ಅಕ್ಟೋಬರ್ 9 ರಿಂದ ಮೇಷ ರಾಶಿಯಲ್ಲಿ ಗುರು ಹಿಮ್ಮುಖ ಚಲನೆ; 12 ರಾಶಿಗಳಲ್ಲಿ ಯಾರಿಗೆ ಶುಭಫಲಗಳು ಹೆಚ್ಚಿವೆ
Oct 08, 2024 10:43 AM IST
ನವರಾತ್ರಿಯಲ್ಲಿ ಗುರು ಹಿಮ್ಮುಖವಾಗಿ ಚಲಿಸುತ್ತಿದ್ದಾರೆ. ಇದು 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಹಾರ ಬೀರುತ್ತದೆ. ಯಾವ ರಾಶಿಯವರಿಗೆ ಹೆಚ್ಚು ಶುಭಫಲಗಳಿವೆ ಎಂಬುದನ್ನು ತಿಳಿಯೋಣ
- ವೃಷಭ ರಾಶಿಯಲ್ಲಿರುವ ಗುರು ಅಕ್ಟೋಬರ್ 9 ರಿಂದ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ ಹನ್ನೆರಡು ರಾಶಿಗಳ ಮೇಲೂ ಇರುತ್ತದೆ. ಗುರು ಗ್ರಹವು ರಾಶಿಚಕ್ರ ಚಿಹ್ನೆಗಳಿಗೆ ಯಾವ ರೀತಿಯ ಫಲಿತಾಂಶಗಳನ್ನು ನೀಡಲಿದೆ ಎಂಬುದನ್ನು ನೋಡೋಣ.
ನವಗ್ರಹಗಳಲ್ಲಿ ಗುರುವನ್ನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರು ಸದ್ಯ ವೃಷಭ ರಾಶಿಯಲ್ಲಿದ್ದಾನೆ. ಅಕ್ಟೋಬರ್ 09 ರಂದು ಮಧ್ಯಾಹ್ನ 12.33 ಕ್ಕೆ ಗುರು ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತಾನೆ. 2025ರ ಫೆಬ್ರವರಿ 04 ರಂದು ಮಧ್ಯಾಹ್ನ 03.09 ಗಂಟೆಗೆ ನೇರ ಮಾರ್ಗಕ್ಕೆ ಬರುತ್ತಾನೆ. ಗುರುವನ್ನು ಜ್ಞಾನ, ಮಕ್ಕಳು, ಗೌರವ, ಧಾರ್ಮಿಕ ಕೆಲಸ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗುರು 119 ದಿನಗಳ ಕಾಲ ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುವುದು ಮಹತ್ವದ ಘಟನೆಯಾಗಿದೆ. ಈ ಅವಧಿಯಲ್ಲಿ ಹಿಮ್ಮುಖ ಗುರುವು ಹನ್ನೆರಡು ರಾಶಿಗಳ ಮೇಲೆ ಮಿಶ್ರ ಫಲಿತಾಂಶಗಳನ್ನು ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಕೆಲಸಗಳಲ್ಲಿ ಅಡೆತಡೆಗಳು ಸೃಷ್ಟಿಯಾಗುತ್ತವೆ. ಕೆಲವು ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಗುರುಗ್ರಹದ ಸಂಚಾರವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ.
ತಾಜಾ ಫೋಟೊಗಳು
ಮೇಷ ರಾಶಿ
ಆರೋಗ್ಯ ವಿಚಾರದಲ್ಲಿ ಖರ್ಚು ಹೆಚ್ಚಾಗಿರುತ್ತದೆ. ದಿನಚರಿಯಲ್ಲಿ ಸುಧಾರಣೆ ಇರುತ್ತದೆ. ದೊಡ್ಡ ಬಂಡವಾಳ ಹೂಡಿಕೆಯ ಬಗ್ಗೆ ಜಾಕರೂಕರಾಗಿರಿ.
ವೃಷಭ ರಾಶಿ
ಕೆಲವು ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಕುಟುಂಬದ ಸದಸ್ಯರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಮಿಥುನ ರಾಶಿ
ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೀರಿ. ನಿವಾಸ ಮತ್ತು ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ನಿರ್ಮಾಣ ಕಾರ್ಯಗಳ ವೆಚ್ಚ ಹೆಚ್ಚಿರುತ್ತದೆ. ಕೆಲವು ಆಹ್ಲಾದಕರ ಮತ್ತು ಕೆಲವು ಕಹಿ ಅನುಭವಗಳು ಆಗುತ್ತವೆ.
ಕಟಕ ರಾಶಿ
ಕುಟುಂಬದಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ವಿವಾದಗಳ ಹೋರಾಟ ಮುಂದುವರಿದಿದೆ. ಕೋರ್ಟ್ ವಿವಾದಗಳು ಬಗೆಹರಿಯುವ ವಿಶ್ವಾಸ ಇರುತ್ತದೆ.
ಸಿಂಹ ರಾಶಿ
ಗುರುಗ್ರಹದ ಹಿಮ್ಮುಖ ಚಲನೆ ಸಿಂಹ ರಾಶಿಯವರಿಗೆ ಮಿಶ್ರ ಪರಿಣಾಮಗಳನ್ನು ತೋರಿಸುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಮನೆಯ ಸದಸ್ಯರು ಸ್ಥಳವನ್ನು ಬದಲಾಯಿಸುತ್ತಾರೆ.
ಕನ್ಯಾ ರಾಶಿ
ಹೊಸ ವಸ್ತುಗಳನ್ನು ಖರೀದಿಸಲಾಗುತ್ತದೆ. ಕುಟುಂಬದಲ್ಲಿ ಒಳ್ಳೆಯ ಘಟನೆಗಳು ಸಂಭವಿಸುತ್ತದೆ. ಆರ್ಥಿಕ ಪ್ರಗತಿಯ ಹೊರತಾಗಿಯೂ ಹೆಚ್ಚಿನ ವೆಚ್ಚವೂ ಇದೆ. ಎಚ್ಚರಿಕೆಯಿಂದ ಹೂಡಿಕೆ ಮಾಡಿ.
ತುಲಾ ರಾಶಿ
ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುತ್ತದೆ. ತಪ್ಪು ನಿರ್ಧಾರವು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಅನಗತ್ಯ ವಿವಾದಗಳನ್ನು ತಪ್ಪಿಸಿ. ಖರ್ಚುಗಳನ್ನು ನಿಯಂತ್ರಿಸಲು ಯೋಜನೆ ರೂಪಿಸುತ್ತೀರಿ.
ವೃಶ್ಚಿಕ ರಾಶಿ
ಬಾಕಿ ಉಳಿದಿರುವ ಕೆಲವು ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕಹಿ ಮಾತುಗಳು ಸಂಬಂಧಗಳಲ್ಲಿ ಒತ್ತಡವನ್ನು ಹೆಚ್ಚಿಸುತ್ತವೆ. ಗೌರವ ಹೆಚ್ಚುತ್ತದೆ. ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸೋಮಾರಿತನ ಮತ್ತು ಬೇಜವಾಬ್ದಾರಿಯನ್ನು ತಪ್ಪಿಸಿ. ಇಲ್ಲದಿದ್ದರೆ ಸಮಸ್ಯೆಗಳು ಎದುರಾಗುತ್ತವೆ.
ಧನು ರಾಶಿ
ಜೀವನದಲ್ಲಿ ಯಶಸ್ಸಿಗಾಗಿ ಸಾಕಷ್ಟು ಕಠಿಣ ಪರಿಶ್ರಮ ಹಾಕುತ್ತೀರಿ. ಕೆಲವು ಹಳೆಯ ಸಮಸ್ಯೆಗಳು ಬಗೆಹರಿಯಲಿವೆ. ಪ್ರಮುಖ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹೊಸ ಸಂಬಂಧಗಳು ಮತ್ತು ಗೌರವವನ್ನು ಪಡೆಯುತ್ತೀರಿ.
ಮಕರ ರಾಶಿ
ಗುರುಗ್ರಹದ ಹಿನ್ನಡೆಯ ಪರಿಣಾಮದಿಂದಾಗಿ ನೀವು ಊಹಿಸಿದ ವಿಷಯಗಳಲ್ಲಿ ಅರ್ಧದಷ್ಟು ಯಶಸ್ಸನ್ನು ಪಡೆಯುತ್ತೀರಿ. ರಿಪೇರಿ ಮತ್ತು ಖರೀದಿಗೆ ವೆಚ್ಚಗಳು ಹೆಚ್ಚಾಗಲಿವೆ.
ಕುಂಭ ರಾಶಿ
ಕುಟುಂಬ ಸದಸ್ಯರು ನಿವಾಸವನ್ನು ಬದಲಾಯಿಸಬೇಕಾಗುತ್ತದೆ. ನೌಕರರು ವರ್ಗಾವಣೆಯಾಗುವ ಸಾಧ್ಯತೆ ಇದೆ. ಸ್ಥಿರ ಮತ್ತು ಚರ ಆಸ್ತಿಗಳನ್ನು ಖರೀದಿಸಲಾಗುತ್ತದೆ. ಸಂಸಾರದಲ್ಲಿ ಶುಭಕಾರ್ಯಗಳೂ ನಡೆಯುತ್ತವೆ.
ಮೀನ ರಾಶಿ
ಹಠಾತ್ ಪ್ರವಾಸಗಳನ್ನು ಮಾಡಬೇಕಾಗುವುದು. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಹೊಸ ಸಂಬಂಧಗಳು ಮತ್ತು ಹೊಸ ಪರಿಚಯಗಳು ರೂಪುಗೊಳ್ಳುತ್ತವೆ. ಕಚೇರಿ ಅಥವಾ ಕೆಲಸದ ಪ್ರದೇಶದಲ್ಲಿ ಬದಲಾವಣೆಗಳ ಸಾಧ್ಯತೆಯಿದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.