logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸೂರ್ಯ, ಗುರು ಪರಸ್ಪರ ದೃಷ್ಟಿಯಿಂದ ಜೀವಾತ್ಮ ಸಂಯೋಗ; 2 ರಾಶಿಯವರಿಗೆ ಲಾಟರಿ, ಪ್ರತಿಯೊಂದು ಕ್ಷೇತ್ರದಲ್ಲೂ ನಿಮ್ಮದೇ ಜಯ

ಸೂರ್ಯ, ಗುರು ಪರಸ್ಪರ ದೃಷ್ಟಿಯಿಂದ ಜೀವಾತ್ಮ ಸಂಯೋಗ; 2 ರಾಶಿಯವರಿಗೆ ಲಾಟರಿ, ಪ್ರತಿಯೊಂದು ಕ್ಷೇತ್ರದಲ್ಲೂ ನಿಮ್ಮದೇ ಜಯ

Raghavendra M Y HT Kannada

Nov 16, 2024 03:40 PM IST

google News

ಸೂರ್ಯ ಗುರು ಪರಸ್ಪರ ದೃಷ್ಟಿಯಿಂದ ಎರಡು ರಾಶಿಯವರಿಗೆ ಭಾರಿ ಅದೃಷ್ಟವಿದೆ

    • ಸೂರ್ಯ ಸಂಕ್ರಮಣದ ಸಮಯದಲ್ಲಿ ಸೂರ್ಯ ಮತ್ತು ಗುರುವಿನ ಪರಸ್ಪರ ದೃಷ್ಟಿ ಸಂಭವಿಸಲಿದೆ. ಇದನ್ನು ಜೀವಾತ್ಮ ಸಂಯೋಗ ಎಂದು ಕರೆಯಲಾಗುತ್ತದೆ. ಇದರಿಂದ ಪ್ರಮುಖವಾಗಿ 2 ರಾಶಿಯವರಿಗೆ ಅದೃಷ್ಟವನ್ನು ತಂದಿದೆ. ಈ ಎರಡು ರಾಶಿಯವರಲ್ಲಿ ನಿಮ್ಮ ರಾಶಿಯೂ ಇದೆಯಾ ಎಂಬುದನ್ನು ಪರಿಶೀಲಿಸಿ.
ಸೂರ್ಯ ಗುರು ಪರಸ್ಪರ ದೃಷ್ಟಿಯಿಂದ ಎರಡು ರಾಶಿಯವರಿಗೆ ಭಾರಿ ಅದೃಷ್ಟವಿದೆ
ಸೂರ್ಯ ಗುರು ಪರಸ್ಪರ ದೃಷ್ಟಿಯಿಂದ ಎರಡು ರಾಶಿಯವರಿಗೆ ಭಾರಿ ಅದೃಷ್ಟವಿದೆ

ಇಂದು (ನವೆಂಬರ್ 16) ರವಿಯು ವೃಶ್ಚಿಕರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯದಲ್ಲಿ ರವಿ ಮತ್ತು ಗುರುವಿನ ನಡುವೆ ಪರಸ್ಪರ ದೃಷ್ಠಿ ಇರುತ್ತದೆ. ರವಿಯನ್ನು ಆತ್ಮಕಾರಕ ಮತ್ತು ಗುರುವನ್ನು ಜೀವಕಾರಕ ಎಂದು ಕರೆಯುತ್ತೇವೆ. ನಾಡಿಜೋತಿಷ್ಯದಲ್ಲಿ ಇದನ್ನು ಜೀವಾತ್ಮ ಸಂಯೋಗ ಎಂದು ಕರೆಯುತ್ತೇವೆ. ಜೀವಾತ್ಮ ಸಂಯೋಗವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತವೆ. ಆದರೆ ಎರಡು ರಾಶಿಯವರಿಗೆ ಭಾರಿ ಪ್ರಯೋಜನಗಳಿವೆ. ಆ ರಾಶಿಯವರ ವಿವರನ್ನು ಇಲ್ಲಿ ನೀಡಲಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಕಟಕ ರಾಶಿ

ಕಟಕ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರಲಿವೆ. ವಿದ್ಯಾಭ್ಯಾಸದ ವಿಚಾರದಲ್ಲಿ ಹಿಂದುಳಿದ ಮಕ್ಕಳು ಮುಂಚೂಣಿಗೆ ಬರುತ್ತಾರೆ. ಅಸಾಧಾರಣ ವಿಚಾರಗಳನ್ನು ಬುದ್ಧಿವಂತಿಕೆಯ ಮಾತುಕತೆಗಳಿಂದ ಮತ್ತು ವಿಚಾರ ವಿನಿಮಯದಿಂದ ಅರಿತುಕೊಳ್ಳುತ್ತಾರೆ. ಒಮ್ಮೆ ಆಡಿದ ಮಾತನ್ನು ಯಾವುದೇ ಕಾರಣಕ್ಕೂ ಬದಲಾಯಿಸದ ಗುಣವು ಇವರಿಗೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಕೆಲವೊಮ್ಮೆ ಮಕ್ಕಳನ್ನು ಅವಲಂಬಿಸಬೇಕಾಗುತ್ತದೆ. ಚಿಕ್ಕ ಮಕ್ಕಳಿದ್ದಲ್ಲಿ ಅವರ ಜೀವನವನ್ನು ರೂಪಿಸಲು ಆತ್ಮೀಯರ ಸಹಾಯವನ್ನು ಪಡೆಯುತ್ತಾರೆ. ಉನ್ನತ ವಿದ್ಯಾಭ್ಯಾಸದ ಆಸೆ ಇದ್ದವರಿಗೆ ಉತ್ತಮ ಅವಕಾಶ ದೊರೆಯುತ್ತದೆ. ಮನೆತನದ ಆಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವಿರಿ.

ಸುಖಕರವಾದ ಜೀವನ ನಡೆಸುವುದು ಇವರ ಮೂಲ ಉದ್ದೇಶ

ಅವಿವಾಹಿತರಿಗೆ ತಾಯಿಯ ಮನೆಯ ಸಂಬಂಧದಲ್ಲಿ ವಿವಾಹವಾಗುತ್ತದೆ. ದಂಪತಿ ನಡುವೆ ವಾದ ವಿವಾದಗಳಿದ್ದರೂ ಸುಖ್ಯಾಂತ್ಯಗೊಳ್ಳುತ್ತದೆ. ಬೇರೆಯವರ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ವ್ಯವಹಾರ ಮಾಡುವುದಿಲ್ಲ. ಮನಸ್ಸಿನಲ್ಲಿ ಭಯದ ವಾತಾವರಣ ಇರುವ ಕಾರಣ ಬೇರೆಯವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಿಲ್ಲ. ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ಮಧ್ಯಸ್ಥಿಗೆ ವಹಿಸುವುದಿಲ್ಲ. ಸಾಧ್ಯವಾದಷ್ಟು ಸುಖಕರವಾದ ಜೀವನವನ್ನು ನಡೆಸುವುದು ಇವರ ಮೂಲ ಉದ್ದೇಶವಾಗಿರುತ್ತದೆ. ಕುಟುಂಬದ ಹಿರಿಯರ ಸಹಾಯವನ್ನು ಬಯಸದೆ ತಮ್ಮ ಸ್ವಂತ ನಿರ್ಧಾರಗಳಿಗೆ ಬದ್ಧರಾಗುತ್ತಾರೆ.

ಅತಿಯಾದ ಆತುರದಿಂದ ಕೆಲಸವನ್ನು ಆರಂಭಿಸಿದರೆ ತೊಂದರೆ ಹೆಚ್ಚು ಸೋಲುವ ವೇಳೆಯಲ್ಲಿ ಸಹನೆಯನ್ನು ತೊರೆದು ಕೋಪದಿಂದ ವರ್ತಿಸುತ್ತಾರೆ. ತಮ್ಮದೇ ಆದ ತಪ್ಪಿನಿಂದಾಗಿ ಆತ್ಮೀಯರಿಂದ ದೂರ ಉಳಿಯಬೇಕಾದ ಬಹುದು. ಪ್ರವಾಸ ಮಾಡುವಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆ. ಒಬ್ಬಂಟಿಯಾಗಿ ಮಾಡುವ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ತಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ವಹಿಸುತ್ತಾರೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಉದ್ಯೋಗದಲ್ಲಿ ಬುದ್ದಿವಂತಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾರಣ ವಿವಾದಗಳಿಂದ ದೂರ ಉಳಿಯುತ್ತೀರಿ.

ವೃಶ್ಚಿಕ ರಾಶಿ

ಮನಸ್ಸಿನಲ್ಲಿ ತಪ್ಪು ಭಾವನೆ ಇದ್ದರೂ ದುಡುಕುತನದ ಮಾತುಕತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಇವರಿಗೆ ಆತ್ಮೀಯರಾದವರು ಅವಶ್ಯಕವೆನಿಸಿದಲ್ಲಿ ಇವರ ಸಹಾಯಕ್ಕೆ ನಿಲ್ಲುತ್ತಾರೆ. ತಮ್ಮ ಎಣಿಕೆಯಂತೆ ಕೆಲಸ ಕಾರ್ಯಗಳು ನಡೆಯದೆ ಹೋದಲ್ಲಿ ಮುಂಗೋಪಕ್ಕೆ ಒಳಗಾಗುವರು. ಆತ್ಮವಿಶ್ವಾಸದಿಂದ ತಮ್ಮ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸುತ್ತಾರೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಸುಲಭವಾಗಿ ಬದಲಾಯಿಸುವುದಿಲ್ಲ. ಬೇರೆಯವರ ಪ್ರಭಾವಕ್ಕೆ ಮಣಿಯುವುದಿಲ್ಲ. ಬೇರೆಯವರ ಮಾತನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಇವರ ಮಾತುಕತೆಗಳಿಗೆ ವಿಶೇಷವಾದ ಅರ್ಥವು ದೊರೆಯುತ್ತದೆ. ಉದ್ಯೋಗದಲ್ಲಿ ಎದುರಾಗುತ್ತಿದ್ದ ಅಡ್ಡಿ ಆತಂಕಗಳು ಕ್ರಮೇಣವಾಗಿ ಮರೆಯಾಗಲಿವೆ. ನಿಮ್ಮ ಮನಸ್ಸಿನ ನಿರೀಕ್ಷೆಗಳು ಸುಲಭವಾಗಿ ಕೈಗೂಡುತ್ತವೆ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಿಮಗೆ ಜಯ ಸಿಗುತ್ತದೆ.

ಅವಶ್ಯಕತೆ ಇದ್ದಲ್ಲಿ ಕುಟುಂಬದ ಸದಸ್ಯರಿಂದ ಹಣದ ಸಹಾಯ ಒದಗಿ ಬರುತ್ತದೆ. ಕೋಪವನ್ನು ಕಡಿಮೆ ಮಾಡಿಕೊಂಡಲ್ಲಿ ಎಲ್ಲರೂ ನಿಮ್ಮೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ವಿದ್ಯಾರ್ಥಿಗಳು ಎಲ್ಲರ ನಿರೀಕ್ಷೆಯನ್ನು ಮೀರಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾರೆ. ಮಕ್ಕಳ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಹಣದ ಲೆಕ್ಕ ಇರುವುದಿಲ್ಲ. ಸ್ವಂತ ವಾಹನ ಕೊಳ್ಳುವಿರಿ. ನಿಮ್ಮ ಸ್ವಂತ ವಿಚಾರಗಳಲ್ಲಿ ಬೇರೆಯವರು ಪಾಲ್ಗೊಳ್ಳುವುದನ್ನು ಇಷ್ಟಪಡುವುದಿಲ್ಲ. ಆತ್ಮೀಯರ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮಾತಿನಿಂದಾಗಿ ಬಗೆಹರಿಸಬೇಕು. ನಿಮ್ಮ ಮನಸ್ಸನ್ನು ಅರಿತು ನಡೆಯುವ ಗುಣವು ಸಂಗಾತಿಯಲ್ಲಿ ಮೂಡುತ್ತದೆ. ಉತ್ತಮ ಅವಕಾಶ ದೊರೆಯುವ ಕಾರಣ ಮನಸ್ಸಿದ್ದಲ್ಲಿ ಉದ್ಯೋಗವನ್ನು ಬದಲಿಸಬಹುದು. ಸ್ವಂತ ಉದ್ದಿಮೆ ಇದ್ದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನಿಮಗೆ ಗೌರವದ ಸ್ಥಾನವು ಲಭ್ಯವಾಗುತ್ತದೆ. ರಾಜಕೀಯ ಪ್ರವೇಶಿಸುವ ಆಸೆ ಇದ್ದಲ್ಲಿ ಈಡೇರಲಿದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಇವರ ಮನಸ್ಸನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಜನರು ಅತಿ ವಿರಳ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ