logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mangal Rashi Parivartan 2023: ಹೊಸ ವರ್ಷ ವೃತ್ತಿರಂಗದಲ್ಲಿ ಈ ರಾಶಿಯವರಿಗೆ ಅಪಾರ ಯಶಸ್ಸು ಸಿಗಲಿದೆ; ನಿಮ್ಮ ರಾಶಿಯೂ ಇದೆಯಾ ಚೆಕ್‌ ಮಾಡಿ!

Mangal Rashi Parivartan 2023: ಹೊಸ ವರ್ಷ ವೃತ್ತಿರಂಗದಲ್ಲಿ ಈ ರಾಶಿಯವರಿಗೆ ಅಪಾರ ಯಶಸ್ಸು ಸಿಗಲಿದೆ; ನಿಮ್ಮ ರಾಶಿಯೂ ಇದೆಯಾ ಚೆಕ್‌ ಮಾಡಿ!

HT Kannada Desk HT Kannada

Dec 24, 2022 05:57 AM IST

google News

ಮಂಗಳ ದೇವ

    • Mangal Gochar 2023, Mangal Rashi Parivartan: ಮಂಗಳದೇವನು 2023ರ ಹೊಸ ವರ್ಷದಲ್ಲಿ ಒಂದು ರಾಶಿ ಬಿಟ್ಟು ಇನ್ನೊಂದನ್ನು ಪ್ರವೇಶಿಸುತ್ತಿದ್ದಾನೆ. ಮಂಗಳನ ಈ ಸಂಚಾರವು ಕೆಲವು ರಾಶಿಚಕ್ರದವರಿಗೆ ಮಂಗಳಕರ ಪರಿಣಾಮ ಉಂಟುಮಾಡುತ್ತದೆ. ಮಂಗಳ ಗೋಚರ ಅಥವಾ ಮಂಗಳ ರಾಶಿಪರಿವರ್ತನೆಯಿಂದ ಯಾವ ರಾಶಿಯವರಿಗೆ ಲಾಭ, ಯಾವ ರಾಶಿಯವರಿಗೆ ನಷ್ಟ ಇಲ್ಲಿದೆ ಮಾಹಿತಿ.
ಮಂಗಳ ದೇವ
ಮಂಗಳ ದೇವ (livehindustan)

ಹೊಸ ಕ್ಯಾಲೆಂಡರ್‌ ವರ್ಷ ಆರಂಭಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಮಂಗಳದೇವನು 2023ರ ಹೊಸ ವರ್ಷದಲ್ಲಿ ಒಂದು ರಾಶಿ ಬಿಟ್ಟು ಇನ್ನೊಂದನ್ನು ಪ್ರವೇಶಿಸುತ್ತಿದ್ದಾನೆ. ಮಂಗಳನ ಈ ಸಂಚಾರವು ಕೆಲವು ರಾಶಿಚಕ್ರದವರಿಗೆ ಮಂಗಳಕರ ಪರಿಣಾಮ ಉಂಟುಮಾಡುತ್ತದೆ. ಮಂಗಳ ಗೋಚರ ಅಥವಾ ಮಂಗಳ ರಾಶಿಪರಿವರ್ತನೆಯಿಂದ ಯಾವ ರಾಶಿಯವರಿಗೆ ಲಾಭ, ಯಾವ ರಾಶಿಯವರಿಗೆ ನಷ್ಟ ಇಲ್ಲಿದೆ ಮಾಹಿತಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು, ಸಣ್ಣ ಪ್ರವಾಸಗಳು ಹೆಚ್ಚಿನ ಆನಂದವನ್ನು ನೀಡುತ್ತವೆ

Dec 02, 2024 03:50 PM

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಂಗಳ ಗ್ರಹವನ್ನು ಕಮಾಂಡರ್-ಇನ್-ಚೀಫ್ ಎಂದು ಪರಿಗಣಿಸಲಾಗಿದೆ. ಹೊಸ ವರ್ಷದ ಮಾರ್ಚ್‌ ತಿಂಗಳಲ್ಲಿ ಮಿಥುನದಲ್ಲಿ ಮಂಗಳ ಪ್ರವೇಶವಾಗಲಿದೆ. ಹೀಗೆ ಮಿಥುನ ರಾಶಿಗೆ ಮಂಗಳನ ಆಗಮನವು ಕೆಲವು ರಾಶಿಗಳ ಮೇಲೆ ಶುಭ ಮತ್ತು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮಗಳನ್ನು ಬೀರಲಿದೆ. ಹೊಸ ವರ್ಷದಲ್ಲಿ ಮಂಗಳ ಗೋಚರ, ಮಂಗಳ ರಾಶಿಪರಿವರ್ತನೆ ಅಥವಾ ಮಂಗಳ ಸಂಚಾರದ ಕಾರಣ ಆಗಲಿರುವ ಬದಲಾವಣೆಗಳ ಕಿರು ಮುನ್ನೋಟ ಮಾಹಿತಿ ಇಲ್ಲಿದೆ.

ಯಾವ ರಾಶಿಚಕ್ರದ ಚಿಹ್ನೆಗಳಿಗೆ ಲಾಭವಾಗುತ್ತದೆ-

ಮಿಥುನ ರಾಶಿ - ಮಿಥುನ ರಾಶಿಯವರಿಗೆ ಮಂಗಳ ಸಂಚಾರವು ತುಂಬಾ ಪ್ರಯೋಜನಕಾರಿಯಾಗಲಿದೆ. ಈ ರಾಶಿಯ ಜನರು ತಮ್ಮ ವೃತ್ತಿ ರಂಗದಲ್ಲಿ ಪ್ರಗತಿಯನ್ನು ಹೊಂದಬಹುದು. ಈ ರಾಶಿಯವರು ಯಾರಾದರೂ ಕೆಲಸ ಹುಡುಕುತ್ತಿರುವವರು ಇದ್ದರೆ ಅಂಥವರಿಗೆ ಉದ್ಯೋಗದ ಆಫರ್‌ ಬರಬಹುದು. ಈಗಾಗಲೇ ಉದ್ಯೋಗ ಮಾಡುತ್ತಿರುವ ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ನಿರೀಕ್ಷೆ ಮಾಡಬಹುದು.

ಕನ್ಯಾ ರಾಶಿ - ಕನ್ಯಾ ರಾಶಿಯವರಿಗೆ ಮಂಗಳ ಸಂಚಾರವು ತುಂಬಾ ಶುಭಕರವಾಗಿರುತ್ತದೆ. ನಿಮ್ಮ ರಾಶಿಚಕ್ರದ 10 ನೇ ಮನೆಯಲ್ಲಿ ಮಂಗಳವು ಸಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬೇಕು. ಇದರಲ್ಲಿ ಶುಭ ಸುದ್ದಿಯನ್ನು ನೀವು ನಿರೀಕ್ಷೆ ಮಾಡಬಹುದು. ಈ ರಾಶಿಯವರು ಉದ್ಯೋಗದಲ್ಲಿದ್ದು, ವರ್ಗಾವಣೆ ಬಯಸುತ್ತಿದ್ದರೆ, ನಿರೀಕ್ಷಿತ ವರ್ಗಾವಣೆ ಪಡೆಯಬಹುದು. ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಲಿದೆ.

ಮೀನ ರಾಶಿ - ಮೀನ ರಾಶಿಯವರಿಗೆ ಮಂಗಳ ಸಂಚಾರವು ತುಂಬಾ ಶುಭಕರವಾಗಿರುತ್ತದೆ. ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಮಂಗಳ ಸಂಚಾರ ಇರುತ್ತದೆ. ನಿಮ್ಮ ಸೌಕರ್ಯಗಳು ಹೆಚ್ಚಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ವೃತ್ತಿಪರರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು.

(ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ಕೇವಲ ಪ್ರಾಥಮಿಕ ಮಾಹಿತಿಗಾಗಿ ಈ ಮಾಹಿತಿ ಒದಗಿಸಲಾಗಿದೆ. ರಾಶಿಫಲಗಳು ವೈಯಕ್ತಿಕ ಜಾತಕವನ್ನು ಅವಲಂಬಿಸಿದೆ. ಆದ್ದರಿಂದ ಅವುಗಳನ್ನು ಅನ್ವಯಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)

ಗಮನಿಸಬಹುದಾದ ಇತರೆ ವಿಚಾರಗಳು

Ketu Transit 2023: ಈ ಸಲ ರಾಹು ಅಲ್ಲ, ಕೇತು ಸಂಚಾರದ ಪರಿಣಾಮ! ಹೊಸ ವರ್ಷ 4 ರಾಶಿಯವರಿಗೆ ಪ್ರಯೋಜನ! ನಿಮ್ಮ ರಾಶಿಯೂ ಇದೆಯೇ?

Ketu Transit 2023:ಹೊಸ ವರ್ಷದ ಆರಂಭದಲ್ಲಿ ಕೇತು ರಾಶಿಯನ್ನು ಬದಲಾಯಿಸುತ್ತಾನೆ. ಇದು 4 ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಅವು ಯಾವುವು ಎಂದು ನೋಡೋಣ. ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ.

Purnima 2023: 12 ತಿಂಗಳು 13 ಹುಣ್ಣಿಮೆ; ಹೊಸ ವರ್ಷದಲ್ಲೇಕೆ ಹೀಗೆ?

Purnima 2023: ಮುಂದಿನ ವರ್ಷ ತಿಂಗಳು ಹನ್ನೆರಡೇ ಇದ್ದರೂ ಹುಣ್ಣಿಮೆ ಮಾತ್ರ 13 ಯಾಕೆ? ಹೊಸ ವರ್ಷದ ಹುಣ್ಣಿಮೆಗಳ ಪೂರ್ಣ ಪಟ್ಟಿಗೆ ಇಲ್ಲಿ ಕ್ಲಿಕ್‌ ಮಾಡಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ