Numerology: ಫೆಬ್ರವರಿ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಡುವವರಿಗೆ ಕಾದಿದೆಯಂತ ಅದೃಷ್ಟ; ಈ ಸಂಖ್ಯೆಯಿಂದ ಒಲಿಯಲಿದೆ ಶುಭ
Feb 01, 2024 12:00 PM IST
ಫೆಬ್ರವರಿ ತಿಂಗಳಲ್ಲಿ ಮದುವೆಗೆ ಶುಭ ಮುಹೂರ್ತ
Numerology: ಈ ವರ್ಷ ಮದುವೆಯಾಗಬೇಕು ಎಂದುಕೊಂಡಿದ್ದರೆ ನಿಮಗೊಂದು ಶುಭ ಸುದ್ದಿ ಇಲ್ಲಿದೆ. 2024ರ ಫೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವವರು ಜಗತ್ತಿನ ಅತ್ಯಂತ ಅದೃಷ್ಟವಂತ ದಂಪತಿಗಳಾಗುತ್ತಾರೆ ಎಂದು ಸಂಖ್ಯಾಶಾಸ್ತ್ರ ಹೇಳಿದೆ.
Numerology: ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂದುಕೊಳ್ಳುವ ನಿರ್ಧಾರ ಸುಲಭದ್ದಲ್ಲ. ಸಂಗಾತಿಯು ಯಾವ ರೀತಿ ಇರುತ್ತಾರೆ ಎನ್ನುವುದನ್ನು ಆಧರಿಸಿ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಹೀಗಾಗಿ ಯೋಗ್ಯವಾದ ದಿನಗಳಲ್ಲಿಯೇ ಮದುವೆಯಾಗಬೇಕು. ʼ
ತಾಜಾ ಫೋಟೊಗಳು
ಮದುವೆ ಮುಹೂರ್ತ
ಹೊಸ ಜೀವನಕ್ಕೆ ಒಳ್ಳೆಯ ಮುಹೂರ್ತದಲ್ಲಿಯೇ ಕಾಲಿಡಬೇಕು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ಮದುವೆ ಫಿಕ್ಸ್ ಆದಮೇಲೆ ದಿನಾಂಕ ನಿಗದಿ ಮಾಡುವುದೇ ಒಂದು ಸವಾಲಿನ ಕೆಲಸವಾಗಿ ಪರಿಣಮಿಸಿಬಿಡುತ್ತದೆ. ಒಂದು ವೇಳೆ ನೀವು ಕೂಡ ಮದುವೆಯಾಗಬೇಕು ಎಂದುಕೊಂಡಿದ್ದರೆ ಇದಕ್ಕೆ ಫೆಬ್ರವರಿ ತಿಂಗಳು ಅತ್ಯಂತ ಪ್ರಶಸ್ತವಾದ ತಿಂಗಳಾಗಿದೆ. 2024ರಲ್ಲಿ ಫೆಬ್ರವರಿ ತಿಂಗಳಲ್ಲಿ 8 ಅತ್ಯಂತ ಅದೃಷ್ಟದ ಸಂಖ್ಯೆಯಾಗಿದೆ. ಈ ವರ್ಷ ಫೆಬ್ರವರಿ ತಿಂಗಳು ಅದೃಷ್ಟಶಾಲಿ ಎನಿಸಲು ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳೋಣ.
ಫೆಬ್ರವರಿ ತಿಂಗಳಲ್ಲಿ 8 ಎಂಬ ಸಂಖ್ಯೆಯು ಅದೃಷ್ಟ, ಸಂಪತ್ತು ಹಾಗೂ ಶಕ್ತಿಯ ಸಂಕೇತವಾಗಿದೆ. ಹೀಗಾಗಿ ಮುಂದಿನ ತಿಂಗಳು ಯಾರು ಮದುವೆ ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೋ ಆ ಜೋಡಿಗೆ ಒಂದು ವಿಶೇಷವಾದ ಶಕ್ತಿ ಒಲಿಯಲಿದೆ ಎಂದು ಹೇಳಲಾಗುತ್ತದೆ. ಫೆಬ್ರವರಿ ತಿಂಗಳಲ್ಲಿ ವ್ಯಾಲೆಂಟೈನ್ಸ್ ಡೇ ಇರುವ ಕಾರಣ ಪ್ರೀತಿಯ ತಿಂಗಳು ಎಂದೇ ಕರೆಯಲಾಗುತ್ತದೆ. ಹೀಗಾಗಿ ಯಾವ ದಂಪತಿ ಈ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೋ ಅವರ ಜೀವನದಲ್ಲಿ ಪ್ರೀತಿ ತುಸು ಹೆಚ್ಚೇ ಇರುತ್ತದೆ ಎನ್ನಲಾಗಿದೆ.
ಅದೃಷ್ಟ ಸಂಖ್ಯೆ 8
ಅದೃಷ್ಟವು 8 ಎಂಬ ಸಂಖ್ಯೆಯೊಂದಿಗೆ ಸೇರಿಕೊಂಡಿದ್ದು ಅದರ ಜೊತೆಯಲ್ಲಿ ಪ್ರಣಯವೂ ಸೇರಿ ಫೆಬ್ರವರಿ ತಿಂಗಳು ದಂಪತಿಯ ಪಾಲಿಗೆ ಅತ್ಯಂತ ಅದೃಷ್ಟದ ತಿಂಗಳಾಗಿ ಮಾರ್ಪಾಡಾಗಲಿದೆ. ಯಾರು ಈ ತಿಂಗಳಲ್ಲಿ ಮದುವೆಯಾಗುತ್ತಾರೋ ಅವರು ಯಾವುದೇ ಕಾರಣಕ್ಕೂ ಬೇರೆಯಾಗುವುದಿಲ್ಲ ಹಾಗೂ ಬಿಡಿಸಲಾರದಂತಹ ಬಂಧವನ್ನು ಹೊಂದಿರುತ್ತಾರೆ ಎನ್ನಲಾಗಿದೆ. 2024ರ ತಿಂಗಳು ಹಾಗೂ 8 ಎಂಬ ಸಂಖ್ಯೆಯ ನಡುವೆ ಸಂಬಂಧವಿದೆ. ಹೀಗಾಗಿ ಈ ಸಂಪೂರ್ಣ ವರ್ಷ ಅದೃಷ್ಟದ ವರ್ಷ ಎಂದು ಹೇಳಲಾಗುತ್ತದೆ. ಹೀಗಾಗಿ ಯಾರೆಲ್ಲ ಈ ವರ್ಷದಲ್ಲಿ ಮದುವೆಯಾಗಬೇಕು ಎಂದುಕೊಂಡಿದ್ದಾರೋ ಅವರಿಗೆಲ್ಲರಿಗೂ ಈ 8 ಎಂಬ ಸಂಖ್ಯೆಯು ಅದೃಷ್ಟವನ್ನು ತಂದುಕೊಡಲಿದೆ. ಹೀಗಾಗಿ ದಾಂಪತ್ಯ ಜೀವನದಲ್ಲಿ ಅದೃಷ್ಟ, ಪ್ರೀತಿ, ಸ್ನೇಹ ಪ್ರತಿಯೊಂದು ಹೆಚ್ಚೆಚ್ಚು ಇರಲಿದೆ ಎಂಬ ನಂಬಿಕೆಯಿದೆ.
ಚೀನಾ ಸಂಸ್ಕೃತಿಯ ಪ್ರಕಾರ, 8 ಎನ್ನುವುದು ಅತ್ಯಂತ ಅದೃಷ್ಟದ ಸಂಖ್ಯೆಯಾಗಿದೆ. ಅಲ್ಲದೇ ಇದು ಸಂಪತ್ತಿನ ಸಂಖ್ಯೆ ಕೂಡ ಹೌದು. ಇದು ಮಾತ್ರವಲ್ಲದೆ ಯಾವ ದಂಪತಿ 8 ಹಾಗೂ ಫೆಬ್ರವರಿ ತಿಂಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅವರ ಜೀವನದಲ್ಲಿ ಕೂಡಾ ಸುಖ - ಸಮೃದ್ಧಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ.
ಫೆಬ್ರವರಿ ತಿಂಗಳ ವ್ಯಾಲಂಟೈನ್ಸ್ ವಿಶೇಷ ಹಾಗೂ 8 ಎಂಬ ಸಂಖ್ಯೆಯು ನೀಡುತ್ತಿರುವ ಅದೃಷ್ಟ ಇವರೆಡೂ ಸೇರಿ ದಂಪತಿಯ ಭಾಗ್ಯದ ಬಾಗಿಲೇ ತೆರೆಯಲಿದೆ. ಹೀಗಾಗಿ ಈ ವರ್ಷ ಅದರಲ್ಲೂ ವಿಶೇಷವಾಗಿ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಮದುವೆಯಾಗುವವರು ಅತ್ಯಂತ ಅದೃಷ್ಟದ ದಾಂಪತ್ಯ ಜೀವನದ ಸವಿಯನ್ನು ಸವಿಯಲಿದ್ದಾರೆ ಎಂಬ ನಂಬಿಕೆಯಿದೆ.