Moles Astrology: ಭವಿಷ್ಯ ನುಡಿಯುವ ಮಚ್ಚೆಗಳು, ನಿಮ್ಮ ಎಡತೊಡೆ, ತೊಡೆ ಸಂದು, ಕೈಗಳಲ್ಲಿ ಮಚ್ಚೆಯಿದ್ದರೆ ಶುಭವೇ ಅಶುಭವೇ, ಇಲ್ಲಿದೆ ವಿವರ
Sep 08, 2023 06:30 AM IST
Moles Astrology: ಭವಿಷ್ಯ ನುಡಿಯುವ ಮಚ್ಚೆಗಳು
- Moles Astrology: ನಮ್ಮ ದೇಹದ ವಿವಿಧ ಕಡೆ ಇರುವ ಮಚ್ಚೆಗಳು ನಮ್ಮ ಭವಿಷ್ಯ ಹೇಳಬಲ್ಲವು. ಜ್ಯೋತಿಷಿ ಎಚ್. ಸತೀಶ್ ಪ್ರಕಾರ ನಮ್ಮ ದೇಹದ ಎಡ ತೊಡೆಯ ಮೇಲೆ, ತೊಡೆ ಸಂಧುಗಳ ನಡುವೆ ಮತ್ತು ಕೈಗಳಲ್ಲಿ ಮಚ್ಚೆ ಇದ್ದರೆ ವಿವಿಧ ಫಲಗಳು ಇವೆ.
ದೇಹದ ಮೇಲಿನ ಮಚ್ಚೆಗಳಿಗೂ ಜ್ಯೋತಿಷಶಾಸ್ತ್ರದಲ್ಲಿ ಮಹತ್ವವಿದೆ. ಇವು ನಮ್ಮ ಭವಿಷ್ಯ ನುಡಿಯಬಲ್ಲವು. ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗಳು ಶುಭ ಅಥವಾ ಅಶುಭ ಕಾರಕವೂ ಹೌದು. ದೇಹದ ಎಡ ತೊಡೆಯ ಮೇಲೆ, ತೊಡೆಯ ಸಂಧುಗಳ ನಡುವೆ ಮತ್ತು ಕೈಗಳಲ್ಲಿರುವ ಮಚ್ಚೆಗಳ ಮಚ್ಚೆ ಭವಿಷ್ಯ ಇಲ್ಲಿದೆ.
ತಾಜಾ ಫೋಟೊಗಳು
ಎಡ ತೊಡೆಯ ಮೇಲಿನ ಮಚ್ಚೆಗಳ ಫಲ
ಎಡ ತೊಡೆಯ ಮೇಲೆ ಮಚ್ಚೆ ಇರುವವರು ಯಾವುದಾದರೂ ಒಂದು ರೀತಿಯ ಯೋಚನೆಗೆ ಒಳಗಾಗಿರುತ್ತಾರೆ. ಸಾಮಾನ್ಯವಾಗಿ ಇವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇವರಲ್ಲಿ ಹೆಚ್ಚಿನ ಆಸೆ ಆಕಾಂಕ್ಷಿಗಳು ಮನೆ ಮಾಡಿರುತ್ತವೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಾರೆ.
ಕೆಲವು ವಿಚಾರಗಳಲ್ಲಿ ಅತಿಯಾದ ಆಸೆ ಇರುತ್ತದೆ. ಇವರು ವಾಸವಿರುವ ಸುತ್ತಮುತ್ತಲಿನ ಪರಿಸ್ಥಿತಿಗೆ ಅನುಗುಣವಾಗಿ ದೊಡ್ಡತನವನ್ನು ತೋರಿಸಲು ಪ್ರಯತ್ನಿಸುತ್ತಾರೆ. ಸುಲಭವಾಗಿ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತವೆ. ಎಲ್ಲರೊಂದಿಗೆ ವಾದ ವಿವಾದದಲ್ಲಿ ತೊಡಗಿರುತ್ತಾರೆ. ಹೊಂದಾಣಿಕೆಯ ಗುಣ ಕಡಿಮೆ ಇರುತ್ತದೆ. ವಿವಾದ ಪ್ರಿಯರು. ಬೇರೆಯವರು ಹೇಳುವ ಮಾತನ್ನು ಸುಲಭವಾಗಿ ನಂಬುತ್ತಾರೆ.
ಹಣ ಮತ್ತು ಒಡವೆ ವಸ್ತುಗಳ ಮೇಲೆ ಹೆಚ್ಚಿನ ಆಸೆ ಇರುತ್ತದೆ. ಆದರೆ ಇವರ ಆಸೆ ಆಕಾಂಕ್ಷೆಗಳು ಪರಿಪೂರ್ಣವಾಗುವುದಿಲ್ಲ. ಸಂಗಾತಿಯೊಂದಿಗೆ ಮತ್ತು ಮಕ್ಕಳೊಂದಿಗೆ ಸದಾ ಕಾಲ ಬಿರುಸಿನ ಮಾತುಕತೆಯಲ್ಲಿ ತೊಡಗುತ್ತಾರೆ. ತಮ್ಮದೇ ಆದ ದುಡುಕುತನದಿಂದ ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಸಾಮಾನ್ಯವಾಗಿ ಇವರಿಗೆ ಸಂಬಂಧದಲ್ಲಿ ಅಥವಾ ಪರಿಚಯದವರೊಂದಿಗೆ ವಿವಾಹವಾಗುತ್ತದೆ. ಶಾಂತಿ ಸಹನೆಯಿಂದ ವರ್ತಿಸಿದಷ್ಟು ಇವರಿಗೆ ಸುಖಮಯ ಜೀವನವಿರುತ್ತದೆ. ಬಿಡುವಾದಾಗಲೆಲ್ಲ ಪ್ರವಾಸ ಮಾಡಬೇಕೆಂಬ ಗುರಿಯನ್ನು ಹೊಂದಿರುತ್ತಾರೆ. ಎಷ್ಟೇ ಕಷ್ಟವಾದರೂ ಸ್ವಂತ ಮನೆಯ ಒಡೆಯರಾಗುತ್ತಾರೆ.
ತೊಡೆಯ ಸಂಧುಗಳಲ್ಲಿ ಇರುವ ಮಚ್ಚೆಗಳ ಫಲ
ಚಿಕ್ಕ ಪುಟ್ಟ ವಿಚಾರಗಳಿಗೂ ಅತಿಯಾಗಿ ಯೋಚನೆ ಮಾಡುತ್ತಾರೆ. ನಿರಾಸೆಯನ್ನು ತಡೆಯಲು ಇವರಿಗೆ ಸಾಧ್ಯವಾಗುವುದಿಲ್ಲ. ತಮ್ಮ ತಪ್ಪಿಗೂ ಬೇರೆಯವರನ್ನು ಬೆರಳು ಮಾಡಿ ತೋರುತ್ತಾರೆ. ಆದರೆ ಅವಶ್ಯಕತೆ ಇದ್ದಲ್ಲಿ ಬೇರೆಯವರ ಸಹಾಯವನ್ನು ಪಡೆಯುತ್ತಾರೆ.
ಶಾಂತಿ ಸಹನೆಯಿಂದ ಇದ್ದಲ್ಲಿ ಮಾತ್ರ ಜೀವನ ಸುಖಮಯವಾಗಿರುತ್ತದೆ. ಸಾಮಾನ್ಯವಾಗಿ ಇವರು ಯಾರ ಬಗ್ಗೆಯೂ ಒಳ್ಳೆಯ ಮಾತುಗಳನ್ನು ಆಡುವುದಿಲ್ಲ. ಒಳಿತು ಅಥವಾ ಕೆಟ್ಟದ್ದನ್ನು ಲೆಕ್ಕಿಸದೆ ಎಲ್ಲರನ್ನೂ ಟೀಕಿಸುತ್ತಾರೆ. ಎಲ್ಲರೂ ಇವರನ್ನು ಗೌರವಿಸಬೇಕು ಎಂಬ ಮನೋಭಾವನೆ ಇರುತ್ತದೆ. ಎಲ್ಲರಿಗೂ ತಾವೇ ದೊಡ್ಡವರೆಂಬ ಭಾವನೆ ತೋರ್ಪಡಿಸುತ್ತಾರೆ.
ಸದಾಕಾಲ ಬಂಧು ಬಳಗದವರು ಇವರಿಂದ ದೂರವಿರಲು ಬಯಸುತ್ತಾರೆ. ತೃಪ್ತಿ ಎಂಬುದು ಇವರಿಂದ ದೂರವಿರುತ್ತದೆ. ಬೇರೆಯವರನ್ನು ನೋಡಿ ತಾವು ಸಹ ಆ ಮಟ್ಟಕ್ಕೆ ಏರಬೇಕೆಂಬ ಆಸೆ ತೋರುತ್ತಾರೆ. ಸಂಗಾತಿ ಮತ್ತು ಮಕ್ಕಳೊಂದಿಗೆ ಅನಾವಶ್ಯಕವಾದ ವಾದ ವಿವಾದಗಳಿರುತ್ತವೆ.
ಸ್ತ್ರೀಯರಿಗೆ ಒಡವೆ ವಸ್ತ್ರಗಳ ಮೇಲೆ ವಿಶೇಷ ಆಸೆ ಇರುತ್ತದೆ. ಐಷಾರಾಮಿ ಜೀವನವನ್ನು ಇಷ್ಟಪಡುವ ಇವರು ಪ್ರಮಾಣದ ವ್ಯಾಪಾರವನ್ನು ಆರಂಭಿಸುವ ಸಾಧ್ಯತೆಗಳಿವೆ. ಕುಟುಂಬದ ಸದಸ್ಯರ ಅಥವಾ ಆತ್ಮೀಯರ ಸಲಹೆಯನ್ನು ಪಾಲಿಸಿದೆ ಆಗಲಿ ಜೀವನದಲ್ಲಿ ಯಾವುದೇ ತೊಂದರೆ ಎದುರಾಗದು.
ಕೈಗಳ ಮೇಲೆ ಇರುವ ಮಚ್ಚೆಗಳ ಫಲ
ಕೈಗಳ ಮೇಲೆ ಮಚ್ಚೆ ಇರುವವರು ಸದಾ ಕಾಲ ಎಲ್ಲರಿಗೂ ಒಳಿತನ್ನೇ ಮಾಡುತ್ತಾರೆ. ಜೀವನದಲ್ಲಿಯೂ ಒಳ್ಳೆಯ ರೀತಿ ನೀತಿಯನ್ನು ಅನುಸರಿಸುವರು. ಇವರಿಗೆ ಸಂಗೀತ,ನಾಟ್ಯಕಲೆಯಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಆಸಕ್ತಿ ಇರುತ್ತದೆ.
ತಮಗೆ ತಿಳಿಯುವ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುತ್ತಾರೆ. ಶಿಕ್ಷಕರಾದಲ್ಲಿ ವಿಶೇಷವಾದಂತಹ ಸ್ಥಾನಮಾನ ಲಭಿಸುತ್ತದೆ.
ನಗುವೇ ಇವರ ನಿಜವಾದ ಒಡವೆ. ಎಲ್ಲರೂ ಇವರ ಸ್ನೇಹ ಸಂಬಂಧಕ್ಕೆ ಹಾತೊರೆಯುತ್ತಾರೆ. ಇವರ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತವೆ.
ವಿವಾಹ ನಂತರ ಸಂಗಾತಿಗೆ ವಿಶೇಷವಾದ ಸ್ಥಾನ ಮಾನ ಗೌರವ ಲಭಿಸುತ್ತದೆ ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡಬೇಕು ಎಂಬ ಗುರಿ ಹೊಂದಿರುತ್ತಾರೆ. ಸ್ತ್ರೀಯರು ವಿಶೇಷವಾಗಿ ಸಮಾಜದ ಪ್ರಮುಖ ಸ್ಥಾನವನ್ನು ಅಲಂಕರಿಸುತ್ತಾರೆ.
ಮನಸ್ಸನ್ನು ಅರಿತು ನಡೆಯುವಂತಹ ಸಂಗಾತಿ ದೊರೆಯುತ್ತಾರೆ. ಮಕ್ಕಳು ಅತಿ ದೊಡ್ಡ ಸಾಧನೆಗೆ ಪಾತ್ರರಾಗುತ್ತಾರೆ. ದುರಾಸೆ ಪಡದೆ ಬಂದಿದ್ದನ್ನು ಸ್ವೀಕರಿಸುವ ದೊಡ್ಡತನ ಇರುತ್ತದೆ. ದೈವಾನುಗ್ರಹದಿಂದ ಇವರು ವಿಲಾಸಿ ಜೀವನವನ್ನು ನಡೆಸುತ್ತಾರೆ. ಸುಲಭವಾಗಿ ಇವರಿಗೆ ಕೋಪ ಬರದು, ಒಂದು ವೇಳೆ ಕೋಪ ಬಂದಲ್ಲಿ ಅತ್ಯಂತ ಉಗ್ರವಾಗಿ ವರ್ತಿಸುತ್ತಾರೆ. ಎಲ್ಲರಿಗೂ ಅನುಕುವಾಲುವಾಗುವಂತಹ ವ್ಯಾಪಾರ ವ್ಯವಹಾರವನ್ನು ಆರಂಭಿಸುವರು.
ಲೇಖನ: ಎಚ್. ಸತೀಶ್, ಜ್ಯೋತಿಷಿ ಬೆಂಗಳೂರು