಈ ಹೋರಾವು ಅತಿ ಮುಖ್ಯವಾಗುತ್ತದೆ.

ಕುಜನ ಹೋರಾದಲ್ಲಿ ಕುಟುಂಬದ ಆಸ್ತಿಯ ವಿವಾದವು ಪರಿಹಾರಗೊಳ್ಳುತ್ತದೆ. ಸೋದರ ಅಥವಾ ಸೋದರಿಯರ ನಡುವೆ ಇರುವ ಅನವಶ್ಯಕ ಮನಸ್ತಾಪವು ಮರೆಯಾಗುತ್ತದೆ. ನಿಮ್ಮ ವಿರೋಧಿಗಳ ಕಾರ್ಯತಂತ್ರದ ಬಗ್ಗೆ ಈ ಹೋರಾದಲ್ಲಿ ಅರಿತುಕೊಳ್ಳಬಹುದು. ಇದಲ್ಲದೆ ದಂಪತಿಗಳ ನಡುವೆ ಮನಸ್ತಾಪವಿದ್ದಲ್ಲಿ ಪತಿ ಅಥವಾ ಪತ್ನಿಯ ಪ್ರೀತಿಯನ್ನು ಪುನಃ ಪಡೆಯಲು ಈ ಹೋರಾವು ಅತಿ ಮುಖ್ಯವಾಗುತ್ತದೆ. ಭೂ ಸಂಬಂಧಿತ ವಿಚಾರಗಳಿಗೆ ಇದು ಉಪಯುಕ್ತವಾಗಿದೆ.

ಬುಧನ ಹೋರಾದಲ್ಲಿ ಹಣಕಾಸಿನ ವ್ಯವಹಾರದಲ್ಲಿನ ಲಾಭ ನಷ್ಟವನ್ನು ಸರಿಪಡಿಸಬಹುದು. ಆತ್ಮೀಯ ಸ್ನೇಹಿತರ ಮನದ ಆಶಯದ ಬಗ್ಗೆ ತಿಳಿಯಲು ಈ ಹೋರಾವು ಅನುಕೂಲಕರವಾಗಿದೆ. ವಿದ್ಯಾರ್ಥಿಗಳು ಬುಧನ ಹೋರಾದಲ್ಲಿ ಅಭ್ಯಾಸ ನಡೆಸಲು ಆರಂಭಿಸಿದಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಬಹುದು. ಗದ್ದೆ ತೋಟಗಳ ಬಗ್ಗೆ ಅರಿತುಕೊಳ್ಳಲು ಅಥವಾ ಕೊಳ್ಳಲು ಈ ಹೋರೆಯು ಬಹುಮುಖ್ಯ. ತಾಯಿಯ ಕಡೆಯ ಸಂಬಂಧದಲ್ಲಿ ಇರುವ ಅಡಚಣೆಗಳು ದೂರವಾಗುತ್ತವೆ. ಮುಖ್ಯವಾಗಿ ಸೋದರಮಾವನ ಸಹಾಯವು ದೊರೆಯುತ್ತದೆ.

ಗುರುವಿನ ಹೋರಾದಲ್ಲಿ ಒಳ್ಳೆಯ ಸಂತಾನದ ಬಗ್ಗೆ ಚಿಂತನೆ ನಡೆಸಬಹುದು. ಹಾಗೆಯೇ ಮನೆಯಲ್ಲಿರುವ ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆಯೂ ತಿಳಿಯುತ್ತದೆ. ಈ ಹೋರಾದಲ್ಲಿ ಮಕ್ಕಳಿಗೆ ನೀಡುವ ಔಷಧಿಯಿಂದ ಅವರ ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಚಿನ್ನ ಬೆಳ್ಳಿಯ ಪದಾರ್ಥಗಳನ್ನು ತೆಗೆದುಕೊಳ್ಳುವ ಆಸೆ ಇದ್ದಲ್ಲಿ ಇದು ಒಳ್ಳೆಯ ಕಾಲವೆನಿಸುತ್ತದೆ. ಗುರುಗಳ ಭೇಟಿಗೆ ಈ ಹೋರಾದಲ್ಲಿ ವಿಶೇಷ ಅನುಕೂಲತೆ ಮತ್ತು ಉತ್ತಮ ಫಲಗಳು ದೊರೆಯುತ್ತವೆ.

ಶುಕ್ರವಾರದಲ್ಲಿ ದಂಪತಿಗಳ ನಡುವೆ ಇರುವ ವೈಮನಸ್ಸು ದೂರವಾಗುತ್ತದೆ. ಹೆಣ್ಣುಮಕ್ಕಳ ವಿಚಾರದಲ್ಲಿ ಯೋಚಿಸಲು ಇದು ಒಳ್ಳೆಯ ಕಾಲವಾಗುತ್ತದೆ. ದುಬಾರಿ ಬೆಲೆಯ ವಾಹನಗಳು ಅಥವಾ ಒಡವೆ ವಸ್ತ್ರಗಳು ಈ ಹೋರೆಯಲ್ಲಿ ದೊರೆಯುತ್ತದೆ. ನಿತ್ಯ ಜೀವನದಲ್ಲಿ ಉಂಟಾಗುವ ಬದಲಾವಣೆಗಳನ್ನು ಶುಕ್ರನ ಹೋರಾದಲ್ಲಿ ತಿಳಿದುಕೊಳ್ಳಬಹುದು. ಹಣವನ್ನು ಉಳಿಸುವ ಯೋಜನೆಗಳನ್ನು ರೂಪಿಸಲು ಇದು ಉತ್ತಮ ಕಾಲ ಎನಿಸುತ್ತದೆ.

ಶನಿಯ ಹೋರಾದಲ್ಲಿ ವೃತ್ತಿ ಜೀವನದ ಆಗುಹೋಗುಗಳ ಬಗ್ಗೆ ತಿಳಿಯಬಹುದು. ವೃತ್ತಿಕ್ಷೇತ್ರದಲ್ಲಿ ಇರುವ ತೊಂದರೆಗಳ ಬಗ್ಗೆ ಪರಿಹಾರವನ್ನು ಕಂಡು ಹಿಡಿಯಬಹುದು. ಈ ಅವಧಿಯಲ್ಲಿ ಮಾತುಕತೆಯಿಂದ ಅಧಿಕಾರಿಗಳು ಮತ್ತು ನಿಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಇರುವ ಮನಸ್ತಾಪವು ಕೊನೆಯಾಗುತ್ತದೆ. ಲೋಹಕ್ಕೆ ಸಂಬಂಧಿಸಿದ ವ್ಯಾಪಾರದ ಬಗ್ಗೆಯೂ ಈ ಅವಧಿಯಲ್ಲಿ ತಿಳಿದುಕೊಳ್ಳಬಹುದು. ಹಾಗೆ ಲೋಹ ಸಂಬಂಧಿತ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಲು ಇದು ಶ್ರೇಷ್ಠಕರ.

ಇದೇ ರೀತಿ ಸೋಮವಾರ ಚಂದ್ರ ಹೋರಾ, ಮಂಗಳವಾರ ಕುಜನ ಹೋರಾ, ಬುಧವಾರ ಬುಧಹೋರಾ, ಗುರುವಾರ ಗುರುಹೋರಾ, ಶುಕ್ರವಾರ ಶುಕ್ರಹೋರಾ ಮತ್ತು ಶನಿವಾರ ಶನಿಹೋರಾಗಳು ದಿನದ ಆರಂಭದಲ್ಲಿ ಇರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(ಬರಹ: ಎಚ್‌. ಸತೀಶ್)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ