ಸಿಂಹ ರಾಶಿ ಭವಿಷ್ಯ ಜುಲೈ 30: ಸಂಗಾತಿಯೊಂದಿಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ; ಆಹಾರದ ಮೇಲೆ ಗಮನವಿರಲಿ, ಆರೋಗ್ಯ ಸಮಸ್ಯೆ ಕಾಡಬಹುದು
Jul 30, 2024 06:49 AM IST
ಸಿಂಹ ರಾಶಿ ಭವಿಷ್ಯ ಜುಲೈ 30: ಸಂಗಾತಿಯೊಂದಿಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ; ಆರೋಗ್ಯ ಸಮಸ್ಯೆ ಕಾಡಬಹುದು, ಆಹಾರದ ಮೇಲೆ ಗಮನವಿರಲಿ
- Leo Daily Horoscope July 30, 2024: ರಾಶಿಚಕ್ರದ ಐದನೇ ಚಿಹ್ನೆ ಇದು. ಜನನದ ಸಮಯದಲ್ಲಿ ಚಂದ್ರನು ಸಿಂಹರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರದ ಚಿಹ್ನೆ ಸಿಂಹ. ಜುಲೈ 30ರ ಸಿಂಹ ರಾಶಿ ಭವಿಷ್ಯದ ಪ್ರಕಾರ, ಆಹಾರದ ಕಾರಣದಿಂದ ಅನಾರೋಗ್ಯ ಸಮಸ್ಯೆಗಳು ಬಾಧಿಸಬಹುದು. ಉದ್ಯಮಿಗಳು ವಿದೇಶದಲ್ಲಿ ವ್ಯವಹಾರ ಆರಂಭಿಸುವ ಸಾಧ್ಯತೆ.
ಸಿಂಹ ರಾಶಿ (ಜುಲೈ 30, ಮಂಗಳವಾರ): ಇಂದಿನ ದಿನಭವಿಷ್ಯದ ಪ್ರಕಾರ ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹೆಚ್ಚಿನ ಅವಕಾಶಗಳು ಒದಗಿ ಬರಬಹುದು. ಸಂಗಾತಿಯೊಂದಿಗೆ ಸಂತೋಷವಾಗಿರಲು ಪ್ರಯತ್ನಿಸಿ. ನೀವು ವೃತ್ತಿಪರವಾಗಿ ಕಾರ್ಯನಿರತರಾಗಿರುತ್ತೀರಿ. ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳು ಬಾಧಿಸುವುದಿಲ್ಲ. ಖರ್ಚು, ವೆಚ್ಚಗಳನ್ನು ನಿಯಂತ್ರಿಸಿ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ಸಿಂಹ ರಾಶಿಯ ಪ್ರೇಮ ಜಾತಕ (Leo Love Horoscope)
ಯಾವಾಗಲೂ ನಿಮ್ಮ ಸಂಗಾತಿಗೆ ಆದ್ಯತೆ ನೀಡಿ ಮತ್ತು ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಿ. ವಿವಾಹಿತ ದಂಪತಿಗಳು ತಮ್ಮ ಅತ್ತೆಯನ್ನು ಗೌರವಿಸಬೇಕು. ಕೆಲವು ವಿವಾಹಿತವರು ಸಂಗಾತಿಯ ಮನೆಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಇದನ್ನು ತಕ್ಷಣವೇ ಪರಿಹರಿಸಿಕೊಳ್ಳಿ.
ಸಿಂಹ ರಾಶಿ ವೃತ್ತಿ ಭವಿಷ್ಯ (Leo Professional Horoscope)
ಉದ್ಯಮಿಗಳು ವಿದೇಶದಲ್ಲಿ ಪಾಲುದಾರಿಕೆ ಪಡೆಯುತ್ತಾರೆ. ಇದು ಅವರ ಸಂಪತ್ತು ಹೆಚ್ಚಲು ಸಹಾಯವಾಗುತ್ತದೆ. ಕೆಲವು ಪ್ರಮುಖ ಕೆಲಸಗಳ ಹೊರತಾಗಿಯೂ ದಿನದ ಮೊದಲ ಭಾಗವು ಉತ್ಪಾದಕವಾಗಿರುವುದಿಲ್ಲ. ಕೆಲವರಿಗೆ ಉತ್ತಮ ಪ್ಯಾಕೇಜ್ ಇರುವ ಒಳ್ಳೆಯ ಕೆಲಸದ ಆಫರ್ ಸಿಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹಿಂದೆ ಸರಿಯಬಾರದು ಮತ್ತು ಯಶಸ್ಸನ್ನು ಸಾಧಿಸಲು ಅಡೆತಡೆಗಳನ್ನು ಎದುರಿಸಬೇಕು. ಇದರೊಂದಿಗೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.
ಸಿಂಹ ರಾಶಿ ಆರ್ಥಿಕ ಜಾತಕ (Leo Money Horoscope)
ಇಂದು ಹಣ ನಿಮ್ಮ ಕೈ ಸೇರಲಿದೆ, ಭವಿಷ್ಯಕ್ಕಾಗಿ ಅದನ್ನ ಉಳಿಸುವ ಪ್ರಯತ್ನ ಮಾಡಿ. ಖರ್ಚುಗಳನ್ನು ಕಡಿಮೆ ಮಾಡಿ. ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆದ್ಯತೆ ನೀಡಿ. ಒಡಹುಟ್ಟಿದವರೊಂದಿಗೆ ಆಸ್ತಿ ವಿಚಾರ ಚರ್ಚಿಸುವುದನ್ನು ತಪ್ಪಿಸಿ, ಅದು ಗೊಂದಲಕ್ಕೆ ಕಾರಣವಾಗಬಹುದು. ಹಣಕಾಸಿನ ಸ್ಥಿತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಯಾಗುವುದಿಲ್ಲ. ಆದರೆ ಕೆಲವು ಉದ್ಯಮಿಗಳು ಉತ್ತಮ ಆದಾಯ ಪಡೆಯುತ್ತಾರೆ.
ಸಿಂಹ ರಾಶಿ ಆರೋಗ್ಯ ಜಾತಕ (Leo Health Horoscope)
ಇಂದು ವೈರಲ್ ಜ್ವರ, ಗಂಟಲು ನೋವು, ಜೀರ್ಣಕಾರಿ ಸಮಸ್ಯೆಗಳು ಮತ್ತು ಕೀಲು ನೋವಿನಂತಹ ಸಮಸ್ಯೆಗಳು ಕಾಡಬಹುದು. ಗರ್ಭಿಣಿಯರು ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸಿ. ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಎಣ್ಣೆಯುಕ್ತ ಮತ್ತು ಜಂಕ್ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಆಹಾರದಲ್ಲಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿ. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡುತ್ತದೆ.
ಸಿಂಹ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಅಧಿಪತಿ: ಸೂರ್ಯ, ಶುಭ ದಿನಾಂಕಗಳು: 1, 4, 5, 6, 9, 15, 24. ಶುಭ ವಾರಗಳು: ಭಾನುವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ವರ್ಣ: ಕಿತ್ತಳೆ, ಕೆಂಪು ಮತ್ತು ಹಸಿರು. ಅಶುಭ ವರ್ಣ: ನೀಲಿ ಮತ್ತು ಬಿಳಿ. ಶುಭ ದಿಕ್ಕು: ಪೂರ್ವ ಮತ್ತು ದಕ್ಷಿಣ. ಶುಭ ತಿಂಗಳು: ಡಿಸೆಂಬರ್ 15ರಿಂದ ಜುಲೈ 14. ಶುಭ ಹರಳು: ಹವಳ, ಕನಕ, ಪುಷ್ಯರಾಗ ಮತ್ತು ಮಾಣಿಕ್ಯ. ಶುಭ ರಾಶಿ: ವೃಶ್ಚಿಕ, ಧನಸ್ಸು ಮತ್ತು ಮೇಷ. ಅಶುಭ ರಾಶಿ: ತುಲಾ, ಮಕರ, ಕುಂಭ ಮತ್ತು ವೃಷಭ.
ಸಿಂಹ ರಾಶಿಯವರು ಶುಭ ಫಲ ಪಡೆಯಲು ಸರಳ ಪರಿಹಾರಗಳು
1) ಆದಿತ್ಯಹೃದಯ: ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.
2) ಈ ದಾನಗಳಿಂದ ಶುಭ ಫಲ: ಹಸಿರು ಬಣ್ಣದ ಬಟ್ಟೆ ಮತ್ತು ಹೆಸರುಬೇಳೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3) ದೇವಾಲಯ, ದೇವರ ಪೂಜೆ: ಶ್ರೀ ಗಣಪತಿ ದೇಗುಲಕ್ಕೆ ಕಪ್ಪು ಮತ್ತು ಬಿಳಿ ಮಿಶ್ರಿತ ನೆಲಹಾಸು ದಾನ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತದೆ. ಬಾಯಿಗೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತವೆ. ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನಿಮ್ಮ ಬಳಿ ಸದಾ ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಕರವಸ್ತ್ರ ಇರಿಸಿಕೊಳ್ಳಿ. ನಿರೀಕ್ಷಿತ ಫಲಗಳು ದೊರೆಯಲು ಇದು ಸಹಕಾರಿ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.