ಅಕ್ಟೋಬರ್ 13 ರಿಂದ ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಕ್ರಮಣ; 5 ರಾಶಿಯವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿ ಪ್ರವೇಶ, ಹಣಕ್ಕೆ ಕೊರತೆ ಇರಲ್ಲ
Oct 11, 2024 10:36 AM IST
ವೃಶ್ಚಿಕ ರಾಶಿಯಲ್ಲಿ ಶುಕ್ರನ ಸಂಕ್ರಮಣ ಕೆಲವು ರಾಶಿಯವರಿಗೆ ಭಾರಿ ಲಾಭಗಳನ್ನು ತಂದಿದೆ.
- ಶುಕ್ರ ಸಂಕ್ರಮಣ: ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾದ ಶುಕ್ರನು ಮುಂದಿನ ಮೂರು ದಿನಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದರಿಂದಾಗಿ ಕೆಲವು ರಾಶಿಚಕ್ರದವರಿಗೆ ದೀಪಾವಳಿ ಹಬ್ಬ ಮೊದಲೇ ಭಾರಿ ಲಾಭಗಳಿವೆ. ಕೈ ತುಂಬಾ ಹಣದಿಂದ ನೆಮ್ಮದಿ, ಜೀವನದಲ್ಲಿ ಸಂತೋಷ ಹೆಚ್ಚಿರುತ್ತದೆ. ಅದೃಷ್ಟದ ರಾಶಿಯವರ ಬಗ್ಗೆ ತಿಳಿಯೋಣ.
ನವಗ್ರಹಗಳಲ್ಲಿ ಶುಕ್ರನನ್ನು ಸಂಪತ್ತು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನು ಅಸುರರ ಮುಖ್ಯಸ್ಥನೆಂದು ಕರೆಯುತ್ತಾರೆ. ಶುಕ್ರವು ಒಂದು ನಿರ್ದಿಷ್ಟ ಅವಧಿಯ ನಂತರ ತನ್ನ ಚಿಹ್ನೆಯನ್ನು ಬದಲಾಯಿಸುತ್ತಾನೆ. ಹಾಗಾಗಿ ಪ್ರಸ್ತುತ ತುಲಾ ರಾಶಿಯಲ್ಲಿರುವ ಶುಕ್ರವು ಮುಂದಿನ ಮೂರು ದಿನಗಳಲ್ಲಿ ವೃಶ್ಚಿಕ ರಾಶಿಗೆ ಪ್ರವೇಶಿಸಲಿದೆ. ದಸರಾ ನಂತರದ ದಿನ ಅಂದರೆ ಅಕ್ಟೋಬರ್ 13 ರಂದು ಶುಕ್ರನು ವೃಶ್ಚಿಕ ರಾಶಿಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಈ ರಾಶಿ ಬದಲಾವಣೆಯು ಹನ್ನೆರಡು ರಾಶಿಗಳ ಮೇಲೆ ಪ್ರಭಾವ ಬೀರಿದರೂ, ಇದು ಕೆಲವರಿಗೆ ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಇತರರಿಗೆ, ಇದು ವೈವಾಹಿಕ ಜೀವನದಲ್ಲಿ ತೊಂದರೆಗಳು ಮತ್ತು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ವೃಶ್ಚಿಕ ರಾಶಿಯಲ್ಲಿ ಶುಕ್ರನ ಸಂಚಾರವು ಐದು ರಾಶಿಯವರನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಈ ಅದೃಷ್ಟದ ರಾಶಿಯರಲ್ಲಿ ನೀವು ಇದ್ದೀರಾ ಎಂಬುದನ್ನು ಪರಿಶೀಲಿಸಿ.
ತಾಜಾ ಫೋಟೊಗಳು
ವೃಷಭ ರಾಶಿ
ವೃಷಭ ರಾಶಿಯವರಿಗೆ ಶುಕ್ರ ಸಂಕ್ರಮಣವು ಮಹತ್ತರವಾದ ಸಾಧನೆಗಳನ್ನು ತರಲಿದೆ. ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ನೀವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಿಮಗೆ ಅನಿರೀಕ್ಷಿತ ಪ್ರಶಂಸೆಯನ್ನು ತರುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರವನ್ನು ಪ್ರಾರಂಭಿಸಲು ಇದು ಶುಭ ಸಮಯ. ಕಾನೂನು ತೊಡಕುಗಳಿಂದ ಮುಕ್ತಿಯನ್ನು ಪಡೆಯುತ್ತೀರಿ. ಹಣ ಖರ್ಚು ಮಾಡುವಲ್ಲಿ ಜಾಗರೂಕರಾಗಿರಿ. ಒತ್ತಡಕ್ಕೆ ಒಳಗಾಗುವುದಿಲ್ಲ. ಎಲ್ಲವನ್ನೂ ತಾಳ್ಮೆಯಿಂದ ನಿರ್ವಹಿಸುತ್ತೀರಿ. ವ್ಯವಾಹರದಲ್ಲಿ ಸಂಬಂಧಿಕರೊಬ್ಬರಿಗೆ ನೆರವಾಗುತ್ತಿದೆ.
ಕಟಕ ರಾಶಿ
ಕಟಕ ರಾಶಿಯವರ ಪ್ರೀತಿ ಮತ್ತು ವೈವಾಹಿಕ ಜೀವನದ ಮೇಲೆ ಶುಕ್ರನ ಪ್ರಭಾವ ಇರುತ್ತದೆ. ಪ್ರೇಮಿಗಳು ಮದುವೆಯಾಗಲಿದ್ದಾರೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸುವಿರಿ. ಮಕ್ಕಳ ಕಡೆಯಿಂದ ಶುಭ ಸುದ್ದಿ ಸಿಗಲಿದೆ. ಕುಟುಂಬದ ಸದಸ್ಯರು ಮತ್ತು ಮೇಲಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ. ನೀವು ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಲಾಭವನ್ನು ಪಡೆಯುತ್ತೀರಿ. ಸ್ನೇಹತರು ನಿಮ್ಮ ಕೆಲಸಕ್ಕೆ ಸಹಾಯ ಮಾಡುತ್ತಾರೆ. ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ಅಡೆತಡೆಗಳು ಇರುವುದಿಲ್ಲ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಶುಕ್ರ ಸಂಕ್ರಮಣ ಒಳ್ಳೆಯದು. ವಾಹನ, ಆಸ್ತಿ ಇತ್ಯಾದಿಗಳ ಖರೀದಿಸುತ್ತೀರಿ. ಉದ್ಯಮಿಗಳು ಕೈತುಂಬಾ ಸಂಪಾದಿಸುತ್ತಾರೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಉತ್ತಮ ಅವಕಾಶ ಸಿಗಲಿದೆ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳು ಇತ್ಯರ್ಥವಾಗಲಿವೆ. ಕೋಪವನ್ನು ಕಡಿಮೆ ಮಾಡಿಕೊಳ್ಳುತ್ತೀರಿ, ಈ ಸಮಯದಲ್ಲಿ ಮಾಡುವ ಪ್ರತಿ ಕೆಲಸದಲ್ಲಿ ಲಾಭವನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಕ್ರಮಣ ನಡೆಯಲಿದೆ. ಆದ್ದರಿಂದ, ಈ ರಾಶಿಯವರಿಗೆ ಯಾವುದೇ ಕಾರ್ಯದಲ್ಲಿ ಯಶಸ್ಸು ಸಿಗಲಿೆ. ದುಬಾರಿ ವಸ್ತುಗಳನ್ನು ಖರೀದಿಸಲಾಗುತ್ತದೆ. ಕೆಲವು ಕೆಲಸಗಳಲ್ಲಿ, ಸರ್ಕಾರವು ನಿಮಗೆ ಸಂಪೂರ್ಣ ಸಹಾಯವನ್ನು ನೀಡುತ್ತದೆ. ಉದ್ಯಮಿಗಳು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ನವ ದಂಪತಿಗೆ ಮಕ್ಕಳಾಗುವ ಸಂಭವವಿದೆ. ಹಣಕಾಸಿನ ವಿಚಾರದಲ್ಲಿ ಮನಸ್ಸಿಗೆ ತೃಪ್ತಿ ಇರುತ್ತದೆ. ಈ ರಾಶಿಚಕ್ರ ಚಿಹ್ನೆಯವರಿಗೆ ದೀಪಾವಳಿ ಹಬ್ಬವು ಮುಂಚೆಯೇ ಬರುತ್ತದೆ. ಅಂದರೆ ಹಣಕಾಸಿನ ಲಾಭಗಳೊಂದಿಗೆ ಜೀವನದಲ್ಲಿ ಖುಷಿ ಹೆಚ್ಚಾಗುತ್ತದೆ.
ಮಕರ ರಾಶಿ
ಮಕರ ರಾಶಿಯವರಿಗೆ ಶುಕ್ರನು ವೃತ್ತಿ ಮತ್ತು ಕೆಲಸದ ಜೀವನದಲ್ಲಿ ಯಶಸ್ಸನ್ನು ತರುತ್ತಾನೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಯೋಜಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಸಮಯ ಅನುಕೂಲಕರವಾಗಿದೆ. ಮೇಲಧಿಕಾರಿಗಳು ಕೆಲಸದ ವಿಚಾರವಾಗಿ ನಿಮ್ಮ ಪರವಾಗಿ ನಿಲ್ಲುತ್ತಾರೆ. ಸಾಕಷ್ಟು ಶುಭಫಲಗಳಿವೆ. ಒತ್ತಡ ಕಡಿಮೆಯಾಗುತ್ತದೆ. ಕೋರ್ಟ್ ಪ್ರಕರಣಗಲ್ಲಿ ಜಯವನ್ನು ಕಾಣುತ್ತೀರಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.