ಕಟಕ ರಾಶಿ ಭವಿಷ್ಯ ಜುಲೈ 29: ಆಹಾರದ ಕಾರಣದಿಂದ ಅನಾರೋಗ್ಯ ಎದುರಾಗಬಹುದು, ಮಧ್ಯರಾತ್ರಿ ಪ್ರಯಾಣ ಮಾಡುವುದನ್ನು ತಪ್ಪಿಸಿ
Jul 29, 2024 06:31 AM IST
ಕಟಕ ರಾಶಿ ಭವಿಷ್ಯ ಜುಲೈ 29: ಆಹಾರದ ಕಾರಣದಿಂದ ಅನಾರೋಗ್ಯ ಎದುರಾಗಬಹುದು, ಮಧ್ಯರಾತ್ರಿ ಪ್ರಯಾಣ ಮಾಡುವುದನ್ನು ತಪ್ಪಿಸಿ
- Cancer Daily Horoscope July 29, 2024: ರಾಶಿಚಕ್ರಗಳ ಪೈಕಿ ನಾಲ್ಕನೇಯದು ಕಟಕ. ಜನನದ ಸಮಯದಲ್ಲಿ ಚಂದ್ರನು ಕರ್ಕಾಟಕದಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ಕರ್ಕ. ಜುಲೈ 29 ರ ಕಟಕ ರಾಶಿ ಭವಿಷ್ಯ ಪ್ರಕಾರ, ಇಂದು ಆಹಾರದ ಕಾರಣದಿಂದ ಅನಾರೋಗ್ಯ ಎದುರಾಗಬಹುದು. ಮಧ್ಯರಾತ್ರಿ ಪ್ರಯಾಣ ಮಾಡುವುದನ್ನು ತಪ್ಪಿಸುವುದು ಉತ್ತಮ.
ಕಟಕ ರಾಶಿಭವಿಷ್ಯ ಜುಲೈ 29: ಇಂದು ಕಟಕ ರಾಶಿಯವರ ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡೂ ಸಮತೋಲನದಲ್ಲಿರುತ್ತದೆ. ಅಹಂಕಾರದ ಭಾವವು ಕಚೇರಿಯಲ್ಲಿ ಸಣ್ಣಪುಟ್ಟ ತೊಂದರೆಗಳಿಗೆ ಕಾರಣವಾಗಬಹುದು. ಅದನ್ನು ನಿಭಾಯಿಸಿ. ಜೀವನದ ಸಂತೋಷಕ್ಕಾಗಿ ಸಂಪತ್ತು ಕೂಡಿಸುವ ಬಗ್ಗೆ ಯೋಚಿಸಿ. ಇಂದು ಕಟಕ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ತಾಜಾ ಫೋಟೊಗಳು
ಕಟಕ ರಾಶಿಯವರ ಪ್ರೇಮ ಜೀವನ (Cancer Love Horoscope)
ಹಿಂದಿನ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಸಂಗಾತಿಯ ಬೆಂಬಲ ನಿಮಗೆ ಸಿಗಲಿದೆ. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಿ. ದೂರದಲ್ಲಿರುವ ಪ್ರೇಮಿಗಳು ಸಂವಹನಕ್ಕೆ ಒತ್ತು ನೀಡಿ. ನಿಮ್ಮ ಪ್ರೇಮ ಸಂಬಂಧವು ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಮದುವೆ ನಿಶ್ಚಿಯವಾಗಿರುವವರು ತಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣುತ್ತಾರೆ. ವಿವಾಹಿತ ಕಟಕ ರಾಶಿಯವರು ಸಂಗಾತಿಯೊಂದಿಗೆ ತಮ್ಮ ಹಿಂದಿನ ಸಂಬಂಧದ ಬಗ್ಗೆ ಚರ್ಚಿಸುವಾಗ ಅತ್ಯಂತ ಜಾಗರೂಕರಾಗಿರಬೇಕು.
ಕಟಕ ರಾಶಿಯವರ ವೃತ್ತಿ ಭವಿಷ್ಯ (Cancer Professional Horoscope)
ನಿಮ್ಮ ವೃತ್ತಿಪರ ಜೀವನವು ಉತ್ಪಾದಕವಾಗಿರುತ್ತದೆ. ನೀವು ಬೆಳೆಯಲು ಹೊಸ ಅವಕಾಶಗಳು ನಿಮ್ಮನ್ನು ಅರಸಿ ಬರುತ್ತವೆ. ಕೆಲವು ಐಟಿ ವೃತ್ತಿಪರರು ಮತ್ತು ಆರೋಗ್ಯ ಕಾರ್ಯಕರ್ತರು ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ. ಗ್ರೂಪ್ ಮೀಟಿಂಗ್ನಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಜಾಗರೂಕರಾಗಿರಿ. ಸಹೋದ್ಯೋಗಿಗಳು ನಿಮ್ಮ ಸಲಹೆಗಳ ಬಗ್ಗೆ ಆಕ್ಷೇಪ ಎತ್ತಬಹುದು. ಕಚೇರಿ ರಾಜಕೀಯವು ಇದಕ್ಕೆ ಕಾರಣವಿರಬಹುದು. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಓದಿನ ಮೇಲೆ ಹೆಚ್ಚಿನ ಗಮನ ಹರಿಸಬೇಕು.
ಕಟಕ ರಾಶಿಯವರ ಆರ್ಥಿಕ ಜೀವನ (Cancer Money Horoscope)
ಇಂದು ಸಂಪತ್ತು ನಿಮ್ಮ ಕೈ ಸೇರುತ್ತದೆ. ನೀವು ಐಷಾರಾಮಿ ಖರ್ಚುಗಳನ್ನು ಮಾಡಲು ಹಿಂಜರಿಯಬೇಕು ಎಂದೇನಿಲ್ಲ. ಹೊಸ ಮನೆ ಅಥವಾ ವಾಹನ ಖರೀದಿಯತ್ತ ನೀವು ಗಮನ ನೀಡಬಹುದು. ಮುಂಬರುವ ದಿನಗಳಲ್ಲಿ ಉತ್ತಮ ಆದಾಯವನ್ನು ತರುವ ಸ್ಟಾಕ್ ವ್ಯವಹಾರದಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಿ. ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಹಣಕ್ಕಾಗಿ ಎದುರು ನೋಡಬಹುದು.
ಕಟಕ ರಾಶಿಯವರ ಆರೋಗ್ಯ ಜಾತಕ(Cancer Health Horoscope)
ಇಂದು ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಆಹಾರದ ಮೇಲೆ ನಿಯಂತ್ರಣ ಹೊಂದಿರುವುದು ಒಳ್ಳೆಯದು. ಅತಿಯಾದ ಎಣ್ಣೆಯಂಶ ಇರುವ ಆಹಾರಗಳನ್ನು ಸೇವಿಸದೇ ಇರುವುದು ಉತ್ತಮ. ಇಂದು ತಡರಾತ್ರಿ ವಾಹನ ಚಲಾಯಿಸುವುದನ್ನು ತಪ್ಪಿಸಿ. ಅದರಲ್ಲೂ ಅಡ್ವಂಚರ್ ಟ್ರಿಪ್ ಮಾಡುವವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಜೊತೆಗೆ ತಪ್ಪದೇ ಫಸ್ಟ್ಏಡ್ ಬಾಕ್ಸ್ ಇರುವಂತೆ ನೋಡಿಕೊಳ್ಳಿ.
ಕಟಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಕಟಕ ರಾಶಿಯ ಅಧಿಪತಿ: ಚಂದ್ರ, ಶುಭ ದಿನಾಂಕಗಳು: 4, 5, 6, 15, 16, 30. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ಸಂಖ್ಯೆಗಳು: 1, 2, 3, 4, 6, 7, 9. ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು. ಶುಭ ದಿಕ್ಕು: ಪೂರ್ವ ಮತ್ತು ಉತ್ತರ. ಶುಭ ತಿಂಗಳು: ಏಪ್ರಿಲ್ 15 ರಿಂದ ಮೇ 14, ಆಗಸ್ಟ್ 15ರಿಂದ ಸೆಪ್ಟೆಂಬರ್ 14. ಶುಭ ಹರಳು: ಮಾಣಿಕ್ಯ, ಹವಳ ಮತ್ತು ಹಳದಿ ಪುಷ್ಯ ರಾಗ. ಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೀನ. ಅಶುಭ ರಾಶಿ: ಕನ್ಯಾ, ಮಕರ, ಕುಂಭ ಮತ್ತು ಮಿಥುನ.
ಕಟಕ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ದಕ್ಷಿಣಾಮೂರ್ತಿ ಸ್ತೋತ್ರ: ಪ್ರತಿದಿನ ದಕ್ಷಿಣಾಮೂರ್ತಿಯ ಸ್ತೋತ್ರ ಪಠಿಸುವುದರಿಂದ ಅಥವ ಕೇಳುವುದರಿಂದ ಆತ್ಮಶಕ್ತಿ ಹೆಚ್ಚುತ್ತದೆ. ವಾಕ್ ಶುದ್ಧಿ ಉಂಟಾಗಲಿದೆ.
2) ಈ ದಾನಗಳಿಂದ ಶುಭ ಫಲ: ಬಂಗಾರದ ಬಣ್ಣದ ಬಟ್ಟೆ ಮತ್ತು ಅಕ್ಕಿಯನ್ನು ದಾನ ನೀಡುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು. ಗುರುಗಳನ್ನು ಸತ್ಕರಿಸಿದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಬಿಳಿ ಮತ್ತು ಕೆಂಪು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಆಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.