logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Black Moon 2023: ಕಪ್ಪು ಚಂದ್ರನ ದರ್ಶನ, ಇಂದು ರಾತ್ರಿ ಅಪರೂಪದ ಖಗೋಳ ವಿದ್ಯಮಾನ

Black Moon 2023: ಕಪ್ಪು ಚಂದ್ರನ ದರ್ಶನ, ಇಂದು ರಾತ್ರಿ ಅಪರೂಪದ ಖಗೋಳ ವಿದ್ಯಮಾನ

Praveen Chandra B HT Kannada

May 19, 2023 01:04 PM IST

Black Moon 2023: ಕಪ್ಪು ಚಂದ್ರನ ದರ್ಶನ, ಇಂದು ರಾತ್ರಿ ಅಪರೂಪದ ಖಗೋಳ ವಿದ್ಯಮಾನ

    • Black Moon 2023: ಇಂದು ಅಂದರೆ ಮೇ 19, 2023ರಂದು ಅಪರೂಪದ ಖಗೋಳ ವಿದ್ಯಮಾನ ನಡೆಯಲಿದೆ. ಇಂದಿನ ಕಪ್ಪು ಚಂದ್ರನ ವಿಶೇಷಗಳೇನು? ಮುಂದಿನ ಬ್ಲ್ಯಾಕ್‌ ಮೂನ್‌ ಯಾವಾಗ? ಇತ್ಯಾದಿ ಹಲವು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Black Moon 2023: ಕಪ್ಪು ಚಂದ್ರನ ದರ್ಶನ, ಇಂದು ರಾತ್ರಿ ಅಪರೂಪದ ಖಗೋಳ ವಿದ್ಯಮಾನ
Black Moon 2023: ಕಪ್ಪು ಚಂದ್ರನ ದರ್ಶನ, ಇಂದು ರಾತ್ರಿ ಅಪರೂಪದ ಖಗೋಳ ವಿದ್ಯಮಾನ

Black Moon 2023: ಇಂದು ಅಂದರೆ ಮೇ 19, 2023ರಂದು ಅಪರೂಪದ ಖಗೋಳ ವಿದ್ಯಮಾನ ನಡೆಯಲಿದೆ. ಬ್ಲ್ಕ್ಯಾಕ್‌ ಮೂನ್‌, ಕಪ್ಪು ಚಂದ್ರ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ Black Moon 2023 ದಿನದಂದು ಆಕಾಶ ನೋಡಲು ಖಗೋಳಾಸಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಕಪ್ಪು ಚಂದ್ರ ಎನ್ನುವುದು ಅಧಿಕೃತ, ಮಾನ್ಯತೆ ಪಡೆದ ಖಗೋಳಶಾಸ್ತ್ರೀಯ ಪದವಲ್ಲ. ದಿನಾಂಕ ಮತ್ತು ಸಮಯದ ಆಧಾರದಲ್ಲಿ ಕಪ್ಪು ಚಂದ್ರನ ಕುರಿತು ಎರಡು ಸಾಮಾನ್ಯ ವ್ಯಾಖ್ಯಾನಗಳಿವೆ.

ತಾಜಾ ಫೋಟೊಗಳು

ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ

May 08, 2024 08:40 AM

Amavasya 2024: ಪಿತೃದೋಷ, ಕಾಳಸರ್ಪ ದೋಷ , ಶನಿ ದೋಷ ಪರಿಹಾರಕ್ಕೆ ಅಮಾವಾಸ್ಯೆಯಂದು ಈ ಕೆಲಸಗಳನ್ನು ಮಾಡಿ

May 07, 2024 03:00 PM

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

May 06, 2024 10:00 AM

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

May 06, 2024 09:00 AM

Venus Transit: ವೃಷಭ ರಾಶಿಯಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಭಾರಿ ಲಾಭ, ಸಂಪತ್ತು ದುಪ್ಪಟ್ಟಿನ ಭವಿಷ್ಯ

May 04, 2024 07:00 AM

Saturn Retrograde: ಶನಿ ಹಿಮ್ಮುಖ ಚಲನೆ; ಮುಂದಿನ 5 ತಿಂಗಳು ಈ 3 ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ

May 03, 2024 06:43 PM

ಒಂದು ಕ್ಯಾಲೆಂಡರ್‌ ತಿಂಗಳಿನಲ್ಲಿ ಎರಡನೇ ಹೊಸ ಚಂದ್ರ (ಅಮಾವಾಸ್ಯೆ) ಕಾಣಿಸಿಕೊಳ್ಳುವುದು ಮೊದಲ ವ್ಯಾಖ್ಯಾನ. ಎರಡನೇ ವ್ಯಾಖ್ಯಾನದ ಪ್ರಕಾರ, ನಾಲ್ಕು ಅಮಾವಾಸ್ಯೆಗಳ ಋತುವಿನಲ್ಲಿ ಮೂರನೇ ಅಮಾವಾಸ್ಯೆ(ನ್ಯೂ ಮೂನ್‌) ಸಂಭವಿಸುವ ಸಮಯ.

ಭೂಮಿಯ ಕಡೆಗಿರುವ ಚಂದಿರನ ಮುಖವು ಸೂರ್ಯನ ಬೆಳಕಿನಿಂದ ಸಂಪೂರ್ಣವಾಗಿ ಪ್ರಕಾಶಿಸಲ್ಪಟ್ಟಾಗ ಹುಣ್ಣಿಮೆ ಚಂದಿರ ಕಾಣಿಸುತ್ತದೆ. ಭೂಮಿಗೆ ಎದುರಾಗಿರುವ ಚಂದ್ರನ ಮುಖವು ನೆರಳಿನಿಂದ ತುಂಬಿರುವ ಸಮಯವು ಅಮಾವಾಸ್ಯೆಯಾಗಿದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ಅಮವಾಸ್ಯೆಯ ದಿನವು ಮೂರು ತಿಂಗಳ ಋತುವಿನಲ್ಲಿ ನಾಲ್ಕು ಬಾರಿ ಬರುತ್ತದೆ. ಇದರಲ್ಲಿ ಮೂರನೇ ಅಮವಾಸ್ಯೆಯನ್ನು ಕಪ್ಪು ಚಂದ್ರ ಎಂದು ಕರೆಯಲಾಗುತ್ತದೆ. ಪ್ರತಿ 30 ತಿಂಗಳಿಗೊಮ್ಮೆ ಈ ಕಪ್ಪು ಚಂದ್ರ ವಿದ್ಯಮಾನ ಸಂಭವಿಸುತ್ತದೆ.

ಕಪ್ಪು ಚಂದ್ರ ಎಂದರೇನು? (What is Black Moon?)

ಬ್ಲ್ಯಾಕ್‌ ಮೂನ್‌ ಎನ್ನುವುದು ಸಾಂಪ್ರದಾಯಿಕ ಪದ. ಹಲವು ಅಮಾವಾಸ್ಯೆಗಳಿದ್ದಾಗ ಸಂಭವಿಸುವಂತಹ ವಿದ್ಯಮಾನ. ಇದು ಖಗೋಳ ವಿದ್ಯಮಾನವಾಗಿದ್ದು, ಇದಕ್ಕೆ ವೈಜ್ಞಾನಿಕ ನಾಮಕರಣ ಮಾಡಲಾಗಿಲ್ಲ. ಆದರೆ, ಈ ಸಮಯದಲ್ಲಿ ಆಕಾಶ ಕಪ್ಪಾಗಿರುವುದರಿಂದ ನಕ್ಷತ್ರ ವೀಕ್ಷಕರಿಗೆ ಇದು ಉತ್ತಮ ಅವಕಾಶವಾಗಿದೆ. ಈ ಸಮಯದಲ್ಲಿ ನಕ್ಷತ್ರಗಳು ಮತ್ತು ನಕ್ಷತ್ರಪುಂಜಗಳು, ಸಮೂಹಗಳು ಮತ್ತು ಗೆಲಕ್ಸಿಗಳು ಹೆಚ್ಚು ಉತ್ತಮವಾಗಿ ಗೋಚರಿಸುತ್ತವೆ.

ನಿಮಗಿದು ತಿಳಿದಿರಲಿ

ಯಾವಾಗ ಬ್ಲ್ಯಾಕ್‌ ಮೂನ್‌ ಕಾಣಿಸುತ್ತದೆ.

ಮೇ 19, 2023 ರಂದು ಬ್ಲ್ಯಾಕ್ ಮೂನ್ ಕಾಣಿಸಲಿದೆ.

ಮುಂದಿನ ಬ್ಲ್ಯಾಕ್‌ ಮೂನ್‌ ಯಾವಾಗ ಕಾಣಿಸಲಿದೆ?

ಇಂದಿನ ಬ್ಲ್ಯಾಕ್‌ ಮೂನ್‌ ಕಾಣಿಸಿದ ಬಳಿಕ ಮುಂದಿನ ಕಪ್ಪು ಚಂದ್ರ ಡಿಸೆಂಬರ್ 30, 2024ರಂದು ಸಂಭವಿಸಲಿದೆ.

ಕಪ್ಪು ಚಂದ್ರ ಇರುವಾಗ ನಮಗೇನು ಕಾಣಿಸುತ್ತದೆ?

ಪ್ರತಿ ಅಮಾವಾಸ್ಯೆಯ ರಾತ್ರಿಯಂತೆ ಕಪ್ಪು ಚಂದ್ರ ಕಾಣಿಸದು. ಅಂದು ಚಂದ್ರ ಕಾಣಿಸದೆ ಇದ್ದರೂ ನಕ್ಷತ್ರ ವೀಕ್ಷಕರು ನಕ್ಷತ್ರಪುಂಜ, ನಕ್ಷತ್ರ, ಗೆಲಾಕ್ಸಿ ಇತ್ಯಾದಿಗಳ ಚಿತ್ರಗಳನ್ನು ಸೆರೆಹಿಡಿಯುತ್ತಾರೆ.

ಇಂದು ಶನಿ ಜಯಂತಿ

ಇಂದು ಶುಕ್ರವಾರ (ಮೇ 19) ವಿಶೇಷ ದಿನ. ಶನಿ ಜಯಂತಿ. ಈ ದಿನ ಈ ವಸ್ತುಗಳನ್ನು ಖರೀದಿಸಿದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಈ ಬಗ್ಗೆ ನಂಬಿಕೆ ಉಳ್ಳವರು. ಶನಿ ದೇವರನ್ನು ನ್ಯಾಯದ ದೇವರು ಮತ್ತು ಕರ್ಮವನ್ನು ಕೊಡುವ ದೇವರು ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುವವನೇ ಈ ಶನಿದೇವ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಆಶೀರ್ವಾದ ಪಡೆದರೆ ಜನರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂಬುದು ನಂಬಿಕೆ. ಮತ್ತೊಂದೆಡೆ, ಶನಿಯ ಅಶುಭ ನೆರಳಿಗೆ ಬಿದ್ದರೆ ರಾಜನು ಕೂಡ ಫಕೀರನಾಗಬಹುದು ಎಂಬುದು ಇನ್ನೊಂದು ನಂಬಿಕೆ. ಶನಿ ಜಯಂತಿ ಕುರಿತು ಹೆಚ್ಚಿನ ವಿವರ ಇಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು