Ghati Subramanya: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಲಕ್ಷ ಮೋದಕ ಹವನ ಮಹೋತ್ಸವ, ಅಪರೂಪದ ಧಾರ್ಮಿಕ ಕಾರ್ಯಕ್ರಮ
Jun 09, 2023 05:00 AM IST
Ghati Subramanya
- Religious Programme: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶುಕ್ರವಾರದಿಂದ (ಜೂನ್ 9) ಮಂಗಳವಾರದವರೆಗೆ (ಜೂನ್ 13) ಶ್ರೀಮನ್ ಮಹಾಗಣಪತಿಯ ಲಕ್ಷ ಮೋದಕ ಹವನ ಮಹೋತ್ಸವ' ನಡೆಯಲಿದೆ ಇದು ಅಪರೂಪದ ಧಾರ್ಮಿಕ ಕಾರ್ಯಕ್ರಮ ಎನಿಸಿದೆ.
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ (Ghati Subramanya) ಕ್ಷೇತ್ರದಲ್ಲಿ ಶುಕ್ರವಾರದಿಂದ (ಜೂನ್ 9) ಮಂಗಳವಾರದವರೆಗೆ (ಜೂನ್ 13) ಶ್ರೀಮಾನ್ ಮಹಾಗಣಪತಿಯ ಲಕ್ಷ ಮೋದಕ ಹವನ ಮಹೋತ್ಸವ' ನಡೆಯಲಿದೆ. ಶ್ರೀಕ್ಷೇತ್ರ ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಶ್ರೀಕ್ಷೇತ್ರ ಶಕಟಪುರ ಮಠದ ವಿದ್ಯಾಭಿನವ ಕೃಷ್ಣಾನಂದ ತೀರ್ಥ ಸ್ವಾಮೀಜಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಸಂಗೀತ ವಿದ್ವಾಂಸ ಚಿಂತಲಪಲ್ಲಿ ಡಾ ಕೆ.ರಮೇಶ್ ನೇತೃತ್ವದಲ್ಲಿ ಸಂಗೀತ ಕಛೇರಿ, ಡಾ ಆರ್ ಮಂಜುನಾಥ್ ಅವರ ನೇತೃತ್ವದಲ್ಲಿ ಸ್ಯಾಕ್ಸಾಫೋನ್ ಕಛೇರಿ ಆಯೋಜಿಸಲಾಗಿದೆ.
ತಾಜಾ ಫೋಟೊಗಳು
ಜೂನ್ 9ರ ಶುಕ್ರವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಮಾತೃಕಾ ಪೂಜೆ, ದೇವ ನಾಂದಿ, ಕುಲದೇವತಾ ಸ್ಥಾಪನೆ, ಕೌತುಕ ಪೂಜೆ, ಪುಣ್ಯಾಹವಾಚನ, ಪ್ರಧಾನ ಸಂಕಲ್ಪ, ಮಹಾಗಣಪತಿ ಮತ್ತು ನವಗ್ರಹ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಸಂಜೆಗೆ ಯಾಗಶಾಲೆ ಪ್ರವೇಶ, ಕುಂಡಮಂಟಪ ಸಂಸ್ಕಾರ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ಕಳಸ ಸ್ಥಾಪನೆ ಕಾರ್ಯಕ್ರಮಗಳು ನಡೆಯಲಿವೆ.
ಜೂನ್ 10ರ ಶನಿವಾರ ಲಕ್ಷಮೋದಕ ಹವನ. ಬೆಳಿಗ್ಗೆ ಶ್ರೀಸೂಕ್ತ ಹೋಮ, ಪುರುಷಸೂಕ್ತ ಹೋಮ. ಸಂಜೆಗೆ ಮಹಾಗಣಪತಿಯ ಮೂಲಮಂತ್ರ ಜಪ, ಪಂಚುದುರ್ಗಾ ದೀಪ ನಮಸ್ಕಾರ, ರಾಜೋಪಚಾರ ಪೂಜೆ. ಹರಿಹರಪುರ ಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.
ಜೂನ್ 11ರ ಭಾನುವಾರ ಬೆಳಿಗ್ಗೆ ಲಕ್ಷಮೋದಕ ಹವನ ಮುಂದುವರಿಕೆ, ಪವಮಾನ ಹೋಮ, ಗಾಯತ್ರಿ ಹೋಮ. ಸಂಜೆಗೆ ಮೂಲಮಂತ್ರ ಜಪ, ಆಶ್ಲೇಷಾ ಬಲಿ, ಶ್ರೀರುದ್ರ ಜಪ, ರಾಜೋಪಚಾರ ಪೂಜೆ. ಚಿಂತಲಪಲ್ಲಿ ಡಾ ಕೆ.ರಮೇಶ್ ಮತ್ತು ಸಂಗಡಿಗರಿಂದ ಸಂಗೀತ ಕಛೇರಿ.
ಜೂನ್ 12ರ ಸೋಮವಾರ ಬೆಳಿಗ್ಗೆ ಲಕ್ಷಮೋದಕ ಹವನ ಮುಂದುವರಿಕೆ, ಶ್ರೀರುದ್ರ ಹೋಮ. ಸಂಜೆಗೆ ನವಚಂಡೀ ಪಾರಾಯಣ, ಮೂಲಮಂತ್ರ ಜಪ. ಆರ್.ಮಂಜುನಾಥ್ ಮತ್ತು ಸಂಗಡಿಗರಿಂದ ಸ್ಯಾಕ್ಸಾಫೋನ್ ಕಛೇರಿ.
ಜೂನ್ 13ರ ಬೆಳಿಗ್ಗೆ ಲಕ್ಷಮೋದಕ ಹವನ, ನವಚಂಡೀ ಹವನ, ಮಹಾ ಪೂರ್ಣಾಹುತಿ, ದಂಪತಿ ಪೂಜೆ, ಸುಹಾಸಿನಿ ಪೂಜೆ, ಕುಮಾರಿಕಾ ಪೂಜೆ, ಚತುರ್ವೇದ ಆಶೀರ್ವಾದ, ಪ್ರಸಾದ. ಶ್ರೀಕ್ಷೇತ್ರ ಶಕಟಪುರದ ವಿದ್ಯಾಭಿನವ ಕೃಷ್ಣಾನಂದ ತೀರ್ಥ ಸ್ವಾಮೀಜಿ ಉಪಸ್ಥಿತಿ.
ಹಟ್ಟಿಯಂಗಡಿ ಸಿದ್ಧಿವಿನಾಯಕ ದೇಗುಲದ ಧರ್ಮಕರ್ತರಾದ ಎಚ್.ಬಾಲಚಂದ್ರ ಭಟ್, ಬ್ರಹ್ಮರ್ಷಿ ಆನಂದ ಸಿದ್ಧಿಪೀಠದ ಸಂಸ್ಥಾಪಕ ಮಹರ್ಷಿ ಆನಂದ ಗುರೂಜಿ ಪಾಲ್ಗೊಳ್ಳಲಿದ್ದಾರೆ. ಕೃಷ್ಣಭಟ್ ಅವರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ. ಪ್ರಧಾನ ಆಚಾರ್ಯರ ಜವಾಬ್ದಾರಿಯನ್ನು ಮನೋಜ್ ಕೃಷ್ಣಭಟ್ ನಿರ್ವಹಿಸಲಿದ್ದಾರೆ. ಮಾಹಿತಿಗೆ ಅರ್ಚಕರಾದ ಗುರುರಾಜ ಶರ್ಮಾ ಅವರನ್ನು (ಮೊ 70190 08107) ಸಂಪರ್ಕಿಸಿ.