logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗುರು ಸಂಕ್ರಮಣ 2025: ಮಕರ ರಾಶಿಯವರಿಗೆ ಆರೋಗ್ಯ ಸಮಸ್ಯೆ, ಮೀನ ರಾಶಿಯವರ ಕೌಟುಂಬಿಕ ಜೀವನದಲ್ಲಿ ಮನಸ್ತಾಪ

ಗುರು ಸಂಕ್ರಮಣ 2025: ಮಕರ ರಾಶಿಯವರಿಗೆ ಆರೋಗ್ಯ ಸಮಸ್ಯೆ, ಮೀನ ರಾಶಿಯವರ ಕೌಟುಂಬಿಕ ಜೀವನದಲ್ಲಿ ಮನಸ್ತಾಪ

Rakshitha Sowmya HT Kannada

Dec 02, 2024 08:00 PM IST

google News

ಮಕರ, ಕುಂಭ, ಮೀನ ರಾಶಿ ಗುರು ಸಂಕ್ರಮಣ ಫಲ 2025

  • Jupiter Transit 2025: ಮುಂದಿನ ವರ್ಷ ಮಾರ್ಚ್‌ನಲ್ಲಿ ಶನಿ ಸಂಕ್ರಮಣದ ಜೊತೆ ಮೇನಲ್ಲಿ ಗುರುವು ರಾಶಿ ಬದಲಿಸಲಿದ್ದಾನೆ. 15 ಮೇ 2025 ರಂದು ಮದ್ಯಾಹ್ನ ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಮಕರ, ಕುಂಭ, ಮೀನ ರಾಶಿಯವರಿಗೆ ಯಾವ ರೀತಿಯ ಫಲಗಳನ್ನು ನೀಡಲಿದ್ದಾನೆ ನೋಡೋಣ.

ಮಕರ, ಕುಂಭ, ಮೀನ ರಾಶಿ ಗುರು ಸಂಕ್ರಮಣ ಫಲ 2025
ಮಕರ, ಕುಂಭ, ಮೀನ ರಾಶಿ ಗುರು ಸಂಕ್ರಮಣ ಫಲ 2025 (PC: Canva)

ಗುರು ಸಂಕ್ರಮಣ 2025: ಗುರು ಗ್ರಹವನ್ನು ಬೃಹಸ್ಪತಿ ಅಥವಾ ದೇವಗುರು ಎಂದು ಕರೆಯಲಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಇದನ್ನು ಅತ್ಯಂತ ಅನುಕೂಲಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರುವು ಕಳೆದ ವರ್ಷದಿಂದ ಶುಕ್ರನಿಂದ ನಿಯಂತ್ರಿಸಲ್ಪಡುವ ವೃಷಭ ರಾಶಿಯಲ್ಲಿ ನೆಲೆಸಿದ್ದಾನೆ. 15 ಮೇ 2025 ರಂದು ಮದ್ಯಾಹ್ನ 2:30 ವೃಷಭ ರಾಶಿಯಿಂದ ಬುಧದ ಆಳ್ವಿಕೆಯ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು, ಸಣ್ಣ ಪ್ರವಾಸಗಳು ಹೆಚ್ಚಿನ ಆನಂದವನ್ನು ನೀಡುತ್ತವೆ

Dec 02, 2024 03:50 PM

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಶನಿಯ ನಂತರ ನಿಧಾನವಾಗಿ ಚಲಿಸುವ ಎರಡನೇ ಗ್ರಹವೇ ಗುರು. ಗುರುವನ್ನು ದೇವತೆಗಳ ಗುರು ಎಂದೂ ಕರೆಯುತ್ತಾರೆ. ಉದ್ಯೋಗ, ಮದುವೆ, ಮಕ್ಕಳು, ಸಂತೋಷ, ಮನೆ, ಸಂಪತ್ತು, ಸಮೃದ್ಧಿ, ಸಂತೋಷದ ದಾಂಪತ್ಯ ಮತ್ತು ಸಾಮಾಜಿಕ ಗೌರವವನ್ನು ಒಳಗೊಂಡಂತೆ ಜೀವನದಲ್ಲಿ ಎಲ್ಲಾ ಗುರಿಗಳನ್ನು ಸಾಧಿಸಲು ಗುರುವಿನ ಆಶೀರ್ವಾದ ಇರಬೇಕು. ಗುರುವು 2025 ರ ಮೇ ತಿಂಗಳಲ್ಲಿ ಮಿಥುನ ರಾಶಿಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ದ್ವಾದಶ ರಾಶಿಗಳಿಗೆ ವಿವಿಧ ಫಲಗಳನ್ನು ನೀಡುತ್ತಾನೆ.

ಮಕರ, ಕುಂಭ, ಮೀನ ರಾಶಿ ಗುರು ಸಂಕ್ರಮಣ ಫಲ 2025

 

ಮಕರ ರಾಶಿ

ಸಂಕ್ರಮಣದ ಸಮಯದಲ್ಲಿ ಗುರುವು 2025 ರಲ್ಲಿ ಆರನೇ ಮನೆಗೆ ಸಾಗುತ್ತದೆ. ಇದರಿಂದ ನೀವು ಬಹಳ ಜಾಗರೂಕರಾಗಿರಬೇಕು. ಕೆಲಸದ ಕಡೆ ಹೆಚ್ಚು ಗಮನ ಹರಿಸುವ ಮೂಲಕ ನೀವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಇದೆ. ಉದರ ಸಂಬಂಧಿ, ಗ್ಯಾಸ್‌, ಅಜೀರ್ಣ, ಜೀರ್ಣಾಂಗ ವ್ಯವಸ್ಥೆ, ಕೊಲೆಸ್ಟ್ರಾಲ್ ಸಂಬಂಧಿ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಈ ಅವಧಿಯಲ್ಲಿ ಖರ್ಚು ಕೂಡಾ ಹೆಚ್ಚಾಗುತ್ತದೆ. ಸೋಮಾರಿತನವನ್ನು ಜಯಿಸಿದರೆ ಮಾತ್ರ ನೀವು ಯಶಸ್ಸು ಸಾಧಿಸುವಿರಿ. ವಿರೋಧಿಗಳು ನಿಮ್ಮನ್ನು ಸೋಲಿಸಲು ಪ್ರಯತ್ನಿಸಬಹುದು. ಗುರುವು ಅಕ್ಟೋಬರ್‌ನಲ್ಲಿ 7ನೇ ಮನೆಗೆ ಪ್ರವೇಶಿಸುವುದರಿಂದ, ನೀವು ಈ ಎಲ್ಲಾ ವಿರೋಧಿಗಳ ಮೇಲೆ ಜಯ ಸಾಧಿಸುವಿರಿ. ಆರ್ಥಿಕ ಸಮೃದ್ಧಿ ಇರುತ್ತದೆ. ನಿಮ್ಮ ಸಂಗಾತಿಯು ನಿಮ್ಮನ್ನು ಬೆಂಬಲಿಸುತ್ತಾರೆ. ವೈವಾಹಿಕ ಸಂಬಂಧ ಸುಧಾರಿಸುತ್ತದೆ.

ಅವಿವಾಹಿತರಿಗೆ ವಿವಾಹವಾಗುತ್ತದೆ. ನಿಮ್ಮ ಸಂಗಾತಿಯು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಕೆಲಸದ ಸ್ಥಳದಲ್ಲಿ ಪ್ರಗತಿಗೆ ಅತ್ಯುತ್ತಮ ಅವಕಾಶಗಳು ಸಹ ಇರುತ್ತದೆ. ನಂತರ, ಡಿಸೆಂಬರ್‌ನಲ್ಲಿ ಗುರುಗ್ರಹದ 6ನೇ ಮನೆಗೆ ಹಿಮ್ಮುಖ ಪ್ರವೇಶವು ಆರೋಗ್ಯ ಸಮಸ್ಯೆ ಉಂಟು ಮಾಡುವುದರಿಂದ ನೀವು ಹೆಚ್ಚು ಜಾಗರೂಕರಾಗಿರಬೇಕು

ಪರಿಹಾರ: ಗುರುವಾರದಂದು ಬಾಳೆಗಿಡಕ್ಕೆ ಪೂಜೆ ಮಾಡಿ.

ಕುಂಭ ರಾಶಿ

ಗುರು ಸಂಕ್ರಮಣವು ಕುಂಭ ರಾಶಿಯ 5ನೇ ಮನೆಯಲ್ಲಿ ಸಂಭವಿಸುತ್ತದೆ. ಇದರಿಂದ ನಿಮಗೆ ಆರ್ಥಿಕ ಲಾಭ ಹೆಚ್ಚಾಗಲಿದೆ. ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತವೆ. ಬಯಸಿದ ಆಸೆಗಳು ಈಡೇರುತ್ತವೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ನೀವು ಉದ್ಯೋಗ ಬದಲಾಯಿಸಲು ಬಯಸಿದರೆ, ಇದು ಉತ್ತಮ ಸಮಯ.

ಗುರುವು ನಿಮ್ಮ 9, 11 ಮತ್ತು ಮೊದಲ ಮನೆಗಳನ್ನು ಧನಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ. ನಿಮ್ಮ ಮಕ್ಕಳು ಸುಸಂಸ್ಕೃತರಾಗುತ್ತಾರೆ. ನಿಮ್ಮ ಅಧ್ಯಯನದಲ್ಲಿ ನೀವು ಉತ್ತಮ ಸಾಧನೆ ಸಾಧಿಸುವಿರಿ. ಉನ್ನತ ಶಿಕ್ಷಣವು ನಿಮ್ಮ ಯಶಸ್ಸಿಗೆ ಸಹಾಯ ಮಾಡುತ್ತದೆ. ಆರೋಗ್ಯ ಸಮಸ್ಯೆ ಸುಧಾರಿಸುತ್ತದೆ. ಅಕ್ಟೋಬರ್‌ನಲ್ಲಿ ಗುರುವಿನ 6ನೇ ಮನೆ ಪ್ರವೇಶದಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು. ಅದರ ನಂತರ, ಗುರುವು ಡಿಸೆಂಬರ್‌ನಲ್ಲಿ 5ನೇ ಮನೆಯಲ್ಲಿ ಹಿಮ್ಮೆಟ್ಟುವಿಕೆಯನ್ನು ಪ್ರವೇಶಿಸಿದಾಗ, ನೀವು ಪ್ರೀತಿಯ ಸಂಬಂಧಗಳಲ್ಲಿನ ಸಮಸ್ಯೆಗಳ ಜೊತೆಗೆ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ಏರಿಳಿತಗಳು ಉಂಟಾಗಬಹುದು.

ಪರಿಹಾರ: ಗುರುವಾರದಂದು ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸಿ.

ಮೀನ ರಾಶಿ 

ಗುರುವು ಮೀನ ರಾಶಿಯ ಅಧಿಪತಿಯಾಗಿರುವುದರಿಂದ ನಾಲ್ಕನೇ ಮನೆಯಲ್ಲಿ ಸಂಕ್ರಮಣ ಸಂಭವಿಸುತ್ತದೆ. ಇದರಿಂದ ಕೌಟುಂಬಿಕ ಜೀವನದಲ್ಲಿ ಕೆಲವು ಏರಿಳಿತಗಳನ್ನು ಉಂಟಾಗಬಹುದು. ಪರಸ್ಪರ ಸಾಮರಸ್ಯದ ಕೊರತೆ ಕಾಡಬಹುದು. ಆದರೆ, ನಿಮ್ಮ ವೃತ್ತಿಪರ ವಲಯದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ.

ಕೆಲಸದಲ್ಲಿ ಏಕಾಗ್ರತೆ ಇರುವುದರಿಂದ ನೀವು ಯಶಸ್ಸು ಸಾಧಿಸುತ್ತೀರಿ. ಗುರುವು ನಿಮ್ಮ ಕುಂಡಲಿಯ 8, 10 ಮತ್ತು 12 ಮನೆಗಳನ್ನು ನೋಡುತ್ತಾನೆ, ಇದರ ಪರಿಣಾಮವಾಗಿ ಖರ್ಚುಗಳು ಹೆಚ್ಚಾಗುತ್ತವೆ. ಹಣವನ್ನು ಯೋಗ್ಯ ಕಾರಣಗಳಿಗಾಗಿ ಖರ್ಚು ಮಾಡುವಿರಿ. ದೂರದ ಊರಿಗೆ ಪ್ರಯಾಣಿಸಬಹುದು. ಅಕ್ಟೋಬರ್‌ನಲ್ಲಿ ಗುರುವು 5ನೇ ಮನೆಗೆ ಸಾಗುತ್ತದೆ, ಇದು ಆರ್ಥಿಕ ಸಮೃದ್ಧಿಗೆ ಅನುಕೂಲಕರ ಅವಧಿಯಾಗಿದೆ. ಸಂತಾನ ಇಲ್ಲದವರಿಗೆ ಮಕ್ಕಳಾಗಬಹುದು. ಪ್ರಣಯ ಸಂಬಂಧ ಸುಧಾರಿಸಲಿದೆ. ನಂತರ, ಗುರುವು ಹಿಮ್ಮುಖವಾಗಿ ತಿರುಗಿ ಡಿಸೆಂಬರ್‌ನಲ್ಲಿ ನಾಲ್ಕನೇ ಮನೆಗೆ ಮರಳಿದಾಗ, ಕುಟುಂಬದಲ್ಲಿ ತೊಂದರೆಗಳು ಹೆಚ್ಚಾಗಬಹುದು. ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

ಪರಿಹಾರ: ನೀವು ಗುರುವಾರ ಬೃಹಸ್ಪತಿ ಮಹಾರಾಜರ ಬೀಜ ಮಂತ್ರವನ್ನು ಜಪಿಸಬೇಕು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ