logo
ಕನ್ನಡ ಸುದ್ದಿ  /  Astrology  /  Horoscope Today Astrological Prediction For February 5th 2023

Horoscope Today for February 5 2023: ಕನ್ಯಾ ರಾಶಿಯವರಿಗೆ ಇಂದು ಎಲ್ಲಾ ಕೆಲಸಗಳಲ್ಲೂ ಯಶಸ್ವಿ ಸಿಗಲಿದೆ; ನಿಮ್ಮ ಭವಿಷ್ಯ ತಿಳಿಯಿರಿ

HT Kannada Desk HT Kannada

Feb 05, 2023 06:10 AM IST

ಇಂದಿನ ರಾಶಿ ಭವಿಷ್ಯ ತಿಳಿಯಿರಿ

  • Horoscope Today for February 5, 2023: ಫೆ.5 ರಂದು ಅಂದರೆ ಇಂದು ಮೇಷ, ಸಿಂಹ, ಕನ್ಯಾ, ತುಲಾ ಮತ್ತು ಇತರ ರಾಶಿಚಕ್ರಗಳ ದಿನಭವಿಷ್ಯ ವಿವರ ಇಲ್ಲಿದೆ. ಆಯಾ ರಾಶಿಚಕ್ರಗಳು ವ್ಯಕ್ತಿಗಳ ವ್ಯಕ್ತಿತ್ವವನ್ನು ಬಿಂಬಿಸುವಂಥದ್ದು. ದಿನಚರಿ ಆರಂಭಿಸುವ ಮೊದಲು ನಿತ್ಯಭವಿಷ್ಯ (Astrological prediction for February 5 2023) ಗಮನದಲ್ಲಿರಲಿ.

ಇಂದಿನ ರಾಶಿ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಭವಿಷ್ಯ ತಿಳಿಯಿರಿ

ಸೂರ್ಯೋದಯ - ಬೆಳಗ್ಗೆ 6:45 (ಬೆಂಗಳೂರು ಸಮಯ)

ತಾಜಾ ಫೋಟೊಗಳು

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಮೇಷ ರಾಶಿಯಲ್ಲಿ ಶುಕ್ರ ಸಂಚಾರ; ಈ 4 ರಾಶಿಯವರಿಗೆ ಆರ್ಥಿಕ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ಸಂತೋಷ ಹೆಚ್ಚಳ

Apr 29, 2024 02:19 PM

Akshaya Tritiya 2024: ಅಕ್ಷಯ ತೃತೀಯ ಆಚರಣೆಯ ಮಹತ್ವವೇನು, ಈ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸುವುದೇಕೆ? ಇಲ್ಲಿದೆ ಮಾಹಿತಿ

Apr 29, 2024 10:06 AM

ಬುಧ, ಮಂಗಳ, ರಾಹು ಸಂಕ್ರಮಣ; ಮುಂದಿನ 12 ದಿನ ಈ 3 ರಾಶಿಯವರಿಗೆ ಭಾರಿ ಲಾಭ -Mercury Mars Rahu Transit

Apr 28, 2024 02:56 PM

Zodiac Signs: ಮೋಸ, ಪ್ರಾಮಾಣಿಕತೆ, ಆವೇಶ; ಸಂಬಂಧಗಳ ವಿಚಾರದಲ್ಲಿ ಯಾವ ರಾಶಿಯವರು ಯಾವ ರೀತಿ ನಡೆದುಕೊಳ್ಳುತ್ತಾರೆ?

Apr 24, 2024 12:21 PM

Swapna Shasthra: ಯಾವ ಕನಸಿಗೆ ಏನು ಅರ್ಥ? ನೀವು ಕನಸಿನಲ್ಲಿ ಮತ್ತೊಬ್ಬರ ಸಾವನ್ನು ನೋಡಿದರೆ ಏನು ಮುನ್ಸೂಚನೆ?

Apr 21, 2024 07:00 AM

ಸೂರ್ಯಾಸ್ತ - ಸಂಜೆ 6:22

ತಿಥಿ - ಪುರ್ಣಿಮಾ (ರಾತ್ರಿ 11:58ರ ತನಕ)

ನಕ್ಷತ್ರ - ಪುಷ್ಯ (ರಾತ್ರಿ 12:13ರ ತನಕ)

ಮೇಷ ರಾಶಿ (ARIES) (ಮಾರ್ಚ್‌ 21- ಏಪ್ರಿಲ್ 20)

ಮೇಷ ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಫಲಿತಾಂಶಗಳು ಇವೆ. ಆತುರದ ನಿರ್ಧಾರಗಳು ತೊಂದರೆಗೆ ಕಾರಣವಾಗುತ್ತವೆ. ವೆಚ್ಚವನ್ನು ಕಡಿತಗೊಳಿಸಬೇಕು. ಉದ್ಯೋಗಿಗಳಿಗೆ ಕೆಲಸದಲ್ಲಿ ಹೆಚ್ಚಿನ ಒತ್ತಡದ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಸರಾಸರಿ ಫಲಿತಾಂಶಗಳಿವೆ. ಮಹಿಳೆಯರು ಕೌಟುಂಬಿಕ ವಿಚಾರದಲ್ಲಿ ಜಾಗ್ರತೆ ವಹಿಸಬೇಕು.

ವೃಷಭ ರಾಶಿ (TAURUS) (ಏಪ್ರಿಲ್‌ 21- ಮೇ 20)

ವೃಷಭ ರಾಶಿಯವರು ಇಂದು ಸಾಧಾರಣ ಫಲಿತಾಂಶಗಳನ್ನು ಹೊಂದಿದ್ದಾರೆ. ಆರೋಗ್ಯ, ಕೌಟುಂಬಿಕ ವಿಷಯಗಳಲ್ಲಿ ಕಾಳಜಿ ವಹಿಸಬೇಕು. ವಿವಾದಗಳನ್ನು ತಪ್ಪಿಸಬೇಕು. ಒತ್ತಡ, ನೋವುಗಳು ಅಧಿಕ. ದುಃಖ ಮತ್ತು ಅನಾರೋಗ್ಯದ ಸೂಚನೆಗಳಿವೆ. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರವಾಗಿದೆ. ಎಷ್ಟೇ ಸಮಸ್ಯೆಗಳು ಎದುರಾದರೂ ನಿಮ್ಮ ಪರಿಶ್ರಮದಿಂದ ಧೈರ್ಯದಿಂದ ಮುಂದೆ ಹೋಗಿ ಯಶಸ್ಸು ಪಡೆಯುವಿರಿ.

ಮಿಥುನ ರಾಶಿ (GEMINI) (ಮೇ 21- ಜೂನ್‌ 21)

ಮಿಥುನ ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಫಲಿತಾಂಶಗಳಿವೆ. ರಾಜಕೀಯ ಒತ್ತಡಗಳು ಮತ್ತು ಸಮಸ್ಯೆಗಳು ಉದ್ಭವಿಸುತ್ತವೆ. ಖರ್ಚುಗಳನ್ನು ನಿಯಂತ್ರಿಸಬೇಕು. ಕೆಲಸದಲ್ಲಿ ಕಿರಿಕಿರಿ ಮತ್ತು ತೊಂದರೆಗಳು ಉಂಟಾಗುತ್ತವೆ. ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿ.ಕೆಲವು ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಆರೋಗ್ಯ ಮತ್ತು ಕೌಟುಂಬಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ಕೌಶಲ್ಯದಿಂದ ಸಮಸ್ಯೆಗಳನ್ನು ಮತ್ತು ಒತ್ತಡಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ.

ಕರ್ಕಾಟಕ ರಾಶಿ (CANCER) (ಜೂನ್‌ 22- ಜುಲೈ 22)

ಕರ್ಕಾಟಕ ರಾಶಿಯವರು ಇಂದು ಮಧ್ಯಮದಿಂದ ಕೂಡಿದ ಅನುಕೂಲಕರ ಫಲಿತಾಂಶಗಳನ್ನು ಹೊಂದಿರುತ್ತಾರೆ. ಆರ್ಥಿಕ ಲಾಭ ಮತ್ತು ವಸ್ತು ಲಾಭ ಇರುತ್ತದೆ. ಕುಟುಂಬದ ಅಗತ್ಯಗಳಿಗಾಗಿ ಹಣವನ್ನು ಖರ್ಚು ಮಾಡುತ್ತೀರಿ. ಇಂದು ನಿಮ್ಮ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಕೌಟುಂಬಿಕ ವಿಚಾರಗಳಲ್ಲಿ ಜಾಗ್ರತೆ ವಹಿಸಬೇಕು. ಆರೋಗ್ಯ ಮತ್ತು ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಸಿಂಹ ರಾಶಿ (LEO) (ಜುಲೈ 23 - ಆಗಸ್ಟ್‌ 23)

ಸಿಂಹ ರಾಶಿಯವರು ಇಂದು ಸರಾಸರಿ ಫಲಿತಾಂಶ ಹೊಂದಿದ್ದೀರಿ. ಆರೋಗ್ಯ ಮತ್ತು ಕೌಟುಂಬಿಕ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಉದ್ಯೋಗ ವ್ಯವಹಾರಗಳಲ್ಲಿ ಸರಾಸರಿ ಫಲಿತಾಂಶಗಳು ಹೆಚ್ಚು ನಿಮ್ಮ ಸಮಸ್ಯೆಗಳನ್ನು ಕೌಶಲ್ಯದಿಂದ ನಿವಾರಿಸಿಕೊಳ್ಳುತ್ತೀರಿ. ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸುವುದು ಒಳ್ಳೆಯದು. ಧನಲಾಭ, ದ್ರವ್ಯ ಲಾಭ, ಸೌಖ್ಯ ಉಂಟಾಗುವುದು.

ಕನ್ಯಾರಾಶಿ (VIRGO) (ಆಗಸ್ಟ್‌ 24- ಸೆಪ್ಟೆಂಬರ್‌ 23)

ಕನ್ಯಾ ರಾಶಿಯವರು ಇಂದು ಯಶಸ್ಸನ್ನು ಪಡೆಯುತ್ತಾರೆ. ನೀವು ಯೋಜಿಸಿದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಹಣದ ವಿಷಯಗಳು ಅನುಕೂಲಕರವಾಗಿವೆ. ಈ ವಾರ ಒತ್ತಡ ಕಡಿಮೆಯಾಗಲಿದೆ. ನೀವು ಮಾಡುವ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ. ಶತ್ರುಗಳ ಮೇಲೆ ಜಯ. ಆರೋಗ್ಯ ಮತ್ತು ಕೌಟುಂಬಿಕ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.

ತುಲಾ ರಾಶಿ (LIBRA) (ಸೆಪ್ಟೆಂಬರ್‌ 24- ಅಕ್ಟೋಬರ್‌ 23)

ತುಲಾ ರಾಶಿಯವರಿಗೆ ಇಂದು ಸಾಧಾರಣ ಫಲಿತಾಂಶಗಳಿವೆ. ಮಾಡುವ ಪ್ರತಿಯೊಂದು ಕೆಲಸದಲ್ಲಿ ಕಿರಿಕಿರಿ ಮತ್ತು ಸಮಸ್ಯೆಗಳು ಉದ್ಭವಿಸುತ್ತವೆ. ಆರೋಗ್ಯ ವಿಚಾರಗಳಲ್ಲಿ ಜಾಗ್ರತೆ ವಹಿಸಿ. ವೃತ್ತಿ, ವ್ಯಾಪಾರ ಮತ್ತು ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಉದ್ಯಮಿಗಳು ಒತ್ತಡದಲ್ಲಿ ಇರುತ್ತಾರೆ. ವಿದ್ಯಾರ್ಥಿಗಳಿಗೆ ಸರಾಸರಿ ಫಲಿತಾಂಶ, ಕುಟುಂಬದಲ್ಲಿನ ಸಮಸ್ಯೆಗಳು ಮಹಿಳೆಯರಿಗೆ ಹೆಚ್ಚು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ವೃಶ್ಚಿಕ ರಾಶಿ(SCORPIO) (ಅಕ್ಟೋಬರ್‌ 24 - ನವೆಂಬರ್‌ 22)

ವೃಶ್ಚಿಕ ರಾಶಿಯವರಿಗೆ ಇಂದು ಅನುಕೂಲಕರವಾಗಿದೆ. ಆರ್ಥಿಕ ಲಾಭ ಮತ್ತು ವಸ್ತು ಲಾಭವನ್ನು ತರುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದೊಂದಿಗೆ ಆನಂದವಾಗಿ ಇರುತ್ತೀರಿ. ಉದ್ಯೋಗಿಗಳು ಕೆಲಸದಲ್ಲಿ ಒತ್ತಡದಲ್ಲಿದ್ದರೂ, ತಮ್ಮ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ವ್ಯಾಪಾರಿಗಳಿಗೆ ಸಾಧಾರಣ ಫಲಿತಾಂಶವಿದೆ.

ಧನು ರಾಶಿ (SAGITTARIUS) (ನವೆಂಬರ್‌ 23- ಡಿಸೆಂಬರ್‌ 21)

ಧನು ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಫಲಿತಾಂಶಗಳಿವೆ. ಒತ್ತಡ ಅಧಿಕವಾಗಿರುತ್ತದೆ. ವೆಚ್ಚ ನಿಯಂತ್ರಣ ಉತ್ತಮವಾಗಿದೆ. ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಅನುಕೂಲಕರ ದಿನ. ವ್ಯಾಪಾರಿಗಳಿಗೆ ಮಧ್ಯಮದ ಫಲಿತಾಂಶ. ಹಣಕಾಸಿನ ಸಮಸ್ಯೆ ಮತ್ತು ಕೆಲಸದಲ್ಲಿ ವಿಳಂಬವನ್ನು ಉಂಟುಮಾಡುತ್ತದೆ. ಜಗಳಗಳನ್ನು ತಪ್ಪಿಸುವುದು ಉತ್ತಮ.

ಮಕರ ರಾಶಿ (CAPRICORN) (ಡಿಸೆಂಬರ್‌ 22- ಜನವರಿ 21)

ಮಕರ ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಫಲಿತಾಂಶಗಳು ಇವೆ. ಆರೋಗ್ಯ ಮತ್ತು ಕೌಟುಂಬಿಕ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಬೇಕು. ಖರ್ಚು, ವೆಚ್ಚಗಳು ಹೆಚ್ಚಾಗುತ್ತವೆ. ವೆಚ್ಚವನ್ನು ನಿಯಂತ್ರಿಸಬೇಕು. ಆರೋಗ್ಯದ ವಿಷಯಗಳ ಬಗ್ಗೆ ಕಾಳಜಿ ವಹಿಸಿ. ಕೆಲಸದಲ್ಲಿ ಸಮಸ್ಯೆಗಳನ್ನು ಮತ್ತು ಅಡೆತಡೆಗಳನ್ನು ಉಂಟುಮಾಡುತ್ತದೆ. ರಾಜಕೀಯ ಒತ್ತಡ ಹೆಚ್ಚಿದೆ. ಉದ್ಯಮಿಗಳಿಗೆ ಕೆಟ್ಟ ಸಮಯ. ಕಿರಿಕಿರಿಗಳು ಹೆಚ್ಚು. ಶತ್ರುಗಳನ್ನು ಅಕ್ಕಪಕ್ಕದಲ್ಲಿ ನಿಭಾಯಿಸುವುದು ಉತ್ತಮ.

ಕುಂಭ ರಾಶಿ (AQUARIUS) (ಜನವರಿ 22 - ಫೆಬ್ರವರಿ 19)

ಕುಂಭ ರಾಶಿಯವರು ಇಂದು ಮಧ್ಯಮದಿಂದ ಕೂಡಿದ ಕೆಟ್ಟ ಫಲಿತಾಂಶಗಳನ್ನು ಹೊಂದಿದ್ದಾರೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಸಾಲ ಹೆಚ್ಚಾಗಲಿದೆ. ಕುಟುಂಬ ವ್ಯವಹಾರಗಳು ಅನುಕೂಲಕರವಾಗಿವೆ. ಆರ್ಥಿಕ ಸಮಸ್ಯೆಗಳ ಕಾರಣ ಮುಂದೆ ಸಾಗುವುದು ಕಷ್ಟಕರವಾಗಿದೆ. ಪ್ರತಿಯೊಂದು ಕೆಲಸಕ್ಕೂ ಕೆಲವು ಅಡಚಣೆಗಳು ಉಂಟಾಗುತ್ತವೆ. ಮಾನಸಿಕ ತೊಂದರೆಗಳು ಉಂಟಾಗುತ್ತವೆ.

ಮೀನ ರಾಶಿ (PISCES) (ಫೆಬ್ರವರಿ 20 - ಮಾರ್ಚ್‌ 20)

ಮೀನ ರಾಶಿಯವರಿಗೆ ಇಂದು ಅನುಕೂಲಕರವಾಗಿದೆ. ಆರ್ಥಿಕ ಲಾಭ ಮತ್ತು ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತೀರಿ. ಉದ್ಯೋಗಿಗಳು ಒಟ್ಟಾಗಿ ಸೇರುವ ಸಮಯ. ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಬೇಕು. ಮಾನಸಿಕ ಒತ್ತಡವನ್ನು ತಪ್ಪಿಸಬೇಕು. ಇತರ ಗ್ರಹಗಳ ಅನುಕೂಲಕರ ಸ್ಥಾನದಿಂದಾಗಿ, ಯೋಜಿಸಲಾದ ಪ್ರತಿಯೊಂದು ಕೆಲಸವು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಕೀರ್ತಿ ಮತ್ತು ನೆಮ್ಮದಿ ಇರುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು