logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವೆಂಬರ್ ತಿಂಗಳ ಭವಿಷ್ಯ: ಕೈ ತುಂಬಾ ಹಣವಿದ್ದರೂ ಖರ್ಚು ಮಾಡಲು ಮನಸ್ಸು ಮಾಡುವುದಿಲ್ಲ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

ನವೆಂಬರ್ ತಿಂಗಳ ಭವಿಷ್ಯ: ಕೈ ತುಂಬಾ ಹಣವಿದ್ದರೂ ಖರ್ಚು ಮಾಡಲು ಮನಸ್ಸು ಮಾಡುವುದಿಲ್ಲ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Raghavendra M Y HT Kannada

Oct 25, 2024 11:32 AM IST

google News

ಧುನ ರಾಶಿಯಿಂದ ಮೀನದವರಿಗೆ 4 ರಾಶಿಯವರ ನವೆಂಬರ್ ತಿಂಗಳ ಭವಿಷ್ಯ

    • ನವೆಂಬರ್ ತಿಂಗಳು ಭವಿಷ್ಯ 2024: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಈ ತಿಂಗಳ ಜ್ಯೋತಿಷ್ಯ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಧನುದಿಂದ ಮೀನದವರಿಗೆ 4 ರಾಶಿಯವರಿಗೆ ನವೆಂಬರ್ ತಿಂಗಳ ಭವಿಷ್ಯ ಇಲ್ಲಿದೆ.
ಧುನ ರಾಶಿಯಿಂದ ಮೀನದವರಿಗೆ 4 ರಾಶಿಯವರ ನವೆಂಬರ್ ತಿಂಗಳ ಭವಿಷ್ಯ
ಧುನ ರಾಶಿಯಿಂದ ಮೀನದವರಿಗೆ 4 ರಾಶಿಯವರ ನವೆಂಬರ್ ತಿಂಗಳ ಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ಅಕ್ಟೋಬರ್‌ನಲ್ಲಿ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ಅಕ್ಟೋಬರ್ ತಿಂಗಳ ಭವಿಷ್ಯ ಹೀಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಧನು ರಾಶಿ

ಉತ್ತಮ ಆತ್ಮವಿಶ್ವಾಸವಿರುತ್ತದೆ. ತಿಂಗಳ ಆರಂಭದಲ್ಲಿ ಅಸಾಧ್ಯ ವನಿಸಬಲ್ಲ ಕೆಲಸವನ್ನು ಸುಲಭವಾಗಿ ನಿರ್ವಹಿಸುವಿರಿ. ಸರ್ಕಾರದಿಂದ ಅನುಕೂಲತೆಯನ್ನು ಪಡೆಯುವಿರಿ. ಕುಟುಂಬದ ಹಿರಿಯರ ಆರೋಗ್ಯವನ್ನು ಕಾಪಾಡಲು ಪ್ರಯತ್ನಿಸುವಿರಿ. ಉದ್ಯೋಗದಲ್ಲಿ ಇರುವ ಕಿರಿಕಿರಿ ಮರೆಯಾಗಲಿದೆ. ಸ್ತ್ರೀಯರ ಆರೋಗ್ಯದಲ್ಲಿ ತೊಂದರೆ ಕಂಡು ಬರಬಹುದು. ತಾಯಿಯವರಿಗೆ ಉಡುಗೊರೆಯಾಗಿ ಹಣವು ದೊರೆಯುತ್ತದೆ. ಮಕ್ಕಳ ಭವಿಷ್ಯವೂ ಉಜ್ವಲವಾಗಲಿದೆ. ವಿದ್ಯಾರ್ಥಿಗಳು ಚಿಕ್ಕವಯಸಿನಲ್ಲಿಯೇ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಅಜೀರ್ಣದ ತೊಂದರೆ ನಿಮ್ಮನ್ನು ಕಾಡಲ್ಲಿದೆ. ಒಂದೇ ರೀತಿಯ ಜವಾಬ್ದಾರಿಗಳು ಇಷ್ಟಪಡುವುದಿಲ್ಲ. ಕಷ್ಟದಕಾಲದಲ್ಲಿ ಪಡೆದ ಸಾಲದ ಹಣವನ್ನು ಮರಳಿಸುವಿರಿ. ವಂಶಾಧಾರಿತ ವೃತ್ತಿಯೊಂದನ್ನು ಆರಂಭಿಸುವಿರಿ.

ಮಕರ ರಾಶಿ

ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಯಾವುದಾದರೂ ಒಂದು ಕೆಲಸ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಮಕ್ಕಳಿಗೆ ಉದ್ಯೋಗ ಲಭಿಸಲಿದೆ. ವಯಸ್ಸು ಮೀರಿದರೂ ವಿದ್ಯಾಭ್ಯಾಸವನ್ನು ಮುಂದುವರಿಸುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲಿದ್ದಾರೆ. ಉದ್ಯೋಗದಲ್ಲಿ ಅಧಿಕಾರಿಗಳಾಗಿರುವವರಿಗೆ ಹೆಚ್ಚಿನ ಅನುಕೂಲತೆ ದೊರೆಯುತ್ತದೆ. ಸಹೋದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯ ಮೂಡಿಸಲು ಪ್ರಯತ್ನಿಸುವಿರಿ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಕೈ ತುಂಬ ಹಣವಿದ್ದರೂ ಖರ್ಚು ಮಾಡಲು ಮನಸ್ಸು ಮಾಡುವುದಿಲ್ಲ .ಅನಾವಶ್ಯಕ ಖರ್ಚು ವೆಚ್ಚಗಳನ್ನುಳನ್ನು ಕೈಬಿಡುವಿರಿ. ಮನೆಗೆ ಬೇಕಾದ ಅಲಂಕಾರದ ವಸ್ತುಗಳನ್ನು ಕೊಳ್ಳುವಿರಿ. ಬೇರೆಯವರ ಮಾತನ್ನು ಕೇಳುವುದಿಲ್ಲ. ಆದರೆ ಬೇರೆಯವರಿಗೆ ಬುದ್ಧಿವಾದ ಹೇಳುವಲ್ಲಿ ನಿಸ್ಸೀಮರು. ದುಡುಕಿನ ಮಾತುಕತೆಯಿಂದ ಸ್ತ್ರೀಯರು ವಿವಾದಕ್ಕೆ ಸಿಲುಕುತ್ತಾರೆ. ಸ್ತ್ರೀಯರು ತಮ್ಮ ಮೊದಲ ಆದ್ಯತೆಯನ್ನು ಕುಟುಂಬದ ಸದಸ್ಯರಿಗೆ ನೀಡುತ್ತಾರೆ. ದೂರದ ಊರಿಗೆ ಪ್ರವಾಸಕ್ಕೆ ತೆರಳುವ ಅವಕಾಶ ಒದಗಿ ಬರುತ್ತದೆ.

ಕುಂಭ ರಾಶಿ

ಆರಂಭಿಸಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗೂ ಯಾರಿಗೂ ತಿಳಿಸುವುದಿಲ್ಲ. ಆಡುವ ಮಾತು ಕಡಿಮೆ ಮಾಡಿ ಕೆಲಸ ಕಾರ್ಯಗಳಲ್ಲಿ ಮುತುವರ್ಜಿ ತೋರುವಿರಿ. ನಿಮ್ಮ ಕಾರ್ಯ ವೈಖರಿಯನ್ನು ಕಂಡು ಎಲ್ಲರೂ ನಿಮ್ಮಿಂದ ದೂರ ಉಳಿಯುತ್ತಾರೆ. ಹೆಚ್ಚಿನ ಆತ್ಮವಿಶ್ವಾಸವಿರುತ್ತದೆ ಆತ್ಮೀಯರ ಸಹಾಯ ಸಹಕಾರ ದೊರೆಯಲಿದೆ. ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣವು ಕಂಡುಬರುತ್ತದೆ. ನಿಮ್ಮ ಕುಟುಂಬದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಗೌರವವಿರುತ್ತದೆ. ಅವರು ತೆಗೆದುಕೊಳ್ಳುವ ನಿರ್ಧಾರಗಳನ್ನು ಎಲ್ಲರೂ ಪಾಲಿಸುವಿರಿ. ಹೆಣ್ಣು ಮಕ್ಕಳಿಗೆ ಸಂಬಂಧದಲ್ಲಿ ಅಥವಾ ಪರಿಚಯ ಇರುವವರ ಜೊತೆಯಲ್ಲಿ ವಿವಾಹವಾಗಲಿದೆ ನಿಮಗಿಂತಲೂ ಹಿರಿಯ ವಯಸ್ಸಿನವರ ಜೊತೆಯಲ್ಲಿ ಹಣದ ವ್ಯವಹಾರವನ್ನು ಮಾಡಿ ಯಶಸ್ಸು ಗಳಿಸುವಿರಿ. ಮಕ್ಕಳು ನಿಮ್ಮ ಮನಸ್ಸಿಗೆ ಸಂತಸ ಕೊಡುವಂತಹ ಕಾರ್ಯಗಳನ್ನು ಮಾಡಲಿದ್ದಾರೆ. ಬಹುದಿನ ಕಾಡಬಲ್ಲ ಅನಾರೋಗ್ಯದ ಸಮಸ್ಯೆಗಳಿದ್ದಲ್ಲಿ ಎಚ್ಚರಿಕೆಯಿಂದ ಇರಬೇಕು.

ಮೀನ ರಾಶಿ

ನೀವು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾದ ಹಾದಿಯಲ್ಲಿರುತ್ತದೆ. ಯಾವುದೇ ತಪ್ಪನ್ನು ಮಾಡದೆ ಎಲ್ಲರ ಗಮನವನ್ನು ಸೆಳೆಯುವಿರಿ. ಬೇರೆಯವರು ಮಾಡುವ ತಪ್ಪನ್ನು ಸಹ ಗಂಭೀರವಾಗಿ ಪರಿಗಣಿಸುವುದಿಲ್ಲ. ಕುಟುಂಬ ಮತ್ತು ಸಮಾಜವನ್ನು ತಿದ್ದುವ ಕೆಲಸವು ನಿಮ್ಮದಾಗುತ್ತದೆ. ಎಲ್ಲಾ ರೀತಿಯ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಮನಸ್ಸು ನಿಮಗಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಆರಂಭದಲ್ಲಿ ಹಿನ್ನಡೆ ಲಭಿಸಿದರು ಕ್ರಮೇಣವಾಗಿ ಹಣಕಾಸಿನ ಅನುಕೂಲತೆಯನ್ನು ಪಡೆಯುವಿರಿ. ಸೋಲುವ ವೇಳೆಯಲ್ಲಿ ಹೆಚ್ಚಿನ ಪ್ರಯತ್ನದಿಂದ ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ತಿಂಗಳ ಕೊನೆಯ ವಾರದಲ್ಲಿ ಉದ್ಯೋಗವನ್ನು ಬದಲಿಸುವ ಅವಕಾಶ ದೊರೆಯುತ್ತದೆ. ವಾಹನ ಚಾಲನೆ ಮಾಡುವವರು ಎಚ್ಚರಿಕೆ ವಹಿಸಬೇಕು. ಹಿರಿಯ ಸೋದರ ಅಥವಾ ಸೋದರಿಯು ನಿಮ್ಮ ಕಷ್ಟನಷ್ಟಗಳಲ್ಲಿ ಬೆರೆತು ನಡೆಯುತ್ತಾರೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ