ಮಕರ ರಾಶಿ ಭವಿಷ್ಯ ಆಗಸ್ಟ್ 13: ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ
Aug 13, 2024 06:47 AM IST
ಮಕರ ರಾಶಿ ಭವಿಷ್ಯ ಆಗಸ್ಟ್ 13
- Capricorn Daily Horoscope Agust 13, 2024: ರಾಶಿಚಕ್ರಗಳ ಪೈಕಿ 10 ನೇ ಚಿಹ್ನೆ ಮಕರ ರಾಶಿಯದ್ದು. ಜನನದ ಸಮಯದಲ್ಲಿ ಚಂದ್ರನು ಮಕರದಲ್ಲಿ ಸಾಗುತ್ತಿರುವ ಜನರು ಮಕರ ರಾಶಿಯವರು. ಆಗಸ್ಟ್ 13ರಂದು ಈ ರಾಶಿಯರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಆರೋಗ್ಯದ ಬಗ್ಗೆ ನೀವೇ ಗಮನವಿಟ್ಟು ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಿದೆ.
ಮಕರ ರಾಶಿ ದಿನ ಭವಿಷ್ಯ ಆಗಸ್ಟ್ 13, 2024: ಇಂದು ನೀವು ಪ್ರೇಮ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗುತ್ತೀರಿ. ಸಂಬಂಧಗಳಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಹೊಸ ಸಾಧನೆಗಳನ್ನು ಮಾಡುವಿರಿ. ಹಣದ ಒಳ ಹರಿವು ಹೆಚ್ಚಾಗುತ್ತದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಮಕರ ರಾಶಿಯ ವಿವರವಾದ ಜಾತಕ ಹೀಗಿದೆ. ಎಲ್ಲಾ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ಮಕರ ರಾಶಿ ಪ್ರೇಮ ಜಾತಕ (Capricorn Love Horoscope):
ಪ್ರೀತಿಯ ವಿಚಾರವಾಗಿ ನೀವು ಏನು ಮಾತನಾಡುತ್ತೀರಿ ಎನ್ನುವುದು ಇಂದು ತೀರಾ ಮುಖ್ಯವಾಗುತ್ತದೆ. ಹಾಗಾಗಿ ಮಾತನಾಡುವಾಗ ಗಮನವಿಟ್ಟು ಮಾತನಾಡಿ. ಪ್ರಾಮಾಣಿಕ ಸಂಭಾಷಣೆ ಮೂಲಕ ನಿಮ್ಮ ಸಂಗಾತಿಯ ಮನಗೆಲ್ಲಿ. ಮುಂದೆ ನೀವು ಏನು ಮಾಡಬೇಕು ಎಂದುಕೊಂಡಿದ್ದೀರಿ ಎನ್ನುವುದನ್ನೂ ಸಹ ಈಗಲೇ ಸಂಗಾತಿಯೊಂದಿಗೆ ಚರ್ಚೆ ಮಾಡಿ. . ನೆನಪಿಡಿ, ಸತ್ಯಾಸತ್ಯತೆ ಯಾವಾಗಲೂ ಮುಖ್ಯವಾಗುತ್ತದೆ. ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯದಿರಿ. ಪ್ರೀತಿಯು ಪರಸ್ಪರ ತಿಳುವಳಿಕೆ ಮತ್ತು ಬೆಳವಣಿಗೆಗೆ ಸಂಬಂಧಿಸಿದೆ.
ಮಕರ ರಾಶಿ ಉದ್ಯೋಗ ಜಾತಕ (Capricorn Professional Horoscope):
ನಿಮ್ಮ ವೃತ್ತಿಪರ ಜೀವನವು ಇಂದು ಗಮನಾರ್ಹ ಪ್ರಗತಿ ಕಾಣಲಿದೆ. ನಿಮ್ಮ ಕೌಶಲ್ಯ ಮತ್ತು ವಿಶ್ವಾಸಾರ್ಹತೆಯನ್ನು ಪ್ರದರ್ಶಿಸಲು ಇದು ಸೂಕ್ತ ಸಮಯ. ನೀವು ನಿಮ್ಮ ಸಹೊದ್ಯೋಗಿಗಳ ಜೊತೆ ಮಾತನಾಡಿ ಏನೇ ಸಮಸ್ಯೆ ಇದ್ದರೂ ಪರಿಹರಿಸಿಕೊಳ್ಳಿ. ಹೊಸ ಅವಕಾಶಗಳು ಉದ್ಭವಿಸಬಹುದು, ಆದ್ದರಿಂದ ಜಾಗರೂಕರಾಗಿರಿ. ಸಿಕ್ಕ ಅವಕಾಶವನ್ನು ಎಂದಿಗೂ ಬಿಟ್ಟುಕೊಡಬೇಡಿ. ವೃತ್ತಿಜೀವನದಲ್ಲಿ ದೀರ್ಘಕಾಲೀನ ಯಶಸ್ಸು ಮತ್ತು ಮನ್ನಣೆಗೆ ನಿಮ್ಮ ಇಂದಿನ ನಡೆ ತುಂಬಾ ಮುಖ್ಯವಾಗಿರುತ್ತದೆ ಎನ್ನುವುದನ್ನು ಗಮನದಲ್ಲಿಡಿ.
ಮಕರ ರಾಶಿ ಆರ್ಥಿಕ ಭವಿಷ್ಯ (Capricorn Money Horoscope):
ಆರ್ಥಿಕವಾಗಿ, ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಭವಿಷ್ಯಕ್ಕಾಗಿ ಯೋಜನೆ ಮಾಡಲು ಇಂದು ಅನುಕೂಲಕರ ದಿನ. ಹೆಚ್ಚು ಹಣ ಖರ್ಚು ಮಾಡಬೇಡಿ ಯಾಕೆಂದರೆ ನಿಮ್ಮ ದೀರ್ಘಾವದಿಯ ಪ್ಲ್ಯಾನ್ಗಳಿಗೆ ನೀವು ಇಂದಿನಿಂದಲೇ ಹಣ ಕೂಡಿಡಬೇಕಿದೆ. ಹೂಡಿಕೆಗಳನ್ನು ಮಾಡಲು ಅಥವಾ ನಿಮ್ಮ ಆರ್ಥಿಕ ಸ್ಥಿರತೆಯನ್ನು ಭದ್ರಪಡಿಸುವ ಯೋಜನೆಗಳನ್ನು ಮಾಡಲು ಇಂದು ಉತ್ತಮ ದಿನ.
ಮಕರ ರಾಶಿ ಆರೋಗ್ಯ ಭವಿಷ್ಯ (Capricorn Health Horoscope):
ಇಂದು, ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಿ. ನಿಮ್ಮ ದಿನಚರಿಯಲ್ಲಿ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನುಮಾಡುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಶಕ್ತಿ ಮಟ್ಟವನ್ನು ಹೆಚ್ಚಿಸುತ್ತದೆ. ಧ್ಯಾನ ಅಥವಾ ಯೋಗದಂತಹ ಮೈಂಡ್ಫುಲ್ನೆಸ್ ಅಭ್ಯಾಸಗಳು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿಗೆ ನೀರು ಕುಡಿಯಿರಿ. ಸಾಕಷ್ಟು ನಿದ್ರೆ ಅತ್ಯಗತ್ಯ.
ಮಕರ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮಕರ ರಾಶಿಯ ಅಧಿಪತಿ: ಶನಿ, ಮಕರ ರಾಶಿಯವರಿಗೆ ಶುಭ ದಿನಾಂಕಗಳು: 6, 8 ಮತ್ತು 9. ಮಕರ ರಾಶಿಯವರಿಗೆ ಶುಭ ವಾರಗಳು: ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ. ಮಕರ ರಾಶಿಯವರಿಗೆ ಶುಭ ವರ್ಣ: ನೀಲಿ, ಬಿಳಿ ಮತ್ತು ಕೆಂಪು. ಮಕರ ರಾಶಿಯವರಿಗೆ ಅಶುಭ ವರ್ಣ: ಹಳದಿ ಮತ್ತು ಬಾದಾಮಿ ಬಣ್ಣ. ಮಕರ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ಪಶ್ಚಿಮ. ಮಕರ ರಾಶಿಯವರಿಗೆ ಶುಭ ತಿಂಗಳು: ಸೆಪ್ಟೆಂಬರ್ 15ರಿಂದ ಅಕ್ಟೋಬರ್ 14. ಮಕರ ರಾಶಿಯವರಿಗೆ ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ. ಮಕರ ರಾಶಿಯವರಿಗೆ ಹೊಂದಾಣಿಕೆ ಇರುವ ರಾಶಿ: ಕುಂಭ, ವೃಷಭ ಮತ್ತು ಕನ್ಯಾ. ಮಕರ ರಾಶಿಯವರಿಗೆ ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ, ಸಿಂಹ ಮತ್ತು ಧನು.
ಮಕರ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ಮಹಾ ಮೃತ್ಯುಂಜಯ ಮಂತ್ರ: ಪ್ರತಿದಿನ ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಮಾತಿನ ಮೇಲೆ ಹತೋಟಿ ಸಾಧಿಸುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.
2) ಈ ದಾನಗಳಿಂದ ಶುಭ ಫಲ: ಕಡಲೆ ಬೇಳೆ ಮತ್ತು ಹಳದಿ ವಸ್ತ್ರವನ್ನು ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ. ದಂಪತಿ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ನೀಲಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.