logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಖ್ಯಾಶಾಸ್ತ್ರ ಸಂಖ್ಯೆ 2: ಸಣ್ಣಪುಟ್ಟದ್ದಕ್ಕೆ ಅಸಮಾಧಾನಗೊಳ್ಳುವ ವ್ಯಕ್ತಿತ್ವ; ಕೋಪ, ಜಗಳಗಳಿಂದ ದೂರವಿದ್ದರೆ ದೊಡ್ಡ ಯಶಸ್ಸು; 2025 ಭವಿಷ್ಯ

ಸಂಖ್ಯಾಶಾಸ್ತ್ರ ಸಂಖ್ಯೆ 2: ಸಣ್ಣಪುಟ್ಟದ್ದಕ್ಕೆ ಅಸಮಾಧಾನಗೊಳ್ಳುವ ವ್ಯಕ್ತಿತ್ವ; ಕೋಪ, ಜಗಳಗಳಿಂದ ದೂರವಿದ್ದರೆ ದೊಡ್ಡ ಯಶಸ್ಸು; 2025 ಭವಿಷ್ಯ

Rakshitha Sowmya HT Kannada

Nov 28, 2024 01:31 PM IST

google News

ಸಂಖ್ಯಾಶಾಸ್ತ್ರ 2025: ರಾಡಿಕ್ಸ್‌ ಸಂಖ್ಯೆ 2 ಭವಿಷ್ಯ

  • Numerology Horoscope 2025: ಜನ್ಮದಿನಾಂಕ ಆಧರಿಸಿ ಭವಿಷ್ಯ, ದೋಷ, ಪರಿಹಾರದ ಬಗ್ಗೆ ಹೇಳುವಂತೆ ಸಂಖ್ಯಾಶಾಸ್ತ್ರದಲ್ಲಿ ಕೂಡಾ ಜನ್ಮದಿನಾಂಕವನ್ನು ಆಧರಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. 1 ರಿಂದ 9 ವರೆಗೆ ವಿವಿಧ ರಾಡಿಕ್ಸ್‌ಗೆ ಸೇರಿದ ಜನರು 2025ರಲ್ಲಿ ಯಾವ ರೀತಿ ಫಲಗಳನ್ನು ಪಡೆಯುತ್ತಾರೆ? ರಾಡಿಕ್ಸ್‌ ನಂಬರ್‌ 2ರ ಮುಂದಿನ ವರ್ಷದ ಭವಿಷ್ಯ ಹೇಗಿದೆ ನೋಡೋಣ.

ಸಂಖ್ಯಾಶಾಸ್ತ್ರ 2025: ರಾಡಿಕ್ಸ್‌ ಸಂಖ್ಯೆ 2 ಭವಿಷ್ಯ
ಸಂಖ್ಯಾಶಾಸ್ತ್ರ 2025: ರಾಡಿಕ್ಸ್‌ ಸಂಖ್ಯೆ 2 ಭವಿಷ್ಯ (PC: Canva)

ಸಂಖ್ಯಾಶಾಸ್ತ್ರ ಸಂಖ್ಯೆ 2: ವರ್ಷ ಮುಗಿಯುತ್ತಾ ಬಂತು. ಮೊನ್ನೆ ಮೊನ್ನೆಯಷ್ಟೇ ಹೊಸ ವರ್ಷ ಆಚರಿಸಿದಂತೆ ಇದೆ. ಇನ್ನು 1 ತಿಂಗಳು ಕಳೆದರೆ ಮತ್ತೊಂದು ವರ್ಷಕ್ಕೆ ಕಾಲಿಡುತ್ತೇವೆ. ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳು ಕಾಡತೊಡಗುತ್ತವೆ. ಈ ವರ್ಷ ನಮಗೆ ಸುಖವೋ, ದುಃಖವೋ ಅಥವಾ ಸಾಮಾನ್ಯವಾಗಿರುವುದಾ? ಏನೆಲ್ಲಾ ಬದಲಾವಣೆಗಳು ನಮ್ಮ ಜೀವನದಲ್ಲಿ ಉಂಟಾಗುತ್ತದೆ? ಈಗ ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗುವುದೋ ಇಲ್ಲವೋ? ಉದ್ಯೋಗ, ವೃತ್ತಿ, ಹಣಕಾಸು, ಸಂಬಂಧ, ಆರೋಗ್ಯ ಹೇಗಿರುತ್ತದೆ? ಈ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ. 2025 ರಲ್ಲಿ ರಾಡಿಕ್ಸ್‌ ನಂಬರ್‌ 2 ಜನರ ಭವಿಷ್ಯ ಈ ರೀತಿ ಇದೆ.

ತಾಜಾ ಫೋಟೊಗಳು

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ನಾಳಿನ ದಿನ ಭವಿಷ್ಯ: ಕುಟುಂಬದೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ; ಪೂರ್ವಜರ ಆಸ್ತಿಯಿಂದ ಹಣ ದೊರೆಯುವ ಸಾಧ್ಯತೆ

Nov 25, 2024 04:22 PM

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕವನ್ನು ಒಟ್ಟುಗೂಡಿಸಿದಾಗ ಬರುವ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಇದನ್ನು ರಾಡಿಕ್ಸ್‌ ನಂಬರ್‌ ಎಂದು ಕರೆಯಲಾಗುತ್ತದೆ.

2025 ರಾಡಿಕ್ಸ್‌ ನಂಬರ್‌ 2 ಭವಿಷ್ಯ

ನೀವು ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದರೆ ನಿಮ್ಮ ಮೂಲ ಸಂಖ್ಯೆ 2 ಆಗಿರುತ್ತದೆ. ಚಂದ್ರ, ಈ ಸಂಖ್ಯೆಯ ಆಡಳಿತ ಗ್ರಹ. ಚಂದ್ರನ ಪ್ರಭಾವ ನಿಮಗೆ ಹೆಚ್ಚಿನ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯವನ್ನು ನೀಡಬಹುದು. ನೀವು ಅತ್ಯಂತ ಭಾವನಾತ್ಮಕ ವ್ಯಕ್ತಿಯಾಗಿರುತ್ತೀರಿ. ನೀವು ಚಿಕ್ಕ ವಿಷಯಗಳ ಬಗ್ಗೆ ಹೆಚ್ಚು ಅಸಮಾಧಾನಗೊಳ್ಳುವ ಸ್ವಭಾವದವರು. ನೀವು ಇತರರ ಭಾವನೆಗಳನ್ನು ಸಂಪೂರ್ಣವಾಗಿ ಗೌರವಿಸುತ್ತೀರಿ, ನಿಮ್ಮ ಭಾವನೆಗಳನ್ನು ಕೂಡಾ ಇತರರು ಗೌರವಿಸಬೇಕೆಂದು ನೀವು ನಿರೀಕ್ಷಿಸುತ್ತೀರಿ. ಚಂದ್ರನು ಮಾತೃಕಾರಕ ಎನಿಸಿರುವುದರಿಂದ, ನೀವೂ ಕೂಡಾ ತಾಯಿಯಂತೆ ಇತರ ಜನರನ್ನು ಪ್ರೀತಿಸುವ ವ್ಯಕ್ತಿಯಾಗಿದ್ದೀರಿ. ನೀವು ಸಾಮಾನ್ಯವಾಗಿ ಶಾಂತಿಯುತವಾಗಿರಲು ಇಷ್ಟಪಟ್ಟರೂ, ಚಂದ್ರನ ಪ್ರಭಾವವು ಕೆಲವೊಮ್ಮೆ ನಿಮ್ಮ ಮನಸ್ಸನ್ನು ಚಂಚಲಗೊಳಿಸಬಹುದು.

ಸಣ್ಣಪುಟ್ಟ ವಿಚಾರಕ್ಕೆ ನಿರಾಶೆಗೊಳ್ಳುವ ವ್ಯಕ್ತಿತ್ವದವರು

ಸಂಖ್ಯಾಶಾಸ್ತ್ರದ ಜಾತಕ 2025ರ ಪ್ರಕಾರ, ನಿಮ್ಮ ಮಾನಸಿಕ ಸಾಮರ್ಥ್ಯವು ಸಾಕಷ್ಟು ಬಲವಾಗಿರುತ್ತದೆ. ನೀವು ಹೆಚ್ಚಿನ ಕಾರ್ಯಗಳನ್ನು ಸಂಘಟಿತ ರೀತಿಯಲ್ಲಿ ಪೂರ್ಣಗೊಳಿಸಲು ಬಯಸುತ್ತೀರಿ. ನಿಮ್ಮ ಸ್ನೇಹ ಮತ್ತು ಸಂಬಂಧಗಳನ್ನು ಪೂರ್ಣ ಹೃದಯದಿಂದ ಕಾಪಾಡಿಕೊಳ್ಳಲು ಸಹ ನೀವು ಪ್ರಯತ್ನಿಸುತ್ತೀರಿ. ಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚುವುದು ಎಂದರೆ ನಿಮಗೆ ಇಷ್ಟ. ನೀವು ಆರಂಭಿಸಿದ ಕೆಲಸಗಳಲ್ಲಿ ತೃಪ್ತಿ ಎನಿಸದಿದ್ದರೆ ಅದನ್ನು ಬಿಟ್ಟು ಹೊಸ ಕೆಲಸಕ್ಕೆ ಕೈ ಹಾಕಲಿದ್ದೀರಿ. ಆದರೆ ಎಲ್ಲಾ ವಿಚಾರದಲ್ಲೂ ಇದು ಸರಿ ಎನಿಸುವುದಿಲ್ಲ. ಏಕೆಂದರೆ ಮೊದಲು ಸವಾಲು ಎನಿಸುವ ಎಷ್ಟೋ ಕೆಲಸಗಳು ಕೊನೆಯಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ನೀವು ತಾಳ್ಮೆ ಬೆಳೆಸಿಕೊಳ್ಳಬೇಕು. ಏಕೆಂದರೆ ತಾಳ್ಮೆಯಿಂದ ಮಾಡುವ ಬಹುತೇಕ ಕೆಲಸಗಳು ದೊಡ್ಡ ಯಶಸ್ಸು ನೀಡುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ನೀವು ನಿರಾಶೆಗೊಳ್ಳಬಾರದು. ಇದನ್ನು ನೀವು ಅರ್ಥ ಮಾಡಿಕೊಂಡರೆ ಹೆಚ್ಚು ಶ್ರದ್ಧೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ, ಅಲ್ಲದೆ ಮತ್ತು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ.

ತಾಳ್ಮೆಯಿಂದ ವರ್ತಿಸಿದರೆ ದೊಡ್ಡ ಯಶಸ್ಸು ಸಾಧ್ಯ

ಮುಂದಿನ ವರ್ಷದಲ್ಲಿ 2, 9, 1, 2 ಮತ್ತು 5 ಸಂಖ್ಯೆಗಳು ನಿಮ್ಮ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತವೆ. ಸಂಖ್ಯೆ 9 ಹೊರತುಪಡಿಸಿ ಎಲ್ಲಾ ಸಂಖ್ಯೆಗಳು ನಿಮ್ಮ ಪರವಾಗಿ ಕಂಡುಬರುತ್ತವೆ. ನೀವು ಉತ್ತಮ ವ್ಯವಹಾರವನ್ನು ಮಾಡಬಹುದು ಎಂದು ಇದು ಸೂಚಿಸುತ್ತದೆ ನೀವು ಜಗಳ ಮತ್ತು ಕೋಪದಿಂದ ದೂರವಿದ್ದರೆ ಈ ವರ್ಷ ಸಂಪೂರ್ಣ ಯಶಸ್ಸು ಗಳಿಸುವಿರಿ. ಆದರೆ ನೀವು ಕೋಪ, ದ್ವೇಷದಿಂದ ವರ್ತಿಸಿದರೆ ನೀವು ಮಾಡುವ ಕೆಲಸದ ಫಲಿತಾಂಶ ಕಡಿಮೆ ಆಗುತ್ತದೆ. ಒಡಹುಟ್ಟಿದವರೊಂದಿಗೆ ನಿಮ್ಮ ಸಂಬಂಧ ಹಾಳಾಗದಂತೆ ನೋಡಿಕೊಳ್ಳಲು ಪ್ರಯತ್ನ ಮಾಡುವುದು ಮುಖ್ಯವಾಗಿರುತ್ತದೆ. ನಿಮ್ಮ ನೆರೆಹೊರೆಯವರೊಂದಿಗೆ ಸಕಾರಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳುವುದೂ ಅಗತ್ಯ. ಭೂಮಿ, ಕಟ್ಟಡ, ವಾಹನ ಖರೀದಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

2025 ರಲ್ಲಿ ನಿಮಗೆ ಬಹಳಷ್ಟು ಅವಕಾಶಗಳು ಒದಗಿ ಬರುತ್ತದೆ. ಈ ಕ್ಷೇತ್ರಗಳ ಮೇಲೆ ನೀವು ಸರಿಯಾದ ಹಿಡಿತ ಸಾಧಿಸಲು ಸಾಧ್ಯವಾದರೆ ಈ ವರ್ಷ ನೀವು ಸಾಧಕರಾಗಲಿದ್ದೀರಿ. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ ವ್ಯಾಪಾರ ಚೆನ್ನಾಗಿರುತ್ತದೆ. ನೀವು ಕ್ರಿಯೇಟಿವ್‌ ಆಗಿದ್ದಲ್ಲಿ ಅದೂ ಕೂಡಾ ನಿಮ್ಮನ್ನು ಯಶ್ಸಸಿನ ತುದಿಗೆ ಕೊಂಡೊಯ್ಯುತ್ತದೆ. ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಸಂಬಂಧಗಳಲ್ಲಿ ಈ ವರ್ಷ ನೀವು ಉತ್ತಮ ಕೆಲಸವನ್ನು ಮಾಡಲಿದ್ದೀರಿ. ನಿಮ್ಮ ಸಂಬಂಧಿಕರೊಂದಿಗೆ ಕೂಡಾ ಉತ್ತಮ ಬಂಧ ಇರುತ್ತದೆ.

ವೈಯಕ್ತಿಕ ಜೀವನ, ವ್ಯಾಪಾರ ವ್ಯವಹಾರಗಳಲ್ಲಿ ಜಯ

ಸಂಖ್ಯೆ 1 ರ ಪ್ರಭಾವವು ಸರ್ಕಾರ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು ತಂದು ನೀಡುತ್ತದೆ. ಅದು ಕೋರ್ಟ್‌ ವಿವಾದ ಅಥವಾ ಸರ್ಕಾರದ ಸಮಸ್ಯೆ ಯಾವುದೇ ಆಗಿದ್ದರೂ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ತಂದೆಗೆ ಸಂಬಂಧಿಸಿದ ಕೆಲಸಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಈ ಎಲ್ಲಾ ಪ್ರಯತ್ನಗಳ ನಡುವೆ ನಿಮಗೆ ಎದುರಾಗುವ ಚಾಲೆಂಜ್‌, ಕೋಪ, ಒತ್ತಡಗಳನ್ನು ನೀವು ಸಮಾಧಾನದಿಂದ ನಿಭಾಯಿಸಬೇಕು ಎಂದು ಸಂಖ್ಯೆ 9 ರ ಪ್ರಭಾವವು ಸೂಚಿಸುತ್ತದೆ. ನಿಮಗೆ ಅಗತ್ಯವಿರುವಾಗ ನಿಮ್ಮ ಸಹೋದರರು ಮತ್ತು ನೆರೆಹೊರೆಯವರ ಬೆಂಬಲ ದೊರೆಯುತ್ತದೆ. ಹೆಚ್ಚುವರಿಯಾಗಿ, ನಿಮ್ಮ ವೈಯಕ್ತಿಕ ಜೀವನ, ವ್ಯಾಪಾರ ವ್ಯವಹಾರಗಳು ಇತ್ಯಾದಿಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಆಸ್ತಿ, ಕಟ್ಟಡಗಳು ಮತ್ತು ಮೋಟಾರು ವಾಹನಗಳಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ನೀವು ಎಚ್ಚರಿಕೆಯಿಂದ ಮತ್ತು ನಿಧಾನವಾಗಿ ಕೆಲಸ ಮಾಡಿದರೆ, ನೀವು ಅನುಕೂಲಕರ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ.

ಪರಿಹಾರ: ನಿಮ್ಮ ತಾಯಿ ಅಥವಾ ಇತರ ಹಿರಿಯ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಆತಿಥ್ಯ ನೀಡಿ, ಅವರ ಸೇವೆ ಮಾಡುವ ಮೂಲಕ ಅವರ ಆಶೀರ್ವಾದ ಪಡೆಯಿರಿ. ನಿತ್ಯವೂ ಗಣಪತಿ ಅಥರ್ವಶೀರ್ಷ ಪಠಿಸಿ. ಎರಡನೇ ತಿಂಗಳಿಗೊಮ್ಮೆ ಅಥವಾ ನಿಮಗೆ ಸಾಧ್ಯವಾದಾಗ ರುದ್ರಾಭಿಷೇಕ ಮಾಡಿ. ಈ ಪರಿಹಾರಗಳು ಇನ್ನೂ ಹೆಚ್ಚಿನ ಫಲಿತಾಂಶಗಳನ್ನು ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ